ಷೇರುಪೇಟೆಯ ಸಂವೇದಿ ಸೂಚ್ಯಂಕವು ಈ ವಾರ ಏರಿಕೆ ಪ್ರದರ್ಶಿಸಿದೆ. ೨೦೧೫ರ ಜನವರಿ ೩೦ರಂದು ತಲುಪಿದ್ದ ಸಾರ್ವಕಾಲೀನ ಗರಿಷ್ಠ ಮಟ್ಟದ ಸಮೀಪ ತಲುಪಲು ಯತ್ನಿಸಿದೆ.

ಷೇರುಪೇಟೆಯ ವಿಶಿಷ್ಟತೆ ಎಂದರೆ ಅದು ಸದಾ ತನ್ನ ದೃಷ್ಟಿಯನ್ನು ಭವಿಷ್ಯದತ್ತ ಬೀರುತ್ತಿರುತ್ತದೆ. ಗತ ಕಾಲದ ಬೆಳವಣಿಗೆಗಳತ್ತ ತಿರು ಗಿಯೂ ನೋಡುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟ ಗೊಂಡಿದ್ದು. ಈ ಫಲಿತಾಂಶವು ಕೇಂದ್ರದಲ್ಲಿನ ಆಡಳಿತ ಪಕ್ಷಕ್ಕೆ ವಿರುದ್ಧವಾಗಿದ್ದರೂ ಅದನ್ನು ದಿಕ್ಕರಿಸಿ ಪೇಟೆಯು ಏರುಮುಖವಾಗಿ ಸಾಗಿತು.

ಚುನಾವಣೆ ಫಲಿತಾಂಶ ಪ್ರಕಟಣೆಗೂ ಮುನ್ನವೇ ಷೇರುಗಳ ಬೆಲೆ ಗಳು ಮಾರಾಟದ ಒತ್ತಡದಿಂದ ಕುಸಿದಿದ್ದವು. ಹಾಗಾಗಿ ಫಲಿತಾಂಶದ

ನಂತರ ಏರಿಕೆ ಪ್ರದರ್ಶಿಸಿವೆ. ಪೇಟೆಯ ಚಿಂತನೆಗಳು, ಚಲನೆಗಳು ಎಷ್ಟು ತ್ವರಿತವಾಗಿ ಬದಲಾಗುತ್ತವೆ ಎನ್ನುವುದಕ್ಕೆ ಗುರುವಾರ ಜಿಂದಾಲ್ ಸ್ಟೀಲ್ ಅಂಡ್ ಪವರ್ ಕಂಪೆನಿ ಪ್ರದರ್ಶಿಸಿದ ರಭಸದ ಏರಿಕೆ ಉತ್ತಮ ಉದಾಹರಣೆಯಾಗಿದೆ. ಅಂದು ದಿನದ ಮಧ್ಯಾಂತರ ದಲ್ಲಿ ರೂ. ೧೫೨ರಲ್ಲಿದ್ದ ಜಿಂದಾಲ್ ಷೇರಿನ ದರ ಒಂದೇ ಸಮನೆ ಏರುತ್ತಾ ಹೋಯಿತು. ಒಂದು ಹಂತದಲ್ಲಿ ರೂ. ೨೦೦ರ ಮಟ್ಟವನ್ನೂ ದಾಟಿತ್ತು.

ಷೇರು ಬೆಲೆ ಏರಿಕೆಯ ಈ ರಭಸ ಪೇಟೆಯ ದಿಕ್ಕನ್ನು ಪ್ರದರ್ಶಿಸಿದೆ. ಕ್ರಾಂಪ್ಟನ್ ಗ್ರೀವ್ಸ್ ಕಂಪೆನಿಯು ಗ್ರಾಹಕ ಉತ್ಪನ್ನಗಳ ವಿಭಾಗ ವನ್ನು ಪ್ರತ್ಯೇಕಿಸಲಿರುವುದರಿಂದ ಆ ಕಂಪೆನಿಯ ಷೇರಿನ ಬೆಲೆ ಈ ವಾರ ಕನಿಷ್ಠ ರೂ. ೧೬೯ರಿಂದ ಗರಿಷ್ಠ ರೂ. ೧೮೯ರವರೆಗೂ ಏರಿಕೆ ಕಂಡಿದೆ.

ಸರ್ಕಾರಿ ಸ್ವಾಮ್ಯದ ಉದ್ಯಮ ಸಂಸ್ಥೆ ಬಿಎಚ್ಇಎಲ್ ಷೇರು ಮೌಲ್ಯ ರೂ. ೨೫೫ರವರೆಗೂ ಕುಸಿದಿತ್ತು. ಲಾಭಾಂಶ ಪ್ರಕಟಣೆ ನಂತರದ ವಹಿವಾಟಿನಲ್ಲಿ ಷೇರಿನ ಬೆಲೆ ರೂ. ೨೭೬ರವರೆಗೂ ಏರಿಕೆ ಕಂಡಿದೆ. ಇದು ಬೃಹತ್ ಕೈಗಾರಿಕೆಗಳ ಷೇರುಗಳ ಬಗ್ಗೆ ಹೂಡಿಕೆದಾರರ ಆಸಕ್ತಿಯನ್ನು ತೋರುತ್ತದೆ.

ಬಿಎಸ್ಇಯ ಸಂವೇದಿ ಸೂಚ್ಯಂಕವು ಒಟ್ಟಾರೆಯಾಗಿ ೧೩೬ ಅಂಶಗಳಷ್ಟು ಏರಿಕೆ ಕಂಡಿದೆ. ಕೇವಲ ನಾಲ್ಕು ದಿನಗಳ ವಹಿವಾಟು ಇದ್ದ ಈ ವಾರದಲ್ಲಿ ಸಾಕಷ್ಟು ಏರಿಳಿತವನ್ನೂ ಪ್ರದರ್ಶಿಸಿದೆ.

ಇದಕ್ಕೆ ಬೆಂಬಲವಾಗಿ ಮಧ್ಯಮ ಶ್ರೇಣಿಯ ಸೂಚ್ಯಂಕವು ೯೫ ಅಂಶ ಗಳಷ್ಟು, ಕೆಳಮಧ್ಯಮ ಶ್ರೇಣಿಯ ಸೂಚ್ಯಂಕವು ೧೮೬ ಅಂಶಗಳ

ಏರಿಕೆ ಕಂಡಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರ ವಿಭಾಗದಿಂದ ಈ ವಾರ ದಲ್ಲಿ ರೂ. ೩,೪೫೮ ಕೋಟಿ ಮೌಲ್ಯದ ಷೇರುಗಳನ್ನು ಖರೀದಿಯಾಗಿದೆ. ಸ್ವದೇಶಿ ಸಾಂಸ್ಥಿಕ ಹೂಡಿಕೆದಾರರ ವಲಯದಿಂದ ರೂ. ೬೧೭ ಕೋಟಿ ಮೌಲ್ಯದ ಷೇರುಗಳ ಖರೀದಿಯಾಗಿದೆ.

ಈ ಎರಡೂ ವಲಯದ ಸಾಂಸ್ಥಿಕ ಹೂಡಿಕೆದಾರರ ಚಟುವಟಿಕೆಯ ಭರದಲ್ಲಿ ಬ್ಯಾಂಕಿಂಗ್ ವಲಯದ ಷೇರುಗಳು ಅತ್ತಲೋ ಇತ್ತಲೋ ಎಂಬಂತೆ ಜೋಕಾಲಿಯಾಡಿದವು. ಷೇರುಪೇಟೆಯ ಒಟ್ಟು ಬಂಡ ವಾಳೀಕರಣ ಮೌಲ್ಯ ರೂ. ೧೦೪.೫೩ ಲಕ್ಷ ಕೋಟಿಯಲ್ಲಿ ಕೊನೆ ಗೊಂಡಿದೆ. ಈ ಮಧ್ಯೆ, ಗುರುವಾರ ದಾಖಲಾಗಿದ್ದ ರೂ. ೧೦೪.೮೪ ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯವು ಸಾರ್ವಕಾಲೀನ ಗರಿಷ್ಠ ಮಟ್ಟವಾಗಿದೆ ಎಂಬುದು ಉಲ್ಲೇಖಾರ್ಹ.

ಬೋನಸ್
ಪಿಕಡೆಲಿ ಆಗ್ರೊ ಇಂಡಸ್ಟ್ರೀಸ್ ಲಿ., ಕಂಪೆನಿ ೧:೧ಅನುಪಾತದಲ್ಲಿ ಬೋನಸ್ ಷೇರು ವಿತರಿಸಲಿದೆ.

ಹಕ್ಕಿನ ಷೇರು
ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ ಮಾ. ೪ರಂದು ೧:೫ ಅನುಪಾತದಲ್ಲಿ ಪ್ರತಿ ಷೇರಿಗೆ ರೂ. ೪೦೦ರಂತೆ ಹಕ್ಕಿನ ಷೇರು ವಿತರಿಸಲಿದೆ. ಐದಕ್ಕಿಂತ ಕಡಿಮೆ ಷೇರು ಹೊಂದಿರುವವರಿಗೆ ಅಥವಾ ಐದರ ಗುಣಕಗಳಿಗಿಂತಾ ಹೆಚ್ಚಿರುವ ಷೇರುಗಳಿಗೆ ಭಾಗಶಃ ಕೂಪನ್ಗಳನ್ನು ವಿತರಿಸುವುದಿಲ್ಲ. ಅಂತಹವರು ಹೆಚ್ಚಿನ ಷೇರುಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಒಂದು ಷೇರನ್ನು ನೀಡುವುದಾಗಿ ಕಂಪೆನಿ ಸ್ಪಷ್ಟಪಡಿಸಿದೆ.

ಹೊಸ ಷೇರು
*ಎನ್ಎಸ್ಇ ಮತ್ತು ಮದ್ರಾಸ್ ಷೇರು ವಿನಿಮಯ ಕೇಂದ್ರಗಳಲ್ಲಿ ನೋದಾಯಿಸಿಕೊಂಡು ವಹಿವಾಟಾಗುತ್ತಿರುವ ಮಿಂದಾ ಇಂಡಸ್ಟ್ರೀಸ್

ಫೆ. ೨೩ರಿಂದ ಬಿಎಸ್ಇ ‘ಬಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.
*ಅಹ್ಮದಾಬಾದ್, ಲೂದಿಯಾನ ಮತ್ತು ದೆಹಲಿ ಷೇರು ವಿನಿಮಯ ಕೇಂದ್ರಗಳಲ್ಲಿ ನೋದಾಯಿತ ಫ್ಯಾಕ್ಟ್ ಇಂಡಸ್ಟ್ರೀಸ್ ಲಿ. ಫೆ. ೨೩ರಿಂದ ಡಿ.ಟಿ ಗುಂಪಿನಲ್ಲಿ ವಹಿವಾಟಾಗಲಿದೆ.
*ಓವರ್ ದಿ ಕೌಂಟರ್ ಎಕ್ಸ್ಚೇಂಜ್ನಲ್ಲಿ ನೋಂದಾಯಿತ ಮರ್ಕ್ಯುರಿ ಲ್ಯಾಬೊರೇಟರೀಸ್ ಫೆ. ೨೩ರಿಂದ ಡಿ.ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.
*ಅಹ್ಮದಾಬಾದ್, ಪುಣೆ, ಮದ್ರಾಸ್ ಷೇರು ವಿನಿಮಯ ಕೇಂ ದ್ರಗಳಲ್ಲಿ ನೋಂದಾಯಿತ ಕಾಂಕರ್ಡ್ ಡ್ರಗ್ಸ್ ಲಿ., ಫೆ. ೨೩ರಿಂದ ಡಿ.ಟಿ ಗುಂಪಿನಲ್ಲಿ ವಹಿವಾಟಾಗಲಿದೆ.
*ಕಲ್ಪತರು ಪವರ್ ಟ್ರಾನ್ಸ್ಮಿಷನ್ ಅಂಗಸಂಸ್ಥೆ ಶುಭಂ ಲಾಜಿಸ್ಟಿಕ್ಸ್ ಲಿ., ಆರಂಭಿಕ ಷೇರು ವಿತರಣೆಗೆ ರೆಡ್ ಹೆರ್ರಿಂಗ್ ಪ್ರಾಸ್ಪೆಕ್ಟಸ್ ಸಲ್ಲಿಸಿದೆ.

ವಾರದ ವಿಶೇಷ
ಬಜೆಟ್ ಮಂಡನೆಗೆ ಕೇವಲ ಒಂದೇ ವಾರ ಉಳಿದಿರುವುದ ರಿಂದ ಈ ವಾರ ಹೆಚ್ಚಿನ, ರಭಸದ ಏರಿಳಿತಗಳನ್ನು ಷೇರು ಪೇಟೆ ಪ್ರದರ್ಶಿಸಬಹುದು. ಅದಲ್ಲದೇ ಫೆ. ೨೬ ವಾಯಿದಾ ಪೇಟೆಗೆ ಚುಕ್ತಾ ದಿನವಾದ್ದರಿಂದ ಕೆಲವು ಕಂಪೆನಿಗಳಲ್ಲಿ ಚುರುಕಿನ ಚಟುವಟಿಕೆ ನಡೆಯಬಹುದು.

ಅಧಿಕ ಮಟ್ಟದ ಏರಿಕೆ ಮತ್ತು ಇಳಿಕೆಗಳ ಲಾಭವನ್ನು ಉಪಯೋಗಿಸಿಕೊಳ್ಳುವುದಕ್ಕೆ ಪ್ರಯತ್ನಿಸ ಬಹುದಾಗಿದೆ. ಈ ರೀತಿಯ ಏರಿಳಿತ ಕಂಪೆನಿಗಳ ಆಂತರಿಕ ಸಾಧನೆಗಾಗಲೀ, ಭವಿಷ್ಯದ ಬೆಳವಣಿಗೆಗಾಗಲೀ ಕಾರಣವಾಗದೆ ವಹಿವಾಟುದಾರರ ಚಟುವಟಿಕೆಯ ಪ್ರಭಾವವಾಗಿರುತ್ತದೆ. ಹಾಗಾಗಿ, ಈ ಏರಿಕೆಯನ್ನು ಲಾಭದ ನಗದೀಕರಣಕ್ಕೂ, ಇಳಿಕೆ ಯನ್ನಾದರೆ ಮೌಲ್ಯಾದಾರಿತ ಷೇರುಗಳ ಕೊಳ್ಳುವಿಕೆಗೂ ಉಪಯೋಗಿಸಿಕೊಳ್ಳುವುದು ಉತ್ತಮ.

ಹಿಂದಿನ ವಾರದಲ್ಲಿ ಕಂಡ ಜ್ಯುಬಿಲಿಯಂಟ್ ಲೈಫ್ಸೈನ್ಸ್ ಷೇರು ಮೌಲ್ಯ ರೂ. ೧೫0ರಿಂದ ರೂ. ೧೬೩ರವರೆಗಿನ ಏರಿಕೆಗೆ ಕೇವಲ ಎರಡು ದಿನವಾದರೆ, ನವರತ್ನ ಕಂಪೆನಿ ರೂರಲ್ ಎಲೆಕ್ಟ್ರಿಫಿ ಕೇಷನ್ ಕಾರ್ಪೊರೇಶನ್ ಗುರುವಾರ ರೂ. ೩೦೮ರವರೆಗೆ ಕುಸಿದದು ಮರುದಿನವೇ ರೂ. ೩೨೨ರವರೆಗೆ ಏರಿಕೆ ಕಂಡಿದೆ. ಕೆನರಾ ಬ್ಯಾಂಕ್ ರೂ. ೩೯೮ರಿಂದ ರೂ. ೪೧೭ರವರೆಗೆ ಒಂದೇ ದಿನದಲ್ಲಿ ಏರಿಕೆ ಕಂಡಿದೆ.

ಹಿಂದಿನ ವಾರ ರೂ. ೧,೧೩೦ಕ್ಕಿಂತ ಕೆಳಕ್ಕೆ ಕುಸಿದಿದ್ದ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪೆನಿಯ ಷೇರು ಈ ವಾರ ರೂ. ೧,೨೬೨ ರವರೆಗೂ ಏರಿಕೆ ಕಂಡಿದೆ. ಹೀಗೆ ಪೇಟೆಯು ಅಧಿಕ ಲಾಭದ, ಅಲ್ಪಕಾಲೀನ ಅವಕಾಶಗಳನ್ನು ಸೃಷ್ಟಿಸಿಕೊಡುತ್ತಿದೆ. ಅದರ ಲಾಭ ವನ್ನು ಪಡೆಯುವುದನ್ನು ರೂಡಿಸಿಕೊಳ್ಳುವುದು ಉತ್ತಮ.

ಸಂಪರ್ಕಕ್ಕೆ ಮೊ: 9886313380 (ಸಂಜೆ 4.30ರ ನಂತರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.