ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Result 2024: ಸಂಕೇತಾಗೆ 5ನೇ ರ್‍ಯಾಂಕ್‌

Published 9 ಮೇ 2024, 12:41 IST
Last Updated 9 ಮೇ 2024, 12:41 IST
ಅಕ್ಷರ ಗಾತ್ರ

ಶಿರ್ವ: ಕಾಪುವಿನ ಮಣಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲೆವೂರು ದೆಂದೂರುಕಟ್ಟೆ ಪಡು ಕಲ್ಮಂಜೆಯ ಗ್ರಾಮೀಣ ಪ್ರತಿಭೆ ಸಂಕೇತಾ ಎಚ್.ಎಸ್. ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 621 ಅಂಕ ಗಳಿಸಿ ರಾಜ್ಯಕ್ಕೆ 5ನೇ ರ್‍ಯಾಂಕ್‌ ಪಡೆದಿದ್ದಾರೆ.

ಉಡುಪಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯಾಗಿರುವ ಆಕೆ ಪಿಯುಸಿಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿ ಎಂಜಿನಿಯರ್ ಆಗಬೇಕೆಂಬ ಕನಸು ಹೊಂದಿದ್ದಾರೆ. ಚಿಕ್ಕಂದಿನಿಂದಲೇ ಕಲಿಕೆಯಲ್ಲಿ ಮುಂದಿದ್ದ ಸಂಕೇತಾ, ‘ಮನೆಯಲ್ಲಿ, ಶಿಕ್ಷಣ ಸಂಸ್ಥೆಯಲ್ಲಿ ಕಲಿಕೆಗೆ ಪೂರಕ ವಾತಾವರಣ ಇತ್ತು. ಪರೀಕ್ಷೆ ಸಮಯದಲ್ಲಿ ಪ್ರತ್ಯೇಕ ಟೈಮ್ ಟೇಬಲ್ ಮಾಡಿ, ಟಿವಿ ನೋಡಲು, ಆಟವಾಡಲು, ವ್ಯಾಯಾಮ ಮಾಡಲು, ಅಭ್ಯಾಸ ಮಾಡಲು, ನಿದ್ದೆ ಮಾಡಲು ಸಮಯ ನಿಗದಿ ಮಾಡಿಕೊಂಡಿದ್ದೆ. ತಂದೆ, ತಾಯಿ, ಶಿಕ್ಷಕರ ಮಾರ್ಗದರ್ಶನ ಪಡೆದು ಕಠಿಣ ಅಭ್ಯಾಸ ಮಾಡಿದ್ದರ ಫಲವಾಗಿ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಪ್ರತಿಕ್ರಿಯಿಸಿದರು.

ತಂದೆ ಸತೀಶ್ ಭಟ್ ಮಲ್ಪೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರಾಗಿದ್ದು, ತಾಯಿ ಮಾಲಿನಿ ಭಟ್ ಒಳಕಾಡು ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಸಹೋದರಿ ಸಮತಾ ಎಚ್.ಎಸ್. ಬೆಂಗಳೂರು ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಸಂಕೇತಾ ಎಚ್.ಎಸ್.
ಸಂಕೇತಾ ಎಚ್.ಎಸ್.

‘ಇಬ್ಬರೂ ಮಕ್ಕಳಿಗೂ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿ ಎಂಜಿನಿಯರ್ ಆಗಬೇಕೆಂಬ ಕನಸಿತ್ತು. ಅದನ್ನು ದೇವರು ಈಡೇರಿಸಿದ್ದಾನೆ. ಸಂಕೇತಾ 5ನೇ ರ‍್ಯಾಂಕ್ ಗಳಿಸಿರುವುದು ಕುಟುಂಬಕ್ಕೆ ಖುಷಿ ನೀಡಿದೆ. ಸಾಧನೆಗೆ ನೆರವಾದ ಶಿಕ್ಷಕ ವೃಂದಕ್ಕೆ ಧನ್ಯವಾದಗಳು’ ಎಂದು ಸತೀಶ್ ಭಟ್, ಮಾಲಿನಿ ಭಟ್ ಸಂತಸ ವ್ಯಕ್ತಪಡಿಸಿದರು.

ಸಂಕೇತಾಳ ಅಂಕಪಟ್ಟಿ ಪ್ರತಿ
ಸಂಕೇತಾಳ ಅಂಕಪಟ್ಟಿ ಪ್ರತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT