ಲ್ಯಾಪ್ಟಾಪ್, ನೆಟ್ಬುಕ್, ಟ್ಯಾಬ್ಲೆಟ್ ಎಲ್ಲವೂ ಗಣಕಗಳೇ. ಆದರೆ ಈ ಅಂಕಣದಲ್ಲಿ ಪ್ರಕಟವಾಗುವ ಬರಹಗಳ ಮಟ್ಟಿಗೆ ಡೆಸ್ಕ್ಟಾಪ್ ಕಂಪ್ಯೂಟರುಗಳನ್ನೇ ಗಣಕ ಎಂದು ಅರ್ಥ ಮಾಡಿಕೊಳ್ಳಬೇಕಾಗಿ ವಿನಂತಿ.

ಎರಡು ವಾರಗಳ ಹಿಂದಿನ ಲೇಖನದಲ್ಲಿ ಗಣಕ ಮತ್ತು ಲ್ಯಾಪ್ಟಾಪ್ಗಳ ಹೋಲಿಕೆ ನೀಡಲಾಗಿದೆ. ಯಾವ ಸಂದರ್ಭದಲ್ಲಿ ಯಾವುದು ಸೂಕ್ತ ಎಂದೂ ವಿವರಿಸಲಾಗಿತ್ತು. ಲ್ಯಾಪ್ಟಾಪ್ಗಿಂತ ಹೆಚ್ಚು ವರ್ಷ ಬಾಳಿಕೆ ಬರಬೇಕು,ಆಗಾಗ ನವೀಕರಿಸಿಕೊಳ್ಳುತ್ತಿರಬೇಕು, ಕಡಿಮೆ ಹಣಕ್ಕೆ ಹೆಚ್ಚು ಶಕ್ತಿಶಾಲಿಯಾದ ಗಣಕ ದೊರೆಯಬೇಕು, ಒಂದೇ ಕಡೆ ಇಟ್ಟು ಕೆಲಸ ಮಾಡುವಂತಿದ್ದರೆ ಸಾಕು - ಈ ಮಾನದಂಡಗಳಿಗೆ ಹೊಂದಿಕೆಯಾಗುವುದು ಗಣಕ. ಈಗ ಅಂತಹ ಗಣಕದ ಕಡೆ ಗಮನ ಹರಿಸೋಣ.

ಈ ನಮೂನೆಯ ಗಣಕಗಳಲ್ಲೂ ಇತ್ತೀಚೆಗೆ ಒಂದು ಉಪ ವಿಭಾಗ ಸೃಷ್ಟಿಯಾಗಿದೆ. ಅದುವೇ ಎಲ್ಲವನ್ನೂ ಒಳಗೊಂಡ ಗಣಕ(all-in-one desktop computer). ಇದು ಬಹುಮಟ್ಟಿಗೆ ಲ್ಯಾಪ್ಟಾಪ್ನಂತೆಯೇ. ಇದರಲ್ಲಿ ಪರದೆ, ಸಿಪಿಯು, ಹಾರ್ಡ್ ಡಿಸ್ಕ್, ಮೆಮೊರಿ, ಗ್ರಾಫಿಕ್ಸ್ ಎಲ್ಲ ಒಂದರಲ್ಲೇ ಅಡಕವಾಗಿರುತ್ತವೆ. ಕೀಲಿಮಣೆ ಪ್ರತ್ಯೇಕ ಇರುತ್ತದೆ. ಕಡಿಮೆ ಜಾಗದಲ್ಲಿ ಗಣಕ ಇಡಬೇಕು ಎನ್ನುವವರಿಗೆ ಸೂಕ್ತ. ಅಥವಾ ಮನರಂಜನೆಯ ಸಾಧನವಾಗಿಯೂ ಬಳಕೆಯಾಗಬಹುದು. ಇಂತಹವುಗಳ ಬಹುದೊಡ್ಡ ಬಾಧಕ ಎಂದರೆ ಇವನ್ನು ಕೂಡ ಲ್ಯಾಪ್ಟಾಪ್ಗಳಂತೆಯೇ ಆಗಾಗ ನವೀಕರಿಸಿಕೊಳ್ಳುವುದು ಅಸಾಧ್ಯ.

ಒಮ್ಮೆ ಕೊಂಡರೆ ಮುಗಿಯಿತು. ಗಣಕಗಳಲ್ಲಿ ದೀರ್ಘ ಕಾಲ ಬಾಳುವುದು ಅದರ ಪರದೆ. ಇಲ್ಲಿ ಪರದೆಯಲ್ಲೇ ಎಲ್ಲವೂ ಅಡಕವಾಗಿರುವುದರಿಂದ ಈ ಸಾಧಕಾಂಶವು ನಮ್ಮ ಉಪಯೋಗಕ್ಕೆ ಬರುವುದಿಲ್ಲ. ವಿಂಡೋಸ್ 8 ಬಳಕೆಗೆ ಬಂದ ನಂತರ ಇಂತಹ ಮಾದರಿಗಳಲ್ಲಿ ಸ್ಪರ್ಶಸಂವೇದಿ ಪರದೆ ಇರುವವುಗಳೂ ಬಂದಿವೆ. ಇವು ಆಟ ಆಡಲು ಚೆನ್ನಾಗಿವೆ. ಶಾಲಾ ಮಕ್ಕಳಿಗೆ ಕಲಿಯುವ ಸಾಧನವಾಗಿ ಮತ್ತು ಕಲಿಕಾರಂಜನೆಯ ಸಾಧನವಾಗಿ ಉತ್ತಮ ಬಳಕೆಯಾಗಬಹುದು. ಅದಕ್ಕಾಗಿ ಸೂಕ್ತ ತಂತ್ರಾಂಶಗಳ ಅಗತ್ಯ ಇದೆ.

ಈಗ ಗಣಕ ಕೊಳ್ಳುವ ಬಗ್ಗೆ ಆಲೋಚಿಸೋಣ. ಗಣಕ ಕೊಳ್ಳುವಾಗ ಎರಡು ಪ್ರಧಾನ ಆಯ್ಕೆಯ ಸಮಸ್ಯೆ ಎದುರಾಗುತ್ತದೆ. ಯಾವುದಾದರೂ ದೊಡ್ಡ ಬ್ರ್ಯಾಂಡಿನ ಕಂಪೆನಿಯ ಉತ್ಪನ್ನ ಕೊಳ್ಳುವುದೇ ಅಥವಾ ಗಣಕದ ಅಂಗಗಳನ್ನು ಜೋಡಿಸಿ (assembled PC) ಮಾರುವ ನಿಮ್ಮೂರಿನಲ್ಲೇ ಇರುವವನ ಕೈಯಿಂದ ಕೊಳ್ಳುವುದೇ? ಕಂಪೆನಿ ಉತ್ಪನ್ನವಾದರೆ ಕಂಪೆನಿಯ ಗ್ಯಾರಂಟಿ ಸಿಗುತ್ತದೆ. ಆದರೆ ನೀವು ಇರುವ ಜಾಗದಲ್ಲಿ ಈ ಗ್ಯಾರಂಟಿ ಪ್ರಕಾರ ಸೇವೆ ನೀಡುವವರು ಇದ್ದಾರೆಯೇ ಅಥವಾ ಗಣಕವನ್ನು ಬೆಂಗಳೂರಿನಂತಹ ದೊಡ್ಡ ನಗರಕ್ಕೆ ಹೊತ್ತುಕೊಂಡು ಹೋಗಬೇಕೆ ಎಂಬ ಬಗ್ಗೆ ಮೊದಲೇ ತಿಳಿದಿರುವುದು ಒಳ್ಳೆಯದು.

ಒಂದು ಕಾಲದಲ್ಲಿ ಕಂಪೆನಿಯ ಉತ್ಪನ್ನಕ್ಕಿಂತ ಸ್ಥಳೀಯವಾಗಿ ಜೋಡಿಸಿ ಮಾಡಿದ ಗಣಕ ಸುಮಾರು 20-30% ಕಡಿಮೆ ಬೆಲೆಗೆ ದೊರೆಯುತ್ತಿತ್ತು. ಈಗ ಅಂತಹ ವ್ಯತ್ಯಾಸ ಇಲ್ಲ. ಅಬ್ಬಬ್ಬ ಎಂದರೆ ಎರಡು ಮೂರು ಸಾವಿರ ರೂ. ವ್ಯತ್ಯಾಸ ಇರಬಹುದು ಅಷ್ಟೆ. ಸ್ಥಳೀಯವಾಗಿ ಜೋಡಿಸಿ ಮಾರುವವರು ನಿಮಗೆ ತುಂಬ ಚೆನ್ನಾಗಿ ಪರಿಚಯವಿರುವವರಾದರೆ ಅವರ ಕೈಯಿಂದ ಕೊಳ್ಳಬಹುದು.

ಮುಂದಕ್ಕೆ ಅವರಿಂದ ನಿಮಗೆ ಬೇಕಾದಾಗಲೆಲ್ಲ ಸೇವೆ ಸಿಗುವ ಸಾಧ್ಯತೆ ಹೆಚ್ಚು. ಇಂತಹ ಜೋಡಿಸಿ ಮಾರುವ ಚಿಕ್ಕಪುಟ್ಟ ವ್ಯವಹಾರಸ್ಥರು ಸಾಮಾನ್ಯವಾಗಿ ನಿಮಗೆ ಬೇಕಾಗಬಹುದಾದ ತಂತ್ರಾಂಶಗಳನ್ನೆಲ್ಲ ಇನ್ಸ್ಟಾಲ್ ಮಾಡಿ ಕೊಡುತ್ತಾರೆ. ಬಹುಪಾಲು ತಂತ್ರಾಂಶಗಳನ್ನು ಅವರು ಹಣ ನೀಡಿ ಕೊಂಡುಕೊಂಡಿರುವುದಿಲ್ಲ. ಆದುದರಿಂದಲೇ ಕಂಪೆನಿ ಗಣಕಕ್ಕಿಂತ ಇಂತಹ ಅಸೆಂಬಲ್ಡ್ ಗಣಕ ತುಂಬ ಕಡಿಮೆ ಬೆಲೆಗೆ ಸಿಗುತ್ತದೆ. ವಿಂಡೋಸ್ ಒಂದಕ್ಕೇ ಸುಮಾರು ನಾಲ್ಕೈದು ಸಾವಿರ ರೂ. ಬೆಲೆ ಇದೆ. ತಂತ್ರಾಂಶಗಳಿಗೆ ಹಣ ನೀಡದೆ ಬಳಸುವುದು ಕಾನೂನು ಪ್ರಕಾರ ಪೈರೆಸಿ ಎಂದೆನಿಸಿಕೊಳ್ಳುತ್ತದೆ ಹಾಗೂ ಇದು ಶಿಕ್ಷಾರ್ಹ ಅಪರಾಧ. ಸಿಕ್ಕಿ ಹಾಕಿಕೊಂಡರೆ ನನಗೆ ಏನೂ ತಿಳಿದಿಲ್ಲ, ನನಗೆ ಗಣಕ ಮಾರಿದವನು ಎಲ್ಲ ಹಾಕಿ ಕೊಟ್ಟ ಎಂಬ ಸಬೂಬು ನಡೆಯುವುದಿಲ್ಲ.

ವಿಂಡೋಸ್ಗೆ ದುಡ್ಡು ಕೊಟ್ಟು ಕೊಳ್ಳಲು ಅಶಕ್ಯರಾದವರು ಅಥವಾ ಇಷ್ಟವಿಲ್ಲದವರು ಉಬುಂಟು ಬಳಸಬಹುದು. ಇದು ಲಿನಕ್ಸ್ ಮುಕ್ತ ತಂತ್ರಾಂಶದ ಒಂದು ನಮೂನೆ. ಮೊದಮೊದಲಿಗೆ ಲಿನಕ್ಸ್ ಜನಸಾಮಾನ್ಯರಿಗೆ ಬಳಸಲು ಕ್ಲಿಷ್ಟವಾಗಿತ್ತು. ಆದರೆ ಇತ್ತೀಚೆಗಿನ ಉಬುಂಟು ಆವೃತ್ತಿಗಳು ವಿಂಡೋಸ್ನಂತೆಯೆ ಬಳಕೆದಾರ ಸ್ನೇಹಿಯಾಗಿವೆ.

ಗಣಕದ ಪ್ರಧಾನ ಅಂಗ ಸಿಪಿಯು(CPU = Central Processing Unit).ಇದನ್ನು ತಯಾರಿಸುವುದು ಇಂಟೆಲ್ ಮತ್ತು ಎಎಂಡಿ. ಹೆಚ್ಚಿನವರು ಬಳಸುವುದು ಇಂಟೆಲ್ ಸಿಪಿಯುಗಳನ್ನು. ಈಗ ಲಭ್ಯವಿರುವ ಸಿಪಿಯುಗಳು ಜಿ3, ಜಿ5, ಜಿ7, ಇತ್ಯಾದಿ. ಜಿ3 ಗಿಂತ ಜಿ5, ಅದಕ್ಕಿಂತ ಜಿ7 ಹೆಚ್ಚು ವೇಗವಾಗಿ ಕೆಲಸ ಮಾಡುತ್ತವೆ. ಮೆಮೊರಿ ಜಾಸ್ತಿ ಇದ್ದಷ್ಟು ಒಳ್ಳೆಯದೇ. ಗಣಕಗಳಲ್ಲಿ ಮೆಮೊರಿ ಜೋಡಿಸಲು ಎರಡು ಕಿಂಡಿಗಳಿರುತ್ತವೆ. 4 ಗಿಗಾಬೈಟ್ನ ಎರಡು ಮೆಮೊರಿ ಜೋಡಿಸಿದರೆ ಒಟ್ಟು ಮೆಮೊರಿ 8 ಗಿಗಾಬೈಟ್ ಆಗುತ್ತದೆ. ಎರಡು ಮೆಮೊರಿಗಳೂ ಒಂದೇ ವೇಗದ್ದಾಗಿರುವುದು ಅತಿ ಮುಖ್ಯ. ಈಗಿನ ಸಂದರ್ಭದಲ್ಲಿ ಕನಿಷ್ಠ 4 ಗಿಗಾಬೈಟ್ ಮೆಮೊರಿ ಇರುವುದು ಒಳ್ಳೆಯದು. ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಮೆಮೊರಿಯ ಒಂದು ಉದಾಹರಣೆ - ಈಈ್ಕ3 1600 ಏ್ಢ. ಮೆಮೊರಿಯಿರಲಿ, ಸಿಪಿಯು ಇರಲಿ, ಸದ್ಯ ಮಾರುಕಟ್ಟೆಯಲ್ಲಿರುವುದರಲ್ಲಿ ತೀರ ಇತ್ತೀಚೆಗಿನದನ್ನು ಕೊಳ್ಳುವುದು ಒಳ್ಳೆಯದು. ನೀವು ತೀರ ಆಧುನಿಕ ಎಂದು ಕೊಂಡುಕೊಂಡ ಗಣಕ ಮತ್ತು ಅದರ ಭಾಗಗಳು ಆರೇ ತಿಂಗಳಿಗೆ ಹಳತಾಗಿರುತ್ತವೆ.

ಗಣಕದಲ್ಲಿ ಮಾಹಿತಿ ಸಂಗ್ರಹಿಸಿಡುವುದಕ್ಕೆ ಬಳಕೆಯಾಗುವುದು ಹಾರ್ಡ್ಡಿಸ್ಕ್. ಈಗ 500 ಗಿಗಾಬೈಟ್ ಎಂಬುದು ಅತಿ ಸಾಮಾನ್ಯವಾಗಿದೆ. 1 ಟೆರಾಬೈಟ್ (=1024 ಗಿಗಾಬೈಟ್) ಹಾರ್ಡ್ಡಿಸ್ಕ್ಗಳೂ ಲಭ್ಯವಿವೆ. ಇಷ್ಟು ಧಾರಾಳವಾಯಿತು. ಸಿಗೇಟ್ ಅಥವಾ ವೆಸ್ಟರ್ನ್ ಡಿಜಿಟಲ್ - ಈ ಎರಡು ಹೆಚ್ಚು ಜನಪ್ರಿಯವಾಗಿವೆ. ಎರಡೂ ಚೆನ್ನಾಗಿವೆ. ಹಾರ್ಡ್ಡಿಸ್ಕ್ ತಿರುಗುವ ವೇಗ 5400 ಮತ್ತು 7200 ಎಂಬ ಎರಡು ನಮೂನೆಯಲ್ಲಿ ದೊರೆಯುತ್ತವೆ. 7200RPM (Revolutions Per Minute) ಅಂದರೆ ಹಾರ್ಡ್ಡಿಸ್ಕ್ನ ತಟ್ಟೆ ಒಂದು ನಿಮಿಷದಲ್ಲಿ 7200 ಸುತ್ತು ತಿರುಗುತ್ತದೆ ಎಂದು ಅರ್ಥ. ಈ ವೇಗ ಹೆಚ್ಚಿಗೆ ಇದ್ದಷ್ಟೂ ಒಳ್ಳೆಯದೇ.

ಗಣಕದ ಮದರ್ಬೋರ್ಡ್ನಲ್ಲೇ ಗ್ರಾಫಿಕ್ಸ್ ಪ್ರೋಸೆಸರ್ ಮತ್ತು ಅದಕ್ಕೆಂದೇ ಸ್ವಲ್ಪ ಮೆಮೊರಿ ಇರುತ್ತದೆ. ಆದರೆ ಅಧಿಕ ಶಕ್ತಿಶಾಲಿ ಗ್ರಾಫಿಕ್ಸ್ ಬೇಕೆನ್ನುವವರು ಹೆಚ್ಚಿಗೆ ಗ್ರಾಫಿಕ್ಸ್ ಕಾರ್ಡ್ ಹಾಕಿಕೊಳ್ಳುವುದು ಒಳ್ಳೆಯದು. ಇಲ್ಲೂ ಎರಡು ಕಂಪೆನಿಗಳ ಉತ್ಪನ್ನಗಳು ತುಂಬ ಜನಪ್ರಿಯವಾಗಿವೆ. ಅವು ಈಗ ಎಎಂಡಿಯವರದಾಗಿರುವ ಎಟಿಐ ಮತ್ತು ಎನ್ವಿಡಿಐಎ. ಹೆಚ್ಚು ಬಳಕೆಯಲ್ಲಿರುವುದು ಎನ್ವಿಡಿಐಎಯವರ ಜಿಇಫೋರ್ಸ್(NVDIA GeForce)ಶ್ರೇಣಿಯ ಕಾರ್ಡ್ಗಳು. ಗ್ರಾಫಿಕ್ಸ್ಗೆಂದೇ ಹೆಚ್ಚಿಗೆ ಮೆಮೊರಿ ಕೂಡ ಬೇಕು. ಇವುಗಳನ್ನೆಲ್ಲ ಹಾಕಿದ ಗಣಕಕ್ಕೆ ಸಾಮಾನ್ಯವಾಗಿ ಗೇಮಿಂಗ್ ಮೆಶಿನ್ ಎಂಬ ಹೆಸರೂ ಇದೆ. ಗ್ರಾಫಿಕ್ಸ್ಗೆ ಹೆಚ್ಚಿಗೆ ಹಣ ನೀಡಿದ ಮೇಲೆ ಅದರ ಸಾಮರ್ಥ್ಯದ ಮೇಲೆ ಗಮನ ಹರಿಸುವುದೂ ಒಳ್ಳೆಯದು. ಅದರಲ್ಲಿ ಹೈಡೆಫಿನಿಶನ್ ಸೌಲಭ್ಯ ಇರುವುದು ಉತ್ತಮ. ಜೊತೆಗೆ ಹೈಡೆಫಿನಿಶನ್ ಪರದೆ ಅರ್ಥಾತ್ ಮಾನಿಟರ್ ಕೂಡ ಬೇಕು.

ಉಳಿದಂತೆ ಅಂತರಜಾಲ ಸಂಪರ್ಕಕ್ಕೆ ಮದರ್ಬೋರ್ಡ್ನಲ್ಲೇ ಇಥರ್ನೆಟ್ ಕಿಂಡಿ ಇರುತ್ತದೆ. ಈಗೀಗ ಅದೂ ಬಳಕೆಯಿಂದ ಹಿಂದೆ ಸರಿದು ಅದರ ಜಾಗವನ್ನು ಯುಎಸ್ಬಿ ಆಕ್ರಮಿಸಿದೆ. ಹೈಡೆಫಿನಿಶನ್ ಇದೆ ಅಂದ ಮೇಲೆ ಎಚ್ಡಿಎಂಐ ಕಿಂಡಿಯೂ ಅಗತ್ಯ. ಈಗಿನ ಎಲ್ಲ ಗಣಕಗಳಲ್ಲಿ ಇವೆಲ್ಲ ಸಾಮಾನ್ಯ. ಡಿವಿಡಿಯೇ ಅಥವಾ ಬ್ಲೂರೇ ಪ್ಲೇಯರೇ ಎಂಬ ಆಯ್ಕೆ ನಿಮಗೆ ಬಿಟ್ಟದ್ದು. ಒಂದು ಶಕ್ತಿಶಾಲಿಯಾದ ಗಣಕಕ್ಕೆ ಸುಮಾರು 30ರಿಂದ 35 ಸಾವಿರ ರೂ. ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.