ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಸಿದ್ಧಾರ್ಥ್‌, ಮಹಿತಾಗೆ ಪ್ರಶಸ್ತಿ

Published 8 ಮೇ 2024, 14:35 IST
Last Updated 8 ಮೇ 2024, 14:35 IST
ಅಕ್ಷರ ಗಾತ್ರ

ಬೆಂಗಳೂರು: ಮೂರನೇ ಶ್ರೇಯಾಂಕದ ಸಿದ್ಧಾರ್ಥ್ ಎಸ್. ನಾಯರ್ ಮತ್ತು ಶ್ರೇಯಾಂಕರಹಿತ ಮಹಿತಾ ನಾಯ್ಡು ಅವರು ಇಲ್ಲಿನ ಸೆಲೆನೈಟ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ರಮವಾಗಿ 13 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಸೋಮವಾರ ನಡೆದ ಫೈನಲ್‌ನಲ್ಲಿ ಸಿದ್ಧಾರ್ಥ್‌ 22-20, 27-25 ರಿಂದ ಅಗ್ರ ಶ್ರೇಯಾಂಕದ ಗೌತಮ್‌ ಎಸ್‌. ನಾಯರ್‌ ಅವರನ್ನು ಸೋಲಿಸಿದರು. ಬಾಲಕಿಯರ ಫೈನಲ್‌ನಲ್ಲಿ ಮಹಿತಾ 20-22, 21-18, 22-20 ರಿಂದ ಅಗ್ರ ಶ್ರೇಯಾಂಕದ ಸ್ಮೃತಿ ಎಸ್. ಅವರನ್ನು ಮಣಿಸಿದರು.

ಬಾಲಕರ ಡಬಲ್ಸ್‌ನಲ್ಲಿ ಗೌತಮ್‌ ಎಸ್‌. ನಾಯರ್‌ ಮತ್ತು ಸಿದ್ಧಾರ್ಥ್‌ ಎಸ್‌. ನಾಯರ್‌ ಜೋಡಿಯು 21-8, 21-9 ರಿಂದ ಆಯುಷ್ ಮಿಶ್ರಾ ಮತ್ತು ಗೌರವ್ ಎಸ್. ಜೋಡಿಯನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಬಾಲಕಿಯರ ಡಬಲ್ಸ್‌ನಲ್ಲಿ ಸಿರಿ ಟಿ.ಆರ್‌. ಮತ್ತು ಸ್ಮೃತಿ ಎಸ್. ಅವರು 21-15, 21-15 ರಿಂದ ಹಂಸಾ ಮುರಳೀಧರ ಮತ್ತು  ನಿಹಾರಿಕಾ ಜೋಡಿಯನ್ನು ಮಣಿಸಿ ಚಾಂಪಿಯನ್‌ ಆದರು.

11 ವರ್ಷದೊಳಗಿವರ ವಿಭಾಗ: ಬಾಲಕರ ಸಿಂಗಲ್ಸ್‌ನ ಫೈನಲ್‌ನಲ್ಲಿ ವೈಭವ್ ರಾವ್ ನಂದಿಕೊಳ್ಳ 21-18, 21-12ರಿಂದ ಅರ್ಜುನ್ ಅರಳಗುಂಡಗಿ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು. ಬಾಲಕಿಯರ ಸಿಂಗಲ್ಸ್‌ನಲ್ಲಿ ಶಾಂಭವಿ ಶರ್ಮಾ 21-13, 21-15ರಿಂದ ಸ್ತುತಿ ಎಸ್. ಶೆಟ್ಟಿ ಅವರನ್ನು ಮಣಿಸಿ ಚಾಂಪಿಯನ್‌ ಆದರು.

ಬಾಲಕರ ಡಬಲ್ಸ್‌ನಲ್ಲಿ ಮಾನ್ವಿತ್ ಮಾಣಿಬೆಟ್ಟು ಮತ್ತು ವೈಭವ್ ರಾವ್ ಜೋಡಿಯು 21-17, 21-10ರಿಂದ ಸಮಕ್ಷ್ ಕೋಟ್ಯಾನ್ ಮತ್ತು ಸಿದ್ಧಾರ್ಥ್ ಇ.ಎಸ್. ಜೋಡಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದರೆ, ಬಾಲಕಿಯರ ಡಬಲ್ಸ್‌ನಲ್ಲಿ ಶಾಂಭವಿ ಶರ್ಮಾ ಮತ್ತು ಸುಮಯ್ಯ ಶರೀಫ್ ಜೋಡಿಯು 21-8, 21-16ರಿಂದ ಹನ್ವಿತಾ ಕೆ.ಎ ಮತ್ತು ಶಾನ್ವಿ ಪಿ.ಎನ್ ಅವರನ್ನು ಮಣಿಸಿ ಚಾಂಪಿಯನ್‌ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT