ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕವಿ ಡಾ.ಸಿದ್ದಲಿಂಗಯ್ಯ ಸಹಿತ ರಾಜ್ಯದ ನಾಲ್ವರನ್ನು ನಾಮನಿರ್ದೇಶನ ಮಾಡಲಾಗಿದೆ.

ಸಾಹಿತಿಗಳಾದ ಬಾಳಾಸಾಹೇಬ ಲೋಕಾಪುರೆ, ಸರಜೂ ಕಾಟ್ಕರ್ ಅವರೂ ಸಹ ಕನ್ನಡ ಭಾಷೆ ಪ್ರತಿನಿಧಿಗಳಾಗಿ ನಾಮನಿರ್ದೇಶನ ಮಾಡಲಾಗಿದೆ.

ಹಿಂದೆ ಭಾಷೆ ಪ್ರತಿನಿಧಿಯಾಗಿ ಕರ್ನಾಟಕದವರಾದ, ಪ್ರಸ್ತುತ ಮಧ್ಯಪ್ರದೇಶದಲ್ಲಿನ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಕುಲಪತಿ ಡಾ.ವಿ.ತೇಜಸ್ವಿ ಕಟ್ಟೀಮನಿ ನಾಮನಿರ್ದೇಶನಗೊಂಡಿದ್ದಾರೆ.

‘ಅಕಾಡೆಮಿ ಸದಸ್ಯರಾಗಿ ರಾಜ್ಯದ ನಾಲ್ವರು ನಾಮನಿರ್ದೇಶನ ಆಗಿರುವುದು ಕನ್ನಡಿಗರಿಗೆ ಸಂತೋಷದ ಸಂಗತಿ. ಎರಡನೇ ಬಾರಿಗೆ ಸಿದ್ದಲಿಂಗಯ್ಯ ಸದಸ್ಯರಾಗಿದ್ದಾರೆ. ಪರಿಷತ್ತಿನ ಪರವಾಗಿ ಎಲ್ಲರನ್ನೂ ಅಭಿನಂದಿಸುತ್ತೇನೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.