ಸಂವೇದಿ ಸೂಚ್ಯಂಕವು ವಾರದ ಮೊದಲ ನಾಲ್ಕು ದಿನಗಳೂ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ದಾಖಲೆ ನಿರ್ಮಿಸಿತು. ಗುರುವಾರ ಕಂಡುಬಂದ 22,620.65 ಅಂಶಗಳೇ ಸದ್ಯ ಗರಿಷ್ಠ ಮಟ್ಟವಾಗಿದೆ. ಈ ರೀತಿಯ ಉತ್ಸಾಹಭರಿತ ಏರಿಕೆ ವಾತಾವರಣದಲ್ಲೂ ಕ್ಯಾಷ್ ವಿಭಾಗದ ವಿಲೇವಾರಿ ವಹಿವಾಟು ಹಾಗೂ ವಹಿವಾಟಿನಲ್ಲಿ ಭಾಗಿಯಾದ ಷೇರುಗಳ ಸಂಖ್ಯೆ ಮಾತ್ರ ಹೆಚ್ಚಿನ ಬದಲಾವಣೆ ತೋರುತ್ತಿರುವುದು ಪೇಟೆಯಲ್ಲಿನ ಚಟುವಟಿಕೆಯು ಕೆಲವೇ ಷೇರುಗಳ ಮೇಲೆ ಕೇಂದ್ರೀಕೃತವಾಗಿದೆ ಎನ್ನುವುದನ್ನು ಎತ್ತಿತೋರುತ್ತಿದೆ.

ಹಿಂದಿನ ವಾರಗಳಲ್ಲಿ ರೂಪಾಯಿಯ ಬೆಲೆ ಡಾಲರ್ ವಿರುದ್ಧ ಏರಿಕೆ ಕಾಣುತ್ತಿದೆ ಎಂಬ ಕಾರಣಕ್ಕಾಗಿ ರಫ್ತು ಆಧಾರಿತ ಕಂಪೆನಿಗಳಾದ ಮಾಹಿತಿ ತಂತ್ರಜ್ಞಾನ ಮತ್ತು ಔಷಧ ತಯಾರಿಕಾ ರಂಗದ ಉದ್ಯಮ ಸಂಸ್ಥೆಗಳ ಷೇರುಗಳು ಮಾರಾಟದ ಒತ್ತಡಕ್ಕೊಳಗಾಗಿದ್ದವು. ಆದರೆ ಹೆಚ್ಚಿನ ಬದಲಾವಣೆ ಇಲ್ಲದಿದ್ದರೂ ಔಷಧ ತಯಾರಿಕೆ ವಿಭಾಗದ ಕಂಪೆನಿಗಳಾದ ಅರವಿಂದೋ ಫಾರ್ಮಾ, ರ್‍್ಯಾನ್‌ಬಕ್ಸಿ ಲ್ಯಾಬ್, ಸ್ಟ್ರೈಡ್‌್ಸ ಅರ್ಕೊಲ್ಯಾಬ್, ವೊಕಾರ್ಡ್, ಗ್ಲೆನ್‌ಮಾರ್ಕ್ ಫಾರ್ಮಾ ಕಂಪೆನಿಗಳ ಷೇರುಗಳು ಆಕರ್ಷಕ ಏರಿಕೆ ದಾಖಲಿಸಿದವು.

ಬ್ಯಾಂಕಿಂಗ್ ವಲಯದ ಪ್ರಮುಖ ಕಂಪೆನಿಗಳಾದ ಯೂನಿಯನ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕಾರ್ಪೊರೇಷನ್ ಬ್ಯಾಂಕ್, ಯುಕೋ ಬ್ಯಾಂಕ್ ಷೇರುಗಳೂ ಸಹ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಪರಾಮರ್ಶೆಯಲ್ಲಿನ ತಟಸ್ಥ ನಿಲುವಿನ ಕಾರಣ ಉತ್ತಮ ಏರಿಕೆ ಕಂಡವು. ಐಡಿಎಫ್‌ಸಿ ಕಂಪೆನಿಗೆ ಬ್ಯಾಂಕಿಂಗ್ ಲೈಸೆನ್‌್ಸ ನೀಡುವ ಬಗ್ಗೆ ಹಸಿರು ನಿಶಾನೆ ದೊರೆತ ಕಾರಣ ಅ ಕಂಪೆನಿಯ ಷೇರಿನ ಬೆಲೆಯು ₨139 ರವರೆಗೂ ಏರಿಕೆ ಕಂಡು ನಂತರ ₨ 124.95ರಲ್ಲಿ ಅಂತ್ಯ ಕಂಡಿತು.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಉತ್ತಮ ಕಂಪೆನಿಗಳ ಷೇರುಗಳ ಬೆಲೆ ಇಳಿಕೆ ಕಂಡಾಗ ಎರಡನೇ ಯೋಚನೆ ಮಾಡದೇ ತಕ್ಷಣ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವ ಹವ್ಯಾಸ ಮಾತ್ರ ಬಂಡವಾಳವನ್ನು ಸುರಕ್ಷತಾ ರೀತಿ ಬೆಳೆಸಲು ಸಾಧ್ಯವಾಗಿಸುತ್ತದೆ ಎಂಬುದನ್ನು ದೃಢಪಡಿಸುತ್ತದೆ.

ರ್‍ಯಾನ್‌ಬಕ್ಸಿ ಕಂಪೆನಿಯ ಮೇಲಿನ ಅಮೆರಿಕದ ‘ಯುಎಸ್‌ಎಫ್‌ಡಿಐ’ ಕ್ರಮದಿಂದ ಷೇರಿನ ಬೆಲೆ ಕುಸಿದ ಕಾರಣ ವಿದೇಶಿ ವಿತ್ತೀಯ ಸಂಸ್ಥೆಗಳು ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ತಮ್ಮ ಹೂಡಿಕೆಯ ಪಾಲನ್ನು ಶೇ 10.74 ರಿಂದ ಶೇ 11.79ಕ್ಕೆ ಹೆಚ್ಚಿಸಿಕೊಂಡಿರುವುದು ಗಮನಾರ್ಹ ಅಂಶವಾಗಿದೆ. ಷೇರಿನ ಬೆಲೆಯು ಒಂದು ತಿಂಗಳಲ್ಲಿ ₨335ರಿಂದ ₨462ರವರೆಗೂ ಜಿಗಿದಿರುವುದು ಈ ಅಂಶವನ್ನು ಪುಷ್ಟೀಕರಿಸುತ್ತದೆ.

ಮತ್ತೊಂದು ಫಾರ್ಮಾ ಕಂಪೆನಿ ವೊಕಾರ್ಡ್ ಲಿ. ಈ ವಾರದಲ್ಲಿ ₨453 ರಿಂದ ₨637ರವರೆಗೂ ಜಿಗಿತ ಕಂಡಿದೆ ವಿನಾಕಾರಣ. ಇದು ಮೌಲ್ಯಯುತ ಕೊಳ್ಳುವಿಕೆ ಆಗಿರಬಹುದಾದರೂ ಜಿಗಿತ ಕಂಡ ರೀತಿ ಮಾತ್ರ ಬಹಳ ತ್ವರಿತವಾಗಿದ್ದೂ ವಹಿವಾಟುದಾರರ ದೃಷ್ಟಿಕೋನಕ್ಕೆ ಹಿಡಿದ ಕನ್ನಡಿಯಾಗಿದೆ. ಇಂತಹ ಬೃಹತ್ ಏರಿಕೆಗಳು ಸಾಮಾನ್ಯವಾಗಿ ಅಲ್ಪಕಾಲೀನವಾಗಿರುತ್ತವೆ.

ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕವು 19 ಅಂಶಗಳಷ್ಟು ಮಾತ್ರ ಏರಿಕೆ ದಾಖಲಿಸಿದರೂ ಮಧ್ಯಮ ಶ್ರೇಣಿ ಸೂಚ್ಯಂಕವು 265 ಅಂಶಗಳಷ್ಟು ಏರಿಕೆಯಿಂದ ಗಮನಸೆಳೆದಿದೆ. ವಿದೇಶಿ ವಿತ್ತೀಯ ಸಂಸ್ಥೆಗಳು ಒಂದೇ ಸಮನೆ ಖರೀದಿಸುವ ದಿಶೆಯಲ್ಲಿದ್ದರೆ ಸ್ವದೇಶಿ ಸಂಸ್ಥೆಗಳು ಮಾರಾಟದ ಹಾದಿಯಲ್ಲಿವೆ. ಶುಕ್ರವಾರ 149 ಅಂಶಗಳಷ್ಟು ಹಾನಿ ಕಂಡ ಸಂವೇದಿ ಸೂಚ್ಯಂಕವು 22,359.50 ಅಂಶಗಳಲ್ಲಿದ್ದರೂ ವಿದೇಶಿ ವಿತ್ತೀಯ ಸಂಸ್ಥೆಗಳಿಂದ ಕೇವಲ ₨ 232 ಕೋಟಿ ಹೂಡಿಕೆ ಆಗಿದೆ, ಸ್ವದೇಶಿ ಸಂಸ್ಥೆಗಳು ₨1,125 ಕೋಟಿ ಮಾರಾಟ ಮಾಡಿವೆ. ಷೇರುಪೇಟೆ ಬಂಡವಾಳೀಕರಣ ಮೌಲ್ಯ ₨73.72 ಲಕ್ಷ ಕೋಟಿಯಿಂದ ₨74.47 ಲಕ್ಷ ಕೋಟಿಗೆ ಏರಿಕೆ ಕಂಡಿತು.

ಹೊಸ ಷೇರು
ಹರಿಯಾ ಅಪರಲ್‌್ಸ ಲಿಮಿಟೆಡ್ ಕಂಪೆನಿಯು ಹರಿಯಾ ಎಕ್‌್ಸಪೋರ್ಟ್‌್ಸನ ಸಿದ್ಧ ಉಡುಪು ವಿಭಾಗವನ್ನು ಬೇರ್ಪಡಿಸಿ ವಿಲೀನಗೊಳಿಸಿಕೊಂಡ ಕಂಪೆನಿಯಾಗಿದೆ. ಇದು ಏಪ್ರಿಲ್ 7ರಿಂದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಫೀನಿಕ್‌್ಸ ಟೌನ್‌ಷಿಪ್ ಲಿಮಿಟೆಡ್ ಕಂಪೆನಿಯು ಝುವಾರಿ ಫಾರೆಕ್‌್ಸ ಲಿ. ಕಂಪೆನಿಯಿಂದ ಬೇರ್ಪಟ್ಟು ಪ್ರತ್ಯೇಕ ಸಂಸ್ಥೆಯಾಗಿ ರಚಿತವಾಗಿದೆ. ಏ. 7ರಿಂದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಕಿರಣ್ ವ್ಯಾಪಾರ್ ಲಿ. ಕಂಪೆನಿಯು ಮಹಾರಾಜ ಶ್ರೀ ಉಮೇಡ್ ಮಿಲ್‌್ಸ ಲಿ. ಕಂಪೆನಿಯ ಹೂಡಿಕೆ ವಿಭಾಗವನ್ನು ಬೇರ್ಪಡಿಸಿ ರಚಿಸಲಾಗಿದ್ದು, ಏ. 7ರಿಂದ ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಅಹ್ಮದಾಬಾದ್ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟು ನಡೆಸುತ್ತಿರುವ ಇನ್‌ಫೋನಿಕ್‌್ಸ ಸಿಸ್ಟಮ್‌್ಸ ಲಿ. ಕಂಪೆನಿಯು ಏಪ್ರಿಲ್
2ರಿಂದ ಬಾಂಬೆ ಷೇರು ವಿನಿಮಯ ಕೇಂದ್ರದ ‘ಬಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಹಿಂದಿನ ತಿಂಗಳು ಗೋಲ್‌್ಡಮನ್ ಸ್ಯಾಚ್ ನೇತೃತ್ವದ ‘ಸಿಪಿಎಸ್‌ಇ– ಇಟಿಎಫ್’ ಯೂನಿಟ್ಗಳು ಏಪ್ರಿಲ್ 4 ರಿಂದ ವಹಿವಾಟಿಗೆ ನೋಂದಾಯಿಸಿಕೊಂಡು ‘ಬಿ’ ಗುಂಪಿನಲ್ಲಿ ವಹಿವಾಟು ಆರಂಭಿಸಿವೆ. ಈ ಇಟಿಎಫ್ ಕಾರಣ ‘ಸಿಪಿಎಸ್ಯು’ ಸೂಚ್ಯಂಕದ ಕಂಪೆನಿಗಳಾದ ಒಎನ್‌ಜಿಸಿ, ಕೋಲ್ ಇಂಡಿಯಾ, ಗೇಲ್ ಆಯಿಲ್ ಇಂಡಿಯಾ, ಎಂಜಿನಿಯರ್ಸ್ ಇಂಡಿಯಾಗಳು ಹೆಚ್ಚಿನ ಏರಿಳಿತ ಪ್ರದರ್ಶಿಸಿ ಅಲ್ಪಕಾಲೀನ ಅವಕಾಶಗಳನ್ನು ಒದಗಿಸಿದೆ.

ಲಾಭಾಂಶ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಪ್ರತಿ ಷೇರಿಗೆ ₨3, ಜೆ. ಎಂ. ಬ್ರುವರೀಸ್ ಪ್ರತಿ ಷೇರಿಗೆ ₨2.50 ಲಾಭಾಂಶ ಘೋಷಿಸಿವೆ.
ಜೆ.ಎಂ. ಬ್ರುವರೀಸ್ ಕಂಪೆನಿಯು 1:4ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಹಕ್ಕಿನ ಷೇರು
ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಕಂಪೆನಿಯು ₨425 ಕೋಟಿ ಮೌಲ್ಯದವರೆಗೂ (ಪ್ರೀಮಿಯಂ ಸೇರಿ) ಹಕ್ಕಿನ ಷೇರು ವಿತರಿಸಲು ನಿರ್ಧರಿಸಿದೆ.

ಎನ್‌ಸಿಸಿ ಲಿ., ಕಂಪೆನಿಯು ಏ. 14 ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ.

ಬ್ಯಾಂಕ್ ಪರವಾನಗಿ
ಪ್ರಮುಖ ಉದ್ಯಮ ಸಮೂಹಗಳಾದ ರಿಲಯನ್ಸ್ ಅನಿಲ್ ಅಂಬಾನಿ ಸಮೂಹ, ಲಾರ್ಸನ್ ಅಂಡ್ ಟೋಬ್ರೊ ಸಮೂಹ, ಎಲ್ ಅಂಡ್ ಟಿ ಫೈನಾನ್‌್ಸ, ಬಿರ್ಲಾ ಸಮೂಹ, ಬಜಾಜ್ ಸಮೂಹ ಮುಂತಾದ ಸುಮಾರು 25 ಕಂಪೆನಿಗಳು ಬ್ಯಾಂಕಿಂಗ್ ಲೈಸೆನ್‌್ಸಗೆ ಅರ್ಜಿ ಸಲ್ಲಿಸಿದ್ದವು.

ಭಾರತೀಯ ರಿಸರ್ವ್ ಬ್ಯಾಂಕ್ ಅಂತಿಮವಾಗಿ ಮೂಲ ಸೌಕರ್ಯ ವಲಯದ ವಿತ್ತೀಯ ಸಂಸ್ಥೆ ‘ಐಡಿಎಫ್‌ಸಿ’ ಮತ್ತು ಕೊಲ್ಕತ್ತಾದ ಮೈಕ್ರೊ ಫೈನಾನ್‌್ಸ ಕಂಪೆನಿ ‘ಬಂಧನ್’ಗೆ ಬ್ಯಾಂಕಿಂಗ್ ಲೈಸೆನ್‌್ಸ ನೀಡಲು ತೀರ್ಮಾನಿಸಿದೆ. ಇದು ಷೇರುಪೇಟೆಯಲ್ಲಿ ನಿರುತ್ಸಾಹ ಮೂಡಿಸಿದೆ.
ಎಲ್ ಅಂಡ್ ಟಿ ಫೈನಾನ್‌್ಸ ಹೋಲ್ಡಿಂಗ್‌್ಸ, ಐಎಫ್‌ಸಿಐ ಮೊದಲಾದ ಕಂಪೆನಿ ಷೇರುಗಳು ಹೆಚ್ಚಿನ ಕುಸಿತ ಕಂಡವು. ಮುಂದಿನ 18 ತಿಂಗಳುಗಳಿಗೆ ಈ ಎರಡೂ ಕಂಪೆನಿಗಳು ಅಗತ್ಯವಿರುವ ನಿಯಮಗಳನ್ನಳವಡಿಸಿಕೊಂಡು, ಬ್ಯಾಂಕಿಂಗ್ ಚಟುವಟಿಕೆ ಆರಂಭಿಸಬಹುದಾಗಿದೆ.

ಈ ಬೆಳವಣಿಗೆಯು ಈಗಿನ ಬ್ಯಾಂಕ್‌ಗಳ ಚಟುವಟಿಕೆಯು ಅಭಾದಿತವಾಗಿ ಕಂಡ ಕಾರಣ, ಹೆಚ್ಚಿನ ಸ್ಪರ್ಧೆಗೆ ಅವಕಾಶವಾಗದ ಕಾರಣ ಬ್ಯಾಂಕಿಂಗ್ ಷೇರುಗಳು ಚುರುಕಾದ ಏರಿಕೆ ಕಂಡವು.

ವಾರದ ವಿಶೇಷ
ಕಂಪೆನಿ ಷೇರುಗಳು ಹಿಂದಿನ ಎರಡು ತ್ರೈಮಾಸಿಕದಲ್ಲಿ ಪ್ರತಿ ದಿನ ₨2 ಲಕ್ಷಕ್ಕೂ ಕಡಿಮೆ ಇದ್ದ, ಮಾರಾಟ ಮಾಡುವುದು ದುಸ್ಸಾಧ್ಯ ಎಂದಾದಲ್ಲಿ ಅಂತಹವುಗಳನ್ನು ಪಿರಿಯಾಡಿಕ್ ಕಾಲ್ ಆಕ್ಷನ್ ಸಮೂಹಕ್ಕೆ ಸೇರಿಸಲಾಗುವುದು. ಕಂಪೆನಿಯ ಬಂಡವಾಳೀಕರಣ ಮೌಲ್ಯವು ₨10 ಲಕ್ಷಕ್ಕೂ ಹೆಚ್ಚಿದ್ದು, ಹಿಂದಿನ ಮೂರು ವರ್ಷಗಳಲ್ಲಿ ಕನಿಷ್ಠ ಎರಡು ವರ್ಷ ಲಾಭಾಂಶ ವಿತರಿಸಿದ್ದರೆ; ಹಾಗೂ ಪ್ರದರ್ಶಕರ ಭಾಗಿತ್ವದಲ್ಲಿ ಶೇ 20ಕ್ಕೂ ಕಡಿಮೆ ಇದ್ದು, ಪುಸ್ತಕ ಮೌಲ್ಯವು ಷೇರಿನ ಮುಖ ಬೆಲೆಗಿಂತ ಮೂರುಪಟ್ಟು ಹೆಚ್ಚಿದ್ದು ಹಿಂದಿನ ಮೂರು ವರ್ಷಗಳಲ್ಲಿ ಎರಡು ವರ್ಷ ಲಾಭ ಗಳಿಸುತ್ತಿರುವ ಕಂಪೆನಿಯಾದಲ್ಲಿ ಅಂತಹ ಕಂಪೆನಿಗಳಿಗೆ ಈ ಸಮೂಹಕ್ಕೆ ವರ್ಗಾಯಿಸುವುದರಿಂದ ವಿನಾಯ್ತಿ ದೊರೆಯುತ್ತದೆ.

ಈ ವಿನಾಯ್ತಿ ಪಡೆಯುವ ನಿಯಮಗಳಲ್ಲಿ ಒಂದು ಅನ್ವಯವಾದರೂ ಸಾಕು. ಈ ನಿಯಮಗಳೆಲ್ಲವೂ ನೀತಿ ಪಾಲನೆ ಮತ್ತು ಹೂಡಿಕೆದಾರರ ಹಿತದ ದೃಷ್ಟಿಯಿಂದ ಸರಿ ಎನಿಸಿದರೂ, ಮೂರು ವರ್ಷಗಳಲ್ಲಿ ಎರಡು ವರ್ಷಗಳಲ್ಲಿ ಎರಡು ವರ್ಷ ಲಾಭಾಂಶ ವಿತರಿಸಬೇಕು ಎಂಬ ನಿಯಮವಿಲ್ಲ. ವಿತರಣೆಯ ಪ್ರಮಾಣಕ್ಕೆ ಕನಿಷ್ಠ ಮಿತಿ ನಿಗದಿ ಪಡಿಸುವುದು ಉತ್ತಮ.

ಹಾಗೆ ಮಾಡಿದಲ್ಲಿ ಕಂಪೆನಿಗಳು ಶೇ 1, ಶೇ 2, ಶೇ 5 ಮುಂತಾದ ಕಳಪೆ ಮಟ್ಟದ ಲಾಭಾಂಶ ವಿತರಿಸಿ ವಿನಾಯ್ತಿ ಪಡೆಯಲು ಹವಣಿಸುತ್ತಿರುವುದನ್ನು ತಪ್ಪಿಸಬಹುದು. ಈ ತಿಂಗಳ 15ರಿಂದ ಪಿರಿಯಾಡಿಕ್ ಕೌಲ್ ಆಕ್ಷನ್ ಪದ್ಧತಿಯಲ್ಲಿ ವಹಿವಾಟಾಗುವ 408 ಕಂಪೆನಿಗಳನ್ನು ಪ್ರಕಟಿಸಲಾಗಿದ್ದು ಬಹಳಷ್ಟು ಕಂಪೆನಿಗಳು ವಿರಳವಾದ ಚಟುವಟಿಕೆ ಪ್ರದರ್ಶಿಸುತ್ತಿರುವಂತಹ ಕಂಪೆನಿಗಳಾಗಿರುವುದು, ಸಣ್ಣ ಹೂಡಿಕೆದಾರರನ್ನು ಇಂತಹ ಕಂಪೆನಿಗಳಿಂದ ದೂರವಿಡಲು ಯಶಸ್ವಿಯಾಗುವ ಕ್ರಮವೆನ್ನಬಹುದಾಗಿದೆ.

ಹಾಗೆಯೇ ಕಂಪೆನಿಗಳಾದ ಅಶಿಯಾದ ಇಸ್ಪಾಟ್ ಮೂವಿ ಇಂಡಸ್ಟ್ರೀಸ್ ಲಿ., ಪ್ರಿಸಿಷನ್ ಎಲೆಕ್ಟ್ರಾನಿಕ್‌್ಸ ಲಿ., ಸೀತಾಶ್ರೀ ಪುಡ್ ಪ್ರಾಡಕ್ಟ್ಸ್ ಕಂಪೆನಿಗಳನ್ನು ಪಿರಿಯಾಡಿಕ್ ಕಾಲ್ ಆಕ್ಷನ್ ಸಮೂಹದಿಂದ ಏಪ್ರಿಲ್ 15 ರಿಂದ ವಿನಾಯ್ತಿ ನೀಡಲಾಗಿದೆ.

ಆದರೆ ಪ್ರವರ್ತಕರ ಭಾಗಿತ್ವ ಅಭೌತೀಕರಣ ನಿಯಮದ ಕಾರಣ ಅವುಗಳನ್ನು ಟ್ರೆಂಡ್ – ಟು – ಟ್ರೆಂಡ್ ವಿಭಾಗಕ್ಕೆ (‘ಟಿ’ ಸೀರಿಸ್) ಶೇ 5 ರಷ್ಟರ ಆವರಣ ಮಿತಿಯೊಂದಿಗೆ ವರ್ಗಾಯಿಸಲಾಗಿದೆ.

ಹೂಡಿಕೆದಾರರು ಕಂಪೆನಿಗಳ ನೀತಿ ಪಾಲನೆ, ನಿಯಮ ಪಾಲನೆಯಲ್ಲಿನ ನ್ಯೂನ್ಯತೆ ಲೋಪ ಮುಂತಾದವುಗಳಬಗ್ಗೆ ಅರಿತು ಚಟುವಟಿಕೆಗೆ ಮುಂದಾಗಬೇಕು. ಇಂತಹವುಗಳಿಂದ ದೂರವಿದ್ದರೆ ಸುರಕ್ಷಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.