ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೀಪಿಕಾ ಅದ್ಭುತ ನಟಿ’

ಪಂಚರಂಗಿ
Last Updated 13 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಅವರ ಕೀರ್ತಿ ಹಾಲಿವುಡ್‌ಗೂ ಹಬ್ಬಿರುವುದು ಹಳೆಯ ಸಂಗತಿಯೇ. ಆದರೀಗ ದೀಪಿಕಾ ಪ್ರತಿಭೆಯೊಟ್ಟಿಗೆ ಅವರ ವ್ಯಕ್ತಿತ್ವದ ಕುರಿತಾಗಿಯೂ ಹಾಲಿವುಡ್‌ನಲ್ಲಿ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.

‘ಆರೆಂಜ್‌ ಈಸ್‌ ನ್ಯೂ ಬ್ಲ್ಯಾಕ್‌’ ಸಿನಿಮಾ ಖ್ಯಾತಿಯ ಹಾಲಿವುಡ್‌ ನಟಿ ರೂಬಿ ರೋಸ್‌ ಅವರು ದೀಪಿಕಾ ಅವರನ್ನು ಮುಕ್ತವಾಗಿ ಹೊಗಳಿದ್ದಾರೆ.

‘ಎಕ್ಸ್‌ಎಕ್ಸ್‌ಎಕ್ಸ್‌: ದ ರಿಟರ್ನ್‌ ಆಫ್‌ ಕ್ಸ್ಯಾಂಡರ್‌ ಕೇಜ್‌’ ಸಿನಿಮಾದಲ್ಲಿ ತಮ್ಮೊಂದಿಗೆ ನಟಿಸಿರುವ ದೀಪಿಕಾ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ರೂಬಿ ‘ತಾನು ದೀಪಿಕಾ ಅಭಿಮಾನಿ’ ಎಂದಿದ್ದಾರೆ.

ಲಾಸ್‌ ಏಂಜಲಿಸ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಎಲ್ಲಿಂದ ಆರಂಭಿಸಲಿ? ದೀಪಿಕಾ  ಅತ್ಯಂತ ವಿನಯವಂತೆ. ಪ್ರತಿಭಾವಂತ ನಟಿ. ನಾನು ಅವಳ ಅಭಿಮಾನಿಯಾಗಿದ್ದೇನೆ. ನೀವೂ ಖಂಡಿತ ಆ ಅದ್ಭುತ ನಟಿಯ ಅಭಿಮಾನಿಯಾಗುವುದರಲ್ಲಿ ಸಂಶಯ ಇಲ್ಲ’ ಎಂದು ಹೇಳಿದ್ದಾರೆ.

ಈ ಸಿನಿಮಾದ ಸಹ ನಟ ಡಿಸೇಲ್‌ ಮತ್ತು ನಿರ್ದೇಶಕ ಡಿಜೆ ಕ್ಯಾರುಸೋ ಕೂಡ ದೀಪಿಕಾ ಅವರನ್ನು ಮನದಣಿಯೆ ಹೊಗಳಿದ್ದಾರೆ. ಇದು ‘ಎಕ್ಸ್‌ಎಕ್ಸ್‌ಎಕ್ಸ್‌’ ಸರಣಿಯ ಮೂರನೇ ಭಾಗವಾಗಿದ್ದು, ಸ್ಯಾಮುವೆಲ್‌ ಎಲ್‌. ಜಾಕ್ಸನ್‌, ಕೊನೊರ್‌ ಮೆಕ್‌ಜಾರ್ಜರ್‌, ಜೆಟ್‌್ ಲಿ, ಟೋನಿ ಜಾ, ನೀನಾ ದೊರ್ಬೇವ್‌ ಕೂಡ ನಟಿಸುತ್ತಿದ್ದಾರೆ. 2017ರ ಜನವರಿಯಲ್ಲಿ ಈ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT