ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರಿ ಕೋಸ್ಟ್‌: 16 ಮಂದಿ ಹತ್ಯೆ

Last Updated 14 ಮಾರ್ಚ್ 2016, 19:43 IST
ಅಕ್ಷರ ಗಾತ್ರ

ಗ್ರಾಂಡ್‌–ಬಾಸಮ್, ಐವರಿ ಕೋಸ್ಟ್ (ಎಎಫ್‌ಪಿ): ಇಲ್ಲಿನ ಬೀಚ್‌ ರೆಸಾರ್ಟ್‌ ಮೇಲೆ ಸೋಮವಾರ ದಾಳಿ ನಡೆಸಿ ಮನಬಂದಂತೆ ಗುಂಡು ಹಾರಿಸಿದ ಭಾರಿ ಸಶಸ್ತ್ರ ಹೊಂದಿದ್ದ ಬಂದೂಕುಧಾರಿಗಳು 16 ಮಂದಿಯನ್ನು ಹತ್ಯೆ ಮಾಡಿದ್ದಾರೆ.

‘ಅಲ್ಲಾಹು ಅಕ್ಬರ್‌’ ಎಂದು ಘೋಷಣೆ ಕೂಗಿದ ದುಷ್ಕರ್ಮಿಗಳು ಅಡ್ಡಾದಿಡ್ಡಿ ಗುಂಡಿನ ದಾಳಿ ನಡೆಸಿದರು. ಮೂರು ಹೋಟೆಲ್‌ಗಳನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿದೆ. ಪ್ರತಿದಾಳಿ ನಡೆಸಿದ ಭದ್ರತಾ ಸಿಬ್ಬಂದಿ ಆರು ದಾಳಿಕೋರರನ್ನು ಕೊಂದು ಹಾಕಿದ್ದಾರೆ. ಈ ರೀತಿಯ ಘಟನೆ ದೇಶದಲ್ಲಿ ನಡೆದಿರುವುದು ಇದೇ ಮೊದಲು. ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಮೋದಿ ಖಂಡನೆ:  ಐವರಿ ಕೋಸ್ಟ್‌ ಮತ್ತು ಟರ್ಕಿಯಲ್ಲಿ ನಡೆದ ಭಯೋತ್ಪಾದನಾ ದಾಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.
‘ಐವರಿ ಕೋಸ್ಟ್‌ ಮತ್ತು ಅಂಕಾರಾಗಳ ದಾಳಿಗಳನ್ನು ಖಂಡಿಸುತ್ತೇನೆ. ಮೃತರ ಕುಟುಂಬದವರಿಗೆ ನನ್ನ ಸಾಂತ್ವನವಿರುತ್ತದೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ’ ಎಂದು  ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT