ಕೀವ್: ತಮ್ಮ ಮೊಮ್ಮಕ್ಕಳ ರಕ್ಷಣೆಗಾಗಿ 80 ವರ್ಷದ ವೃದ್ಧರೊಬ್ಬರು ಉಕ್ರೇನ್‌ನಲ್ಲಿ ಸೇನೆ ಸೇರಲು ಮುಂದಾಗಿದ್ದಾರೆ.
ಈ ಫೋಟೊವನ್ನು ಉಕ್ರೇನ್‌ನ ಯಾವ ಸ್ಥಳದಲ್ಲಿ ಸೆರೆಹಿಡಿಯಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ, ಇದೀಗ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಕೈಯಲ್ಲಿ ಬ್ಯಾಗ್ ಹಿಡಿದು ಬಂದಿದ್ದ ವೃದ್ಧರೊಬ್ಬರು ಸೈನಿಕರೊಂದಿಗೆ ಮಾತನಾಡುತ್ತಿರುವ ದೃಶ್ಯ ಚಿತ್ರದಲ್ಲಿ ಸೆರೆಯಾಗಿದೆ.
ಎರಡು ಟಿ-ಶರ್ಟ್‌ಗಳು, ಒಂದು ಜೊತೆ ಹೆಚ್ಚುವರಿ ಪ್ಯಾಂಟ್‌ಗಳು, ಟೂತ್ ಬ್ರಶ್ ಮತ್ತು ಊಟಕ್ಕಾಗಿ ಸ್ಯಾಂಡ್‌ವಿಚ್ ಅನ್ನು ಅವರು ತೆಗೆದುಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.
ವೃದ್ಧನ ದೇಶಾಭಿಮಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಪೋಟೊವನ್ನು ಉಕ್ರೇನ್‌ನ ಮಾಜಿ ಅಧ್ಯಕ್ಷೆ ಕ್ಯಾಟರಿನಾ ಯುಶ್ಚೆಂಕೊ ಅವರು ಕೂಡಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ (ಫೆ.24) ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದು, ಇದರ ಬೆನ್ನಲ್ಲೇ ರಷ್ಯಾದ ಸೇನಾಪಡೆಗಳು ಉಕ್ರೇನ್‌ನ ಪ್ರಮುಖ ವಾಯುನೆಲೆಗಳು, ನಗರಗಳ ಮೇಲೆ ಕ್ಷಿಪಣಿ ಮತ್ತು ಶೆಲ್ ದಾಳಿ ನಡೆಸಿವೆ. ಇದೀಗ ಉಕ್ರೇನ್ ರಾಜಧಾನಿ ಕೀವ್, ಖಾರ್ಕಿವ್ ನಗರವನ್ನು ವಶಪಡಿಸಿಕೊಳ್ಳಲು ರಷ್ಯಾ ಪಡೆಗಳು ಮುಂದಾಗಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ರಮವನ್ನು ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ. ರಷ್ಯಾ ಕೂಡಲೇ ದಾಳಿ ನಿಲ್ಲಿಸುವಂತೆ ಆಗ್ರಹಿಸಿ ಅನೇಕ ದೇಶಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.