ಬೆಂಗಳೂರು: ‘ಘನತೆಯಿಂದ ಕೂಡಿರಬೇಕಾದ ಮಾತು ಸಾರ್ವಜನಿಕವಾಗಿ ಇಂದು ಅಧೋಗತಿಗಿಳಿದಿದೆ. ಇಂತಹ ಸಂದರ್ಭದಲ್ಲಿ ಕಾವ್ಯ ಜನರ ಮನಸ್ಸಿನ ಕಸ ಗುಡಿಸುವ ಕಸಬರಿಕೆಯಾಗಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್. ಜಿ. ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ಡಾ.ಸಿದ್ಧಯ್ಯ ಪುರಾಣಿಕ ಜನ್ಮಶತಮಾನೋತ್ಸವದ ಅಂಗವಾಗಿ ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಂಘವು ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವರಚಿತ ಕವನ ವಾಚನ ಸ್ಪರ್ಧೆಯನ್ನು ಉದ್ಘಾಟಿಸಿ, ‘ಮಾನವೀಯತೆಯನ್ನು ಬೆಸೆಯುವ ಕಾವ್ಯ ಮೂಡಿಬರಬೇಕು’ ಎಂದರು.

ವಿಜೇತರಿಗೆ ಬಹುಮಾನ ವಿತರಿಸಿದ ವಿಮರ್ಶಕ ಪ್ರೊ.ಎಂ.ಎಚ್.ಕೃಷ್ಣಯ್ಯ, ‘ಕವಿಯಾದವನಿಗೆ ಪ್ರತಿಭೆ ಹಾಗೂ ಶ್ರದ್ಧೆಯಿರಬೇಕು. ನೇರವಾದ ಹೇಳಿಕೆಗಳು ಕವನವಾಗುವುದಿಲ್ಲ. ಅವು ಪ್ರತಿಮೆ ಮತ್ತು ರೂಪಕಗಳಿಂದ ಕೂಡಿರಲಿ’ ಎಂದರು.

ಲೇಖಕ ಪ್ರೊ.ಅ.ರಾ.ಮಿತ್ರ, ಕನ್ನಡ ಸಾಹಿತ್ಯ ಸಂವರ್ಧಕ ಟ್ರಸಿನ ಪ್ರಸನ್ನಕುಮಾರ ಪುರಾಣಿಕ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಂ.ವೆಂಕಟಶಾಮಿ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಸ್ವರಚಿತ ಕವನ ವಾಚನ ಸ್ಪರ್ಧೆಯ ವಿಜೇತರು: ಪದವಿ ವಿಭಾಗ: ಬಿಎಂಎಸ್ ಕಾಲೇಜಿನ ಮೀನಾಕ್ಷಿ– ಪ್ರಥಮ (₹5 ಸಾವಿರ), ಎನ್ಎಂಕೆಆರ್ವಿ ಕಾಲೇಜಿನ ಸ್ವಾತಿ ಪಂಡಿತ್– ದ್ವಿತೀಯ (₹3 ಸಾವಿರ), ಚಿಕ್ಕಬಳ್ಳಾಪುರ ಪ್ರಥಮದರ್ಜೆ ಕಾಲೇಜಿನ ಅಮರಾವತಿ–ತೃತೀಯ (₹2 ಸಾವಿರ).

ಸ್ನಾತಕೋತ್ತರ ವಿಭಾಗ: ವಿಜಯನಗರ ಸರ್ಕಾರಿ ಕಾಲೇಜಿನ ಜಗದೀಶ್– ಪ್ರಥಮ (₹5 ಸಾವಿರ), ಸರ್ಕಾರಿ ಕಲಾ ಕಾಲೇಜಿನ ಸಿದ್ಧರಾಜು–ದ್ವಿತೀಯ (₹3 ಸಾವಿರ), ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಮಹಾಂತೇಶ್– ತೃತೀಯ (₹2 ಸಾವಿರ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.