ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಾ: ನೀಟ್ ಆಕಾಂಕ್ಷಿ ನಾಪತ್ತೆ

Published 9 ಮೇ 2024, 16:13 IST
Last Updated 9 ಮೇ 2024, 16:13 IST
ಅಕ್ಷರ ಗಾತ್ರ

ಕೋಟಾ (ರಾಜಸ್ಥಾನ): ಇಲ್ಲಿ ನೀಟ್‌ ಕೋಚಿಂಗ್‌ ಪಡೆದ ವಿದ್ಯಾರ್ಥಿಯೊಬ್ಬರು ಪರೀಕ್ಷೆಯ ಬಳಿಕ, ತಾನು ಮುಂದೆ ಓದಲು ಬಯಸುವುದಿಲ್ಲ ಎಂದು ಪೋಷಕರಿಗೆ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದಾರೆ.

‘ನಾನು ಯಾವುದೇ ಆಘಾತಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಐದು ವರ್ಷ ಮನೆಯಿಂದ ದೂರ ಉಳಿಯುತ್ತೇನೆ’ ಎಂದೂ ವಿದ್ಯಾರ್ಥಿ ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.

ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ರಾಜಸ್ಥಾನದ ಗಂಗಾಪುರ ನಗರದ ನಿವಾಸಿ ರಾಜೇಂದ್ರ ಪ್ರಸಾದ್‌ ಮೀನಾ ಎಂದು ಗುರುತಿಸಲಾಗಿದ್ದು, ಅವರು ಮೂರು ವರ್ಷಗಳಿಂದ ಕೋಟಾದ ಕೋಚಿಂಗ್‌ ಕೇಂದ್ರವೊಂದರಲ್ಲಿ ತರಬೇತಿ ಪಡೆಯುತ್ತಿದ್ದರು ಎಂದು ಡಿಎಸ್‌ಪಿ ಯೋಗೇಶ್‌ ಶರ್ಮಾ ತಿಳಿಸಿದ್ದಾರೆ.

ಮೇ 6ರಂದು ನೀಟ್‌ ಪರೀಕ್ಷೆ ಬರೆದ ಬಳಿಕ ರಾಜೇಂದ್ರ ಅವರು ತನ್ನ ಪೋಷಕರಿಗೆ ಸಂದೇಶ ಕಳುಹಿಸಿದ್ದಾರೆ. ‘ಯಾರೂ ನನ್ನನ್ನು ಸಂಪರ್ಕಿಸಬೇಡಿ. ನಾನು ಸಿಮ್‌ ಅನ್ನು ಒಡೆದು, ಮೊಬೈಲ್‌ ಮಾರಲಿದ್ದೇನೆ’ ಎಂದೂ ಅವರು ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ಡಿಎಸ್‌ಪಿ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಯ ಪೋಷಕರು ಇಲ್ಲಿನ ವಿಜ್ಞಾನ ನಗರ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT