ಲಖನೌ (ಪಿಟಿಐ): ಅಯೋಧ್ಯೆ ವಿವಾದವನ್ನು ಶಾಂತಿಯುತವಾಗಿ ಇತ್ಯರ್ಥಪಡಿಸುವ ಒಪ್ಪಂದದ ಕರಡು ಪ್ರತಿ ಡಿಸೆಂಬರ್ 6ರ ಒಳಗೆ ಸಿದ್ಧವಾಗಲಿದೆ ಎಂದು ಉತ್ತರ ಪ್ರದೇಶದ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಹೇಳಿದೆ.

ಆ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವೇಗಬೇಕು ಎಂದು ತಮ್ಮ ಅಭಿಪ್ರಾಯ ಬಹಿರಂಗಪಡಿಸಿದ್ದ ಮಂಡಳಿ ಅಧ್ಯಕ್ಷ ವಾಸಿಮ್ ರಿಜ್ವಿ ಅವರು, ಇದೇ ತಿಂಗಳು ಅಯೋಧ್ಯೆಯಲ್ಲಿ ಶ್ರೀಗಳು ಹಾಗೂ ಮಹಾಂತರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.

‘ಪರಸ್ಪರರು ಈ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಉದ್ದೇಶದಿಂದ ಒಪ್ಪಂದದ ಕರಡು ತಯಾರಿಸಲಾಗುತ್ತಿದ್ದು, ಈ ಸಂಬಂಧ ಅರ್ಜಿದಾರರು ಹಾಗೂ ಸಂಬಂಧಪಟ್ಟವರ ಜೊತೆ ನಿಯಮ ಮತ್ತು ಷರತ್ತುಗಳನ್ನು ಚರ್ಚಿಸಲಾಗಿದೆ’ ಎಂದು ರಿಜ್ವಿ ಹೇಳಿದ್ದಾರೆ.

ಕಳೆದ ತಿಂಗಳು ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ಅವರನ್ನು ಭೇಟಿಯಾಗಿದ್ದ ರಿಜ್ವಿ ಅವರು, ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವೇಬೇಕು ಎಂಬ ಮಂಡಳಿಯ ನಿಲುವನ್ನು ತಿಳಿಸಿದ್ದರು.

‘ನಿಗದಿತ ಸ್ಥಳದಲ್ಲಿ ಮಸೀದಿ ನಿರ್ಮಾಣವಾಗಲೇಬೇಕು ಎಂದು ಮಂಡಳಿಯು ಪಟ್ಟು ಹಿಡಿಯುವುದಿಲ್ಲ. ಬದಲಾಗಿ ಮುಸ್ಲಿಂ ಜನರಿರುವ ಯಾವುದೇ ಪ್ರದೇಶದಲ್ಲಿ ನಿರ್ಮಾಣವಾದರೆ ಸಾಕು’ ಎಂದು ಹೇಳಿದ್ದರು.

ರಾಮಜನ್ಮಭೂಮಿ ಸ್ಥಳದಲ್ಲೇ ಮಸೀದಿ ನಿರ್ಮಾಣವಾಗಬೇಕು ಎಂದು ಹೇಳುವವರಿಗೆ ವಿವಾದವನ್ನು ಜೀವಂತವಾಗಿಡುವ ಉದ್ದೇಶವಿದೆ ಎಂದು ರಿಜ್ವಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.