ಕಳೆದ ಶುಕ್ರವಾರದಂದು ರೂಪಾಯಿ ಮೌಲ್ಯ ಡಾಲರ್ ವಿರುದ್ಧ ರೂ 62 ತಲುಪಿ ದಾಖಲೆ ನಿರ್ಮಿಸಿದೆ. ಸೋಮವಾರದಿಂದ ಬುಧವಾರದವರೆಗೂ ಏರಿಕೆ ಕಂಡ ಸಂವೇದಿ ಸೂಚ್ಯಂಕ ವಾರಾಂತ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿಯಿತು. ರೂಪಾಯಿ ಅಪಮೌಲ್ಯ ಕಾರಣ ಸೂಚ್ಯಂಕ ಇಳಿಕೆ ಕಂಡರೆ ಚಿನ್ನ-ಬೆಳ್ಳಿಗಳು ಕ್ರಮವಾಗಿ ಶೇ 4, ಶೇ 7 ರಷ್ಟು ಏರಿಕೆಯಿಂದ ವಿಜೃಂಭಿಸಿದವು.

ಅಂದು ಬ್ಯಾಂಕಿಂಗ್ ವಲಯದ ಕಂಪೆನಿಗಳು ತತ್ತರಿಸಿದವು. ಆ ವಲಯದ ಸೂಚ್ಯಂಕ 634 ಅಂಶಗಳಷ್ಟು ಕುಸಿದರೆ, ಕನ್ಸೂಮರ್ಸ್ ಡ್ಯೂರೆಬಲ್ ಸೂಚ್ಯಂಕ 539 ಅಂಶ ಇಳಿಯಿತು. ಮೆಟಲ್ ಇಂಡೆಕ್ಸ್, ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕ, ಆಯಿಲ್ ಅಂಡ್ ಗ್ಯಾಸ್ ಸೂಚ್ಯಂಕ, ಎಫ್‌ಎಂಸಿಜಿ ಸೂಚ್ಯಂಕ. ಮುಂತಾದವು ಹೆಚ್ಚಿನ ಒತ್ತಡದಿಂದ ಕುಸಿತ ಕಂಡವು. ಆಕ್ಸಿಸ್ ಬ್ಯಾಂಕ್‌ನ್ನು ಎಂಎಸ್‌ಸಿ ಇಂಡೆಕ್ಸ್‌ನಿಂದ ತೆಗೆದು ಹಾಕಿದ್ದರಿಂದ ಕುಸಿಯಿತು.

ವಾರದ ವಿಶೇಷ
ಹೂಡಿಕೆದಾರರೊಬ್ಬರು ಕೇಳಿದ ಪ್ರಶ್ನೆ ಹೀಗಿದೆ. ಈ ತಿಂಗಳ 5 ರಂದು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಓರ್ವ ವಿಶ್ಲೇಷಕರು ಟಾಟಾ ಸ್ಟೀಲ್‌ನ್ನು ಮಾರಾಟ ಮಾಡಲು ಶಿಫಾರಸು ಮಾಡಿದರೆ ಅದೇ ದಿನ ಮತ್ತೋರ್ವ ವಿಶ್ಲೇಷಕರು ಟಾಟಾ ಸ್ಟೀಲ್‌ನ್ನು ಬೆಲೆ ಇಳಿಕೆಯಲ್ಲಿ ಕೊಳ್ಳಲು ಶಿಫಾರಸು ಮಾಡಿದರು.

ಸಾಮಾನ್ಯ ಹೂಡಿಕೆದಾರರಾದ ನಾವು ಯಾವುದನ್ನು ಅನುಸರಿಸಬೇಕು ಎಂಬುದು ಅವರ ಪ್ರಶ್ನೆ
ಇದರಲ್ಲಿ ಮೊದಲನೆಯ ವಿಶ್ಲೇಷಕರು ಅನುಸರಿಸಿದ ರೀತಿಯು ಪಾರಿಭಾಷಿಕ ವಿಧವಾದರೆ ಎರಡನೇ ವಿಶ್ಲೇಷಕರು ಅನುಸರಿಸಿದ ರೀತಿಯು ಮೂಲಭೂತಾಧಾರಿತವಾದುದಾಗಿದೆ.

ಅಂದರೆ ಕೇವಲ ಪೇಟೆಯಲ್ಲುಂಟಾಗುವ ದರಗಳ ಏರಿಳಿಕೆಯಿಂದ ಶಿಫಾರಸು ಮಾಡುವವರ ಪಾರಿಭಾಷಿಕ ರೀತಿ, ವಿಶ್ಲೇಷಿಸಿದ ರೀತಿ ಮೂಲಭೂತ ಅಂಶಗಳ ವಿಶ್ಲೇಷಣೆಯಾಗುತ್ತದೆ. ಮುಖ್ಯವಾಗಿ ಸಣ್ಣ ಹೂಡಿಕೆದಾರರು ಯಾವ ವಿಧದ ವಿಶ್ಲೇಷಣೆಯನ್ನಾಧರಿಸಿ ಹೂಡಿಕೆಗೆ ಮುಂದಾಗಿದ್ದಾರೆ ಎಂಬುದರ ಅರಿವಿರಬೇಕಾದುದು ಅತ್ಯವಶ್ಯಕ.

ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಇಳಿಕೆ ಕಂಡಂತಹ ರಯಾನ್‌ಬಾಕ್ಸಿ ಲ್ಯಾಬ್, ಟಾಟಾಸ್ಟೀಲ್, ಗೀತಾಂಜಲಿ ಜೆಮ್ಸ, ಎಂ.ಎಂ.ಟಿ.ಸಿ., ಹಿಂದೂಸ್ಥಾನ್ ಕಾಪರ್‌ಗಳು, ಹೆಚ್ಚಿನ ವೇಗದಲ್ಲಿ ಏರಿಕೆ ಕಾಣುತ್ತಿವೆ.

ಕಂಪೆನಿಯ ಷೇರಿನ ದರಗಳು ಆ ಕಂಪೆನಿಯು ಅಗ್ರಮಾನ್ಯ ಕಂಪೆನಿಯಾಗಿದ್ದಲ್ಲಿ, ಹೆಚ್ಚಿನ ಕುಸಿತಕ್ಕೊಳಗಾಗಿದ್ದಲ್ಲಿ ಅಂತಹ ಕಂಪೆನಿಗಳು ಮೌಲ್ಯಾಧಾರಿತ ಕೊಳ್ಳುವಿಕೆಯಾಗಿ ಉತ್ತಮ ಲಾಭಗಳಿಸಿ ಕೊಡುವ ಅವಕಾಶಗಳು ಹೆಚ್ಚಾಗಿರುತ್ತದೆ.

ಅದೇ ರೀತಿ ಅತ್ಯಂತ ಹೆಚ್ಚಿನ ಏರಿಕೆ ಕಂಡಂತಹ ಕಂಪೆನಿಗಳು ಎಷ್ಟೇ ಸುಭದ್ರವಾದರೂ ವಿತ್ತೀಯ ಸಂಸ್ಥೆಗಳು ಲಾಭದ ನಗದೀಕರಣಕ್ಕೆ ಮುಂದಾಗುವುರಿಂದ ಇಳಿಕೆ ಕಾಣುವುದು ಸಹಜ.

ಉದಾಹರಣೆಗೆ ಜುಲೈ ಅಂತ್ಯದಲ್ಲಿ ರೂ750ರ ಸಮೀಪವಿದ್ದ ಹ್ಯಾವೆಲ್ ಇಂಡಿಯಾ ಆಗಸ್ಟ್ ಮೊದಲ ವಾರದಲ್ಲಿ ರೂ 600ರ ಸಮೀಪಕ್ಕೆ ಕುಸಿಯಿತು.

ಅದೇ ರೀತಿ ಏಷಿಯನ್ ಪೇಂಟ್ಸ್ ರೂ526ರ ಸಮೀಪ ಜುಲೈ ಅಂತ್ಯದಲ್ಲಿದ್ದು ಆಗಸ್ಟ್ ಮೊದಲ ವಾರದ ಅಂತ್ಯದಲ್ಲಿ ರೂ420ರ ಸಮೀಪಕ್ಕೆ ಕುಸಿಯಿತು.

ಇದೇ ರೀತಿಯ ಏರಿಳಿತಗಳನ್ನು ಇತ್ತೀಚೆಗೆ ಹಿಂದೂಸ್ಥಾನ್ ಯುನಿ ಲೀವರ್ಸ್, ಐ.ಟಿ.ಸಿ., ಹಿಂಡಾಲ್ಕೊ ಇಂಡಸ್ಟ್ರೀಸ್, ಸಿಪ್ಲಾ, ಮುಂತಾದ ಕಂಪೆನಿಗಳಲ್ಲಿ ಕಂಡಿದ್ದೇವೆ.

ಹಿಂದಿನವಾರದ ಅಂಕಣದಲ್ಲಿ ತಿಳಿಸಿದಂತೆ ಷೇರಿನ ದರಗಳು ಹೆಚ್ಚು ಇಳಿಕೆ ಕಂಡಾಗ, ಹೂಡಿಕೆದಾರರಿಗೆ ಅದರಲ್ಲೂ ದೀರ್ಘಕಾಲೀನ ಹೂಡಿಕೆದಾರರಿಗೆ ಒಳ್ಳೆಯ ಕಂಪೆನಿಗಳನ್ನು ಆಕರ್ಷಕ ಬೆಲೆಯಲ್ಲಿ ಕೊಳ್ಳಲು ಅಪೂರ್ವ ಅವಕಾಶ ಒದಗಿಸುತ್ತವೆ.

ಈ ಪೇಟೆಯಲ್ಲಿ ಬಲಾಢ್ಯ ವಿತ್ತೀಯ ಸಂಸ್ಥೆಗಳು ಹೆಚ್ಚು ಚಟುವಟಿಕೆ ಭರಿತವಾಗಿರುವುದರಿಂದ ಏರಿಕೆ ಆಥವಾ ಇಳಿಕೆಯ ವೇಗವೂ ಹೆಚ್ಚಿರುತ್ತದೆ. ಹೆಚ್ಚಿನ ಬಾರಿ ಇಳಿಕೆಯಲ್ಲಿರುವಾಗ ಮಾರಾಟ ಮಾಡಲು ಅಸಾಧ್ಯ ಮತ್ತು ಏರಿಕೆಯಲ್ಲಿರುವಾಗ ಕೊಳ್ಳಲು ಅಸಾಧ್ಯ.

ಇಂತಹ ವಾತಾವರಣದಲ್ಲಿ ನಮ್ಮ ಹೂಡಿಕೆಯ ಸುರಕ್ಷತೆಗಾಗಿ ಪೇಟೆಯು ಅನಿರೀಕ್ಷಿತ ಮಟ್ಟದ ಲಾಭದೊರಕಿಸಿ ಕೊಟ್ಟಾಗ ನಗದೀಕರಿಸಿಕೊಳ್ಳುವುದು ಅತ್ಯವಶ್ಯ. ಕಂಪೆನಿಗಳಾದ ಎಂ.ಎಂ.ಟಿ.ಸಿ. ಗೀತಾಂಜಲಿ ಜೆಮ್ಸ, ವೊಕಾರ್ಡ್, ದಿನನಿತ್ಯ ಆರಂಭದಲ್ಲಿಯೇ ಆವರಣ ಮಿತಿಯಲ್ಲಿರುವುದರಿಂದ ಇಳಿಕೆಯಲ್ಲಿ ಮಾರಾಟ ಮಾಡಲಾಗಿದೆ. ಈಗಿನ ವಾತಾವರಣದಲ್ಲಿ ಸಕಾಲಿಕ ನಿರ್ಧಾರವೊಂದೇ ರಾಮಭಾಣ.

ಸಣ್ಣ ಹೂಡಿಕೆದಾರರು ಸಾಮೂಹಿಕವಾಗಿ ಉತ್ತಮ ಕಂಪೆನಿಗಳ ಕೊಳ್ಳುವಿಕೆಯ ಮೂಲಕ ಪೇಟೆ ಪ್ರವೇಶಿಸಿದರೆ ಸ್ಥಿರತೆಯು ಶತಸಿದ್ಧ. ವಿತ್ತೀಯ ಸಂಸ್ಥೆಗಳಿಂದುಂಟಾಗುತ್ತಿರುವ ಅಬ್ಬರದ ಏರಿಳಿತಕ್ಕೆ ಇದೊಂದೇ ಪರಿಹಾರ.

ವೊಕಾರ್ಡ್ ಪ್ರವರ್ತಕರು 6.97 ಲಕ್ಷ ಒತ್ತೆ ಇಟ್ಟಿದ್ದ ಷೇರುಗಳನ್ನು ಬಿಡುಗಡೆ ಮಾಡಿಕೊಂಡಿರುವ ಸುದ್ದಿಯು ಷೇರಿನ ಬೆಲೆಯನ್ನು ಶೇ 5 ರಷ್ಟು ಏರಿಕೆ ಕಾಣುವಂತೆ ಮಾಡಿತು. ಟೈಟಾನ್ ಇಂಡಸ್ಟ್ರೀಸ್ ಶೇ 12 ರಷ್ಟು ಕುಸಿತ ಶುಕ್ರವಾರ ಕಂಡರೆ, ರಿಲಯನ್ಸ್ ಕಮ್ಯುನಿಕೇಷನ್, ಫ್ಯೂಚರ್ ರೀಟೇಲ್ ಶೇ 11ಕ್ಕೂ ಹೆಚ್ಚಿನ ಇಳಿಕೆ ಕಂಡವು.

ಕಂಪೆನಿಗಳಾದ ಬಿಎಚ್‌ಇಎಲ್, ಎಸ್‌ಬಿಐ, ಗ್ರಾಸಿಂ, ಫೆಡರಲ್ ಬ್ಯಾಂಕ್, ಕೆನರಾ ಬ್ಯಾಂಕ್, ಲಾರ್ಸನ್ ಅಂಡ್ ಟ್ಯೂಬ್ರೊ, ಸಿಂಡಿಕೇಟ್ ಬ್ಯಾಂಕ್‌ನಂತಹ ಅಗ್ರಮಾನ್ಯ ಕಂಪೆನಿಗಳು ವಾರ್ಷಿಕ ಕನಿಷ್ಠ ಮಟ್ಟಕ್ಕೆ ಕುಸಿದು ದಾಖಲೆ ನಿರ್ಮಿಸಿದವು. ಕೇವಲ ಸೂಚ್ಯಂಕದಿಂದ ತೆಗೆದುಹಾಕಿದ್ದಕ್ಕೆ ಶೇ 8 ರಷ್ಟು ಕುಸಿತ, ಅಡವಿಟ್ಟ ಷೇರು ಬಿಡಿಸಿಕೊಂಡ ಕಾರಣಕ್ಕೆ ಶೇ 5 ರಷ್ಟು ಏರಿಕೆ, ಹೀಗೆ ಬಾಹ್ಯ ಕಾರಣಗಳಿಗೆ ಷೇರಿನ ಬೆಲೆಗಳು ಅಸಾಮಾನ್ಯ ರೀತಿ ವ್ಯತ್ಯಾಸವಾದವು.

ಕಂಪೆನಿಗಳ ಆಂತರಿಕ ಸಾಧನೆಗಳಿಗೂ ಇದಕ್ಕೂ ಸಂಬಂಧ ಇದಂತಾಗಿದೆ. ವಿತ್ತೀಯ ಸಂಸ್ಥೆಗಳ ಈ ಮಾರಾಟದ ಭರಾಟೆಯಿಂದ ನವರತ್ನ ಕಂಪೆನಿಗಳೂ ಸಹ ಕಳಾಹೀನವಾಗಿವೆ. ಈ ಹಿಂದೆ ಫಾರಿನ್ ಕರೆನ್ಸಿ ಕನ್ವರ್ಟಬಲ್ ಬಾಂಡ್ ವಿತರಿಸಿ, ಪರಿವರ್ತನೆ ಬೆಲೆಯನ್ನು ಅತಿ ಹೆಚ್ಚಾಗಿ ನಿಗದಿಪಡಿಸಿದ ಕಾರಣ, ಅನೇಕ ಮಧ್ಯಮ ಹಾಗೂ ಕೆಳಮಧ್ಯಮ ಶ್ರೇಣಿ ಕಂಪೆನಿಗಳು ಭಾರಿ ಕುಸಿತ ಕಂಡು ಈಗಲೂ ಚೇತರಿಕೆ ಕಾಣದಾಗಿವೆ.

ಅದೇ ರೀತಿಯ ವಾತಾವರಣವನ್ನು, ಈಗ ವಿದೇಶಿ ವಿತ್ತೀಯ ಸಂಸ್ಥೆಗಳ ಭಾಗಿತ್ವ ಹೆಚ್ಚಿಸಿಕೊಂಡಿರುವ ಕಂಪೆನಿಗಳು ಎದುರಿಸಬೇಕಾದ ಪರಿಸ್ಥಿತಿ ಬಂದರೆ ಅಚ್ಚರಿಯಲ್ಲ. ಅತಿ ಹೆಚ್ಚು ವಿದೇಶಿ ಭಾಗಿತ್ವವು ಕಂಪೆನಿಗಳ ಷೇರಿನ ಬೆಲೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವುದರಿಂದ ಅತಿಸೂಕ್ಷ್ಮತೆಯನ್ನು ಕಾಣಬಹುದು.

ಒಟ್ಟಾರೆ ಕಳೆದ ವಾರದಲ್ಲಿ ಸಂವೇದಿ ಸೂಚ್ಯಂಕವು 191 ಅಂಶಗಳಷ್ಟು ಇಳಿಕೆಯಿಂದ 18,598 ಅಂಶಗಳನ್ನು ತಲುಪಿದರೆ ಮಧ್ಯಮ ಶ್ರೇಣಿ ಸೂಚ್ಯಂಕವು 29 ಅಂಶಗಳಷ್ಟು ಏರಿಕೆ ಕಂಡಿದೆ. ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 35 ಅಂಶ ಏರಿಕೆ ಕಂಡಿದೆ. ವಿದೇಶಿ ವಿತ್ತೀಯ ಸಂಸ್ಥೆಗಳು ಈ ವಾರದಲ್ಲಿ ರೂ320 ಕೋಟಿ ಹೂಡಿಕೆ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ರೂ1,355 ಕೋಟಿ ಹೂಡಿಕೆ ಮಾಡಿವೆ. ಷೇರುಪೇಟೆಯ ಬಂಡವಾಳ ಮೌಲ್ಯವು ಹಿಂದಿನವಾರದ ರೂ60.95 ಲಕ್ಷ ಕೋಟಿಯಿಂದ ರೂ60.73 ಲಕ್ಷ ಕೋಟಿಗೆ ಇಳಿದಿದೆ.

ಹೊಸ ಷೇರಿನ ವಿಚಾರ
* ಅಲಾಕ್ವಿಟಿ ಸೆಕ್ಯುರಿಟೀಸ್ ಲಿಮಿಟೆಡ್, ಮುಂಬೈನ ಎಸ್.ಎಂ.ಇ. ವಲಯದ ಕಂಪೆನಿ ಇತ್ತೀಚೆಗೆ ರೂ15/- ರಂತೆ ಸಾರ್ವಜನಿಕ ವಿತರಣೆ ಮಾಡಿದ್ದು 14 ರಿಂದ ಬಿಎಸ್‌ಇಯ ಎಂಟಿ ಗುಂಪಿನಲ್ಲಿ 8,000 ಸಾವಿರ ವಹಿವಾಟು ಗುಚ್ಚದಿಂದ, ವಹಿವಾಟಿಗೆ ಬಿಡುಗಡೆಯಾಗಿದೆ.

* ಜಿಸಿಎಂ ಕಮ್ಮಾಡಿಟೀಸ್ ಅಂಡ್ ಡೆಲಿವೆಟಿವ್ಸ್ ಲಿ. ಕೊಲ್ಕತ್ತಾದ ಎಂ.ಎಸ್.ಇ. ವಲಯದ ಕಂಪೆನಿಯಾಗಿದ್ದು ಇತ್ತೀಚೆಗೆ ಪ್ರತಿ ಷೇರಿಗೆ ರೂ20/- ರಂತೆ ಸಾರ್ವಜನಿಕ ವಿತರಣೆ ಮಾಡಿದ್ದು 14 ರಿಂದ, 6,000 ಷೇರುಗಳ ವಹಿವಾಟು ಗುಚ್ಚದಿಂದ ಎಂಟಿ ಗುಂಪಿನಲ್ಲಿ ಚಟುವಟಿಕೆಗೆ ಬಿಡುಗಡೆಯಾಗಿದೆ.

* ಅಹ್ಮದಾಬಾದ್ ಗ್ಯಾಸಸ್ ಲಿ. ನಲ್ಲಿ ಎಕ್ಸೆಲ್ ಕ್ಯಾಸ್ಟ್ರಾನಿಕ್ಸ್ ಲಿ., ಮತ್ತು ಇಂಡಸ್ ಕಾಯಿಲ್ಸ್ ಅಂಡ್ ಪ್ಲೇಟ್ಸ್ ಲಿ. ಕಂಪೆನಿಗಳು, ಗುಜರಾತ್ ಹೈಕೋರ್ಟ್‌ನ ಅನುಮತಿಯಿಂದ ವಿಲೀನಗೊಂಡಿದ್ದು, ಕಂಪೆನಿಯ ಹೆಸರನ್ನು ಅಹ್ಮದಾಬಾದ್ ಗ್ಯಾಸಸ್ ಲಿ.ನಿಂದ ಎಕ್ಸೆಲ್ ಕ್ಯಾಸ್ಟ್ರಾನಿಕ್ಸ್ ಲಿ. ಎಂದು ಬದಲಿಸಿಕೊಂಡು ಹೊಸ ಅವತಾರದಲ್ಲಿ 14 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

* ಮುರಾರ್ಜಿ ಟೆಕ್ಸ್‌ಟೈಲ್ಸ್ ಲಿ.ನ ಇಂಟೆಗ್ರಾ ವಿಭಾಗವನ್ನು ಬೇರ್ಪಡಿಸಿ ಇಂಟೆಗ್ರಾ ಗಾರ್ಮೆಂಟ್ಸ್ ಅಂಡ್ ಟೆಕ್ಸ್‌ಟೈಲ್ಸ್ ಲಿ.ನಲ್ಲಿ ವಿಲೀನಗೊಳಿಸಿ ರೂ. 3ರ ಬೆಲೆಯ ಈ ಷೇರನ್ನು 1:1ರ ಅನುಪಾತದಲ್ಲಿ ಹೊಸ ಷೇರು ವಿತರಿಸಲಾಗಿದೆ. ಈ ಹೊಸ ಇಂಟೆಗ್ರಾ ಗಾರ್ಮೆಂಟ್ಸ್ ಅಂಡ್ ಟೆಕ್ಸ್‌ಟೈಲ್ಸ್ ಲಿ. 20 ರಂದು ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಲಾಭಾಂಶ ವಿಚಾರ
ಆಂಧ್ರ ಶುಗರ್ಸ್ ಶೇ 60, ಅಟ್ಲಾಸ್ ಸೈಕಲ್ ಶೇ 45, ಕ್ರೆಡಿಟ್ ಅನಾಲಿಸಿಸ್ ಅಂಡ್ ರಿಸರ್ಚ್ ಶೇ 60, ಫೊಸೆಕೊ ಶೇ 30, ಮನಕ್ಸಿಯಾ ಶೇ 20, ಮಯೂರ್ ಯುನಿಕೋಟರ್ಸ್ ಶೇ 22.5, ಪ್ರಾಕ್ಟರ್ ಅಂಡ್ ಗ್ಯಾಂಬಲ್ ಶೇ 250, ನ್ಯೂಸೆಂಟ್ ಫೈನಾನ್ಸ್ ಶೇ 40 (ಮು.ಬೆ. ರೂ2).

ಗಮನಿಸಿ: ಆಂಧ್ರ ಶುಗರ್ಸ್ ಶೇ 60ರ ಲಾಭಾಂಶವನ್ನು 13 ರಂದು ಸಂಜೆ ಪ್ರಕಟಿಸಿ, 17ನೇ ಆಗಸ್ಟ್ ನಿಗದಿತ ದಿನವನ್ನಾಗಿ ಘೋಷಿಸಿ, 14 ರಿಂದ ನಡೆಯುವ ವಹಿವಾಟು ಲಾಭಾಂಶ ರಹಿತ ವಹಿವಾಟಾಗಿದೆ.

ಹಕ್ಕಿನ ಷೇರಿನ ವಿಚಾರ
ಆಪ್ಟೋ ಸರ್ಕ್ಯುಟ್ಸ್ ಕಂಪೆನಿಯು ಪ್ರತಿ ಷೇರಿಗೆ ರೂ 31 ರಂತೆ 1:6ರ ಅನುಪಾತದಲ್ಲಿ ಹಕ್ಕಿನ ಷೇರು ವಿತರಿಸಲಿದೆ. ಪೇಟೆಯಲ್ಲಿ ಷೇರಿನ ಬೆಲೆಯು ರೂ25-26ರ ಸಮೀಪದವಿದ್ದಾಗ ರೂ31 ರಂತೆ ಹಕ್ಕಿನ ಷೇರು ಪ್ರಕಟಿಸಿ, ಕಂಪೆನಿಯು ಹೂಡಿಕೆದಾರ ಸ್ನೇಹಿ ಪಟ್ಟವನ್ನು ಕಳೆದುಕೊಂಡಿದೆ.

ಲಾಭಾಂಶ ನಂತರದ ವಿಶೇಷತೆ
ಮಂಗಳವಾರದಂದು ಇ-ಕ್ಲರ್ಕ್ಸ್ ರೂ 24 ರಷ್ಟು ಇಳಿಕೆ ಕಾಣುವುದಕ್ಕೂ ಮೊದಲು ರೂ34 ರಷ್ಟು ಕುಸಿತ ಕಂಡಿತು. ಇದಕ್ಕೆ ಕಾರಣ ಅಂದಿನಿಂದ ರೂ 25ರ ಲಾಭಂಶ ರಹಿತ ವಹಿವಾಟು ಆರಂಭವಾಗಿದೆ. ಆದರೆ ಲಾರ್ಸನ್ ಅಂಡ್ ಟ್ಯೂಬ್ರೊ ಕಂಪೆನಿಯು ಅಂದು ರೂ 6.45ರ ಏರಿಕೆ ಕಂಡಿದೆ.

ಪ್ರತಿ ಷೇರಿಗೆ ರೂ12.33ರ ಲಾಭಾಂಶದ ನಂತರವೂ ಕಂಡಿರುವ ಈ ಏರಿಕೆಯ ಹಿಂದೆ ಷೇರಿನ ಬೆಲೆಯು ಕಂಡಿರುವ ಕುಸಿತವೇ ಕಾರಣ ಆಗಿದೆ. ಮಾರುತಿ ಗುಜುರಿಯು ಸಹ ಅಂದು ರೂ8ರ ಲಾಭಾಂಶ ನಂತರದ ವಹಿವಾಟಿನಲ್ಲಿ ರೂ 18.65ರ ಏರಿಕೆಯಿಂದ ವಿಜೃಂಭಿಸಿತು.

ಮುಖ ಬೆಲೆ ಸೀಳಿಕೆ
* ಧನಲೀನ ಇನ್ವೆಸ್ಟ್‌ಮೆಂಟ್ಸ್ ಅಂಡ್ ಟ್ರೇಡಿಂಗ್ ಕಂಪೆನಿಯು ಷೇರಿನ ಮುಖ ಬೆಲೆಯನ್ನು ರೂ10 ರಿಂದ ರೂ2ಕ್ಕೆ ಸೀಳಲಿದೆ.
* ಸೆಂಟ್ರಾಸ್ ಇಂಡಸ್ಟ್ರಿಯಲ್ ಅಲೈಯನ್ಸ್ ಲಿ. ಕಂಪೆನಿಯು ಷೇರಿನ ಮುಖ ಬೆಲೆಯನ್ನು ರೂ10 ರಿಂದ ರೂ1ಕ್ಕೆ ಸೀಳಲಿದೆ.
* ಹಸಂಗ್ ಟಾಯ್ಸ ಟೆಕ್ಸ್‌ಟೈಲ್ಸ್ ಷೇರಿನ ಮುಖ ಬೆಲೆ ರೂ10 ರಿಂದ ರೂ. 5ಕ್ಕೆ ಸೀಳಲು ನಿರ್ಧರಿಸಿದ್ದು, ಷೇರಿನ ಬೆಲೆಯು ಕಳೆದ ಒಂದು ತಿಂಗಳಲ್ಲಿ ರೂ 77ರ ಹಂತದಿಂದ ರೂ 20ಕ್ಕೆ ಕುಸಿದಿದೆ. ಕಂಪೆನಿಯ ಸಿ,ಡಿ.ಆರ್. ಕ್ರಮದಿಂದ ಬೆಲೆ ಕುಸಿದಿದೆ. ಈಗಲೂ ಷೇರಿನ ಮುಖ ಬೆಲೆ ರೂ10.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.