ಷೇರುಪೇಟೆಗಳು ಎತ್ತ ಸಾಗುತ್ತಿವೆ ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಲು ಅಸಾಧ್ಯವಾದಂತಹ ಪರಿಸ್ಥಿತಿ ಇದೆ. ಬ್ಯಾಂಕಿಂಗ್ ಷೇರುಗಳು ನಿರಂತರ ಕುಸಿತ ಕಂಡು ಭವಿಷ್ಯವೇ ಇಲ್ಲವೆಂಬ ಭಾವನೆ ಮೂಡಿಸಿವೆ. ಜತೆಗೆ ಷೇರು ಎಂದರೆ ಕೇವಲ ಫಾರ್ಮಾ ಕಂಪೆನಿಗಳದು ಎಂಬಂತಾ ಗಿದ್ದು, ಅವು ಸತತ ಏರಿಕೆ ಪ್ರದರ್ಶಿಸಿವೆ. ಕಳೆದ ವಾರ ಷೇರುಪೇಟೆಯಲ್ಲಿ ಔಷಧ ವಲಯದ ಷೇರುಗಳ ಪ್ರಭಾವವೇ ಅಧಿಕವಾಗಿತ್ತು.

ಗುರುವಾರ ಬ್ಯಾಂಕಿಂಗ್ ವಲಯದ ಹೆಚ್ಚಿನ ಕಂಪೆನಿಗಳು ಏರಿಕೆ ಕಂಡು, ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇ. ೬ರಷ್ಟು ಏರಿಕೆಯಿಂದ ಮಿಂಚಿತು. ಬಿ ಎಸ್ ಇ ಬ್ಯಾಂಕ್ ಇಂಡೆಕ್ಸ್ ನ ಎಲ್ಲಾ ಕಂಪೆನಿ ಷೇರುಗಳು ಏರುಮುಖ ದಲ್ಲಿ ದ್ದುದು ಬದಲಾದ ವಾತಾವರಣಕ್ಕೆ ಹಿಡಿದ ಕನ್ನಡಿಯಾಗಿದೆ.

ಬ್ಯಾಂಕಿಂಗ್ ವಲಯದ ಕಂಪೆನಿ ಗಳು ನಾಲ್ಕನೇ ತ್ರೈಮಾಸಿಕದಲ್ಲಿ ಪ್ರೋತ್ಸಾ ಹದಾಯಕ ಸಾಧನೆ ಪ್ರದರ್ಶಿಸಲಾರವು ಎಂಬ ಭಾವದ ನಡುವೆಯೂ ಬೃಹತ್ ಏರಿಕೆಗೆ ಕೇವಲ ಪೇಟೆಗೆ ಹರಿದು ಬರುತ್ತಿರುವ ಹಣದ ಹೊಳೆ ಮತ್ತು ಕಳೆದ ಮಾರ್ಚ್ ನಿಂದ ಸತತವಾದ ಇಳಿಕೆಯಲ್ಲಿದ್ದು ವ್ಯಾಲ್ಯೂ ಪಿಕ್ ಹಂತದ ಲ್ಲಿರುವುದೇ ಈ ಚೇತರಿಕೆಗೆ ಪ್ರೋತ್ಸಾಹ ದಾಯಕ ಅಂಶವಾಗಿದೆ. ಸೆನ್ಸೆಕ್ಸ್‌ನ ಭಾಗವಾದ ಸನ್ ಫಾರ್ಮಾಸ್ಯುಟಿಕಲ್ಸ್ ಕಂಪೆನಿಯಲ್ಲಿ ರ್‍ಯಾನ್‌ಬಕ್ಸಿ ಲ್ಯಾಬೊರೇಟರೀಸ್ ಕಂಪೆನಿ ವಿಲೀನಗೊಂಡ ನಂತರ ಚುರುಕಾದ ಏರಿಕೆ ಕಂಡಿದೆ.

ಅಲ್ಲದೇ, ಔಷಧ ವಲ ಯದ ಲುಪಿನ್, ಸ್ಟ್ರೈಡ್ಸ್ ಆರ್ಕೋಲ್ಯಾಬ್, ಗ್ಲೆನ್ ಮಾರ್ಕ್ ಫಾರ್ಮ ಷೇರುಗಳೂ ಏರಿಕೆ ಕಂಡಿವೆ.
ಆದರೆ ಗುರುವಾರ ಸನ್ ಫಾರ್ಮಾ ಸ್ಯುಟಿಕಲ್ಸ್, ಲುಪಿನ್, ಸ್ಟ್ರೈಡ್ಸ್ ಆರ್ಕೋ ಲ್ಯಾಬ್, ಗ್ಲೆನ್ ಮಾರ್ಕ್ ಫಾರ್ಮ ಷೇರು ಹೆಚ್ಚಿನ ಮಾರಾಟದ ಕಾರಣ ಅಧಿಕ ಕುಸಿತ ಕಂಡವು. ಈ ಕುಸಿತಕ್ಕೆ ಬ್ಯಾಂಕ್ ಆಫ್ ಅಮೆರಿಕವು ಫಾರ್ಮಾ ಕಂಪೆನಿ ಗಳನ್ನು ಡೌನ್ ಗ್ರೇಡ್ ಮಾಡಿದೆ ಎಂಬ ನೆಪವನ್ನು ನೀಡಲಾಗಿದೆ.

ಹೀಗೆ ಕಂಪೆನಿಗಳ ಸಾಧನೆಗಿಂತ ಸಂಬಂಧಿಸದ ವಿಶ್ಲೇಷಣೆಗಳು, ಸುದ್ಧಿ ಸಮಾಚಾರಗಳಿಗೆ ಮಣೆ ಹಾಕುವ ಈಗಿನ ಪೇಟೆಗಳು ಅಂತರ ರಾಷ್ಟ್ರೀಯ ರೇಟಿಂಗ್ ಕಂಪೆನಿ ಮೂಡೀಸ್ ಭಾರತದ ಔಟ್ ಲುಕ್ ಅಪ್ ಗ್ರೇಡ್ ಮಾಡಿದ ಕಾರಣ ಬಾಂಡ್ ಮತ್ತು ಬಂಡವಾಳ ಪೇಟೆಯ ಚಟುವಟಿಕೆಗೆ ಸ್ಪೂರ್ತಿಯಾಯಿತು.

ಹಾಗೆಯೇ ಗುರುವಾರದಂದು ಗೃಹ ಸಾಲಗಳ ಕಂಪೆನಿಗಳಾದ ಕ್ಯಾನ್ ಫಿನ್ ಹೋಮ್ಸ್, ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್, ಜಿ ಐ ಸಿ ಹೌಸಿಂಗ್ ಫೈನಾನ್ಸ್, ಮುಂತಾದವುಗಳು ದಿಢೀರನೆ ಏರಿಕೆ ಪ್ರದರ್ಶಿಸಿದ್ದು, ನಿರ್ಲಕ್ಷಿಸಲ್ಪಟ್ಟು ಇಳಿಕೆ ಯಲ್ಲಿದ್ದ ವಲಯದ ಕಂಪೆನಿಗಳು ತ್ವರಿತ ಏರಿಕೆಗೊಳಗಾದವು. ಆದರೆ ಈ ಏರಿಕೆಯು ಶುಕ್ರವಾರದಂದು ಸ್ಥಿರತೆ ಕಾಣಲು ಸಾಧ್ಯವಾಗದೆ ಇಳಿಕೆ ಕಂಡವು.

ಲಕ್ಷ್ಮಿ ಎಲೆಕ್ಟ್ರಿಕಲ್ ಕಂಟ್ರೋಲ್ ಸಿಸ್ಟಮ್ಸ್ ಯಾವುದೇ ಅಧಿಕೃತ ಬೆಳವಣಿಗೆ ಇಲ್ಲದೆ ವಿನಾ ಕಾರಣ ಈ ಕಂಪೆನಿಯ ಷೇರಿನ ಬೆಲೆಯು ಕಳೆದ ಒಂದು ವಾರದಲ್ಲಿ ₹324 ರಿಂದ ₹541 ರ ವಾರ್ಷಿಕ ಗರಿಷ್ಟ ತಲುಪಿ ನಂತರದ ದಿನ ₹485 ರವರೆಗೂ ಇಳಿಕೆ ಕಂಡು ₹ 494 ರ ಸಮೀಪ ಕೊನೆಗೊಂಡಿದೆ.

ಈ ರೀತಿಯ ಏರುಪೇರಿಗೆ ಹಣದ ಒಳಹರಿವು ಮತ್ತು ಅದರ ಹಿಂದೆ ಅಡಕವಾಗಿರುವ ತ್ವರಿತವಾಗಿ ಹಣ ಮಾಡುವ ಉದ್ದೇಶವಿರ ಬಹುದಷ್ಟೆ. ಇಂತಹ ದಿಢೀರ್ ಏರಿಕೆಯನ್ನು ಲಾಭದ ನಗದೀಕರಣಕ್ಕೆ ಉಪಯೋಗಿಸಿ ಕೊಳ್ಳು ವುದು ಬಂಡವಾಳ ಸುರಕ್ಷಿತ ಬೆಳವಣಿಗೆ ಕಾಣಲು ಸಾಧ್ಯ.

ಎಸ್ಸ್ ಡೀ ಅಲ್ಯುಮಿನಿಯಂ: ಈ ಕಂಪೆನಿಯ ಷೇರಿನ ಬೆಲೆಯು ಕಳೆದ ಒಂದು ವರ್ಷದಲ್ಲಿ ಏಕಮುಖವಾಗಿ ₹700 ರಿಂದ ₹121ರ ವರೆಗೂ ಇಳಿಕೆ ಕಂಡಿದೆ. ಮಾರ್ಚ್ 27 ರಂದು ₹124 ರಲ್ಲಿದ್ದಂತಹ ಈ ಕಂಪೆನಿಯ ಷೇರು ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹122 ರ ಸಮೀಪದಿಂದ ₹258 ರವರೆಗೂ ಏರಿಕೆ ಕಂಡಿದೆ. ಹತ್ತು ದಿನಗಳಲ್ಲಿ ಸತತ ಏರಿಕೆ ದಾಖಲಿಸಿದೆ. ಪ್ರತಿ ದಿನವೂ ಗರಿಷ್ಟ ಆವರಣ ಮಿತಿಯನ್ನು ತಲುಪಿ ದ್ವಿಗುಣ ಗೊಂಡಿದೆ.

ಯಾವುದೇ ಅಧಿಕೃತ ಬೆಳವಣಿಗೆ ಇಲ್ಲದೆ ಈ ರೀತಿಯ ಬೆಲೆ ಏರಿಕೆಗೆ ಪೇಟೆಯಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪೆನಿಗಳಲ್ಲಿ

ನಡೆಯುತ್ತಿರುವ ಕೃತಕ ಚಟುವಟಿಕೆಗೆ ಸಾಕ್ಷಿ. ಹಾಗಾಗಿ, ಎಚ್ಚರಿಕೆ ವಹಿಸುವ ಅಗತ್ಯವಿದೆ. ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕವು 569 ಅಂಶಗಳ ಏರಿಕೆ ಯನ್ನು ಶೇಖರಿಸಿದೆ. ಶುಕ್ರವಾರದಂದು 5 ಅಂಶಗಳ ಇಳಿಕೆ ಹೊರತುಪಡಿಸಿ ವಾರದ ಎಲ್ಲಾ ದಿನಗಳೂ ಏರಿಕೆ ಪಡೆದಿದೆ.

ಒಟ್ಟು ₹ 1,158 ಕೋಟಿ ಮೌಲ್ಯದ ಷೇರು ಖರೀದಿ ನಡೆಸಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹೨೪೪ ಕೋಟಿ ಮೌಲ್ಯದ ಷೇರು ಖರೀದಿ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ₹102.67 ಲಕ್ಷ ಕೋಟಿಯಿಂದ ₹ 106.16 ಲಕ್ಷ ಕೋಟಿಗೆ ಸತತವಾದ ಏರಿಕೆ ಕಂಡಿದೆ.

ಹೊಸ ಷೇರು:
* ಇತ್ತೀಚೆಗೆ ಪ್ರತಿ ಷೇರಿಗೆ ₹ 180ರಂತೆ ಸಾರ್ವಜನಿಕ ವಿತರಣೆ ಮಾಡಿದ ಆಡ್ ಲ್ಯಾಬ್ ಎಂಟರ್ಟೇನ್ಮೆಂಟ್ ಕಂಪೆನಿಯು 6 ರಂದು ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿ, ಆರಂಭದಲ್ಲಿ ₹156 ರ ಸಮೀಪದಿಂದ ಎರಡನೇ ದಿನ ₹207 ರ ಸಮೀಪಕ್ಕೆ ತಲುಪಿ ನಂತರ ದಲ್ಲಿ ಸತತ ಇಳಿಕೆ ಕಂಡು ಶುಕ್ರವಾರ ದಂದು ₹165 ರ ಸಮೀಪಕ್ಕೆ ಕುಸಿದು ಅಂದು ಮೂರು ಗಂಟೆಯ ಸಮಯ ದಲ್ಲಿ ₹183 ರವರೆಗೂ ಸರಳ ರೇಖೆಯಲ್ಲಿ ಜಿಗಿದು ₹177 ರ ಸಮೀಪ ಕೊನೆಗೊಂಡು ಅಚ್ಚರಿ ಮೂಡಿಸಿದೆ. ಕೊನೆಗೂ ವಿತರಣೆಬೆಲೆಗಿಂತ ಕಡಿಮೆ ಯಲ್ಲಿ ವಾರಂತ್ಯ ಕಂಡಿದೆ.

* ಇನಾಕ್ಸ್ ವಿಂಡ್ ಲಿ. ಕಂಪೆನಿಯು ಪ್ರತಿ ಷೇರಿಗೆ ₹310 ರಂತೆ ಸಾರ್ವಜನಿಕ ಷೇರು ವಿತರಣೆ ಮಾಡಿದ್ದು, 9ರಿಂದ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆ ಯಾಗಿದೆ. ಆರಂಭದಲ್ಲಿ ₹400 ರ ಸಮೀಪದಿಂದ ಗರಿಷ್ಟ ₹452ರವರೆಗೂ ಏರಿಕೆ ಕಂಡು ₹438 ರ ಸಮೀಪ ವಾರಾಂತ್ಯ ಕಂಡಿದೆ.

* ವಿ ಆರ್ ಎಲ್ ಲಾಜಿಸ್ಟಿಕ್ಸ್ ಲಿ ಕಂಪೆನಿಯ ಆರಂಭಿಕ ಷೇರಿನ ವಿತರಣೆ ಯು ಏಪ್ರಿಲ್ 15 ರಿಂದ ₹17 ರ ವರೆ ಗೂ ನಡೆಯಲಿದ್ದು, ವಿತರಣೆಯು ಪ್ರತಿ ಷೇರಿಗೆ ₹195 ರಿಂದ ₹205 ರ ಅಂತರ ದಲ್ಲಿ ನಡೆಯಲಿದೆ. ಅರ್ಜಿಯನ್ನು 65ರ ಗುಣಕಗಳಲ್ಲಿ ಸಲ್ಲಿಸ ಬಹು ದಾಗಿದೆ.
* ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ರಾಜ್ ಪುಟಾಣ ಇನ್ವೆಸ್ಟ್‌ಮೆಂಟ್ ಅಂಡ್ ಫೈನಾನ್ಸ್ ಕಂಪೆನಿಯು ೧೩ನೇ ಸೋಮವಾರದಿಂದ ಡಿ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆ ಯಾಗಲಿದೆ.

* ಕೋಲ್ಕತ್ತ ಮತ್ತು ಯು ಪಿ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾ ಗುತ್ತಿರುವ ಕನ್ಸಿಕ್ಯುಟೀವ್ ಇನ್ವೆಸ್ಟ್ ಮೆಂಟ್ ಅಂಡ್ ಟ್ರೇಡಿಂಗ್ ಕಂಪೆನಿ 13ನೇ ಸೋಮವಾರದಿಂದ ಡಿ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆ ಯಾಗಲಿದೆ.

ಬೋನಸ್ ಷೇರು
* ಇನ್ಸೆಕ್ಟಿ ಸೈಡ್ಸ್ ಕಂಪೆನಿ ವಿತರಿಸಲಿರುವ 1:2 ರ ಅನುಪಾತದ ಬೋನಸ್ ಷೇರಿಗೆ ಏಪ್ರಿಲ್ 17 ನಿಗದಿತ ದಿನವಾಗಿದೆ.
* ವಿಸಗಾರ್ ಪೋಲಿಟೆಕ್ಸ್ ಕಂಪೆನಿ 10:1ರ ಅನುಪಾತದ ಬೋನಸ್ ಪ್ರಕಟಿಸಿದೆ.

ಮುಖಬೆಲೆ ಸೀಳಿಕೆ : ಫಿನಿಯೋಟೆಕ್ಸ್ ಕಂಪೆನಿಯು 16 ರಂದು ಷೇರಿನ ಮುಖಬೆಲೆ ಸೀಳಲು ಪರಿಶೀಲಿಸಲಿದೆ.
ಗಜಗಾತ್ರದ ವಹಿವಾಟು
* ಎಚ್ ಡಿ ಎಫ್ ಸಿ ಮ್ಯೂಚುಯಲ್ ಫಂಡ್ 6 ರಂದು 1.60 ಲಕ್ಷ ಎ ಪಿ ಎಲ್ ಅಪೋಲೋ ಷೇರುಗಳನ್ನು, 10 ರಂದು 17 ಲಕ್ಷ ಸಾಂಘವಿ ಮೂವರ್ಸ್ ಷೇರುಗಳನ್ನು ಖರೀದಿಸಿದೆ. ಖರೀದಿಸಿದೆ.
* ರಿಲಯನ್ಸ್ ಮ್ಯೂಚುಯಲ್ ಫಂಡ್ ಏ. 10 ರಂದು 7.50 ಲಕ್ಷ ಸಾಂಘವಿ ಮೂವರ್ಸ್ ಷೇರು ಖರೀದಿಸಿದೆ.

* ಸುಂದರಂ ಮ್ಯೂಚುಯಲ್ ಫಂಡ್ ಏ. 10 ರಂದು 10.72 ಲಕ್ಷ ಸಾಂಘವಿ ಮೂವರ್ಸ್ ಷೇರು ಖರೀದಿಸಿದೆ.
* ಸಿಟಿ ಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಮಾರಿಷಸ್ 10 ರಂದು 64.05 ಲಕ್ಷ ಡಿಶ್ ಟಿವಿ ಷೇರು ಖರೀದಿಸಿದೆ.
* ಬಿರ್ಲಾ ಸನ್ ಲೈಫ್ ಟ್ರಸ್ಟ್ 10 ರಂದು 67.95 ಲಕ್ಷ ಡಿಶ್ ಟಿವಿ ಷೇರು ಖರೀದಿಸಿದೆ.

ವಾರದ ವಿಶೇಷ
ಹೆಚ್ಚಿನ ಸೂಚ್ಯಂಕಗಳು ಗರಿಷ್ಠ ಮಟ್ಟದ ಏರಿಕೆ ಕಾಣುತ್ತಿದ್ದರೂ ವಹಿವಾಟಿನ ಗಾತ್ರ ಮಾತ್ರ ಹೆಚ್ಚುತ್ತಿಲ್ಲ. ಷೇರಿನ ಬೆಲೆಗಳು ಹೆಚ್ಚುತ್ತಿವೆ ಇದು ಪೇಟೆಯ ಬಂಡವಾಳೀಕರಣ ಮೌಲ್ಯವನ್ನು ಹೆಚ್ಚಿಸುತ್ತಿವೆ. ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ ಚಟುವಟಿಕೆಯು ಹೆಚ್ಚು ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿಯ ಷೇರುಗಳಲ್ಲಿ ನಡೆಯುತ್ತಿದ್ದು, ಇದನ್ನು ಗಜಗಾತ್ರದ ವಹಿವಾಟುಗಳ ಪಟ್ಟಿಯಿಂದ ಅರಿಯಬಹುದಾಗಿದೆ.

ಅಂದರೆ ಪೇಟೆಯಲ್ಲಿ ತ್ವರಿತವಾಗಿ ಲಾಭ ಪಡೆಯಲು ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿಯ ಷೇರುಗಳತ್ತ ವಹಿವಾಟುದಾರರು ನುಗ್ಗುತ್ತಿದ್ದು, ಇದು ಸಣ್ಣ ಹೂಡಿಕೆದಾರರನ್ನು ಸೆಳೆಯಲು ಸಹ ಸಾಧ್ಯವಿದೆ. ಇಂತಹ ಸಂದರ್ಭದಲ್ಲಿ ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿಯ ಷೇರುಗಳಲ್ಲಿ ಬೆಲೆ ಹೆಚ್ಚಾದಾಗ ಆ ಷೇರುಗಳನ್ನು ಮಾರಾಟ ಮಾಡಿ ಬಂಡವಾಳ ಸುರಕ್ಷತೆಗೆ ಆಧ್ಯತೆ ನೀಡಿದಲ್ಲಿ ಉತ್ತಮ ಫಲಿತಾಂಶ ಸಾಧ್ಯ.

ಮುಂದಿನ ದಿನಗಳಲ್ಲಿ ನೌಕರರ ಕ್ಷೇಮ ನಿಧಿ ಸಂಸ್ಥೆಯ ನೌಕರರ ಕ್ಷೇಮ ನಿಧಿಯ ಸ್ವಲ್ಪ ಭಾಗವು ಷೇರುಪೇಟೆಗೆ ಹರಿದುಬರುವ ಕಾರಣ ಉತ್ತಮ ಕಂಪೆನಿಗಳ ಷೇರುಗಳ ಬೇಡಿಕೆ ಹೆಚ್ಚಾಗಬಹುದು. ಈ ನಿಧಿಯನ್ನು ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳಲ್ಲಿ ವಿಶೇಷವಾಗಿ ಸಾರ್ವಜನಿಕ ವಲಯದ ಸಿ.ಪಿ.ಎಸ್.ಇ.ಇ.ಟಿ.ಎಪ್‌ಗಳಲ್ಲಿ ಹೂಡಿಕೆ ಮಾಡಲು ಸೂಚಿಸಲು ಪ್ರಯತ್ನಿಸು ತ್ತಿರುವ ಅಂಶವು ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ ಎನ್ನಬಹುದು. ಹೂಡಿಕೆದಾರರು ಸದಾ ಎಚ್ಚರದಲ್ಲಿದ್ದು, ಕೈಯಲ್ಲಿಲ್ಲದ ಷೇರು ಮಾರಾಟ ಮಾಡುವ (ಶಾರ್ಟ್ ಸೆಲ್ಲಿಂಗ್) ನಿಂದ ದೂರವಿರುವುದು ಉತ್ತಮ.

ಸಂಪರ್ಕಕ್ಕೆ ಮೊ: 9886313380 (ಸಂಜೆ 4.30ರ ನಂತರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.