ಇತ್ತೀಚಿನ ದಿನಗಳಲ್ಲಿ ಪ್ರತಿ ವಾರವೂ ಸಂವೇದಿ ಸೂಚ್ಯಂಕ ದಾಖಲೆ ನಿರ್ಮಿಸುವುದು ವಾಡಿಕೆಯಾಗಿದ್ದು ಈ ವಾರವೂ ಸೋಮವಾರ, ಮಂಗಳವಾರ, ಬುಧವಾರ ಹಾಗೂ ಶುಕ್ರವಾರ ದಾಖಲೆ ನಿರ್ಮಿಸಿದೆ. ಶುಕ್ರವಾರದ ಮಧ್ಯಾಂತರದಲ್ಲಿನ 28,360.66 ಅಂಶಗಳು ಸರ್ವಕಾಲೀನ ಗರಿಷ್ಠವಾಗಿದೆ. ಅಲ್ಲದೆ ಅಂದು ಅಂತ್ಯಗೊಂಡ 28,334.63 ಅಂಶ ಸಹ ದಾಖಲೆಯ ಅಂತ್ಯವಾಗಿದೆ.

ಮಂಗಳವಾರದಂದು ಪೇಟೆಯ ಬಂಡವಾಳ ಮೌಲ್ಯವು ರೂ99.23 ಲಕ್ಷ ಕೋಟಿ ತಲುಪಿದೆ. ಇದು ಸಹ ನೂತನ ದಾಖಲೆಯಾಗಿದೆ. ಪ್ರತಿಯೊಂದು ಏರಿಕೆಯೂ ದಾಖಲೆಯಾಗುತ್ತಿರುವ ಈ ಸಮಯದಲ್ಲಿ ಸಂವೇದಿ ಸೂಚ್ಯಂಕಕ್ಕೆ ಜೊತೆಗೂಡಿರುವುದೆಂದರೆ ಬ್ಯಾಂಕೆಕ್್ಸ ಸೂಚ್ಯಂಕ ಶುಕ್ರವಾರ ಸುಮಾರು 478 ಅಂಶಗಳ ಏರಿಕೆಯಿಂದ 20,683 ಅಂಶಗಳಿಗೆ ತಲುಪುವ ಮುನ್ನ ಸರ್ವಕಾಲೀನ ಗರಿಷ್ಠ ವಾದ 20,777.42ನ್ನು ತಲುಪಿತ್ತು. ಅಂದಿನ ಈ ದಾಖಲೆಗೆ ಬ್ಯಾಂಕೆಕ್್ಸನ ಎಲ್ಲಾ 12 ಬ್ಯಾಂಕ್ಗಳೂ ಏರಿಕೆ ಕಂಡಿದ್ದು ವಿಶೇಷವಾಗಿದೆ.

ಬ್ಯಾಂಕ್ಗಳ ವಿಲೀನ
ಐಎನ್ಜಿ ವೈಶ್ಯ ಬ್ಯಾಂಕನ್ನು ಕೋಟಕ್ ಮಹೀಂದ್ರಾ ಬ್ಯಾಂಕ್ನಲ್ಲಿ ವಿಲೀನಗೊಳಿಸುವ ನಿರ್ಧಾರದಿಂದ ಸೂಚ್ಯಂಕದಲ್ಲಿ ಈ ಚುರುಕು ಕಾಣುವಂತಾಯಿತು. ಹಾಗೆಯೇ ಸಾರ್ವಜನಿಕ ವಲಯದ ಅಗ್ರಮಾನ್ಯ ಬ್ಯಾಂಕ್ ಎಸ್ಬಿಐ ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ1ಕ್ಕೆ ಸೀಳಿದ ಕಾರಣ ಚಟುವಟಕೆ ಭರಿತವಾಯಿತು. ಆರ್ಬಿಐ ಮತ್ತಿತರ ಸಂಸ್ಥೆಗಳ ಅನುಮತಿಯೊಂದಿಗೆ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.

ಈ ವಿಲೀನದ ನಂತರ ಕೋಟಕ್ ಮಹೀಂದ್ರಾ ಬ್ಯಾಂಕ್ನ ಒಟ್ಟು ಶಾಖೆಗಳ ಸಂಖ್ಯೆಯು 1,214ಕ್ಕೆ ತಲುಪಿ, 1794 ಎಟಿಎಂ ಸೌಲಭ್ಯ ಒದಗಿಸುವ ಸಂಸ್ಥೆಯನ್ನಾಗಿಸುತ್ತದೆ. ಉಳಿದಂತೆ ನಿಷ್ಕ್ರಿಯ ಸಾಲಗಳ ಅಂಶವನ್ನು ನಿಯಂತ್ರಿಸಿ ಯಾವ ರೀತಿ ಬೆಳೆಸಬಹುದೆಂಬುದು ಸವಾಲಾಗಬಹುದು.
ಒಟ್ಟಾರೆ ವಾರದಲ್ಲಿ 288 ಅಂಶಗಳ ಏರಿಕೆ ಕಂಡ ಸಂವೇದಿ ಸೂಚ್ಯಂಕಕ್ಕೆ ಶುಕ್ರವಾರದ 267 ಅಂಶಗಳ ಏರಿಕೆ ಮಹತ್ತರವಾಗಿದ್ದು ಅದಕ್ಕೆ ಜೊತೆಗೂಡಿ ಮಧ್ಯಮಶ್ರೇಣಿ ಸೂಚ್ಯಂಕ 40 ಅಂಶಗಳ ಏರಿಕೆ ಕಂಡರೆ, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 108 ಅಂಶಗಳ ಏರಿಕೆ ಕಂಡಿದೆ. ವಿದೇಶಿ ವಿತ್ತೀಯ ಸಂಸ್ಥೆಗಳು ಒಟ್ಟು ರೂ271 ಕೋಟಿ ಮತ್ತು ಸ್ವದೇಶೀ ವಿತ್ತೀಯ ಸಂಸ್ಥೆಗಳು ರೂ732 ಕೋಟಿ ಮೌಲ್ಯದಷ್ಟು ಷೇರುಗಳನ್ನು ಮಾರಾಟ ಮಾಡಿವೆ.

ವಾರದ ವಿಶೇಷ

ಅಲ್ಪಕಾಲೀನ ಲಾಭ ಗಳಿಕೆಗೆ ಹೆಚ್ಚು ಒಲವು
ಷೇರು ಪೇಟೆಯಲ್ಲಿ ಘಟನಾವಳಿಗಳನ್ನಾಧರಿಸಿದ ಏರು ಪೇರು ದೀರ್ಘಕಾಲ ನಿಲ್ಲುತ್ತಿಲ್ಲ. ಎಲ್ಲವೂ ತಾತ್ಕಾಲಿಕ ಎಂಬಂತಾಗಿದೆ. ಯಾವುದೇ ಒಂದು ಸಕಾರಾತ್ಮಕ ಬೆಳವಣಿಗೆ ಸ್ಪಂದನ ದೊರೆತಾಗ ಅದು ಹೆಚ್ಚು ಸ್ಥಿರತೆ ಕಂಡುಕೊಳ್ಳಲು ವಿಫಲವಾಗುತ್ತಿದೆ. ಕಾರಣ ಸ್ಪಂಧನದ ವೇಳೆ ಪ್ರದರ್ಶನವಾಗುವ ಉತ್ಪ್ರೇಕ್ಷಾ ಏರಿಕೆ ಮುಖ್ಯವಾಗಿದೆ.

ಉದಾಹರಣೆಗೆ ಅಕ್ಟೋಬರ್ನಲ್ಲಿ ಅಬನ್ ಆಫ್ ಷೋರ್ ಕಂಪೆನಿಗೆ ₨557 ಕೋಟಿ ಮೌಲ್ಯದ ಕಾಂಟ್ರಾಕ್ಟನ್ನು ಒಎನ್ಜಿಸಿ ನೀಡಿದೆ ಎಂಬ ಸುದ್ದಿಯಿಂದ ಷೇರಿನ ಬೆಲೆ ಒಂದೇ ದಿನ ₨546ರ ಕನಿಷ್ಠದಿಂದ ₨651ರ ಗರಿಷ್ಠಕ್ಕೆ ಜಿಗಿದು, ನಂತರ ₨674ರ ಸಮೀಪ ತಲುಪಿ ಕುಸಿಯಿತು.

ನವೆಂಬರ್ನಲ್ಲಿ ₨650ರ ಸಮೀಪಕ್ಕೆ ತಲುಪಿ ₨556ರವರೆಗೂ ಇಳಿದು ₨584ರ ಸಮೀಪ ಈ ವಾರ ಕೊನೆಗೊಂಡಿದೆ.

ಅದೇ ರೀತಿ ಇಪ್ಕಾಲ್ಯಾಬ್ ಕಂಪೆನಿಯ ಫಲಿತಾಂಶ ಉತ್ತಮವಾಗಿಲ್ಲ ಕಾರಣ ಷೇರಿನ ಬೆಲೆ ₨770ರ ಹಂತದಿಂದ ₨667 ರಲ್ಲಿ ಕೊನೆಗೊಂಡಿತು.
ಐಎನ್ಜಿ ವೈಶ್ಯ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ಗಳ ವಿಲೀನ ಕೇವಲ ಈ ಎರಡು ಬ್ಯಾಂಕುಗಳ ಷೇರುಗಳ ಮೇಲೆ ಪ್ರಭಾವ ಬೀರದೆ, ಖಾಸಗಿ ವಲಯದ ಕರ್ನಾಟಕ ಬ್ಯಾಂಕ್, ಫೆಡರಲ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ಗಳ ಏರಿಕೆಗೂ ದಾರಿಯಾಯಿತು. ಫೆಡರಲ್ ಬ್ಯಾಂಕ್ ಶುಕ್ರವಾರ ವರ್ಷದ ಗರಿಷ್ಠ ಮಟ್ಟ ದಾಖಲಿಸಿದೆ.
ಈ ಅಂಶಗಳನ್ನಾಧರಿಸಿ ವಿಶ್ಲೇಷಿಸಿದರೆ ಈಗಿನ ಷೇರುಪೇಟೆಯು ಹೆಚ್ಚು ಹರಿತ – ತ್ವರಿತವಾಗಿದ್ದು ಭಾವನಾತ್ಮಕತೆ ಹೆಚ್ಚು ಮಹತ್ವ ನೀಡುತ್ತಿದೆ. ಹಾಗಾಗಿ ಸ್ಥಿರತೆ ಕಂಡುಕೊಳ್ಳುತ್ತಿಲ್ಲ. ಇದು ಅಲ್ಪಕಾಲೀನ ಲಾಭಗಳಿಕೆಗೆ ಹೆಚ್ಚು ಒಲವು ತೋರುತ್ತಿದೆ ಎಂಬ ಅಂಶವು ಹೊರಬೀಳುತ್ತದೆ.

ಈಗಿನ ವಾತಾವರಣದಲ್ಲಿ ಅತಿಯಾದ ಆಸೆಗೆ ಅಂಕುಶ ಹಾಕಿ ಮಿತವಾದ, ತ್ವರಿತ ಲಾಭ ಸಂತೃಪ್ತಿ ಪಡೆವವರಿಗೆ ಈ ಪೇಟೆ ಉತ್ತಮ ಅವಕಾಶ ಒದಗಿಸುತ್ತದೆ.

ಬೋನಸ್ ಷೇರು
*ತಾಂತ್ರಿಕ ವಲಯದ ಅಗ್ರಮಾನ್ಯ ಕಂಪೆನಿ ಇನ್ಫೊಸಿಸ್ ವಿತರಿಸಲಿರುವ 1:1ರ ಅನುಪಾತದ ಬೋನಸ್ ಷೇರಿಗೆ ಷೇರುದಾರರು ಅಂಚೆ ಮತದಾನದ ಮೂಲಕ ಸಮ್ಮತಿಸಿರುವುದರಿಂದ ಕಂಪೆನಿ ಡಿ.3ನ್ನು ನಿಗದಿತ ದಿನವಾಗಿ ಪ್ರಕಟಿಸಿದೆ.
*ಎಸ್ ಆರ್ ಎಸ್ ಇನ್ಫ್ರಾಸ್ಟ್ರಕ್ಚರ್ ಲಿ. ಕಂಪೆನಿ 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಹೊಸ ಷೇರು
*ಬೆಂಗಳೂರು ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಗಿಲಾಡ ಫೈನಾನ್್ಸ ಅಂಡ್ ಇನ್ವೆಸ್್ಟಮೆಂಟ್್ಸ ಲಿ. ಕಂಪೆನಿಯು ಮುಂಬೈ ಷೇರು ವಿನಿಮಯ ಕೇಂದ್ರದ ‘ಟಿ’ ಗುಂಪಿನಲ್ಲಿ ನ.19 ರಿಂದ ವಹಿವಾಟಿಗೆ ಬಿಡುಗಡೆಯಾಗಿದೆ.
*ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಗೋಯೆಂಕಾ ಬ್ಯುಸಿನೆಸ್ ಅಂಡ್ ಫೈನಾನ್್ಸ ಲಿ. ಕಂಪೆನಿಯು ನ.19 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.
*ಸಿಟಿಜನ್ ಇನ್ಫೋಲೈನ್ ಲಿ. ಕಂಪೆನಿಯು ಅಹಮದಾಬಾದ್ ಹಾಗೂ ಮದ್ರಾಸು ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿದ್ದು ನ.19 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಹೊಸ ನೇರ ನೋಂದಾವಣೆ ಯೋಜನೆಯಡಿ ‘ಡಿಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.
*ತೇಜ್ ಇನ್ಫೋವೇಸ್ ಲಿ. ಕಂಪೆನಿಯು ಮದ್ರಾಸ್ ಮತ್ತು ಅಹಮದಾಬಾದ್ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿದ್ದು ನ.25 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಡಿಟಿ ಗುಂಪಿನಲ್ಲಿ ವಹಿವಾಟಾಗಲಿದೆ.

ಲಾಭಾಂಶ ವಿಚಾರ
ಕಾಲ್ಗೇಟ್ ಪಾಲ್ಮೊಲಿವ್ ಕಂಪೆನಿಯು ಡಿ. 8 ರಂದು ಪರಿಶೀಲಿಸಲರುವ ಎರಡನೇ ಮಧ್ಯಂತರ ಲಾಭಾಂಶಕ್ಕೆ ಡಿ.16 ನಿಗದಿತ ದಿನವಾಗಿದೆ.

ಮೂಲಾಧಾರಿತ ಪೇಟೆಗೆ ಪ್ರವೇಶ
ಆಮ್ಟೆಕ್ ಆಟೋ, ಬಾಷ್ ಇಂಜಿನಿಯರ್ಸ್ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್, ಸ್ಟ್ರೈಡ್್ಸ ಆರ್ಕೊಲ್ಯಾಬ್ ಮತ್ತು ವೊಕಾರ್ಡ್ ಕಂಪೆನಿ ಷೇರುಗಳು 28 ರಿಂದ ಮೂಲಾಧಾರಿತ ಪೇಟೆಯಲ್ಲಿ ವಹಿವಾಟಿಗೆ ಅನುಮತಿಸಲಾಗಿದೆ. ಆಮ್ಟೆಕ್ ಆಟೋ, ಬಾಷ್, ವೊಕಾರ್ಡ್ ಕಂಪೆನಿಗಳು ಹೆಚ್ಚಿನ ಏರಿಕೆಯನ್ನು ಇತ್ತೀಚೆಗೆ ಪ್ರದರ್ಶಿಸಿರುವುದು ಗಮನಾರ್ಹವಾಗಿದೆ.

ಅಮಾನತು ತೆರವು
ಫೆಬ್ರುವರಿ 2000 ದಿಂದಲೂ ಅಮಾನತ್ತಿನಲ್ಲಿರುವ ಸೂಪರ್ ಡೊಮೆಸ್ಟಿಕ್ ಮೆಶಿನ್ಸ್ ಲಿ. ಕಂಪೆನಿಯು ತನ್ನ ಮೇಲಿನ ಅಮಾನತು ತೆರವು ಗೊಳಿಸಿಕೊಂಡು ನವೆಂಬರ್ 26 ರಿಂದ ‘ಪಿ’ ಗುಂಪಿನಲ್ಲಿ ವಹಿವಾಟಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.