ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಿನಲ್ಲಿ ಮತದಾನ ಮಾಡಿ ಬಳಿಕ EVM ಸರಿ ಇಲ್ಲ ಎಂದು ಗಲಾಟೆ ಮಾಡಿದ ಮತದಾರ!

ಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕಾಗವಾಡ ತಾಲ್ಲೂಕಿನ ಮಂಗಾವತಿ ಗ್ರಾಮದ ಮತಗಟ್ಟೆ 154ರಲ್ಲಿ
Published 7 ಮೇ 2024, 13:42 IST
Last Updated 7 ಮೇ 2024, 13:42 IST
ಅಕ್ಷರ ಗಾತ್ರ

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕಾಗವಾಡ ತಾಲ್ಲೂಕಿನ ಮಂಗಾವತಿ ಗ್ರಾಮದ ಮತಗಟ್ಟೆ 154ರಲ್ಲಿ ವ್ಯಕ್ತಿಯೊಬ್ಬರು, ಮತದಾನ ಮಾಡಿದ ಮೇಲೆ ಯಂತ್ರವು ಶಬ್ದ ಮಾಡಿಲ್ಲ ಎಂದು ಗಲಾಟೆ ಮಾಡಿದ ಪ್ರಸಂಗ ನಡೆಯಿತು.

‘ನಾನು ಸರಿಯಾಗಿಯೇ ಮತ ಹಾಕಿದ್ದೇನೆ. ಈ ಯಂತ್ರ ಸರಿಯಾಗಿಲ್ಲ’ ಎಂದು ಮತದಾರ ಮತಯಂತ್ರದ ಮುಂದೆಯೇ ನಿಂತು ಕೂಗಾಡಲು ಶುರು ಮಾಡಿದರು. ಯಂತ್ರವು ಸದ್ದು ಮಾಡಿದೆ, ನೀವೇ ಕೇಳಿಸಿಕೊಂಡಿಲ್ಲ ಎಂದು ಮತಗಟ್ಟೆ ಸಿಬ್ಬಂದಿ ಮನವರಿಕೆ ಮಾಡಲು ಯತ್ನಿಸಿದರು. ಆದರೂ ಕೇಳದೇ ಮತದಾರ ಕೂಗಾಡಲು ಶುರು ಮಾಡಿದರು.

ಆಗ ಮತಗಟ್ಟೆಯೊಳಗೆ ಬಂದ ಪೊಲೀಸ್‌ ಕಾನ್‌ಸ್ಟೆಬಲ್‌ ವ್ಯಕ್ತಿಯನ್ನು ಹೊರಕ್ಕೆ ತಳ್ಳಿದರು. ಮುಂಚೆಯೇ ತೂಗಾಡುತ್ತಿದ್ದ ವ್ಯಕ್ತಿ ಮತಗಟ್ಟೆಯೊಳಗೆ ಬೋರಲು ಬಿದ್ದರು. ನಂತರ ಅವರನ್ನು ಎತ್ತಿ ಹೊರಗೆ ಹಾಕಲಾಯಿತು.

‘ವ್ಯಕ್ತಿ ಮದ್ಯಪಾನ ಮಾಡಿ ಬಂದಿದ್ದರು. ಮತದಾನ ಮಾಡಿದ ಬಳಿಕ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ದರಿಂದ ಪೊಲೀಸರು ಹೊರಗೆ ಕಳಿಸಿದರು’ ಎಂದು ಮತಗಟ್ಟೆ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT