ಷೇರುಪೇಟೆ ಸೂಚ್ಯಂಕಗಳು ಒಂದೇ ಸಮನೆ ಇಳಿಕೆ ಕಾಣುತ್ತಿದ್ದು, ಹೂಡಿಕೆ ದಾರರು ತಮ್ಮ ಮುಂದಿನ ನಡೆಯನ್ನು ನಿರ್ಧರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಶೇಷವೆಂದರೆ ಜಾಗತಿಕ ಪೇಟೆಗಳು ಸಹ ಭಾರತದ ಷೇರುಪೇಟೆ ಯನ್ನು ಅನುಸರಿಸು ತ್ತಿರುವಂತೆ ಕಾಣುತ್ತಿದೆ. ಇಲ್ಲಿನ ಷೇರುಪೇಟೆ ಕುಸಿತ ಕಂಡಾಗ ಅವು ಸಹ ಇಳಿಕೆ ತೋರುತ್ತಾ ಜತೆಗೂಡುತ್ತಿವೆ!

ಭಾರತೀಯ ರಿಸರ್ವ್ ಬ್ಯಾಂಕ್ ಶೇ 0.25ರಷ್ಟು ಬಡ್ಡಿದರ ಕಡತಗೊಳಿ ಸಿದರೂ, ಮುಂಗಾರಿನ ಕೊರತೆ ನಿರೀಕ್ಷೆ ಯಲ್ಲಿ ದೇಶದ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಉಂಟಾಯಿತು. ಪರಿಣಾಮ ಎಲ್ಲಾ ವಲಯದ ಕಂಪೆನಿ ಗಳ ಷೇರುಗಳೂ ರಭಸದ ಇಳಿಕೆ ಗೊಳಗಾದವು.

ಪರಿಸ್ಥಿತಿಯು ‘ಕಾಲ್ತುಳಿತ’ ಸಂದರ್ಭ ರೀತಿಯ ದಿಡೀರ್ ಇಳಿಕೆ ಕಾಣುವಂತೆ ಮಾಡಿದೆ. ಬ್ಯಾಂಕಿಂಗ್ ಕಂಪೆನಿಗಳು, ರಿಯಲ್ ಎಸ್ಟೇಟ್ ಮತ್ತು ಮೂಲ ಸೌಕರ್ಯ ವಲಯ ಕಂಪೆನಿಗಳಲ್ಲದೆ ಫಾರ್ಮಾ, ಲೋಹ, ಐ.ಟಿ, ಮಧ್ಯಮ ಮತ್ತು ಕೆಳ ಮಧ್ಯಮ ಹಾಗೂ ಆಟೊ ವಲಯದ ಷೇರುಗಳು ಭಾರಿ ಇಳಿಕೆ ಕಂಡಿವೆ.

ಇವು ಅಸಹಜ ರೀತಿಯಲ್ಲಿ ಕುಸಿ ದಿದ್ದು ಮುಂದಿನ ದಿನಗಳಲ್ಲಿ ಇದೇ ರೀತಿ ಏರಿಕೆ ಪ್ರದರ್ಶಿಸಿದರೂ ಆಶ್ಚರ್ಯ ವೇನಿಲ್ಲ. ಎಂದಿನಂತೆ ಕಂಪೆನಿಗಳ ಯೋಗ್ಯತೆಗಿಂತ ವಹಿವಾಟುದಾರರ ಪರಿಸ್ಥಿತಿಯನ್ನೇ ಅವಲಂಬಿಸಿ ಚಟುವ ಟಿಕೆ ನಡೆಯುವುದರಿಂದ ಪೇಟೆಗಳು ಪುಟಿದೇಳುವುದು ಸಹಜವಾಗಿದೆ.

ಒಂದು ವೇಳೆ ಆರ್‌ಬಿಐ ಬಡ್ಡಿ ದರ ಕಡಿತ ಮಾಡದಿದ್ದರೂ ಇದೇ ರೀತಿಯ ಸ್ಪಂದನ ದೊರೆಯುತ್ತಿತ್ತು. ಈ ಬಡ್ಡಿ ದರ ಕಡಿತವು ರಿಯಲ್ ಎಸ್ಟೇಟ್, ಆಟೊ, ಮೂಲ ಸೌಕರ್ಯ ವಲಯಗಳಲ್ಲಿ ಹಾಗೂ ಬ್ಯಾಂಕಿಂಗ್ ವಲಯದಲ್ಲಿ ಚುರುಕು ಮೂಡಿಸಬೇಕಿತ್ತು. ಇದು ಎಲ್ಲರೂ ನೀರಿಕ್ಷಿಸಿರುವ ಅಂಶ. ಭಿನ್ನ ನೀತಿ ಅನುಸರಿಸಿದರೆ ಹಣ ಮಾಡ ಬಹುದು ಎಂಬುದೇ ಪೇಟೆಯ ವಾಸ್ತವ.

ರಿಯಲ್ ಎಸ್ಟೇಟ್, ಮೂಲ ಸೌಕರ್ಯ ವಲಯ ಕಂಪೆನಿಗಳಾದ ಯುನಿಟೆಕ್, ಜೆ ಪಿ ಅಸೋಸಿಯೇಟ್ಸ್, ಎಚ್‌ಡಿಐಎಲ್ ಷೇರು ಬುಧವಾರ ಕಂಡಂತಹ ಭಾರಿ ಕುಸಿತವು ಗಾಭರಿ ಮೂಡಿಸುವಂತಹುದೇ ಆಗಿದೆ.

ಯೂನಿಟೆಕ್ ಕಂಪೆನಿಯ ಷೇರಿನ ಬೆಲೆಯು ₹ 15ರ ಸಮೀಪದಿಂದ ಈ ವಾರ ₹ 6.50ವರೆಗೂ ಇಳಿಯಿತು. ಇದು ವರ್ಷದ ಕನಿಷ್ಠ ಮಟ್ಟ. ಜೆಪಿ ಅಸೋಸಿಯೇಟ್ಸ್ ಕಂಪೆನಿ ಷೇರಿನ ಬೆಲೆ ₹ 18ರಿಂದ ₹ 10ರ ಸಮೀಪಕ್ಕೆ ಇಳಿದಿದೆ. ಇದೂ ಸಹ ವಾರ್ಷಿಕ ಕನಿಷ್ಟ ಮಟ್ಟ. ಎಚ್‌ಡಿಐಎಲ್ ₹ 112ರ ಸಮೀಪ ದಿಂದ ₹ 86ರವರೆಗೂ ಕುಸಿದಿದ್ದು ಸಹ ದಿಢೀರ್ ಬೆಳವಣಿಗೆ.

ಮ್ಯಾಗಿ ವಿವಾದ: ವಾರದ ಇನ್ನೊಂದು ಪ್ರಮುಖ ಬೆಳವಣಿಗೆ ಎಂದರೆ ನೆಸ್ಲೆ ಉತ್ಪನ್ನ ಮ್ಯಾಗಿ ನ್ಯೂಡಲ್ಸ್‌ನ ಗೊಂದಲವು ಷೇರಿನ ಬೆಲೆಯನ್ನು ₹ 7 ಸಾವಿರದಿಂದ ₹ 5,700ರವರೆಗೂ ಕುಸಿಯುವಂತೆ ಮಾಡಿದೆ. ಅಂದರೆ ಪೇಟೆ ಬಯಸಿದರೆ ಭಾರಿ ಏರಿಕೆ, ನಿರಾಶೆಗೊಂಡಲ್ಲಿ ನಿರ್ದಯ ತುಳಿತ ಖಚಿತ. ಈ ಉತ್ಪ್ರೇಕ್ಷೆಯ ವಾತಾವರಣ ದಲ್ಲಿ ಹೂಡಿಕೆಯ ಸುರಕ್ಷೆಗೆ ಆದ್ಯತೆ ಇರಬೇಕು.

ಒಟ್ಟಾರೆ ಈ ವಾರ 1,059 ಅಂಶ ಗಳ ಕುಸಿತ ಕಂಡ ಸಂವೇದಿ ಸೂಚ್ಯಂಕ ಕಳೆದೊಂದು ವರ್ಷದ ಏರಿಕೆ ಯಲ್ಲಿ ಅರ್ಧದಷ್ಟು ಕಳೆದು ಕೊಂಡಿದೆ. ಈ ಇಳಿಕೆ ಬೆಂಬಲಿಸಿ ಮಧ್ಯಮ ಶ್ರೇಣಿ ಸೂಚ್ಯಂಕ 362 ಅಂಶಗಳ ಹಾಗೂ ಕೆಳ ಮಧ್ಯಮ ಶ್ರೇಣಿ ಸೂಚ್ಯಂಕ 429 ಅಂಶ ಹಾನಿಗೊಳಗಾದವು. ಪೇಟೆಯ ಬಂಡ ವಾಳ ಮೌಲ್ಯ ಹಿಂದಿನ ವಾರದ ₹ 103.26 ಲಕ್ಷ ಕೋಟಿಯಿಂದ ₹ 99 ಲಕ್ಷ ಕೋಟಿಗೆ ಇಳಿದಿದೆ.

ಬೋನಸ್ ಷೇರು: ಇನ್ಫೊಸಿಸ್ ವಿತರಿಸ ಲಿರುವ 1:1 ಅನುಪಾತದ ಬೋನಸ್ ಷೇರಿಗೆ ಜೂನ್ 17 ನಿಗದಿತ ದಿನ.
ಅನೂಹ್ ಫಾರ್ಮಾ ಜೂನ್12 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಹೊಸ ಷೇರು: ದೆಹಲಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾ ಗುತ್ತಿರುವ ಹೆಲ್ಪ್ ಏಜ್ ಫಿನ್ ಲೀಸ್ ಮತ್ತು ಮಧ್ಯಪ್ರದೇಶ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗು ತ್ತಿರುವ ಇಂದ್ರ ಇಂಡಸ್ಟ್ರೀಸ್ ಹಾಗೂ ಅಹಮದಾಬಾದ್, ವಡೋದರಾ ಮತ್ತು ಮದ್ರಾಸ್ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿರುವ ಹವಾ ಇಂಜಿನೀರ್ಸ್ ಕಂಪೆನಿ ಷೇರು ಜೂನ್ 5 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್ಇ) ‘ಡಿ.ಟಿ’ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಗುಂಪು ಬದಲಾವಣೆ: ಆಮ್ ಟೆಕ್ ಇಂಡಿಯಾ, ಮ್ಯಾಗ್ನಂ ಲಿ., ಹರಿಯಾಣ ಟೆಕ್ಸ್ ಪ್ರಿಂಟ್ಸ (ಓವರ್ಸೀಸ್), ಆಗ್ರೋ ಡಚ್ ಇಂಡಸ್ಟ್ರೀಸ್, ಸೀಸನ್ಸ್ ಟೆಕ್ಸ್‌ಟೈಲ್, ಶ್ರೇಯಷ್ ಇಂಡಸ್ಟ್ರೀಸ್, ವರಾದ್ ವೆಂಚರ್ಸ್, ಜೆನ್ ಟೆಕ್ನಾಲಜೀಸ್, ಸಹಿತ 40 ಕಂಪೆನಿಗಳನ್ನು ‘ಬಿ’ ಗುಂಪಿನಿಂದ ‘ಟಿ’ ಗುಂಪಿಗೆ ವರ್ಗಾಯಿಸಲಾಗಿದೆ. ಇದು ಜೂನ್ 9ರಿಂದ ಜಾರಿಯಾಗಲಿದೆ.

‘ಡೇ ಟ್ರೇಡಿಂಗ್’ ಅವಕಾಶ ಇಲ್ಲ: ‘ಟಿ’ ಗುಂಪಿನಲ್ಲಿ ವಹಿವಾಟಾಗುವ ಕಂಪೆನಿ ಗಳಲ್ಲಿ ‘ಡೇ ಟ್ರೇಡಿಂಗ್’ಗೆ ಅವಕಾಶ ಇಲ್ಲ ಎಂಬುದನ್ನು ಹೂಡಿಕೆದಾರರು ಗಮನಿ ಸಬೇಕು. ಈ ಗುಂಪಿನಲ್ಲಿ ಖರೀದಿಸಿದ ಷೇರನ್ನು ಡೆಲಿವರಿ ತೆಗೆದುಕೊಳ್ಳ ಲೇಬೇಕು, ಮಾರಾಟ ಮಾಡಿದ ಷೇರನ್ನು ಡೆಲಿವರಿ ಕೊಡಲೇಬೇಕು. ವಿಲೇವಾರಿ ಇಲ್ಲದೆ ಚುಕ್ತಾ ಮಾಡುವಂತಿಲ್ಲ.

ಅಟ್ಲಾಸ್ ಜ್ಯುವೆಲ್ಲರಿ, ಬ್ಯಾಂಗ್ ಓವರ್ಸೀಸ್, ಕೇಂಬ್ರಿಡ್ಜ್ ಟೆಕ್ನಾಲಜಿ ಎಂಟರ್‌ಪ್ರೈಸಸ್, ಜೆಮಿನಿ ಕಮ್ಯುನಿಕೇಷನ್, ಜೆಸಿಟಿ ಎಲೆಕ್ಟ್ರಾನಿಕ್ಸ್, ಫಾರ್ಮೈಡ್ ಫಾರ್ಮಾಸ್ಯುಟಿಕಲ್ಸ್, ರೂಪಾ ಇಂಡಸ್ಟ್ರೀಸ್, ಸ್ವಾಮ್ ಸಾಫ್ಟ್‌ವೇರ್, ಟ್ಯಾನ್‌ಫ್ಯಾಕ್ ಇಂಡ ಸ್ಟ್ರೀಸ್, ಟ್ರೈಕಾಮ್ ಸಹಿತ 53 ಕಂಪೆನಿಗಳನ್ನು ‘ಟಿ’ ಗುಂಪಿನಿಂದ ‘ಬಿ’ ಗುಂಪಿಗೆ ಜೂನ್ 9ರಂದು ವರ್ಗಾಯಿಸಲಾಗುವುದು. ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗಲು ಪಾಲಿಸಬೇಕಾದ ನಿಯಮಗಳ ಉಲ್ಲಂಘನೆ ಮಾಡಿದ ಕಾರಣ ಅಕ್ಯುರೇಟ್ ಟ್ರಾನ್ಸ್ ಫಾರ್ಮರ್ಸ್, ಈಸ್ಟರ್ನ್ ಷುಗರ್ ಅಂಡ್ ಇಂಡಸ್ಟ್ರೀಸ್, ಫ್ಯೂಷನ್ ಫಿಟ್ಟಿಂಗ್ಸ್, ಟೆಕ್ಪ್ರೋ ಸಿಸ್ಟಮ್ಸ್, ಕ್ಲಚ್ ಆಟೋ ಷೇರುಗಳನ್ನು ಜೂನ್ 11ರಿಂದ ‘ಜೆಡ್’ ಗುಂಪಿಗೆ ವರ್ಗಾಯಿಸಲಾಗಿದೆ.

ವಾರದ ವಿಶೇಷ
ಬೆಲೆ ಕುಸಿತ - ಏರಿಕೆ ಪೇಟೆಗಳ ಸಹಜ ಕ್ರಿಯೆಯಾದರೂ ಕುಸಿತ ಮತ್ತು ಏರಿಕೆಗಳ ವೇಗ ಅನುಚಿತವೆಂಬಂತಿದೆ. ಕೇವಲ ಹಣ ಮಾಡುವ ದೃಷ್ಟಿಯಿಂದ ನಿರ್ವಹಿಸಲಾಗುತ್ತಿರುವ ಈ ಪೇಟೆಯಲ್ಲಿ ಸಣ್ಣ ಹೂಡಿಕೆದಾರರೂ ಸಹ ಹಂಸ ಕ್ಷೀರ ನ್ಯಾಯದಂತೆ ತಮ್ಮ ಚಟುವಟಿಕೆಯನ್ನು ನಡೆಸಿದಲ್ಲಿ ಮಾತ್ರ ಯಶಸ್ಸು ಕಾಣುವುದು ಸಾಧ್ಯ.

ಪೇಟೆ ಕುಸಿದಿದೆ, ಕುಸಿಯುತ್ತಿದೆ ಎಂಬ ಬಗ್ಗೆ ಗಾಬರಿಗೊಳ್ಳದೆ, ಉತ್ತಮ ಕಂಪೆನಿಗಳು ಕುಸಿತ ಕಂಡಾಗ ಹೂಡಿಕೆಗೆ ಅವಕಾಶವೆಂದು ನಿರ್ವಹಿಸುವುದು ಉತ್ತಮ. ಪೇಟೆ ಕುಸಿತ ಕಂಡಾಗ ಮೌಲ್ಯ ಆಧರಿಸಿ ಷೇರು ಖರೀದಿಯೊಂದೇ ಉತ್ತಮ ಮಾರ್ಗ. ಇದಕ್ಕೆ ಶುಕ್ರವಾರ ಕೋಲ್ ಇಂಡಿಯಾ, ಗೇಲ್, ಒಎನ್‌ಜಿಸಿ, ಎನ್‌ಟಿಪಿಸಿ ವಿಶೇಷ ಕಾರಣವಿಲ್ಲದೇ ಚೇತರಿಕೆ ಕಂಡಿರುವುದು ಉತ್ತಮ ಉದಾಹರಣೆ.

ಷೇರುಪೇಟೆ ಕುಸಿತದಲ್ಲಿದ್ದಾಗ ಹೂಡಿಕೆದಾರರು ದೀರ್ಘಕಾಲೀನವಾಗಿ, ಏರಿಕೆಯಲ್ಲಿದ್ದಾಗ ಲಾಭಕಾಲೀನವಾಗಿ ಚಿಂತಿಸಿದಲ್ಲಿ ಹೂಡಿಕೆ ಸುರಕ್ಷಿತ. ಈಗಿನ ವಾತಾವರಣದಲ್ಲಿ ಪ್ರತಿ ಷೇರಿಗೆ ₹ 10.50 ಲಾಭಾಂಶಕ್ಕೆ ಅರ್ಹವಾಗಿರುವ ಕೆನರಾ ಬ್ಯಾಂಕ್, ಪ್ರತಿ ಷೇರಿಗೆ ₹ 5ರಂತೆ ನೀಡಲಿರುವ ಕರ್ಣಾಟಕ ಬ್ಯಾಂಕ್, ಪ್ರತಿ ಷೇರಿಗೆ ₹ 6ರಂತೆ ನೀಡಲಿರುವ ಯೂನಿಯನ್ ಬ್ಯಾಂಕ್, ಪ್ರತಿ ಷೇರಿಗೆ ₹ 14ರಂತೆ ನಿಡುವ ಜೆ.ಬಿ.ಕೆಮಿಕಲ್ಸ್ ನಂತಹ ಕಂಪೆನಿಗಳು ಕುಸಿತದಲ್ಲಿರುವಾಗ ಹೂಡಿಕೆಗೆ ಯೋಗ್ಯವಲ್ಲವೇ?
ಇವು ಉದಾಹರಣೆ ಅಷ್ಟೆ, ಶಿಫಾರಸು ಅಲ್ಲ. ಸಂದರ್ಭವನ್ನು ಅರಿತು ನಿರ್ಧಾರ ಕೈಗೊಳ್ಳಿ. ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ಒಂದೇ ಸುರಕ್ಷಿತ ಮಂತ್ರ.

ಸಂಪರ್ಕಕ್ಕೆ ಮೊ: 9886313380 (ಸಂಜೆ 4.30ರ ನಂತರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.