ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದರೂ ರಾಜ್ಯ ಸರ್ಕಾರ ಇನ್ನೂ ಸ್ಥಿರವಾಗಲಿಲ್ಲ. ಮುಖ್ಯಮಂತ್ರಿಯ ಅಸಹಾಯಕತೆ ಆಗಾಗ ಎದ್ದು ಕಾಣಿಸುತ್ತದೆ. ಹೀಗಿರುವಾಗ ಸಾಮಾನ್ಯ ಜನರ ಪಾಡೇನು?

ಇದಕ್ಕೆ ಉದಾಹರಣೆ ಎಂಬಂತೆ ಕೆಲವು ಅಧಿಕಾರಿಗಳು, ನಿರಪರಾಧಿ ಯುವಕರನ್ನು ಶಿಕ್ಷಿಸುತ್ತಿರುವುದು ಬೇಸರ ಮೂಡಿಸುತ್ತದೆ. ಬೆಂಗಳೂರಿನ ಬಸವನಗುಡಿ ಹಾಗೂ ಸಿದ್ಧಾಪುರ ಠಾಣೆಯ ಪೊಲೀಸರು ಈಚೆಗೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದವರನ್ನು ಪತ್ತೆ ಮಾಡುವ ಸಲುವಾಗಿ ಅಂಥ ಆರೋಪಿಗಳ ಮನೆಯ ಅಕ್ಕಪಕ್ಕದ ಯುವಕರನ್ನು ಹಿಡಿದು, ಠಾಣೆಯಲ್ಲಿಟ್ಟು ಶಿಕ್ಷಿಸಿದ್ದಾರೆ. ಇಂಥ ಯುವಕರ ಪೋಷಕರು ಠಾಣೆಗೆ ಹೋದಾಗ ಅವರನ್ನೂ ಅವಮಾನಿಸಿ ಕಳುಹಿಸಿರುವುದು ಪೊಲೀಸರಲ್ಲಿ ಮಾನವೀಯತೆ ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ.

‘ಶಾಲೆಗೆ ಹೋಗುವ ಬಾಲಕನಾದ ನನ್ನ ಮೊಮ್ಮಗ ನಿರಪರಾಧಿ, ತಾಯಿ ಇಲ್ಲದ ತಬ್ಬಲಿ’ ಎಂದು ಸಿದ್ಧಾಪುರದ ವೃದ್ಧರೊಬ್ಬರು ಪೊಲೀಸ್ ಅಧಿಕಾರಿಯ ಬಳಿ ಗೋಗರೆದರೆ, ಅವರನ್ನು ಏಕವಚನದಲ್ಲಿ ನಿಂದಿಸಿ ಕಳುಹಿಸಲಾಗಿದೆ. ಇದು ದರ್ಪವಲ್ಲದೆ ಇನ್ನೇನು?

ಸರ್ಕಾರ ದುರ್ಬಲವಾದಾಗ ಅಧಿಕಾರಿಗಳ ದರ್ಪ ಹೆಚ್ಚಾಗುತ್ತದೆ. ಆಳುವವರು ಬಲಿಷ್ಠರಾಗಿ ಪೊಲೀಸರಿಗೆ ಮಾನವೀಯತೆಯನ್ನು ಬೋಧಿಸುವುದು ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.