ದಿನ ಅಥವಾ ವಾರದ ಅಂತ್ಯದ ಸಂವೇದಿ ಸೂಚ್ಯಂಕ, ಉಪ ಸೂಚ್ಯಂಕ ಗಳನ್ನು ಮಾತ್ರವೇ ಆಧರಿಸಿ ಪೇಟೆಯ ದಿಕ್ಕು ನಿರ್ಧರಿಸುವುದು ಸೂಕ್ತವಲ್ಲ ಎಂಬುದನ್ನು ಈ ವಾರದ ಸೂಚ್ಯಂಕ ಗಳ ಮಧ್ಯಂತರ ಏರಿಳಿತಗಳೇ ಎತ್ತಿ ತೋರಿಸಿವೆ.

ಇನ್ಫೊಸಿಸ್ ಪರಿಣಾಮ: ಶುಕ್ರವಾರ ಇನ್ಫೊಸಿಸ್ ಫಲಿತಾಂಶ ಪ್ರಕಟಣೆಗೂ ಮುನ್ನ ಮಾಹಿತಿ ತಂತ್ರಜ್ಞಾನ ವಿಭಾಗದ ಸೂಚ್ಯಂಕವು 10,800 ಅಂಶಗಳ ಸಮೀಪ ಸ್ಥಿರತೆ ಕಂಡುಕೊಂಡಿತ್ತು.

ತ್ರೈಮಾಸಿಕ ಫಲಿತಾಂಶ ಪ್ರಕಟಣೆ ನಂತರ ಇನ್ಫೊಸಿಸ್ ಕಂಪೆನಿ 1:1 ಅನುಪಾತದ ಬೋನಸ್ ಷೇರು ಪ್ರಕಟಿಸಿದ್ದಕ್ಕೆ ತಕ್ಷಣದ ಪ್ರತಿಯಾಗಿ ಷೇರಿನ ಬೆಲೆಯು ರೂ. 2,060ರಿಂದ ರೂ. 2,150ರವರೆಗೂ ಏರಿಕೆ ಕಂಡಿತು.

ನಂತರ ಏಕಮುಖವಾಗಿ ಇಳಿಕೆ ಕಂಡು ರೂ. 1,982ರವರೆಗೂ ಇಳಿಕೆ ಕಂಡು ರೂ. 1996ರ ಸಮೀಪ ದಿನದ ವಹಿವಾಟಿನ ಅಂತ್ಯ ಕಂಡಿತು. ಇದರ ಪ್ರಭಾವದಿಂದ ಜಾಮೆಟ್ರಿಕ್, ರೋಲ್ಟಾ, ಪೋಲಾರಿಸ್, ಟಾಟಾ ಎಲೆಕ್ಸಿ, ಕೆಪಿಐಟಿ., ಸೊನಾಟಾ ಸಾಫ್ಟ್‌ವೇರ್, ಎಚ್‌ಜಿಎಸ್, ಸ್ಯಾಸ್ಕನ್ ಕಮ್ಯುನಿಕೇಷನ್ ಮೊದಲಾದ ಮಾಹಿತಿ ತಂತ್ರಜ್ಞಾನ ವಲಯದ ಕಂಪೆನಿಗಳ ಷೇರುಗಳು ಸಾಮೂಹಿಕವಾಗಿ ಇಳಿಕೆ ಕಂಡವು.

ದಿಗ್ಗಜನಂತಹ ಕಂಪೆನಿಯ ಫಲಿತಾಂಶ ಅದರದೇ ವಲಯದ ಇತರೆ ಕಂಪೆನಿಗಳ ಷೇರುಗಳ ಮೇಲೆ ಯಾವ ಬಗೆಯ ಪ್ರಭಾವ ಬೀರುತ್ತದೆ ಎಂಬು ದಕ್ಕೆ ಈ ಬೆಳವಣಿಗೆಯೇ ಸಾಕ್ಷಿ. ಇನ್ಫಿ ಫಲಿತಾಂಶದ ಪ್ರಭಾವದ ಮಟ್ಟ ಎಷ್ಟಿತ್ತೆಂದರೆ ಮಾಹಿತಿ ತಂತ್ರಜ್ಞಾನ ಉಪ ಸೂಚ್ಯಂಕವು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿಯುವಂತೆ ಮಾಡಿತು.

ಐಎನ್‌ಜಿ ವೈಶ್ಯ ಬ್ಯಾಂಕ್ ವಿಲೀನ ನಂತರ ಕೋಟಕ್ ಮಹೀಂದ್ರ ಬ್ಯಾಂಕ್ ಷೇರಿನ ಬೆಲೆ ಇಳಿಕೆಯುತ್ತಿದೆ. ವಿಲೀನದ ಹಿಂದಿನ ದಿನದವರೆಗೂ ಏರಿಕೆಯಲ್ಲಿದ್ದ ಕೋಟಕ್ ಬ್ಯಾಂಕ್ ಷೇರು ಏ.15ರಂದು ವಾರ್ಷಿಕ ಹಾಗೂ ಪೇಟೆ ಇತಿಹಾಸದ ಗರಿಷ್ಠ ಮಟ್ಟವನ್ನು ತಲುಪಿದೆ. ವಿಲೀನದ ನಂತರದ ಹೊಸ ಷೇರುಗಳು ಏ. 27 ರಿಂದ ವಹಿವಾಟು ನಡೆಸಲು ಅನುಮತಿ ಪಡೆದು ಕೊಂಡಿವೆ. ಆದಕಾರಣ ಶುಕ್ರ ವಾರ ಈ ಷೇರಿನ ಬೆಲೆ ರೂ. 1,337 ರವರೆಗೂ ಇಳಿಕೆ ಕಂಡಿತು. ರೂ. 1,368ರ ಸಮೀಪ ದಿನದ ವಹಿ ವಾಟು ಕೊನೆ ಗೊಳಿಸಿತು. ಆದರೆ, ಹೊಸದಾಗಿ ಪರಿವರ್ತನೆಗೊಂಡ ಷೇರುಗಳನ್ನು ಉತ್ತಮ ಬೆಲೆಯಲ್ಲಿ ಮಾರುವ ಅವಕಾ ಶದಿಂದ ವಂಚಿತ ರಾಗಿ ಷೇರುದಾರರು ಪರಿತಪಿಸುವಂತೆ ಆಗಿದೆ.

ಬಯೋಕಾನ್ ಕಂಪೆನಿಯ ಅಂಗ ಸಂಸ್ಥೆಯಾದ ಸಿಂಜಿನ್ ಇಂಟರ್ ನ್ಯಾಷನಲ್ ಲಿ., ಆರಂಭಿಕ ಷೇರು ವಿತರಣೆಗಾಗಿ ಸೆಬಿಯ ಅನುಮತಿಗೆ ಅರ್ಜಿ ಸಲ್ಲಿಸಿದೆ ಎಂಬ ಸುದ್ದಿ ಬಯೋ ಕಾನ್ ಷೇರು ಬೆಲೆಯಲ್ಲಿ ಮಿಂಚು ಹರಿಯುವಂತೆ ಮಾಡಿತು. ರೂ. 438ರ ಸಮೀಪವಿದ್ದ ಷೇರು ಬೆಲೆ ಆರಂಭಿಕ ಷೇರು ವಿತರಣೆ ಸುದ್ದಿ ಷೇರಿನ ಬೆಲೆ ಯನ್ನು ರೂ. 465ಕ್ಕೆ ಜಿಗಿಯುವಂತೆ ಮಾಡಿತು. ವಾರಾಂತ್ಯದಲ್ಲಿ ಷೇರಿನ ಬೆಲೆ ರೂ. 445ರ ಸಮೀಪ ಅಂತ್ಯಕಂಡಿತು.

ಕ್ಲಾರಿಯಂಟ್ ಕಂಪೆನಿಯ ಷೇರಿನ ಹಿಂಕೊಳ್ಳುವಿಕೆಯ ಕಾರಣ, ಷೇರು ಬೆಲೆ ರೂ. 1,037ರವರೆಗೂ ತಲುಪಿ ನಂತರ ರೂ. 824ರವರೆಗೂ ಕುಸಿದಿದೆ. ಅದೇ ರೀತಿ ರೇಟಿಂಗ್ ಕಂಪೆನಿಯಾದ ಕ್ರಿಸಿಲ್ ಷೇರಿನ ಬೆಲೆ ಶುಕ್ರವಾರ ರೂ. 2338ರಿಂದ ರೂ. 1884ರವರೆಗೂ ಏರಿಕೆ ಇಳಿಕೆ ಪ್ರದರ್ಶಿಸಿದೆ.

ಅದೇ ರೀತಿ ಭಿನ್ನ ಕಾರಣಗಳಿಂದ ಡಿಐಸಿ ಕಂಪೆನಿಯ ಷೇರು ಬೆಲೆ ವಾರದಲ್ಲಿ ರೂ. 375ರಿಂದ ರೂ. 457ರ ವರೆಗೆ, ಆಯಿಲ್ ಇಂಡಿಯಾ ರೂ. 464 ರಿಂದ ರೂ. 521ರವರೆಗೆ ಏರಿಳಿತ ಪ್ರದರ್ಶಿ ಸಿವೆ. ಅಪೊಲೊ ಟೈರ್ ಮತ್ತು ಜೆಕೆ ಟೈರ್ಸ್ ಕಂಪೆನಿ ಷೇರಿನದೂ ಇದೇ ನಡೆಯಾಗಿತ್ತು.

ಸೂಚ್ಯಂಕಗಳು ಇಳಿಕೆ ಹಾದಿಯಲ್ಲಿ ದ್ದರೂ ಹಲವು ಪ್ರಮುಖ ಕಂಪೆನಿಗಳ ಷೇರುಗಳು ಮಿಂಚಿನ ವೇಗದಲ್ಲಿ ಹತ್ತಾರು ಅವಕಾಶಗಳನ್ನು

ಸೃಷ್ಟಿಸಿ ಕೊಟ್ಟಿವೆ. ಅವಕಾಶವನ್ನು ಲಾಭವಾಗಿ ಪರಿವರ್ತಿಸಿಕೊಂಡಲ್ಲಿ ಮಾತ್ರ ಯಶಸ್ವಿ ಹೂಡಿಕೆದಾರರಾಗಲು ಸಾಧ್ಯ.
ಸಂವೇದಿ ಸೂಚ್ಯಂಕ ಕಳೆದೊಂದು ವಾರದಲ್ಲಿ ಒಟ್ಟು 1,007 ಅಂಶ ಹಾನಿ ಅನುಭವಿಸಿದರೆ, ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿ ಸೂಚ್ಯಂಕಗಳು ಕ್ರಮವಾಗಿ 337 ಹಾಗೂ 624 ಅಂಶಗಳ ಇಳಿಕೆ ಪ್ರದರ್ಶಿಸಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟದಲ್ಲೇ ಮಗ್ನವಾಗಿದ್ದರೆ, ಸ್ಥಳೀಯ ಸಾಂಸ್ಥಿಕ ಹೂಡಿಕೆದಾರರು ಖರೀದಿಗೆ ತೊಡಗಿದ್ದವು. ಆದರೆ, ಇದು ಪೇಟೆಯ ಕುಸಿತವನ್ನು ತಡೆಯ ಲಾಗಲಿಲ್ಲ. ಪೇಟೆಯ ಬಂಡವಾಳ ಮೌಲ್ಯ ರೂ. 104.58 ಲಕ್ಷ ಕೋಟಿಯಿಂದ ರೂ. 100.53 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.

ಹೊಸ ಷೇರು: ಯುಎಫ್ಒ ಮೂವೀಸ್ ಕಂಪೆನಿ ಷೇರು ಏ. 28ರಿಂದ 30ರ ವರೆಗೆ ಪ್ರತಿಷೇರಿಗೆ ರೂ. 615ರಿಂದ ರೂ. 625 ರ ದರದಲ್ಲಿ ಆರಂಭಿಕ ಷೇರು ವಿತರಣೆ ಮಾಡಲಿದೆ. 24ರ ಗುಣಕಗಳಲ್ಲಿ ಐಪಿಒಗೆ ಅರ್ಜಿ ಸಲ್ಲಿಸಬಹುದು.

ಬೋನಸ್ ಷೇರು: ಚಾಣಕ್ಯ ಇನ್ವೆಸ್ಟ್ಮೆಂಟ್ಸ್ ಪ್ರಕಟಿಸಿರುವ 3:1 ಅನುಪಾತದ ಬೋನಸ್ ಷೇರು ಮೇ 6ರಂದು ವಿತರಣೆ ಆಗಲಿದೆ.
ಸಿ ಮಹೇಂದ್ರ ಎಕ್ಸ್‌ಪೋಪೋರ್ಟ್ ಕಂಪೆನಿ ಬೋನಸ್ ಷೇರು ಪ್ರಕರಣೆಗೆ ಸಭೆ ಕರೆದಿತ್ತು. ಕೋರಂ ಇಲ್ಲದ ಕಾರಣ ಸಭೆಯನ್ನು ಒಂದು ವಾರ ಮುಂದೂಡಿದೆ.

ಮುಖಬೆಲೆ ಸೀಳಿಕೆ:  ಜೆಎಂ ಟಿ ಆಟೊ ಕಂಪೆನಿ ಷೇರು ಮುಖಬೆಲೆಯನ್ನು ರೂ. 10ರಿಂದ ರೂ. 2ಕ್ಕೆ ಸೀಳಲಿದೆ. ಷೇರಿನ ಮುಖಬೆಲೆ ಸೀಲಿಕೆ ವಿಚಾರವನ್ನು ಈಸ್ಟರ್ನ್ ಟ್ರೆಡ್ಸ್ ಕಂಪೆನಿ ಏ. 28ರಂದು ಪರಿಶೀಲಿಸಲಿದೆ.

ವಾರದ ವಿಶೇಷ
ಷೇರುಪೇಟೆ ಸೂಚ್ಯಂಕಗಳು ಗರಿಷ್ಠ ಮಟ್ಟದಲ್ಲಿ ತೇಲುತ್ತಿರು ವಾಗ ಹೆಚ್ಚಿನವರಲ್ಲಿ ಚಟುವಟಿಕೆ ಕುಗ್ಗಿ ನಿರಾಸಕ್ತಿ ಮೂಡಿದೆ. ವಿಶೇಷವಾಗಿ ಬ್ರೋಕರೇಜ್ ಸಂಸ್ಥೆಗಳಿಗೆ ಸಮಸ್ಯೆಯಾಗಿದೆ. ಹಾಗಾಗಿ ಭಿನ್ನ ರೀತಿಯ ಪ್ರಲೋಭನೆ ಜಾರಿಗೊಳಿಸಿ ಗ್ರಾಹಕರನ್ನು ಆಕರ್ಷಿಸಲು ಯತ್ನಿಸುತ್ತಿರುವುದು ಸ್ಪಷ್ಟ.

ಸದ್ಯ ಪೇಟೆಯಲ್ಲಿ ಅಧಿಕ ಲಾಭದ ಅವಕಾಶಗಳು ಮಿಂಚಿನಂತೆ ಬಂದು ಮಾಯವಾಗುವುದನ್ನು ಹೆಚ್ಚಾಗಿ ಕಾಣಬಹುದಾಗಿದೆ. ಬ್ರೋಕರೇಜ್ ಸಂಸ್ಥೆಗಳು ಇಂಥ ಅವಕಾಶಗಳನ್ನು ಕಂಡುಕೊಂಡು ಗ್ರಾಹಕರಿಗೆ ಮಾರ್ಗ ದರ್ಶನ ನೀಡಿದರೆ ಹೆಚ್ಚು ಹೂಡಿಕೆದಾರರನ್ನು ಪೇಟೆಯತ್ತ ಆಕರ್ಷಿಸಲು ಸಾಧ್ಯ. ಜತೆಗೆ ಅವಕಾಶದ ಲಾಭವನ್ನು ಪಡೆದುಕೊಳ್ಳುವಂತೆ ಮಾಡಲು ಮುಂದಾದರೆ ಹೂಡಿಕೆದಾರರಿಗೆ ಸೂಕ್ತ ಸೇವೆ ಒದಗಿಸಿದ ತೃಪ್ತಿಯೂ ಲಭ್ಯ. ವಿಶೇಷ ಸೇವೆ ಒದಗಿಸಿದ್ದಕ್ಕೆ ಬ್ರೋಕರೇಜ್ ಶುಲ್ಕವನ್ನೂ ಹೆಚ್ಚಿಸಬಹುದು. ಗ್ರಾಹಕರೂ ಲಾಭ ಗಳಿಸಿದರೆ ಅಧಿಕ ಶುಲ್ಕ ನೀಡಲು ಹಿಂಜರಿಯುವುದಿಲ್ಲ.

ಕೇವಲ ವಹಿವಾಟಿನ ಗಾತ್ರ ಹೆಚ್ಚಿಸಿಕೊಂಡು ಅಲ್ಪ, ಸ್ಪರ್ಧಾತ್ಮಕ ಬ್ರೋಕರೇಜ್ ಶುಲ್ಕ ಪಡೆಯಲು ಯತ್ನಿಸುವ ಬದಲು ಗ್ರಾಹಕರಿಗೆ ಈಗಿನ ಪೇಟೆಯ ವಾತಾವರಣದ ಲಾಭ ಪಡೆಯಲು ಅನುವು ಮಾಡಿಕೊಟ್ಟಲ್ಲಿ ಎಲ್ಲರಿಗೂ ಹಿತ.

ಉದಾ: ಏ. 21ರಂದು ಹಿಂದುಸ್ತಾನ್ ಯುನಿಲಿವರ್ ಶೇ 4.6ರಷ್ಟು ಇಳಿಕೆ ಕಂಡಿತು. ಮರುದಿನ ಸಹ ರೂ. 872ಕ್ಕೆ ಕುಸಿಯಿತು. ಆದರೆ, ವಾರಾಂತ್ಯದಲ್ಲಿ ರೂ. 908ರವರೆಗೂ ಏರಿಕೆ ಕಂಡಿತು. ಇಂತಹ ಅವಕಾಶದ ಬಗ್ಗೆ ಹೂಡಿಕೆದಾರರಿಗೆ ಬ್ರೋಕರೇಜ್ ಸಂಸ್ಥೆಗಳು ಕಿವಿಮಾತು ಹೇಳಿ ಲಾಭ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬಹುದು ಅಲ್ಲವೇ? ಇದೇ ವೇಳೆ, ಸನ್ ಫಾರ್ಮಾ ಶೇ8.86ರಷ್ಟು ಇಳಿಕೆ ಕಂಡಿದ್ದು ಹೂಡಿಕೆಗೆ ಉತ್ತಮ ಅವಕಾಶ ಒದಗಿಸಿಕೊಟ್ಟಿದೆ.

ಬಯೋಕಾನ್, ಇನ್ಫೋಸಿಸ್, ಕ್ಲಾರಿಯಂಟ್ ಕೆಮಿಕಲ್ಸ್, ಡಿಐಸಿ, ಹಿಂದುಜಾ ವೆಂಚರ್, ಟಿಸಿಎಸ್, ವಿಪ್ರೊ, ಎಂ ಆ್ಯಂಡ್ ಎಂ ಫೈನಾನ್ಷಿಯಲ್ಸ್, ಕ್ರಿಸಿಲ್, ಆಯಿಲ್ ಇಂಡಿಯಾ, ಭಾರತ್ ಫೋರ್ಜ್, ಲುಪಿನ್, ಮಾರುತಿ ಸುಜುಕಿ, ಟಾಟಾ ಸ್ಟೀಲ್ ಕಂಪೆನಿಗಳು ಹೂಡಿಕೆದಾರರಿಗೆ ಲಾಭ ಮಾಡಿ ಕೊಳ್ಳಲು ಈ ವಾರ ಹಲವು ಬಾರಿ ಹೆಚ್ಚಿನ ಅವಕಾಶ ಸೃಷ್ಟಿಸಿಕೊಟ್ಟಿದ್ದವು. ಇಂಥ ಅವಕಾಶಗಳನ್ನು ಗುರುತಿಸುವ ಕಲೆಯನ್ನು ಬ್ರೋಕರೇಜ್ ಸಂಸ್ಥೆಗಳು ಮೈಗೂಡಿಸಿಕೊಂಡು ವೃತ್ತಿಪರತೆ ಮೆರೆಯಬಹುದು.

ಸಂಪರ್ಕಕ್ಕೆ ಮೊ: 9886313380 (ಸಂಜೆ 4.30ರ ನಂತರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.