ಷೇರುಪೇಟೆಗೆ ಇದು ಸುಗ್ಗಿಯ ಕಾಲ. ಕಂಪೆನಿಗಳು ಲಾಭಾಂಶ ಪ್ರಕಟಿಸಲು ಆರಂಭಿಸಿವೆ. ಸಂವೇದಿ ಸೂಚ್ಯಂಕವು ಪ್ರತಿದಿನ ಹೊಸ ದಾಖಲೆ ನಿರ್ಮಿಸುತ್ತಿದೆ. ಪೇಟೆಯ ಬಂಡವಾಳ ಮೌಲ್ಯವು ಸಾರ್ವಕಾಲಿಕ ಗರಿಷ್ಠದಲ್ಲಿದೆ. ವಿದೇಶಿ ವಿತ್ತೀಯ ಸಂಸ್ಥೆಗಳು ತಮ್ಮ ಹೂಡಿಕೆ ಪ್ರವೃತ್ತಿ ಮುಂದುವರಿಸಿಕೊಂಡು ಹೋಗುತ್ತಿವೆ. ಸ್ಥಳೀಯ ವಿತ್ತೀಯ ಸಂಸ್ಥೆಗಳು ಮಾರಾಟದ ಹಾದಿ ಹಿಡಿದಿವೆ. ಪ್ರಮುಖ ಕಂಪೆನಿಗಳಾದ ಅರವಿಂದೋ ಫಾರ್ಮಾ, ಕೊಲ್ ಇಂಡಿಯಾ, ಸ್ಟ್ರೈಡ್‌್ಸ ಆರ್ಕೊ ಲ್ಯಾಬ್, ಯುಪಿಎಲ್, ಐಸಿಐಸಿಐ ಬ್ಯಾಂಕ್, ಮಹೀಂದ್ರಾ ಅಂಡ್ ಮಹೀಂದ್ರಾ ಮುಂತಾದವು ವಾರ್ಷಿಕ ದಾಖಲೆ ನಿರ್ಮಿಸಿವೆ.

ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಕಂಪೆನಿಗಳಲ್ಲದೆ ಬ್ಯಾಂಕಿಂಗ್ ವಲಯದ, ಫಾರ್ಮಾ ವಲಯದ ಕಂಪೆನಿಗಳು ಚುರುಕಾದ ಚಟುವಟಿಕೆ ಪ್ರದರ್ಶಿಸುತ್ತಿವೆ. ವೈವಿಧ್ಯಮಯ ಕಾರಣಗಳಿಂದ ಕಂಪೆನಿಗಳಾದ ದೀಪಕ್ ಫರ್ಟಿಲೈಸರ್ಸ್, ಎಚ್‌ಬಿಸಿ ಬಯೋಸೈನ್ಸಸ್, ರೆಪ್ಕೊ ಹೋಂ ಫೈನಾನ್‌್ಸ ಚಟುವಟಿಕೆ ಭರಿತವಾದವು. ಷಾಸೂನ್ ಫಾರ್ಮಾಸ್ಯುಟಿಕಲ್್ಸ ಕಂಪನಿಯು ಸಿಕ್ವೆಂಟ್ ಸೈಂಟಿಫಿಕ್ ಲಿ. ಕಂಪನಿಗೆ ರೂ. 110 ರಂತೆ ಷೇರು ವಿತರಿಸಲು ನಿರ್ಧರಿಸಿದ ಕಾರಣ ಷೇರಿನ ಬೆಲೆಯು ಒಂದು ವಾರದಲ್ಲಿ ರೂ. 36 ರಷ್ಟು ಜಿಗಿತ ಕಂಡಿದೆ. ಈ ರೀತಿಯ ವಾತಾವರಣದಲ್ಲಿಯೂ ಸಣ್ಣ ಹೂಡಿಕೆದಾರರ ಪೇಟೆ ಪ್ರವೇಶ ಮಾತ್ರ ದೂರವಾಗಿದ್ದು ನಿರಾಸಕ್ತಿ ಪ್ರದರ್ಶಿಸುತ್ತಿದ್ದಾರೆ.

ಸದ್ಯದ ಪೇಟೆಯು ನಿರ್ದಿಷ್ಟವಾದ, ನಿಖರವಾದ ಚಲನ–ವಲನಗಳನ್ನು ಪ್ರದರ್ಶಿಸುತ್ತಿಲ್ಲ ಎನ್ನುವುದೇ ಈ ನಿರಾಸಕ್ತಿಗೆ ಕಾರಣವಾಗಿದೆ. ಕಂಪೆನಿಗಳು ಉತ್ತಮ ಫಲಿತಾಂಶ ಪ್ರಕಟಿಸಿದರೆ, ಆಕರ್ಷಕ ಲಾಭಾಂಶ ಘೋಷಿಸಿದರೂ ಸಹ ಷೇರಿನ ಬೆಲೆ ಮಾತ್ರ ಅದಕ್ಕೆ ಸೂಕ್ತ ಸ್ಪಂದನೆ ನೀಡುತ್ತಿಲ್ಲ. ಆದರೆ ಅಗ್ರಮಾನ್ಯ ಕಂಪೆನಿಗಳು ಕುಸಿತದಲ್ಲಿದ್ದು ನೀರಸ ವಾತಾವರಣದಲ್ಲಿದ್ದಲ್ಲಿ, ಆಕರ್ಷಕ ಸುದ್ದಿಗಳಿಂದ ಪ್ರೇರಿತವಾಗಿ ಜಿಗಿಯುತ್ತವೆ ಎಂಬುದಕ್ಕೆ ಶುಕ್ರವಾರದಂದು ಸ್ಟ್ರೈಡ್‌್ಸ ಆರ್ಕೊಲ್ಯಾಬ್ ಷೇರುಗಳು ಪ್ರದರ್ಶಿಸಿದ ದಿಢೀರ್ ಏರಿಕೆ ಉತ್ತಮ ಉದಾಹರಣೆ. ಕಂಪೆನಿಗಳು ಪ್ರಕಟಿಸಿದ ಫಲಿತಾಂಶಕ್ಕೆ ದಿಢೀರ್ ಸ್ಪಂದನ ನೀಡುವುದಕ್ಕೆ ತಡೆ ಹಾಕಬೇಕಾಗಿದೆ. ಇಂತಹ ವಾತಾವರಣವನ್ನು ವಹಿವಾಟುದಾರರು ತಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು ಆ ಸಮಯದಲ್ಲಿ ಷೇರು ಕೊಂಡಲ್ಲಿ ಹಾನಿಯಾಗುವ ಸಂಭವವೇ ಹೆಚ್ಚು.

ಕಂಪೆನಿಗಳು ಲಾಭ ಹೆಚ್ಚು ಗಳಿಸಿದರೆ ಮಾತ್ರ ಹೆಚ್ಚಿನ ಲಾಭಾಂಶ ನೀಡುವವು. ಷೇರಿನ ಬೆಲೆ ಏರಿಕೆ ಕಾಣುವುದು, ಕಡಿಮೆ ಲಾಭ ಬಂದರೆ ಷೇರಿನ ಬೆಲೆ ಇಳಿಕೆ ಕಾಣುವುದೆಂಬುದು ಈಗ ಅನ್ವಯವಾಗುವುದಿಲ್ಲ. ಈಗ ಷೇರಿನ ಬೆಲೆ ಏರಿಕೆ ಕಂಡಾಗ, ಇಳಿಕೆ ಕಂಡಾಗ ಅದಕ್ಕೆ ಕಾರಣ ಕೊಡಲಾಗುವುದು. ಇತ್ತೀಚಿನ ದಿನಗಳಲ್ಲಿ ಬಿಎಚ್ಇಎಲ್, ಇಂಡಸ್ ಇಂಡ್ ಬ್ಯಾಂಕ್, ಆಯಿಲ್ ಇಂಡಿಯಾ, ಅರವಿಂದೋ ಫಾರ್ಮಾ, ಆಯಿಲ್ ಇಂಡಿಯಾ ಕಮ್ಮಿನ್‌್ಸ, ಎಂಅಂಡ್‌ಎಂ ಫೈನಾನ್ಶಿಯಲ್, ಭಾರತ್ ಪೆಟ್ರೋಲಿಯಂ, ಬಯೋಕಾನ್, ಒಎನ್‌ಜಿಸಿ ಅಲೆಂಬಿಕ್ ಫಾರ್ಮಾ, ಯುಪಿಎಲ್, ಸೀಸಾ ಸ್ಟರ್ಲೈಟ್ಗಳಂತಹ ಅಗ್ರಮಾನ್ಯ ಕಂಪೆನಿಗಳ ಷೇರಿನ ಬೆಲೆಗಳು ಪ್ರದರ್ಶಿಸಿದ ಏರಿಳಿತಗಳು ಅಲ್ಪಕಾಲೀನ ಅವಕಾಶಗಳ ಸಂಕೇತವಾಗಿದೆ.

ಸಂವೇದಿ ಸೂಚ್ಯಂಕವು ವಾರದಲ್ಲಿ ಒಟ್ಟಾರೆ 59 ಅಂಶಗಳಷ್ಟು ಏರಿಕೆ ಕಂಡು ಮಧ್ಯಮ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳು ಸ್ಥಿರತೆ ಪ್ರದರ್ಶಿಸಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು ಕೊಳ್ಳುವಿಕೆ ಸ್ಥಳೀಯ ಸಂಸ್ಥೆಗಳ ಮಾರಾಟದ ವಹಿವಾಟು ಸಮತೋಲನದಲ್ಲಿದ್ದು ಪೇಟೆಯ ಬಂಡವಾಳ ಮೌಲ್ಯವು ರೂ. 75.81 ಲಕ್ಷ ಕೋಟಿಯಿಂದ ರೂ. 75.95 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ಹೊಸ ಷೇರಿನ ವಿಚಾರ
ಗೋಲ್‌್ಡ ಲೈನ್ ಇಂಟರ್‌ನ್ಯಾಷನಲ್ ಫೈನ್ವೆಸ್‌್ಟ ಲಿಮಿಟೆಡ್ ಕಂಪೆನಿಯು ದೆಹಲಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿದ್ದು 28 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಲಾಭಾಂಶ
ಆಕ್ಸಸ್ ಬ್ಯಾಂಕ್ ಪ್ರತಿ ಷೇರಿಗೆ ರೂ. 20, ಆಲ್‌ಸ್ತೊಂ ಇಂಡಿಯಾ ಪ್ರತಿ ಷೇರಿಗೆ ರೂ. 14, ಆಗ್ರೊಟೆಕ್ ಫುಡ್ ಪ್ರತಿ ಷೇರಿಗೆ ರೂ. 2, ಆಟೋಮೊಬೈಲ್ ಕಾರ್ಪೊರೇಷನ್ ಆಫ್ ಗೋವಾ ಪ್ರತಿ ಷೇರಿಗೆ ರೂ. 12.50, ಬಯೋಕಾನ್ ಪ್ರತಿ ಷೇರಿಗೆ ರೂ. 5 (ಮು. ಬೆ. ರೂ. 5), ಕೈರ್ನ್ ಇಂಡಿಯಾ ಪ್ರತಿ ಷೇರಿಗೆ ರೂ. 6.50, ಸಿರಾ ಸ್ಯಾನಿಟರಿವೇರ್ ಪ್ರತಿ ಷೇರಿಗೆ ರೂ. 5 (ಮು.ಬೆ. ರೂ. 5), ಏಂಕೊ ಎಲಿಕಾನ್ ಪ್ರತಿ ಷೇರಿಗೆ ರೂ. 4, ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರತಿ ಷೇರಿಗೆ ರೂ. 6.85 (ಮು.ಬೆ. ರೂ. 2), ಐಸಿಐಸಿಐ ಬ್ಯಾಂಕ್ ಪ್ರತಿ ಷೇರಿಗೆ ರೂ. 23, ಇಂಡಿಯಾ ಬುಲ್ ಹೌಸಿಂಗ್ ಫೈನಾನ್‌್ಸ ಪ್ರತಿ ಷೇರಿಗೆ ರೂ. 9 (ಮು.ಬೆ. ರೂ. 2), ಕಿರ್ಲೊಸ್ಕರ್ ಆಯಿಲ್ ಇಂಜಿನ್‌್ಸ ಪ್ರತಿ ಷೇರಿಗೆ ರೂ. 5 (ಮು.ಬೆ. ರೂ. 2), ಎಲ್‌ಐಸಿ ಹೌಸಿಂಗ್ ಫೈನಾನ್‌್ಸ ರೂ. 4.50 (ಮು.ಬೆ. ರೂ. 2), ಎಂ ಅಂಡ್ ಎಂ ಫೈನಾನ್ಶಿಯಲ್ ಸರ್ವಿಸಸ್ ಪ್ರತಿ ಷೇರಿಗೆ ರೂ. 3.80 (ಮು.ಬೆ. ರೂ. 2), ಮಾರುತಿ ಸುಜುಕಿ ಪ್ರತಿ ಷೇರಿಗೆ ರೂ. 12, ಮಾಸ್ಟೆಕ್ ಪ್ರತಿ ಷೇರಿಗೆ ರೂ. 2.75 (ಮು.ಬೆ. ರೂ. 5), ಎಚ್.ಇ.ಜಿ. ಪ್ರತಿ ಷೇರಿಗೆ ರೂ. 6, ಆರ್ಎಸ್ಡಬ್ಲುಎಂ ಪ್ರತಿ ಷೇರಿಗೆ ರೂ. 12.50, ಸಾಸ್ಕಿನ್ ಕಮ್ಯುನಿಕೇಷನ್ ಪ್ರತಿ ಷೇರಿಗೆ ರೂ. 3, ಟಾಟಾ ಎಲಾಕ್ಸಿ ಪ್ರತಿ ಷೇರಿಗೆ ರೂ. 9, ಥಿಂಕ್ ಸಾಫ್‌್ಟ ಗ್ಲೋಬಲ್ ಪ್ರತಿ ಷೇರಿಗೆ ರೂ. 4, ಅಲ್ಟ್ರಾಟೆಕ್ ಸಿಮೆಂಟ್ ಪ್ರತಿ ಷೇರಿಗೆ ರೂ. 9, ಯುಪಿಎಲ್ ಪ್ರತಿ ಷೇರಿಗೆ ರೂ. 4 (ಮು.ಬೆ. ರೂ. 2), ಎಸ್ ಬ್ಯಾಂಕ್ ಪ್ರತಿ ಷೇರಿಗೆ ರೂ. 8 ಝೆನ್ಸಾರ್ ಟೆಕ್ನಾಲಜಿ ಪ್ರತಿ ಷೇರಿಗೆ ರೂ. 6, ಐಡಿಎಫ್‌ಸಿ ಪ್ರತಿ ಷೇರಿಗೆ ರೂ. 2.60 ವಿಪ್ರೊ ಪ್ರತಿ ಷೇರಿಗೆ ರೂ. 5(ಮು.ಬೆ. ರೂ. 2).

* ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಈ ಹಿಂದೆ ವಿತರಿಸಿದ ಮಧ್ಯಂತರ ಲಾಭಾಂಶವನ್ನೇ ಅಂತಿಮ ಲಾಭಾಂಶವೆಂದು ತಿಳಿಸಿದೆ.

* ಎಂಕೋ ಲಿ. ಕಂಪನಿಯು ರೂ. 2ರ ಮುಖಬೆಲೆ ಷೇರಿಗೆ 10 ಪೈಸೆಯಂತೆ ಲಾಭಾಂಶ ಪ್ರಕಟಿಸಿದೆ. ಇಂತಹ ಲಾಭಾಂಶ ಪ್ರಕಟಣೆ ಮೇಲೆ ನಿರ್ಬಂಧ ವಿಧಿಸುವುದು ಅವಶ್ಯಕವಾಗಿದೆ.

ಎಚ್.ಪಿ.ಸಿ. ಬಯೋಸೈನ್ಸಸ್ ಕಂಪೆನಿಯು ಏ.29 ರಂದು ಹಕ್ಕಿನ ಷೇರು ವಿತರಣೆ ಬಗ್ಗೆ ಪರಿಶೀಲಿಸಲಿದೆ. ಈ ಕಂಪೆನಿಯು ಎಸ್.ಎಂ.ಇ. ವಿಭಾಗದ ಎಂ. ಗುಂಪಿನಲ್ಲಿ ವಹಿವಾಟಾಗುತ್ತಿದೆ.

ಮುಖ ಬೆಲೆ ಸೀಳಿಕೆ
*ಸ್ವದೇಶಿ ಇಂಡಸ್ಟ್ರೀಸ್ ಲೀಸಿಂಗ್ ಕಂ. ಲಿ. ಕಂಪೆನಿಯು ಷೇರಿನ ಮುಖ ಬೆಲೆಯನ್ನು ರೂ. 10 ರಿಂದ ರೂ. 1ಕ್ಕೆ ಸೀಳಲಿದೆ.
*ಆಕ್ಸಿಸ್ ಬ್ಯಾಂಕ್ ಲಿ. ಷೇರಿನ ಮುಖ ಬೆಲೆಯನ್ನು ರೂ. 10 ರಿಂದ ರೂ. 2ಕ್ಕೆ ಸೀಳಲಿದೆ.
*ರೆಪ್ಪಿನಾ ಲ್ಯಾಬೊರೆಟರೀಸ್ ಲಿಮಿಟೆಡ್ ಟಿ. ಗುಂಪಿನಲ್ಲಿ ವಹಿವಾಟಾಗುತ್ತಿರುವ ಅಲ್ಪ ಬೆಲೆಯ ಷೇರು ಈ ಕಂಪೆನಿಯ ಷೇರಿನ ಮುಖ ಬೆಲೆಯನ್ನು ರೂ. 10 ರಿಂದ ರೂ. 5ಕ್ಕೆ ಸೀಳಲು ಮೇ 2, ನಿಗದಿತ ದಿನವಾಗಿದೆ.
*ಸ್ಟ್ರೈಡ್‌್ಸ ಆರ್ಕೊಲ್ಯಾಬ್‌್ಸ ಕಂಪೆನಿಯು ಓರಲ್ ಡೊಸೆಜ್ ಫಾಕ್ಟ್ ಉತ್ಪಾದನೆ ಮಾಡುತ್ತಿರುವ ಬೆಂಗಳೂರಿನ ಘಟಕದ ಪರಿಶೀಲನೆ ಆಗಿದ್ದು, ಅನುಮತಿ ಮುಂದುವರಿದ ಕಾರಣ ಷೇರಿನ ಬೆಲೆ ಚಿಮ್ಮಿದೆ.

ವಾರದ ವಿಶೇಷ
ಷೇರುಪೇಟೆ ಸಂವೇದಿ ಸೂಚ್ಯಂಕ ದಾಖಲೆ ಏರಿಕೆ ಕಂಡರೂ ಇದರ ಲಾಭ ಎಲ್ಲ ಕಂಪೆನಿ ಷೇರುಗಳಿಗೆ ಲಭಿಸಿಲ್ಲ. ಚಟುವಟಿಕೆ ಉತ್ತಮ ಕಂಪೆನಿಗಳಿಗೆ ಮಾತ್ರ ಸೀಮಿತವಾಗಿವೆ. ಅನೇಕ ಕಂಪೆನಿಗಳು ಎ ಗುಂಪಿನಲ್ಲಿದ್ದರೂ ನಿರಾಸಕ್ತಿ ಪ್ರದರ್ಶಿಸುತ್ತಿವೆ.

ಕಂಪೆನಿಗಳಾದ ಸುಜಲಾನ್, ಎನರ್ಜಿ, ಡಿಎಲ್‌ಎಫ್, ಅನೇಕ ಬ್ಯಾಂಕಿಂಗ್ ವಲಯದ ಷೇರುಗಳು ತಟಸ್ಥಮಯವಾಗಿವೆ. ಈ ಕಂಪೆನಿಗಳಲ್ಲಿ ಹೂಡಿಕೆ ಮಾಡಿದವರು ಪೇಟೆ ಬಗ್ಗೆ ವೈರಾಗ್ಯ ಭಾವನೆ ತಾಳಿದ್ದಾರೆ. ಈಗಿನ ವಾತಾವರಣಕ್ಕೆ ಇದು ಸರಿಯಲ್ಲ. ಈ ಷೇರುಗಳನ್ನು ಬದಿಗಿರಿಸಿ, ಚುರುಕಾಗಿರುವ ಅಗ್ರಮಾನ್ಯ ಕಂಪೆನಿ ಷೇರುಗಳಲ್ಲಿ ಲಾಭಕ್ಕಾಗಿ ಚಟುವಟಿಕೆಗೆ ತೊಡಗಿದಲ್ಲಿ ಪೇಟೆ ಉತ್ತಮ ಅವಕಾಶ ಕಲ್ಪಿಸುತ್ತಿದೆ.

ಭಾರತೀಯ ಜೀವ ವಿಮಾ ನಿಗಮವು ಕಳೆದ ಜನವರಿ – ಮಾರ್ಚ್ ತ್ರೈಮಾಸಿಕದಲ್ಲಿ ಕೆಲವು ಷೇರುಗಳನ್ನು ಮಾರಾಟ ಮಾಡಿ ರೂ. 6,300 ಕೋಟಿ ಹಣ ಸಂಗ್ರಹಿಸಿದೆ ಎಂಬುದು ಗಮನಾರ್ಹ. ಹಾಗೆಯೇ ಸುಮಾರು ರೂ. 13 ಸಾವಿರ ಕೋಟಿಯಷ್ಟು ಸಂವೇದಿ ಸೂಚ್ಯಂಕದ ಷೇರುಗಳನ್ನು ಕೊಳ್ಳಲು ಹೂಡಿಕೆ ಮಾಡಿದೆ. ಪ್ರಮುಖವಾಗಿ ಹೂಡಿಕೆಗೆ ಆಯ್ಕೆ ಮಾಡಿಕೊಂಡಿರುವ ಕಂಪೆನಿ ಎಂದರೆ ಲಾರ್ಸನ್ ಅಂಡ್ ಟ್ಯೂಬ್ರೊ ಆಗಿದೆ. ಇದು ಪೇಟೆಯಲ್ಲಿ ನಡೆಸಬಹುದಾದ ಚಟುವಟಿಕೆ ರೀತಿಗೆ ಮಾರ್ಗದರ್ಶಿಯಾಗಿದೆ. ಹೂಡಿಕೆ ಉತ್ತಮವಾಗಿರಲಿ, ಲಾಭದ ಆಸೆ ಸೀಮಿತವಾಗಿರಲಿ ಆಗ ಪೇಟೆಯಲ್ಲಿ ಅಪಾರ ಅವಕಾಶಗಳು ಲಭ್ಯವಾಗುತ್ತವೆ.

ನ್ಯಾಷನಲ್ ಫೈನಾನ್ಸ್ ಸಿಸ್ಟಮ್
ಈ ಯೋಜನೆಯಲ್ಲಿನ ನಿಧಿ ರೂ. 35 ಸಾವಿರ ಕೋಟಿ ಹಣವನ್ನು ನಿರ್ವಹಿಸಲು ಶೇ 0.01 ರಷ್ಟು ನಿರ್ವಹಣೆ ಶುಲ್ಕವನ್ನು ಬಿಡ್ ಮಾಡಿರುವ ರಿಲಯನ್‌್ಸ ಕ್ಯಾಪಿಟಲ್ ಫೈನಾನ್ಸ್ ಫಂಡ್‌ನ ಬಿಡ್ ಅತ್ಯಂತ ಸ್ಪರ್ಧಾತ್ಮಕವಾಗಿದೆ ಎಂಬ ಸುದ್ದಿಯು ಸ್ವಾಗತಾರ್ಹವಾಗಿದೆ. ಆದರೆ ಈ ನಿಧಿಯು ಹೂಡಿಕೆದಾರರ ಬೆವರಿನ ಗಳಿಕೆಯಾಗಿದ್ದು ಕೇವಲ ನಿರ್ವಹಣಾ ಶುಲ್ಕ ಕಡಿಮೆ ಇದೆ ಎಂಬುದೇ ಮಾನದಂಡವಾಗದೆ, ಅಗಾದವಾದ ಈ ನಿಧಿ ನಿರ್ವಹಣೆಯನ್ನು ಸುಸೂತ್ರವಾಗಿ ನಿಭಾಯಿಸಿ ಹೂಡಿಕೆದಾರರ ಆಶೋತ್ತರಗಳಿಗನುಗುಣವಾಗಿ ಉಳಿಸಿ ಬೆಳೆಸುವತ್ತ ಆದ್ಯತೆ ನೀಡಬೇಕು ಕಾರಣ ಇಲ್ಲಿ ನಿಖರವಾದ ಇಳುವರಿ ಆಶ್ವಾಸನೆ ಇಲ್ಲದೆ ಇರುವುದು ಹಾಗೂ ಅಸಲು ಹಣದ ಸುರಕ್ಷತೆಯ ಗ್ಯಾರಂಟಿ ಇಲ್ಲದೆ ಇರುವುದು.

ನಿರ್ವಹಣೆ ವಹಿಸುವ ಮುನ್ನ ಆ ಸಂಸ್ಥೆಗಳ ಹಿಂದಿನ ಸಾಧನೆಯೊಂದಿಗೆ, ಈಗಿನ ಸಾಮರ್ಥ್ಯವನ್ನು ಪರಿಶೀಲಿಸಿ ವಹಿಸುವುದು ಉತ್ತಮ. ನಿಧಿ ನಿರ್ವಹಣೆಗೆ ಅತ್ಯಗತ್ಯವಾದ ಹಣಕ್ಕಿಂತ ಕಡಿಮೆ ಬಿಡ್ ಇದ್ದಲ್ಲಿ ತಿರಸ್ಕರಿಸಿದರೆ ಯೋಜನೆಯ ಯಶಸ್ಸಿಗೆ ಸಹಕಾರಿ. ಈ ಕ್ರಮ ಹಣದ ಸೋರಿಕೆ ತಡೆಗಟ್ಟಬಹುದಲ್ಲವೇ?

* 98863&13380

(ಮಧ್ಯಾಹ್ನ 4.30ರ ನಂತರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.