ನವದೆಹಲಿ: ಗುಜರಾತ್ ಚುನಾವಣೆಯಲ್ಲಿ ನಗರ ಪ್ರದೇಶದಲ್ಲಿ ಬಿಜೆಪಿಗೆ ಜನಮತ ಸಿಕ್ಕಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್‍ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬೂತ್ ಮಟ್ಟದಿಂದಲೇ ಬಿಜೆಪಿ ಮಾಡಿದ ಶಿಸ್ತಿನ ಕಾರ್ಯ ತಂತ್ರಗಳು ಫಲ ಕಂಡರೆ, ಸರಿಯಾದ ಪೂರ್ವ ಸಿದ್ದತೆ ಇಲ್ಲದೆ ಚುನಾವಣಾ ಕಣಕ್ಕೆ ಧುಮುಕಿದ್ದು ಕಾಂಗ್ರೆಸ್‍ಗೆ ಹೊಡೆತ ನೀಡಿದೆ. ಅದೇ ಸಮಯದಲ್ಲಿ ಪಟೇಲ್ ಸಮುದಾಯದ ನೇತಾರ ಹಾರ್ದಿಕ್ ಪಟೇಲ್‍ನ ಬೆಂಬಲ ಕಾಂಗ್ರೆಸ್‍ಗೆ ಎಲ್ಲಾ ಕಡೆ ಕೈ ಹಿಡಿದಿಲ್ಲ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿದೆ.

ಈ ಚುನಾವಣೆಯಲ್ಲಿ ಬಿಜೆಪಿಗೆ ಲಭಿಸಿದ ಮತ ಶೇ. 49.1 (ಚುನಾವಣಾ ಆಯೋಗ ಮಾಹಿತಿ). 2012ರ ಚುನಾವಣೆಯನ್ನು ಹೋಲಿಸಿ ನೋಡಿದರೆ ಶೇ. 1.25 ರಷ್ಟು ಏರಿಕೆಯಾಗಿದೆ. ಅದೇ ವೇಳೆ ಕಾಂಗ್ರೆಸ್‍ಗೆ ಸಿಕ್ಕಿದ್ದು ಶೇ. 41.5 ಮತಗಳು. 2012ರ ಚುನಾವಣೆಗಿಂತ ಈ ಬಾರಿ ಶೇ.2.57 ಮತಗಳು ಏರಿಕೆಯಾಗಿವೆ. ಕಳೆದ ಚುನಾವಣೆಯೊಂದಿಗೆ ಹೋಲಿಕೆ ಮಾಡಿ ನೋಡಿದರೆ ಕಾಂಗ್ರೆಸ್‍ಗೆ 17 ಸೀಟುಗಳು ಹೆಚ್ಚಿಗೆ ಲಭಿಸಿದೆ ಮತ್ತು ಬಿಜೆಪಿಗೆ 14 ಸೀಟುಗಳು ನಷ್ಟವಾಗಿವೆ. ನಗರ ಪ್ರದೇಶಗಳ 55 ಸೀಟುಗಳಲ್ಲಿ 43 ಸೀಟುಗಳು ಬಿಜೆಪಿಗೆ, 12 ಸೀಟುಗಳು ಕಾಂಗ್ರೆಸ್‍ಗೆ ಲಭಿಸಿದೆ. ಇತ್ತ ಗ್ರಾಮ ಪ್ರದೇಶಗಳಲ್ಲಿನ 127 ಸೀಟುಗಳಲ್ಲಿ ಬಿಜೆಪಿಗೆ 56 ಮತ್ತು ಕಾಂಗ್ರೆಸ್‍ಗೆ 71 ಸೀಟುಗಳು ಲಭಿಸಿವೆ.

ಬಿಜೆಪಿ-ಕಾಂಗ್ರೆಸ್ ಬಲಾಬಲ
ಪಟೇಲ್ ಸಮುದಾಯಕ್ಕೆ ಗುಜರಾತಿನಲ್ಲಿ ಶೇ.16 ಮತಗಳಿವೆ. ಈ ಸಮುದಾಯ ಪ್ರಬಲವಾಗಿರುವ ಉತ್ತರ ಗುಜರಾತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಕಾಯ್ದುಕೊಂಡಿವೆ. ಕಳೆದ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಬಿಜೆಪಿಗೆ ಶೇ.1 ರಷ್ಟು ಮತ ವರ್ಧನೆಯಾದಾಗ ಕಾಂಗ್ರೆಸ್‍ಗೆ ಶೇ.2ರಷ್ಟು ಮತಗಳು ಹೆಚ್ಚಿವೆ.

ಗುಜಾರಾತಿನ ದಕ್ಷಿಣ ಭಾಗದಲ್ಲಿ ಕಾಂಗ್ರೆಸ್‍ಗೆ ಮತ ಲಾಭವುಂಟಾಗಿದ್ದು, ಬಿಜೆಪಿಗೆ ನಷ್ಟವುಂಟಾಗಿದೆ. ಇಲ್ಲಿರುವ 35 ಸೀಟುಗಳಲ್ಲಿ ಬಿಜೆಪಿ 25 ಸೀಟು ಗೆದ್ದಿದೆ. 2012ರಲ್ಲಿ ಬಿಜೆಪಿ 28 ಸೀಟುಗಳನ್ನು ಗೆದ್ದಿತ್ತು. 6 ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 10 ಸೀಟು ಗಳಿಸಿದೆ. ಸೌರಾಷ್ಟ್ರ, ಕಛ್ ಪ್ರದೇಶಗಳಲ್ಲಿ ಕಾಂಗ್ರೆಸ್‍ಗೆ ಲಾಭವುಂಟಾಗಿದ್ದು, ಬಿಜೆಪಿಗೆ ಇಲ್ಲಿ ಹೊಡೆತ ಸಿಕ್ಕಿದೆ.

2012ರಲ್ಲಿ 54 ಸೀಟುಗಳಲ್ಲಿ ಬಿಜೆಪಿ 35 ಸೀಟು ಗೆದ್ದಿದ್ದ ಬಿಜೆಪಿ ಈ ಬಾರಿ ಗೆದ್ದಿದ್ದು 23 ಸೀಟು. 16 ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 30 ಸೀಟುಗಳನ್ನು ಗಳಿಸುವ ಮೂಲಕ ಉತ್ತಮ ಸ್ಥಿತಿಗೇರಿದೆ. ಕರಾವಳಿ ಪ್ರದೇಶವಾದ ಸೌರಾಷ್ಟ್ರದ ಜನರ ಜೀವನ ಮಾರ್ಗ ಎಂದರೆ ಕೃಷಿ ಮತ್ತು ಸಣ್ಣ ಕೈಗಾರಿಕೆ. ಹೀಗಿರುವಾಗ ಕೇಂದ್ರ ಸರ್ಕಾರದ ನೋಟು ರದ್ದತಿ, ಜಿಎಸ್‌ಟಿ ಇವರ ಜೀವನದ ಮೇಲೆ ಪ್ರಭಾವ ಬೀರಿರುವುದೇ ಬಿಜೆಪಿ ಮತಗಳು ಕಡಿಮೆಯಾಗಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

ಮಧ್ಯ ಗುಜರಾತಿನಲ್ಲಿ 40 ಸೀಟುಗಳಲ್ಲಿ 25 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದೆ. 2012ರ ಚುನಾವಣೆಗೆ ಹೋಲಿಸಿದರೆ 5 ಸೀಟುಗಳ ವರ್ಧನೆಯುಂಟಾಗಿದೆ. ಕಾಂಗ್ರೆಸ್‍ಗೆ ಇಲ್ಲಿ ಸಿಕ್ಕಿದ್ದು 13 ಸೀಟುಗಳು. ಕೈಯಲ್ಲಿದ್ದ 5 ಸೀಟುಗಳೂ ಈ ಬಾರಿ ನಷ್ಟವಾಗಿದೆ. ಮುಸ್ಲಿಂ ಸಮುದಾಯ ಪ್ರಾಬಲ್ಯವಿರುವ ಕೆಲವು ಪ್ರದೇಶಗಳಲ್ಲಿ ಬಿಜೆಪಿಗೆ ಹೊಡೆತವುಂಟಾಗಿದೆ. ಪಟೇಲ್ ಸಮುದಾಯ ಪ್ರಾಬಲ್ಯವಿರುವ 25 ಸೀಟುಗಳ ಪೈಕಿ 12 ಸೀಟುಗಳಲ್ಲಿ ಕಾಂಗ್ರೆಸ್ ಗೆದ್ದಿದೆ. 2012ರಲ್ಲಿ ಕಾಂಗ್ರೆಸ್ ಇಲ್ಲಿ ಒಂದೇ ಒಂದು ಸೀಟು ಗೆದ್ದಿತ್ತು. ಬಿಜೆಪಿ ಈ ಬಾರಿ 13 ಸೀಟುಗಳನ್ನು ಗೆದ್ದಿದ್ದು, ಕಳೆದ ಬಾರಿಗಿಂತ 1 ಸೀಟು ನಷ್ಟವಾಗಿದೆ.

2002ರಲ್ಲಿ ಬಿಜೆಪಿ 184 ಸೀಟುಗಳ ಪೈಕಿ 127 ಸೀಟುಗಳನ್ನು ಗೆದ್ದಿತ್ತು. ಶೇಕಡಾವಾರು ಮತ 49.85. 2007ರ ಚುನಾವಣೆಯಲ್ಲಿ ಇದು 117 ಸೀಟುಗಳಿಗೆ ಇಳಿಯಿತು. ಶೇಕಡಾವಾರು ಮತ 49.12.

2012ರ ಚುನಾವಣೆಯಲ್ಲಿ 115 ಸೀಟುಗೆದ್ದಿದ್ದ ಬಿಜೆಪಿಗೆ ಸಿಕ್ಕಿದ ಶೇಕಡಾವಾರು ಮತ 48.30.

ಅದೇ ವೇಳೆ 2002ರಲ್ಲಿ ಕಾಂಗ್ರೆಸ್‍ಗೆ 51 ಸೀಟು ಲಭಿಸಿದೆ. ಶೇಕಡಾವಾರು ಮತ 39.59. 2007ರ ಚುನಾವಣೆಯಲ್ಲಿ 59 ಸೀಟು ಗೆದ್ದ ಪಕ್ಷಕ್ಕೆ ಸಿಕ್ಕಿದ ಶೇಕಡಾವಾರು ಮತ 39.69. 2012ರಲ್ಲಿ ಸೀಟುಗಳ ಸಂಖ್ಯೆ 61 ಆಗಿತ್ತು, ಶೇಕಡಾವಾರು ಮತ 40.59.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.