ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಸಹಜ ಜೀವನಕ್ಕೆ ಆರೋಗ್ಯ ಸೂತ್ರ

Published 4 ಮೇ 2024, 23:30 IST
Last Updated 4 ಮೇ 2024, 23:30 IST
ಅಕ್ಷರ ಗಾತ್ರ

ಯಾವ ಬಗೆಯ ಆಹಾರ ಸೇವಿಸಬೇಕು? ಯಾವ ರೀತಿಯ ವ್ಯಾಯಾಮ ಮಾಡುವುದು ಸೂಕ್ತ?- ದಿಕ್ಕು ತಪ್ಪಿರುವ ಇಂದಿನ ನಮ್ಮ ಜೀವನಶೈಲಿಯಲ್ಲಿ ಬಹುತೇಕರನ್ನು ಕಾಡುತ್ತಿರುವ ಪ್ರಶ್ನೆಗಳಿವು. ಆಹಾರ ಪದಾರ್ಥ, ದೈಹಿಕ ಕಸರತ್ತುಗಳೆಲ್ಲವೂ ವ್ಯಾಪಾರದ ಪರಿಧಿಯೊಳಗೆ ಸೇರಿಹೋಗಿರುವ ಈ ದಿನಮಾನಗಳಲ್ಲಿ ಇಂತಹ ಸರಳಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದೂ ಈಗ ಸುಲಭವಲ್ಲ.

ನಮ್ಮನ್ನು ಗೊಂದಲಕ್ಕೆ ದೂಡುವಷ್ಟು ಬಗೆಬಗೆಯ ಆಹಾರ ಪದಾರ್ಥಗಳು, ದೈಹಿಕ ವ್ಯಾಯಾಮದ ಮಾದರಿಗಳು ನಮಗೆ ಕಾಣಸಿಗುತ್ತವೆ. ಯಾವುದನ್ನು ಆಯ್ದುಕೊಳ್ಳುವುದು ಯಾವುದನ್ನು ಬಿಡುವುದು ಎಂಬ ಗೋಜಲಿಗೆ ಸಿಲುಕಿಸಿ ನಮ್ಮನ್ನು ಕಕ್ಕಾಬಿಕ್ಕಿಯಾಗಿಸುತ್ತವೆ. ಇಂತಹ ಪ್ರಶ್ನೆಗಳ ಬೆನ್ನಟ್ಟಿ ಹೋಗಿ ಉತ್ತರ ಕಂಡುಕೊಳ್ಳುವಲ್ಲಿ ಸಫಲರಾಗಿರುವ ಲೇಖಕ, ರಾಜಕಾರಣಿ ರವಿ ಕೃಷ್ಣಾರೆಡ್ಡಿ ಅವರ ಸ್ವಾನುಭವದಿಂದ ಒಡಮೂಡಿರುವ ಕೃತಿ 'ಸಹಜ ಜೀವನ'.

ಆರೋಗ್ಯಪೂರ್ಣ ಜೀವನಕ್ಕೆ ಸತ್ವಪೂರ್ಣ ಆಹಾರದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ ಎಂದು ಪ್ರತಿಪಾದಿಸುವ ಅವರು, ಅನನ್ಯ ಚೇತನಗಳ ಜ್ವಲಂತ ಉದಾಹರಣೆಗಳ ಮೂಲಕ ಅದನ್ನು ಕಟ್ಟಿಕೊಟ್ಟಿದ್ದಾರೆ. ಅಚಲ ಆತ್ಮವಿಶ್ವಾಸ, ಅದಮ್ಯ ಚೈತನ್ಯ ಹಾಗೂ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳುವ ಮಾನಸಿಕ ದೃಢತೆಗೆ ಹಿತಮಿತ ಆಹಾರದ ಮಹತ್ವ, ಯೋಗ, ಧ್ಯಾನದ ಸಚಿತ್ರ ವಿವರಣೆಯುಳ್ಳ ಈ ಪುಸ್ತಕ, ಆರೋಗ್ಯ ಭಾಗ್ಯದ ಫಲಾನುಭವಿಗಳಾಗ ಬಯಸುವವರಿಗೆ ಕೈಪಿಡಿಯಾಗಿ ಒದಗಿಬಂದಿದೆ. ಇದು ಲೇಖಕರ ಆಶಯ ಸಹ.

ಸಹಜ ಜೀವನ

ಲೇ: ರವಿ ಕೃಷ್ಣಾರೆಡ್ಡಿ

ಪ್ರ: ವೀರಲೋಕ ಬುಕ್ಸ್ ಪ್ರೈ.ಲಿ.

ಸಂ: 7022122121

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT