ಈ ವಾರ ಷೇರುಪೇಟೆಯಲ್ಲಿ ಏರಿಳಿತಗಳ ರಭಸ ತೀವ್ರವಾಗಿತ್ತು. ವಾರದ ಪ್ರಮುಖ ಸುದ್ದಿಗಳಾದ ಚಾಲ್ತಿ ಖಾತೆಯ ಕೊರತೆಯು ಮೂರನೆ ತ್ರೈಮಾಸಿಕದಲ್ಲಿ ಕುಸಿತ ಕಂಡಿರುವುದು, ಐ.ಎಂ.ಎಫ್. ನಮ್ಮ ದೇಶದ ಜಿ.ಡಿ.ಪಿ. ಬೆಳವಣಿಗೆಯನ್ನು ಶೇ7.9 ರಷ್ಟಿರುವುದೆಂಬ ಉವಾಚ, ಸಂಸತ್ನಲ್ಲಿ ವಿಮಾ ಮಸೂದೆ ಆಂಗೀಕಾರ, ಮುಂತಾದವುಗಳ ಪ್ರಭಾವ ಕ್ಷಣಿಕವಾಗಿತ್ತು.

ಐ.ಟಿ.ಸಿ. ಕಂಪೆನಿಯು ಸಿಗರೇಟ್ಗಳ ಬೆಲೆಯನ್ನು ಹೆಚ್ಚಿಸಿದ ಕಾರಣ ಏರಿಕೆ ಕಂಡು, ನಂತರ ಲಾಭ ಗಳಿಕೆಯು ತೃಪ್ತಿಕರವಾಗಿರಲಾರದೆಂಬ ವಿಶ್ಲೇಷಣೆ ಷೇರಿನ ಬೆಲೆಯನ್ನು ಇಳಿಯುವಂತೆ ಮಾಡಿತು. ಇನ್ಶುರನ್ಸ್ ಸಂಬಂಧಿತ ಕಂಪೆನಿಗಳಾದ ಎಕ್ಸೈಡ್ ಇಂಡಸ್ಟ್ರೀಸ್, ರಿಲೈಯನ್ಸ್ ಕ್ಯಾಪಿಟಲ್, ಮ್ಯಾಕ್ಸ್ ಇಂಡಿಯಾಗಳು ಶುಕ್ರವಾರ ಆರಂಭಿಕ ಕ್ಷಣದಲ್ಲಿ ಗಗನಕ್ಕೆ ಚಿಮ್ಮಿ ನಂತರ ಧರೆಗಿಳಿಯಿತು. ಅಂತ್ಯದಲ್ಲಿ ನೀರಸಮಯವಾಗಿದ್ದವು.

ರೂಪಾಯಿಯ ಬೆಲೆ ಡಾಲರ್ ವಿರುದ್ಧ ಇಳಿಕೆಯಾದಲ್ಲಿ ರಪ್ತು ಆಧಾರಿತ ಕಂಪೆನಿಗಳಿಗೆ ವಿಶೇಷವಾಗಿ ಐ.ಟಿ. ಕಂಪೆನಿಗಳಿಗೆ ಅನುಕೂಲಕರವೆಂದು ಆ ಸಮಯದಲ್ಲಿ ಆ ವಲಯದ ಷೇರುಗಳ ಬೆಲೆಯೂ ಏರಿಕೆ ಕಾಣುವುದು ಸ್ವಾಭಾವಿಕ. ಆದರೆ ಸೋಮವಾರ ಮತ್ತು ಶುಕ್ರವಾರದ ರೂಪಾಯಿ ಬೆಲೆಯೂ ಕುಸಿತಕಂಡಾಗ ಇತರೆ ವಲಯ ಕಂಪೆನಿಗಳಂತೆ ಐ.ಟಿ.ವಲಯದ ಕಂಪೆನಿಗಳು ಇಳಿಕೆ ಪಡೆದಿವೆ. ಇಳಿಕೆಯ ಪ್ರಮಾಣವು ಶೇ2 ರಷ್ಟಿರುವುದು ಗಮನಾರ್ಹ ಅಂಶವಾಗಿದೆ.

ಫಾರ್ಮ ವಲಯದ ಕಂಪೆನಿಗಳು ಮಾತ್ರ ವಿಜೃಂಭಿಸಿದವು. ಸ್ಟ್ರೈಡ್ಸ್ ಆರ್ಕೋಲ್ಯಾಬ್, ಸನ್ ಫಾರ್ಮ, ಲುಪಿನ್, ಶಿಲ್ಪ ಮೆಡಿಕೇರ್, ವೊಕಾರ್ಡ್, ಮುಂತಾದವು ವಾರ್ಷಿಕ ಗರಿಷ್ಟ ದಾಖಲಿಸಿದವು. ಆಟೋ ಮತ್ತು ಬ್ಯಾಂಕಿಂಗ್ ವಲಯದ ಕಂಪೆನಿಗಳು ಸಹ ನೀರಸ ಚಟುವಟಿಕೆಯಲ್ಲಿದ್ದವು. ಈ ವಾತಾವರಣಕ್ಕೆ ಪ್ರಮುಖ ಕಾರಣ ಮಾರ್ಚ್ ವರ್ಷಾಂತ್ಯ ಸಮೀಪಿಸುತ್ತಿರುವುದು ಮತ್ತು ಪೇಟೆಯಲ್ಲಿ ಹೆಚ್ಚಿನ ಕಂಪೆನಿಗಳ ದರಗಳು ಗರಿಷ್ಠ ಏರಿಕೆಯನ್ನು ಕಂಡಿರುವುದಾಗಿದೆ.

ಪ್ರತಿಯೊಂದು ಏರಿಕೆಯ ಹಿಂದೆ ಕ್ಷಿಪ್ರ ಮಾರಾಟದ ಒತ್ತಡವಿರುವುದು ಶುಕ್ರವಾರದ ಸಂವೇದಿ ಸೂಚ್ಯಂಕದ ಚಲನೆಯು ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಎಚ್.ಸಿ.ಎಲ್.ಟೆಕ್ ಕಂಪೆನಿಯ ಪ್ರವರ್ತಕರು ಬೋನಸ್ ಷೇರಿನ ವಿತರಣೆಯ ಸಮಯದಲ್ಲಿ 56 ಲಕ್ಷ ಷೇರುಗಳನ್ನು ಮಾರಾಟ ಮಾಡಿರುವುದು ಗಮನಾರ್ಹ ಅಂಶವಾಗಿದೆ.

ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕವು 945 ಅಂಶಗಳ ಇಳಿಕೆ ಕಂಡಿದೆ. ಮಧ್ಯಮ ಶ್ರೇಣಿ ಸೂಚ್ಯಂಕವು 250 ಅಂಶಗಳ ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕವು 247 ಅಂಶಗಳ ಇಳಿಕೆ ಕಂಡು ಪೇಟೆಯಲ್ಲಿ ಜಾತ್ಯಾತೀತ ಮಾರಾಟದ ವಾತಾವರಣಕ್ಕೆ ಕನ್ನಡಿ ಹಿಡಿದಿದೆ.

ವಿದೇಶಿ ವಿತ್ತೀಯ ಸಂಸ್ತೆಗಳು ಮತ್ತು ಸ್ವದೇಶಿ ವಿತ್ತೀಯ ಸಂಸ್ತೆಗಳು ಮಿಶ್ರಿತ ಚಟುವಟಿಕೆ ಪ್ರದರ್ಶಿಸಿದವು. ವಿದೇಶಿ ವಿತ್ತೀಯ ಸಂಸ್ತೆಗಳು ₹ 445 ಕೋಟಿ ಹೂಡಿಕೆ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ತೆಗಳು ₹ 537 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ₹ 103.28 ಲಕ್ಷ ಕೋಟಿಯಲ್ಲಿತ್ತು.

ಹೊಸ ಷೇರು
* ಆ್ಯಡ್ ಲ್ಯಾಬ್ ಎಂಟರ್ ಟೇನ್ಮೆಂಟ್ ಕಂಪೆನಿಯ ಪ್ರತಿ ಷೇರಿಗೆ ₹ 221 ರಿಂದ ₹ 230 ರ ಅಂತರದ ಆರಂಭಿಕ ಷೇರು ವಿತರಣೆಗೆ ಸಾರ್ವಜನಿಕ ಸ್ಪಂದನೆ ಪ್ರೋತ್ಸಾಹದಾಯಕವಲ್ಲದ ಕಾರಣ, ಕಂಪೆನಿಯು ವಿತರಣೆ ಬೆಲೆಯನ್ನು ₹ 180 ರಿಂದ ₹ 215 ಕ್ಕೆ ಇಳಿಸಿ ಕೊನೆಯ ದಿನವನ್ನು ಮೂರು ದಿನ ಅಂದರೆ 17ನೇ ಮಾರ್ಚ್ ವರೆಗೆ ಮುಂದೂಡಿದೆ.

ಈ ವಿತರಣೆಯ ಭಾಗವಾಗಿ ಆ್ಯಂಕರ್ ಇನ್ವೆಸ್ಟರ್ ಗಳಾದ ಎಚ್.ಡಿ.ಎಫ್.ಸಿ. ಟ್ರಸ್ಟೀ ಕಂಪೆನಿ ಶೇ15.97 ರಷ್ಟು, ಎಲ್ ಅಂಡ್ ಟಿ ಮ್ಯೂಚುಯಲ್ ಫಂಡ್ ಟ್ರಸ್ಟೀ ಕಂಪೆನಿ ಶೇ24.93 ರಷ್ಟು, ಐ.ಎಲ್ & ಎಫ್ ಎಸ್ ಟ್ರಸ್ಟ್ ಕಂಪೆನಿ ಶೇ23.96 ರಷ್ಟು, ಆ್ಯಕ್ಸಿಸ್ ಮ್ಯುಚುಯಲ್ ಫಂಡ್ ಶೇ15.97 ರಷ್ಟು ಆ್ಯಂಕರ್ ಇನ್ವೆಸ್ಟರ್ ಭಾಗದಲ್ಲಿ ಪ್ರತಿ ಷೇರಿಗೆ ₹ 211 ರಂತೆ ಪಡೆದಿದ್ದರೂ ವಿತರಣೆಗೆ ಬೆಂಬಲ ದೊರೆಯದಿರುವುದು ಗಮನಾರ್ಹ ಅಂಶವಾಗಿದೆ.

* ಮೋದಿ ಉದ್ಯೋಗ್ ಲಿ., ಕಲ್ಕತ್ತಾ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿ ಕೊಂಡಿರುವ ಕಂಪೆನಿಯಾಗಿದ್ದು, ಮಾರ್ಚ್ 11 ರಿಂದ ಬಿ.ಎಸ್.ಇ.ಯ ಡಿ.ಟಿ. ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

* ಪಿ.ಟಿ.ಸಿ.ಇಂಡಸ್ಟ್ರೀಸ್ ಕಂಪೆನಿ ಯು ಓ.ಟಿ.ಸಿ. ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿದ್ದು, ಮಾರ್ಚ್ 12 ರಿಂದ ಬಿ.ಎಸ್.ಇ.ಯ ಟಿ. ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

* ತಿರುಪತಿ ಫಿನ್ ಕಾರ್ಪ್ ಕಂಪೆನಿ ಜೈಪುರ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿದ್ದು, ಮಾರ್ಚ್ 16 ರಿಂದ ಬಿ.ಎಸ್.ಇ.ಯ ಡಿ.ಟಿ. ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

* ಗುಜರಾತ್ ಬಿಟುಮೆನ್ ಕಂಪೆನಿಯು ಅಹಮದಾಬಾದ್ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿದ್ದು ಮಾರ್ಚ್ 16ರಿಂದ ಬಿ.ಎಸ್.ಇ.ಯ ಟಿ. ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

* ಇನಾಕ್ಸ್ ವಿಂಡ್ ಲಿಮಿಟೆಡ್ ಕಂಪೆನಿಯು, ಪ್ರತಿ ಷೇರಿಗೆ ₹ 315 ರಿಂದ 325 ರ ಅಂತರದಲ್ಲಿ ಆರಂಬಿಕ ಷೇರು ವಿತರಣೆ ಮಾಡಲಿದ್ದು, ವಿತರಣೆಯು ಮಾರ್ಚ್ 18 ರಿಂದ ಮಾರ್ 20 ರವರೆಗೂ ತೆರೆದಿರುತ್ತದೆ. ಸಣ್ಣ ಹೂಡಿಕೆದಾರರಿಗೆ ₹ 12 ರಂತೆ ಪ್ರತಿ ಷೇರಿಗೆ ರಿಯಾಯ್ತಿ ದೊರೆಯಲಿದೆ. ಈ ಕಂಪೆನಿಯು ಗುಜರಾತ್ ಫ್ಲೋರೋ ಕೆಮಿಕಲ್ಸ್ ಲಿಮಿಟೆಡ್ ಕಂಪೆನಿಯ ಅಂಗ ಸಂಸ್ಥೆಯಾಗಿದೆ.

ಬೋನಸ್ ಷೇರು
* ಎಚ್.ಸಿ.ಎಲ್. ಟೆಕ್ ಕಂಪೆನಿಯು ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 20 ನಿಗದಿತ ದಿನವಾಗಿದೆ.
* ಟೆಕ್ ಮಹಿಂದ್ರಾ ಕಂಪೆನಿಯು ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 20 ನಿಗದಿತ ದಿನವಾಗಿದೆ.

ಗಜಗಾತ್ರದ ವಹಿವಾಟು
* ಎಚ್.ಸಿ.ಎಲ್.ಟೆಕ್ ಪ್ರವರ್ತಕರಾದ ಶಿವ ನಾಡರ್ ಫೌಂಡೇಶನ್ 9 ರಂದು 56 ಲಕ್ಷ ಎಚ್.ಸಿ.ಎಲ್.ಟೆಕ್ ಷೇರನ್ನು ಮಾರಾಟ ಮಾಡಿದ್ದಾರೆ.

* ಗೋಲ್ಡ್ ಮ್ಯಾನ್ ಸಾಕ್ಸ್ ಇಂಡಿಯಾ ಫಂಡ್ 12 ರಂದು 45 ಲಕ್ಷ ಇನಾಕ್ಸ್ ಲೀಶರ್ ಶೇರುಗಳನ್ನು ಖರೀದಿಸಿದೆ.

* ಮೆಕರೇ ಫಂಡ್ ಸೊಲೂಶನ್ಸ್ 13 ರಂದು 5.92 ಲಕ್ಷ ಇನಾಕ್ಸ್ ಲೀಶರ್ ಶೇರುಗಳನ್ನು ಖರೀದಿಸಿದೆ.

ಸ್ವಿಸ್ ಫೈನಾನ್ಸ್ ಕಾರ್ಪೊ
*ರೇಶನ್ 13 ರಂದು 30 ಲಕ್ಷ ಝೀ ಲರ್ನ್ ಷೇರನ್ನು ಖರೀದಿಸಿದೆ. ಕಂಪನಿಗಳ ವಿಲೀನಸನ್ ಫಾರ್ಮ ಮತ್ತು ರಾನ್ಬಾಕ್ಸಿ ಕಂಪೆನಿಗಳ ವಿಲೀನಕ್ಕೆ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯವು ಸಮ್ಮತಿಸಿದೆ.

ವಾರದ ವಿಶೇಷ
ಹೊಸದಾಗಿ ಷೇರುಪೇಟೆ ಪ್ರವೇಶಿಸುವವರು ಹೆಚ್ಚಾಗಿ ಇಂಟರ್ನೆಟ್ ಟ್ರೇಡಿಂಗ್, ಮಾರ್ಜಿನ್ ಟ್ರೇಡಿಂಗ್, ಡಿರೈವೆಟೀವ್ ಟ್ರೇಡಿಂಗ್ ಮುಂತಾದವುಗಳನ್ನು ಉಪಯೋಗಿಸಿಕೊಳ್ಳದೆ ಬಂಡವಾಳ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಇಚ್ಚಿಸುತ್ತಾರೆ. ಈ ವಿಚಾರವನ್ನು ಆಧಾರವಗಿರಿಸಿಕೊಂಡು, ಇವರುಗಳ ಅನುಕೂಲಕ್ಕಾಗಿ ಟ್ರೇಡಿಂಗ್ ಮತ್ತು ಡಿ-ಮ್ಯಾಟ್ ಖಾತೆ ಆರಂಭಿಸಲು ಸರಳವಾದ ಪದ್ಧತಿ ಜಾರಿಗೊಳಿಸಲು ಸರಳ್ ಎ .ಓ .ಎಫ್ (ಸರಳ್ ಅಕೌಂಟ್ ಓಪನಿಂಗ್ ಫಾರ್ಮ್)ನ್ನು ಅಭಿವೃದ್ಧಿಗೊಳಿಸಲಾಗಿದೆ.

ರೈಟ್ಸ್ ಅಂಡ್ ಆಬ್ಲಿಗೇಶನ್, ಯುನಿಫಾರ್ಮ್ ರಿಸ್ಕ್ ಡಿಸ್ ಕ್ಲೋಶರ್ಸ್, ಮನಿ ಲಾಂಡರಿಂಗ್ ನಿಯಮಗಳು ಅನ್ವಯವಾಗಲಿದ್ದು ವಿಳಾಸದ ದಾಖಲೆ ಒದಗಿಸುವುದನ್ನು ಸರಳೀಕರಿಸಲಾಗಿದೆ. ಸರಳ್ ಎ .ಓ. ಎಫ್ ಮೂಲಕ ಪೇಟೆ ಪ್ರವೇಶಿಸಿದ್ದರೂ ಮುಂದೆ ಇತರೆ ಸವಲತ್ತುಗಳನ್ನು ಪಡೆಯಲು ಇಚ್ಚಿಸಿದಲ್ಲಿ ಅಗತ್ಯವಿರುವ ಇತರೆ ದಾಖಲೆಗಳನ್ನು ಪೂರೈಸುವುದರೊಂದಿಗೆ ಮುನ್ನಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.