ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕದ ಷೇರುಗಳಲ್ಲಿನ ಚಟುವಟಿಕೆಯು ಕ್ಷೀಣಿಸುತ್ತಿದೆ. ಎಲ್ಲರ ಆಸಕ್ತಿ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪೆನಿಗಳತ್ತ ಕೇಂದ್ರೀಕೃತವಾಗುತ್ತಿದೆ. ಬಹಳ ಕಾಲದವರೆಗೂ ನಿರ್ಲಕ್ಷ್ಯಕ್ಕೊಳಗಾಗಿದ್ದ ಕಂಪೆನಿಗಳು ಈಗ ಹೆಚ್ಚು ಚುರುಕಾಗಿವೆ. ಹೂಡಿಕೆದಾರರಲ್ಲಿ, ವಿತ್ತೀಯ ಸಂಸ್ಥೆಗಳಲ್ಲಿ ಕೊಳ್ಳುವ ದಾಹ ಹೆಚ್ಚಾಗುತ್ತಿದೆ.

‘ಎ’ ಗುಂಪಿನ ಅನೇಕ ಕಂಪೆನಿಗಳು ಕಳೆದ ಒಂದು ವಾರದಲ್ಲಿ ಅಧಿಕ ಪ್ರಮಾಣದ ಏರಿಕೆ ಪ್ರದರ್ಶಿಸಿವೆ. ಸುಜುಲಾನ್ ಎನರ್ಜಿ, ‘ಎಂಎಂಟಿಸಿ’, ಯೂನಿಟೆಕ್, ‘ಐಎಫ್‌ಸಿಐ’, ಜೈನ್ ಇರಿಗೇಷನ್, ಗೀತಾಂಜಲಿ ಜೆಮ್‌್ಸ, ‘ಡಿಎಲ್‌ಎಫ್’ ಅಲ್ಲದೆ ಬಹಳಷ್ಟು ಬ್ಯಾಂಕಿಂಗ್ ಹಾಗೂ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.

ಶುಕ್ರವಾರ ಬ್ಯಾಂಕಿಂಗ್ ವಲಯದ ಕಂಪೆನಿಗಳ ಷೇರುಗಳ ಅಪಾರ ಬೇಡಿಕೆಯಿಂದ ತ್ವರಿತ ಏರಿಕೆ ಕಂಡವು. ಅಂದು ಮಧ್ಯಾಹ್ನ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಪ್ರಕಟಿಸಿದ 4ನೇ ತ್ರೈಮಾಸಿಕ ಮತ್ತು ವಾರ್ಷಿಕ ಫಲಿತಾಂಶವು ನಿರೀಕ್ಷೆಗೆ ಮೀರಿದ್ದಾಗಿದ್ದ ಕಾರಣ ಬ್ಯಾಂಕಿಂಗ್ ವಲಯದ ಷೇರುಗಳು ಹೆಚ್ಚು ಏರಿಕೆಗೆ ಮುಂದಾಗಿವೆ.

ಕೆನರಾ ಬ್ಯಾಂಕ್ ಷೇರಿನ ಬೆಲೆಯು ಮಧ್ಯಾಹ್ನ 2.30ರವರೆಗೂ ರೂ.420ರ ಸಮೀಪದಲ್ಲಿತ್ತು. ನಂತರದ ವಹಿವಾಟಿನಲ್ಲಿ ಸುಮಾರು ರೂ.46 ರೂಪಾಯಿಗಳಷ್ಟು ಏರಿಕೆ ಕಂಡಿತು. ರೂ.481ರವರೆಗೂ ಮೇಲೇರಿದ್ದರೂ ಆ ಏರಿಕೆ ಮಟ್ಟವನ್ನು ಉಳಿಸಿಕೊಳ್ಳಲಾಗದೆ ಅದು ರೂ.469ರಲ್ಲಿ ಅಂತ್ಯಗೊಂಡಿತು.

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ರೂ.24 3ರಷ್ಟು ಏರಿಕೆ ಕಂಡು ಸಂವೇದಿ ಸೂಚ್ಯಂಕಕ್ಕೆ 93 ಅಂಶಗಳಷ್ಟು ಏರಿಕೆಗೆ ಕಾರಣವಾದರೆ, ರಿಲಯನ್ಸ್ ಇಂಡಸ್ಟ್ರೀಸ್ ರೂ.26ರಷ್ಟು ಏರಿಕೆಯಿಂದ 53 ಅಂಶಗಳ ಕೊಡುಗೆಯನ್ನು ಸಂವೇದಿ ಸೂಚ್ಯಂಕಕ್ಕೆ ನೀಡಿದೆ. ಹಾಗೆಯೇ ‘ಒಎನ್‌ಜಿಸಿ’ ರೂ.14 ರಷ್ಟು ಏರಿಕೆಯಿಂದ 35 ಅಂಶಗಳು, ಎಚ್‌ಡಿಎಫ್‌ಸಿ ರೂ.11ರ ಏರಿಕೆಯಿಂದ 21 ಅಂಶ, ಲಾರ್ಸನ್ ಅಂಡ್ ಟೋಬ್ರೊ ರೂ.30ರ ಏರಿಕೆಯಿಂದ 28 ಅಂಶಗಳ ಕೊಡುಗೆಯನ್ನು ಸಂವೇದಿ ಸೂಚ್ಯಂಕಕ್ಕೆ ನೀಡಿವೆ.

ಇವಲ್ಲದೆ ಸಂವೇದಿ ಸೂಚ್ಯಂಕದ ಪ್ರಮುಖ ಕಂಪೆನಿಗಳಾದ ಟಾಟಾ ಪವರ್ ರೂ.6ರಷ್ಟು ಏರಿಕೆಯಿಂದ ವಾರ್ಷಿಕ ದಾಖಲೆ ಮಟ್ಟವಾದ ರೂ.106/70ಕ್ಕೆ ತಲುಪಿತು. ಎನ್‌ಟಿಪಿಸಿ ರೂ.162, ಸೀಸಾ ಸ್ಟರ್ಲೈಟ್ ರೂ.271ರಲ್ಲಿ ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿವೆ.ಕೋಲ್ ಇಂಡಿಯಾ, ‘ಬಿಎಚ್‌ಇಎಲ್’ ಈ ವಾರ ವರ್ಷದ ಗರಿಷ್ಠ ಪ್ರಮಾಣದ ದಾಖಲೆ ನಿರ್ಮಿಸಿವೆ.

ರೂಪಾಯಿ ಬೆಲೆಯಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದರೂ ತಂತ್ರಜ್ಞಾನ ವಲಯದ ಇನ್ಫೊಸಿಸ್, ಟಿಸಿಎಸ್, ವಿಪ್ರೊ ಹಾಗೂ ಫಾರ್ಮಾ ವಲಯದ ಸನ್‌ಫಾರ್ಮಾ, ಸಿಪ್ಲಾ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು.

ಷೇರುಪೇಟೆಯಲ್ಲಿನ ಏರಿಳಿತಗಳಿಗೆ ಕಂಪೆನಿಗಳ ಸಾಧನೆಯು ನೇರವಾಗಿ ಕಾರಣವಾದರೆ, ಪರೋಕ್ಷವಾಗಿ ಬೇಕಾದಷ್ಟು ಕಾರಣಗಳಿರುತ್ತವೆ. ಮುಂದಿನವಾರ ಮೂಲಾಧಾರಿತ ಪೇಟೆಯ ಚುಕ್ತಾ ವಾರವಾಗಿದ್ದು, ಶೂನ್ಯ ಮಾರಾಟಗಾರರನ್ನು ಸಿಲುಕಿಸುವುದಾಗಿದೆ. ಹಾಗೂ ಸೋಮವಾರ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬರುವ ಕಾರಣ ಸುರಕ್ಷಿತತಗೆ ಮಹತ್ವ ನೀಡಿ ಶೂನ್ಯ ಮಾರಾಟಗಾರರು ತಮ್ಮ ವಹಿವಾಟು ಚುಕ್ತಾ ಮಾಡಿಕೊಳ್ಳಲು ಮುಂದಾಗಿರಲೂ ಸಾಧ್ಯವಿದೆ. ಆದರೆ ಇಂತಹ ಕ್ಷಿಪ್ರ ಏರಿಕೆಯು ಸ್ಥಿರವಲ್ಲ."

ಒಟ್ಟಾರೆ ವಾರದಲ್ಲಿ ಸಂವೇದಿ ಸೂಚ್ಯಂಕವು 541 ಅಂಶಗಳ ಏರಿಕೆ ಕಂಡರೆ ಮಧ್ಯಮ ಶ್ರೇಣಿ ಸೂಚ್ಯಂಕ 902 ಅಂಶ, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 122 ಅಂಶಗಳ ಏರಿಕೆಯಿಂದ ವಿಜೃಂಭಿಸಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು ರೂ.1,100 ಕೋಟಿ ಹೂಡಿಕೆ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ.1,140 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಷೇರುಪೇಟೆಯ ಬಂಡವಾಳ ಮೌಲ್ಯವು ಹಿಂದಿನವಾರದ ರೂ.80.64 ಲಕ್ಷ ಕೋಟಿಯಿಂದ ರೂ.84.47 ಲಕ್ಷ ಕೋಟಿಗೆ ಏರಿಕೆ ಕಂಡು ಹೊಸ ದಾಖಲೆ ನಿರ್ಮಿಸಿದೆ. ಗುರುವಾರದ ರೂ.84.68 ಲಕ್ಷ ಕೋಟಿ ಸರ್ವಕಾಲೀನ ದಾಖಲೆಯಾಗಿದೆ.

ಲಾಭಾಂಶ
ಆದಿತ್ಯ ಬಿರ್ಲಾ ನುವೊ ಪ್ರತಿ ಷೇರಿಗೆ ರೂ.7, ರಿಲಯನ್ಸ್ ಇನ್‌ಫ್ರಾ ಪ್ರತಿ ಷೇರಿಗೆ ರೂ.7.50, ಕೇರ್ ರೇಟಿಂಗ್ ಪ್ರತಿ ಷೇರಿಗೆ ರೂ.10, ಮುತ್ತೋಟ್ ಕ್ಯಾಪಿಟಲ್ ಪ್ರತಿ ಷೇರಿಗೆ ರೂ.4.50, ರತ್ನಮಣಿ ಮೆಟಲ್ ಪ್ರತಿ ಷೇರಿಗೆ ರೂ.4.50, ಪ್ಲಾಸ್ಟಿಬ್ಲೆಂಡ್ ಪ್ರತಿ ಷೇರಿಗೆ ರೂ.5 (ಮುಖಬೆಲೆ ರೂ.5), ಅಡೋರ್ ವೆಲ್ಡಿಂಗ್ ಪ್ರತಿ ಷೇರಿಗೆ ರೂ.5, ರಾಣೆ ಬ್ರೇಕ್ ಲೈನಿಂಗ್ಸ್ ಪ್ರತಿ ಷೇರಿಗೆ ರೂ.7.50, ಪನಾಮಾ ಪೆಟ್ರೊ ಪ್ರತಿ ಷೇರಿಗೆ ರೂ.6, ಹಿಂದುಜಾ ಗ್ಲೊಬಲ್ ಪ್ರತಿ ಷೇರಿಗೆ ರೂ.10, ಜೆಡ್‌ಎಫ್ ಸ್ಟೀರಿಂಗ್ ಪ್ರತಿ ಷೇರಿಗೆ ರೂ.7, ವಾಟ್ ಕೊ ಪ್ರತಿ ಷೇರಿಗೆ ರೂ.5 (ಮು.ಬೆ. ರೂ.5), ವರ್ದಮಾನ್ ಟೆಕ್ಸ್ ಟೈಲ್ ಪ್ರತಿ ಷೇರಿಗೆ ರೂ.11, ಸುದರ್ಶನ ಕೆಮಿಕಲ್ಸ್ ಪ್ರತಿ ಷೇರಿಗೆ ರೂ.15,

ಮ್ಯಾಕ್ಲಿಯಾಡ್ ರಸ್ಸಲ್ ಪ್ರತಿ ಷೇರಿಗೆ ರೂ.7 (ಮು.ಬೆ. ರೂ.5), ಅನೂಹ್ ಫಾರ್ಮಾ ಪ್ರತಿ ಷೇರಿಗೆ ರೂ.6.50, ಐಟಿಸಿ ಪ್ರತಿ ಷೇರಿಗೆ ರೂ.6, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿ ಷೇರಿಗೆ ರೂ.15, ಶಾರದ ಮೋಟಾರ್ಸ್ ಪ್ರತಿ ಷೇರಿಗೆ ರೂ.5, ನೋವಾರ್ಟಿಸ್ ಪ್ರತಿ ಷೇರಿಗೆ ರೂ.10 (ಮು.ಬೆ. ರೂ.5), ಕಮ್ಮಿನ್ಸ್ ಇಂಡಿಯಾ ಪ್ರತಿ ಷೇರಿಗೆ ರೂ.8, (ಮು.ಬೆ. ರೂ.2), ಟೆಕ್ನೊಕ್ರಾಫ್ಟ್ ಇಂಡಸ್ಟ್ರೀಸ್ ಪ್ರತಿ ಷೇರಿಗೆ ರೂ.5, ಜೋಸ್ಟ್ ಎಂಜಿನಿಯರಿಂಗ್ ಪ್ರತಿ ಷೇರಿಗೆ ರೂ.12.50 ಲಾಭಾಂಶ ವಿತರಿಸಲಿವೆ.

ಹೊಸ ಷೇರು
* ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಆಧುನಿಕ್ ಇಂಡಸ್ಟ್ರೀಸ್ ಲಿ.ನ ಷೇರು ಮೇ 26ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

* ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ಲೀಸ್ಟಿಂಗ್ ಆಗಿರುವ ಬಿರ್ದಿ ಚಂದ್ ಪನ್ನಾಲಾಲ್ ಏಜೆನ್ಸೀಸ್ ಲಿ. ಕಂಪೆನಿಯ ಷೇರು ಇದೇ 26ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

* ದೆಹಲಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ‘ಎಫ್ ಎಂಟರ್‌ಪ್ರೈಸಸ್ ಲಿ.’ನ ಷೇರು ಶುಕ್ರವಾರದಿಂದ ಮುಂಬೈ ಷೇರು ವಿನಿಮಯ ಕೇಂದ್ರದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಬೋನಸ್ ಷೇರು
* ಶ್ರೀ ನೂಜ್ ಅಂಡ್ ಕೊ ಕಂಪೆನಿಯು ಪ್ರತಿ ಷೇರಿಗೆ ಒಂದರಂತೆ (1:1) ಬೋನಸ್ ಷೇರು ಪ್ರಕಟಿಸಿದೆ.

* ಅಡಿ ಫೈನ್ ಕೆಂ ಕಂಪೆನಿ 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ (ಪ್ರತಿ 10 ಷೇರಿಗೆ ಒಂದರಂತೆ)

* ‘ಎಸ್ಎಂಇ’ ವಲಯದ (ಎಂ ಗುಂಪಿನ) ಎಸ್‌ಆರ್‌ಜಿ ಫೈನಾನ್ಸ್ 2:5ರ ಅನುಪಾತದ ಬೋನಸ್ ಷೇರಿಗೆ ಮೇ 30, ನಿಗದಿತ ದಿನವಾಗಿದೆ.

* ಎಂ. ಗುಂಪಿನ ಸಂಗಂ ಅಡ್ವೈಸರ್ಸ್ ಇದೇ 28ರಂದು ಮತ್ತು ಕ್ಯಾಪ್ಟನ್ ಪೊಲಿಕಾಸ್ಟ್ ಮೇ 30ರಂದು ಬೋನಸ್ ಷೇರು ವಿತರಣೆ ವಿಚಾರ ಪರಿಶೀಲಿಸಲಿದೆ.

ಹಕ್ಕಿನ ಷೇರು
ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಮೇ 24 ರಂದು ಹಕ್ಕಿನ ಷೇರು ವಿತರಣೆಯನ್ನು ಪರಿಶೀಲಿಸಲಿದೆ.
ಮುಖಬೆಲೆ ಸೀಳಿಕೆ

* ಡೈನಮಿಕ್ ಪ್ರಾಡಕ್ಟ್ಸ್ ಲಿ. ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ.10ರಿಂದ ರೂ.1ಕ್ಕೆ ಸೀಳಿಕೆ ಮಾಡುವ ವಿಚಾರವಾಗಿ ಮೇ 29ರಂದು ನಿರ್ಧಾರ ಕೈಗೊಳ್ಳಲಿದೆ.

* ಪಿಎಂಸಿ ಫೈನ್‌ಕಾರ್ಪ್ ಕಂಪೆನಿಯು ಷೇರಿನ ಮುಖಬೆಲೆ ಸೀಳಿಕೆ, ಸದ್ಯದ ರೂ.5 ರಿಂದ ರೂ.1ಕ್ಕೆ ಬರಲಿದ್ದು, ಮೇ 30ರಂದು ನಿರ್ಧಾರವಾಗಲಿದೆ.

* ಟಿ ವಿಭಾಗದ ಟ್ರಿನಿಟಿ ಟ್ರೇಡ್ ಲಿಂಕ್ಸ್ ಕಂಪೆನಿ ಷೇರಿನ ಮುಖಬೆಲೆಯನ್ನು ರೂ.10ರಿಂದ ರೂ.1ಕ್ಕೆ ಸೀಳಲು ಇದೇ 26ರಂದು ನಿರ್ಧರಿಸಲಿದೆ.

ಕಂಪೆನಿಗಳ ವಿಲೀನ
ಲಿಬರ್ಟಿ ಫಾಸ್ಟೇಟ್ ಕಂಪೆನಿಯು ಕೋರಮಂಡಲ್ ಇಂಟರ್‌ನ್ಯಾಷನಲ್ 8:7ರ ಅನುಪಾತದಲ್ಲಿ ವಿಲೀನಗೊಳ್ಳಲು ಮೇ 29 ನಿಗದಿತ ದಿನವಾಗಿದ್ದು 28 ರಿಂದ ಲಿಬರ್ಟಿ ಫಾಸ್ಟೇಟ್ ಷೇರು ವಹಿವಾಟಾಗುವುದಿಲ್ಲ.

ವಾರದ ವಿಶೇಷ
ಷೇರುಪೇಟೆಯು ಕೇಂದ್ರದಲ್ಲಿ ರಚಿತವಾಗುತ್ತಿರುವ ಹೊಸ ಸರ್ಕಾರದಿಂದ ಆರ್ಥಿಕ ಅಭಿವೃದ್ಧಿ; ವ್ಯವಹಾರಿಕ ಚಟುವಟಿಕೆ ವೃದ್ಧಿ ಆಗಬಹುದೆಂಬ ನಿರೀಕ್ಷೆಯ ಕಾರಣ ಉತ್ತೇಜಿತಗೊಂಡಿದೆ. ಹಿಂದಿನವಾರವಷ್ಟೇ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕವು 25 ಸಾವಿರ ಅಂಶಗಳನ್ನು ತಲುಪಿ ದಾಖಲೆ ನಿರ್ಮಿಸಿದ ನಂತರ ಮಧ್ಯಮ ಶ್ರೇಣಿ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳ ಪಟ್ಟಿಯ ಕಂಪೆನಿಗಳ ಷೇರುಗಳು, ಕೊಳ್ಳುವ ಭರಾಟೆಯ ಕಾರಣದಿಂದಾಗಿ ಹೆಚ್ಚಿನ ಏರಿಕೆ ಪ್ರದರ್ಶಿಸಿವೆ.

ಬಹುತೇಕ ಅಲ್ಪ ಬೆಲೆಯ, ಟಿ ಗುಂಪಿನ ಷೇರುಗಳು ಹೆಚ್ಚಿನ ಏರಿಕೆಯನ್ನು ದಾಖಲಿಸಿವೆ. ಇಂತಹ ಸಂದರ್ಭದಲ್ಲಿ ಸಣ್ಣ ಹೂಡಿಕೆದಾರರು ಅಲ್ಪ ಮೌಲ್ಯದ ಷೇರುಗಳನ್ನು ಕೊಳ್ಳಲು ಆಸಕ್ತರಾಗುವರು. ಇಲ್ಲಿ ಅವರು ತುಲನಾತ್ಮಕ ಹೂಡಿಕೆ ವಿಧಾನ ಅಳವಡಿಸಿಕೊಂಡರೆ ಮಾತ್ರ ಹೂಡಿಕೆ ಸುಭದ್ರ. ಷೇರುಪೇಟೆಯಲ್ಲಿ ಪ್ರತಿ ಏರಿಕೆಯ ಸಂದರ್ಭದಲ್ಲಿ ಸಣ್ಣ ಹೂಡಿಕೆದಾರರು ಪ್ರವೇಶಿಸಿ ಬಾಧೆ ಪಡುತ್ತಾರೆ.

2008ರ ಜನವರಿಯಲ್ಲಿ ಮಧ್ಯಮ ಶ್ರೇಣಿಯ ಸೂಚ್ಯಂಕವು 10,24 5 ಅಂಶಗಳ ಸರ್ವಕಾಲೀನ ಗರಿಷ್ಠ ತಲುಪಿ ದಾಖಲೆ ನಿರ್ಮಿಸಿತು. ಆದರೆ ಕೇವಲ 14 ತಿಂಗಳಲ್ಲಿ ಅಂದರೆ ಮಾರ್ಚ್ 2009ರಲ್ಲಿ ಮಧ್ಯಮ ಶ್ರೇಣಿ ಸೂಚ್ಯಂಕವು 2,5 7 ಅಂಶಗಳಿಗೆ ಕುಸಿದು ಹೆಚ್ಚಿನ ಹೂಡಿಕೆದಾರರು, ಹೂಡಿಕೆ ನಿಧಿ ನಿರ್ವಹಣೆ ಸಂಸ್ಥೆಗಳಿಗೆ ಆಘಾತವನ್ನುಂಟು ಮಾಡಿತು. ಈಗ 8,677 ಅಂಶಗಳಿಗೆ ತಲುಪಿರುವ ಸಂದರ್ಭದಲ್ಲಿ ವಹಿವಾಟಿನಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ.

ಇನ್ನು ಕೆಳಮಧ್ಯಮ ಶ್ರೇಣಿಯ ಸೂಚ್ಯಂಕವು 2008ರ ಜನವರಿಯಲ್ಲಿ 14 ,239 ಅಂಶಗಳಿಗೆ ತಲುಪಿ ದಾಖಲೆ ನಿರ್ಮಿಸಿತಾದರೂ ಮಾರ್ಚ್ 2009 ರಲ್ಲಿ ಕೇವಲ 2,854 ಅಂಶಗಳಿಗೆ ಕುಸಿದು ಆತಂಕಕ್ಕೀಡುಮಾಡಿತು. ಕೇವಲ ಸಣ್ಣ ಹೂಡಿಕೆದಾರರು ಮಾತ್ರವಲ್ಲ ನಿಧಿ ಗೃಹಗಳು, ವಿತ್ತೀಯ ಸಂಸ್ಥೆಗಳೂ ಸಹ ಹೆಚ್ಚಿನ ಹಾನಿಗೊಳಗಾಗಿವೆ. ಈಗ ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 9,152 ಅಂಶಗಳಿಗೆ ಏರಿಕೆ ಕಂಡಿದ್ದು ಹೂಡಿಕೆದಾರರು ಉತ್ತಮ ಕಂಪೆನಿಗಳಲ್ಲಿ ಮಾತ್ರ ವಹಿವಾಟು ಸೀಮಿತಗೊಳಿಸಿ. ಈ ಏರಿಕೆಯ ಅವಕಾಶವನ್ನು ಕಳಪೆ ಷೇರುಗಳಿಂದ ನಿರ್ಗಮಿಸಲು ಉಪಯೋಗಿಸಿಕೊಳ್ಳಬೇಕು.

2008ರಲ್ಲಿ ಹೂಡಿಕೆ ಮಾಡಿರುವ ಅನೇಕ ಕಂಪೆನಿಗಳ ಆಗಿನ ಬೆಲೆಗಳು ಇನ್ನೂ ತಲುಪದೇ ಇದ್ದು, ವಿತ್ತೀಯ ಸಂಸ್ಥೆಗಳು ಅಲ್ಪ ಮೌಲ್ಯದ ಜೊಳ್ಳು ಕಂಪೆನಿಗಳಿಂದ ಹೊರಬರಲು ಹಾತೊರೆಯುತ್ತಿರುತ್ತವೆ. ಹಾಗಾಗಿ ಸಣ್ಣ ಹೂಡಿಕೆದಾರರು ಅಲ್ಪ ಬೆಲೆಯ ‘ಪಿನ್ನಿ’ ಷೇರುಗಳನ್ನು ಮಾರಾಟ ಮಾಡಿ ಆ ಹಣವನ್ನು ಉತ್ತಮ ಬೃಹತ್ ಕಂಪೆನಿಗಳತ್ತ ತಿರುಗಿಸುವುದು ಕ್ಷೇಮ.

ಉತ್ತಮವಾದ ಕಂಪೆನಿಗಳಲ್ಲಿ ಮಾತ್ರ ವಹಿವಾಟು ನಡೆಸಿ, ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪೆನಿಗಳಲ್ಲಿ ಅಧಿಕ ಲಾಭ ಬಂದಾಗ ಹೊರಬಂದು ಮತ್ತೊಂದು ಉತ್ತಮ ಕಂಪೆನಿಗೆ ಬದಲಾಯಿಸಿಕೊಳ್ಳುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.