ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Results | ಅನಾಥ, ಮನೆಗೆಲಸದ ಬಾಲಕಿಯರ ಸಾಧನೆ

Published 10 ಮೇ 2024, 0:27 IST
Last Updated 10 ಮೇ 2024, 0:27 IST
ಅಕ್ಷರ ಗಾತ್ರ

ಬೆಂಗಳೂರು: ಪೋಷಕರಿಂದ ದೂರವಾಗಿ ಸ್ಪರ್ಶ ಟ್ರಸ್ಟ್‌ನಲ್ಲಿ ಆಶ್ರಯ ಪಡೆದು, ಸರ್ಕಾರಿ ಶಾಲೆಯಲ್ಲಿ ಓದಿದ ಇಬ್ಬರು ಬಾಲಕಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ರಾಯಚೂರಿನ ರೇಣುಕಾ ಅವರು ತಂದೆಯ ಮರಣಾನಂತರ ಐದು ವರ್ಷದವರಿದ್ದಾಗ ಸ್ಪರ್ಶಟ್ರಸ್ಟ್‌ಗೆ ಸೇರ್ಪಡೆಯಾದರು. ಅಂದಿನಿಂದ ಇಲ್ಲಿಯವರೆಗೂ ಬಾಲಕಿಯನ್ನು ಭೇಟಿ ಮಾಡಲು ಯಾರೂ ಬಂದಿಲ್ಲ. ಟ್ರಸ್ಟ್‌ ಆಶ್ರಯದಲ್ಲೇ ದೇವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿದ ಅವರು 625ಕ್ಕೆ 511 ಅಂಕ ಗಳಿಸಿದ್ದಾರೆ. ಪಿಯುನಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ನಂತರ ಎಂಜಿನಿಯರ್‌ ಆಗುವ ಗುರಿ ಇಟ್ಟುಕೊಂಡಿದ್ದಾರೆ.

ಮಹಾರಾಷ್ಟ್ರದ ಸ್ವಪ್ನಾಲಿ ಮಹಾದೇವ್‌ ವಾಗ್ಮೋರ್‌ ಅವರು ತಂದೆ ತೊರೆದಿದ್ದರಿಂದಾಗಿ ತಾಯಿಯ ಜತೆ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮನೆಕೆಲಸ ಮಾಡುತ್ತಿದ್ದರು. 8ನೇ ತರಗತಿ ಓದಿದ್ದ ಅವರನ್ನು ಟ್ರಸ್ಟ್‌ ನೇರವಾಗಿ 10ನೇ ತರಗತಿಗೆ ದಾಖಲು ಮಾಡಿತ್ತು. ದೇವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಓದಿ 482 ಅಂಕ ಗಳಿಸಿದ್ದಾರೆ. ಕನ್ನಡ ಕಲಿತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT