ಬೆಂಗಳೂರು: ‘ವೇಶ್ಯಾವಾಟಿಕೆ ಬಿಟ್ಟರೆ ಸರ್ಕಾರದವ್ರು ನಮಗೆ ಮಾಸಾಶನ ಕೊಡ್ತಾರೆ, ಅದೇನೋ ತರಬೇತಿ ಕೊಡ್ತಾರೆ ಅಂತ ಈ ದಂಧೆ ಬಿಟ್ಟುಬಿಡೋಣ ಅಂದ್ಕೊಡೆ. ಆದರೆ, ಅದೇನೋ ಅಧ್ಯಯನ ಅಂತ ಮಾಡ್ಕಂಡು ಹೋಗಿ ವರ್ಷಾವಾದ್ರೂ ಏನೂ ಆಗಲಿಲ್ಲ. ಮುಚ್ಚಿಟ್ಟಿದ್ದ ನಮ್ ಬದುಕನ್ನಾ ಬಯಲಿಗಿಟ್ಟುಬಿಟ್ರು...’

–ಇಷ್ಟು ಮಾತುಗಳನ್ನು ಹೇಳುವಾಗ ಬಳ್ಳಾರಿ ಜಿಲ್ಲೆಯ ಆ ಲೈಂಗಿಕ ಕಾರ್ಯಕರ್ತೆಯ ಗಂಟಲ ಸೆರೆ ಉಬ್ಬಿ ಬಂದಿತ್ತು.

‘ನಾನು ಬೇಕಂತ ಈ ವೃತ್ತಿಗೆ ಬರಲಿಲ್ಲರೀ. ಗಂಡು ದಿಕ್ಕಿಲ್ಲದ ಮನೀಯಾಗ ಎಷ್ಟು ದಿನ ಅಂತ ಜೀವನ ನಡಿತೈತ್ರಿ? ಬ್ಯಾರೆಯವ್ರ ಮಕ್ಕಳು ಚೆಂದನೆಯ ಅಂಗಿ ತೊಟ್ಟು ಸಾಲಿಗೆ ಹೋಗ್ತಾ ಇದ್ದುದ್ದನ್ನು ನೋಡಿ ಒಳಗೊಳಗೇ ಅಳ್ತಾಇದ್ದೆ. ಕೂಲಿ–ನಾಲಿ ಮಾಡಿದ್ರೂ ಮಕ್ಕಳನ್ನು ಓದಿಸಲಿಕ್ಕಾ ಆಗ್ತಾ ಇರ್ಲಿಲ್ಲ. ಅದಕ್ಕಾ ಈ ಕೆಲಸ ಮಾಡಾಕ ಶುರು ಮಾಡಿದೆ. ನಮ್ಮಂಥವರಿಗೂ ತುಸು ಆದಾಯ ಬರೋವಂಥ ಕೆಲಸ ಇದ್ದಿದ್ರ ನಾ ಇಂಥ ಕೆಲಸ ಮಾಡ್ತಾ ಇರ್ಲಿಲ್ಲರೀ...’ ಎಂದು ಕಣ್ಣೀರು ತುಂಬಿಕೊಂಡಳು ಆ ಹೆಣ್ಣುಮಗಳು. ಇದು ಬಳ್ಳಾರಿಯ ಜಿಲ್ಲೆಯ ಲೈಂಗಿಕ ಕಾರ್ಯಕರ್ತೆಯೊಬ್ಬರ ಬದುಕಿಗಷ್ಟೇ ಅಲ್ಲ, ರಾಜ್ಯದ ಬಹುತೇಕ ಲೈಂಗಿಕ ಕಾರ್ಯಕರ್ತೆಯರ ಬದುಕಿಗೆ ಹಿಡಿದ ಕನ್ನಡಿ.

ಹೆಣ್ಣಿನ ಘನತೆಯನ್ನು ತಗ್ಗಿಸುವ ಈ ಅನಿಷ್ಟ ಪದ್ಧತಿಯಿಂದ ಅವರನ್ನು ಹೊರತಂದು ಗೌರವದ ಬದುಕು ಕಲ್ಪಿಸಬೇಕು ಎಂದು ಸುಪ್ರೀಂಕೋರ್ಟ್ ರಾಜ್ಯಗಳಿಗೆ ನೀಡಿದ ನಿರ್ದೇಶನದ ಮೇರೆಗೆ, ಕರ್ನಾಟಕ ಸರ್ಕಾರ ಡಾ.ಜಯಮಾಲಾ ನೇತೃತ್ವದಲ್ಲಿ ಲೈಂಗಿಕ ಕಾರ್ಯಕರ್ತೆಯರ ಜೀವನಾಧ್ಯಯನ ಸಮಿತಿಯನ್ನು ರೂಪಿಸಿತ್ತು. ಈ ಮಹಿಳೆಯರ ಪುನಶ್ಚೇತನ ಮತ್ತು ಸಶಕ್ತೀಕರಣಕ್ಕಾಗಿ ಸಮಿತಿಯ 22 ಸದಸ್ಯರು ರಾಜ್ಯದ 30 ಜಿಲ್ಲೆಗಳಲ್ಲಿ ಒಂದು ವರ್ಷ ಕಾಲ ಅಧ್ಯಯನ
ನಡೆಸಿ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದಾರೆ. ಆದರೆ, ವರದಿ ಇನ್ನೂ ಅನುಷ್ಠಾನಕ್ಕೆ ಬಾರದೇ ದೂಳು ಹಿಡಿಯುತ್ತಿದೆ.

ಲೈಂಗಿಕ ಕಾರ್ಯಕರ್ತೆಯರ ಬದುಕಿನ ಕುರಿತು ಇಡೀ ದೇಶದಲ್ಲೇ ಇಂಥದೊಂದ್ದು ಅಧ್ಯಯನ ನಡೆಸಿದ ಹೆಗ್ಗಳಿಕೆ ಕರ್ನಾಟಕದ್ದಾಗಿತ್ತು. ಆದರೆ, ಅಧ್ಯಯನದ ವರದಿಯನ್ನು ಅಂಗೀಕರಿಸಿ 10ತಿಂಗಳಾದರೂ ಸರ್ಕಾರ, ಇದುವರೆಗೂ ಈ ಮಹಿಳೆಯರಿಗಾಗಿ ಯಾವುದೇ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಿಲ್ಲ.‘ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿಯಡಿ ನೋಂದಾಯಿತವಾಗಿರುವ ಲಕ್ಷಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರು ತಮ್ಮ ಗೌಪ್ಯತೆ ಬಿಟ್ಟುಕೊಟ್ಟು, ವೃತ್ತಿ ತೊರೆಯುವ ಕನಸುಕಂಡಿದ್ದರು. ವೃತ್ತಿಯ ತೊರೆಯುವ ಮಾತಿರಲಿ, ಕನಿಷ್ಠ ಎಚ್‌ಐವಿ ಸೋಂಕಿತ ಲೈಂಗಿಕ ಕಾರ್ಯಕರ್ತೆಯರಿಗೆ ಸಹಾಯಧನ, ಆರೋಗ್ಯ ಸೌಲಭ್ಯವನ್ನೂ ಸರ್ಕಾರ ಮಾಡುತ್ತಿಲ್ಲ’ ಎಂದು ದೂರುತ್ತಾರೆ ಕಲಬುರ್ಗಿಯ ಲೈಂಗಿಕ ಕಾರ್ಯಕರ್ತೆಯೊಬ್ಬರು.

‘ಈ ಹಿಂದೆ ಚೇತನಾ ಯೋಜನೆಯಲ್ಲಿ ದಮನಿತ ಮಹಿಳೆಯರಿಗೆ₹20 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ವರ್ಷಕ್ಕೆ 1 ಸಾವಿರ ಮಹಿಳೆಯರು ಈ ಪ್ರೋತ್ಸಾಹಧನದಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುತ್ತಿದ್ದರು. ಆದರೆ, ವರದಿ ಮಂಡನೆಯಾದ ಬಳಿಕ ಫಲಾನುಭವಿಗಳ ಸಂಖ್ಯೆಯನ್ನು ಏಕಾಏಕಿಯಾಗಿ 325ಕ್ಕೆ ಇಳಿಸಲಾಗಿದೆ’ ಎನ್ನುತ್ತಾರೆ ಹಾಸನ ಜಿಲ್ಲೆಯ ಲೈಂಗಿಕ ಕಾರ್ಯಕರ್ತೆಯೊಬ್ಬರು.

‘ಅಧ್ಯಯನ ಸಮಿತಿ ನಮ್ಮ ಜಿಲ್ಲೆಗೆ ಬಂದಿದ್ದಾಗ ನೂರಾರು ಲೈಂಗಿಕ ಕಾರ್ಯಕರ್ತೆಯರು ಮನ ಪರಿವರ್ತಿತರಾಗಿ ವೃತ್ತಿ ಕೈಬಿಟ್ಟಿದ್ದರು. ಅವರ ಮನದಲ್ಲಿ ಘನತೆಯ ಬದುಕು ಕಟ್ಟಿಕೊಳ್ಳುವ ಆಸೆಯೂ ಚಿಗುರಿತ್ತು. ಆದರೆ, ಅದ್ಯಾವುದೂ ಆಗಲೇ ಇಲ್ಲ. ಈಗ ಅದೇ ಮಹಿಳೆಯರು ನನ್ನನ್ನು ಕಂಡರೆ ಸಾಕು ಸಿಟ್ಟಿ
ಗೇಳುತ್ತಾರೆ. ನಿತ್ಯವೂ ಅವರಿಂದ ನಿಂದನೆಯ ಮಾತುಗಳನ್ನು ಕೇಳಿ ಸಾಕಾಗಿ ಹೋಗಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ಅವರು.

ವರದಿಯ ಪ್ರಮುಖ ಶಿಫಾರಸುಗಳು

* ಲೈಂಗಿಕ ಕಾರ್ಯಕರ್ತೆಯರನ್ನು ಲೈಂಗಿಕ ದಮನಿತರು ಎಂದು ಕರೆಯಬೇಕು. ಪುನಶ್ಚೇತನ ಮತ್ತು ಸಬಲೀಕರಣ ಕಾರ್ಯದಲ್ಲಿ ಅಂಗವಿಕಲರು, ಅಪಾಯಕಾರಿ ರಾಸಾಯನಿಕ ದಾಳಿಗೆ ಒಳಗಾದವರು, ಮಾನಸಿಕ–ದೈಹಿಕ ವಿಕಲಚೇತನರಿಗೆ ಆದ್ಯತೆ ನೀಡಬೇಕು.

* 8 ಸಾವಿರ ಎಚ್‌ಐವಿ ಸೋಂಕಿತ ಲೈಂಗಿಕ ಕಾರ್ಯಕರ್ತೆಯರಿಗೆ, ಮಾಸಿಕ ₹ 5ಸಾವಿರ ಧನಸಹಾಯ, ಆರೋಗ್ಯ ಸೌಲಭ್ಯ, ಪೌಷ್ಟಿಕ ಆಹಾರ ನೀಡಬೇಕು.

* ಎಚ್ಐವಿ ಸೋಂಕಿತ ಮಕ್ಕಳಿಗೆ ವಿಶೇಷ ಪಾಲಕತ್ವ ಯೋಜನೆಯಡಿ ನೀಡುವ ಮೊತ್ತವನ್ನು ₹ 1,500ಕ್ಕೆ ಏರಿಸಬೇಕು.

* ಲೈಂಗಿಕ ಕಾರ್ಯಕರ್ತೆಯರಿಗೆ ಉಚಿತ ವಸತಿ, ಕೌಶಲ ತರಬೇತಿ ನೀಡಬೇಕು.

‘ಸಂತ್ರಸ್ತರ ನೋವು ಅರಿತುಕೊಳ್ಳಿ’

‘ವರದಿ ಕೈಸೇರಿದ ತಕ್ಷಣವೇ ಒಂದು ಸಂವೇದನಾಶೀಲ ಸರ್ಕಾರ, ಕನಿಷ್ಠ, ಈ ದಂಧೆಯೊಳಗೆ ನೂಕಲ್ಪಟ್ಟಿರುವ ಲಕ್ಷಕ್ಕೂ ಅಧಿಕ ದಮನಿತರಲ್ಲಿ ಸಾವಿರಾರು ಅಪ್ರಾಪ್ತ ಹೆಣ್ಣುಮಕ್ಕಳನ್ನು ರಕ್ಷಿಸಲು ಮೊದಲು ಯೋಜನೆ ರೂಪಿಸಬೇಕಿತ್ತು. ಸಂತ್ರಸ್ತರ ನೋವನ್ನು ಸರ್ಕಾರ ಪರಿಗಣನೆಗೇ ತೆಗೆದುಕೊಳ್ಳದಿರುವುದು ಅಕ್ಷಮ್ಯ’

–ರೂಪ ಹಾಸನ, ಸದಸ್ಯೆ, ಲೈಂಗಿಕ ಕಾರ್ಯಕರ್ತೆಯರ ಜೀವನಾಧ್ಯಯನ ಸಮಿತಿ

ಮುಂದಿಟ್ಟ ಹೆಜ್ಜೆ ಹಿಂದಕ್ಕೆ ತೆಗೆಯದಿರಿ

‘ಈ ವರದಿ ಇತರ ವರದಿಗಳಂತಲ್ಲ. ಇಷ್ಟೆಲ್ಲಾ ಖರ್ಚು ಮಾಡಿ ಅಧ್ಯಯನ ಮಾಡಿ ವರದಿ ತಯಾರಿಸಿ, ಅದನ್ನು ಮೂಲೆಗುಂಪು ಮಾಡುವುದು ಸರಿಯಲ್ಲ. ಸರ್ಕಾರ ಒಳ್ಳೆಯ ಹೆಜ್ಜೆ ಇಟ್ಟಿದೆ. ಅದನ್ನು ಮುಂದುವರಿಸಿಕೊಂಡು ಹೋದಲ್ಲಿ ಲೈಂಗಿಕ ಕಾರ್ಯಕರ್ತೆಯರ ಬದುಕು ಹಸನಾಗುತ್ತದೆ’

– ಸ್ಟ್ಯಾನ್ಲಿ, ಸದಸ್ಯ, ಲೈಂಗಿಕ ಕಾರ್ಯಕರ್ತೆಯರ ಜೀವನಾಧ್ಯಯನ ಸಮಿತಿ

‘ತಿದ್ದುಪಡಿಯೊಂದಿಗೆ ಅನುಷ್ಠಾನವಾಗಲಿ’

‘ಅಧ್ಯಯನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ವರದಿಯಲ್ಲಿ ಕೆಲ ಒಳ್ಳೆಯ ಅಂಶಗಳಿರುವಂತೆ, ಲೋಪದೋಷಗಳೂ ಇವೆ. ಅವುಗಳ ತಿದ್ದುಪಡಿ ಮಾಡಿ ವರದಿಯನ್ನು ಸರ್ಕಾರ ಐಅನುಷ್ಠಾನಗೊಳಿಸಲಿ. ಇದನ್ನು ವೃತ್ತಿಯನ್ನಾಗಿ ಪರಿಗಣಿಸುವ ಆಯ್ಕೆಯೂ ಬೇಕು.

–ನಿಶಾ ಗೂಳೂರು, ಖಜಾಂಚಿ, ಕರ್ನಾಟಕ ಲೈಂಗಿಕ ಕಾರ್ಯಕರ್ತೆಯರ ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.