ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಚಕ ಗೆಲುವು ಪಡೆದ ಚಿಮ್ಮಣಮಾಡ, ಮಂಡುವಂಡ

ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ
Published 9 ಮೇ 2024, 8:07 IST
Last Updated 9 ಮೇ 2024, 8:07 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಸಮೀಪದ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಚಿಮ್ಮಣಮಾಡ, ಮಂಡುವಂಡ ರೋಚಕ ಗೆಲುವು ಪಡೆದವು.

ಚಿಮ್ಮಣಮಾಡ ತಂಡವು ಕಾಂಡೇರ ನಡುವಿನ ಪಂದ್ಯವು ಪ್ರೇಕ್ಷಕರನ್ನು ತುದಿಗಾಲ ಮೇಲೇರಿಸಿತು. ಅಂತಿಮವಾಗಿ ಚಿಮ್ಮಣಮಾಡ 5 ರನ್‌ಗಳ ರೋಚಕ ಗೆಲುವು ಪಡೆಯಿತು. ಚಿಮ್ಮಣಮಾಡ ನೀಡಿದ 69 ರನ್‌ಗಳ ಗುರಿಯನ್ನು ಬೆನ್ನತ್ತಿದ ಕಾಂಡೇರ 63 ರನ್‌ ಗಳಿಸಿ ಗೆಲುವಿನ ಹೊಸ್ತಿಲಿನಲ್ಲಿ ಎಡವಿ ನಿರಾಶವಾಯಿತು.

ಮಂಡುವಂಡ ಮತ್ತು ಪಟ್ರಪಂಡ ನಡುವಿನ ಪಂದ್ಯವೂ ಇದೇ ಬಗೆಯ ರೋಚಕತೆಯ ರಸದೌತಣ ನೀಡಿತು. ಮಂಡುವಂಡ ನೀಡಿದ 64 ರನ್‌ಗಳ ಗುರಿಯನ್ನು ಬೆನ್ನತ್ತಿದ ಪಟ್ರಪಂಡ 54 ರನ್‌ಗಳಿಗೆ ಸೀಮಿತವಾಯಿತು. ಅಂತಿಮವಾಗಿ, ಮಂಡುವಂಡ ತಂಡಕ್ಕೆ 9 ರನ್‌ಗಳ ಗೆಲುವು ದಕ್ಕಿತು.

ನಾಮೇರ ತಂಡವು ಐಚೆಟ್ಟೀರ ವಿರುದ್ಧ 16 ರನ್‌ಗಳ ಜಯ ಪಡೆಯಿತು. ನಾಮೇರ ನೀಡಿದ 61 ರನ್‌ಗಳ ಗುರಿಯನ್ನು ಬೆನ್ನತ್ತಿದ ಐಚೆಟ್ಟೀರ 44 ರನ್‌ಗಳನ್ನು ಗಳಿಸಿ, ಗೆಲುವಿನ ದಡವನ್ನು ತಲುಪಲಿಲ್ಲ.

ಮಾಳೇಟೀರ ತಂಡವು ನಾಮೇರ ತಂಡವನ್ನು 71 ರನ್‌ಗಳ ಅಂತರದಿಂದ ಮಣಿಸಿತು.ಮಾಳೇಟೀರ ನೀಡಿದ 111 ರನ್‌ಗಳ ಗುರಿಯನ್ನು ಬೆನ್ನತ್ತಿದ ನಾಮೇರ 40 ರನ್‌ಗಳನ್ನಷ್ಟೇ ಗಳಿಸಿತು.

ಕುಂದತ್ ಮಾಳೇಟೀರ ತಂಡವು ಕರವಟ್ಟಿರ ತಂಡವನ್ನು 32 ರನ್‌ಗಳಿಂದ ಮಣಿಸಿತು. ಕುಂದತ್ ಮಾಳೇಟೀರ ತಂಡವು ನೀಡಿದ 104 ರನ್‌ಗಳ ಗುರಿಯನ್ನು ಬೆನ್ನತ್ತಿದ ಕರವಟ್ಟಿರ 71 ರನ್‌ಗಳಿಗಷ್ಟೇ ಸೀಮಿತವಾಯಿತು.

ಮೂಕ್ಕಾಟೀರ (ಕಡಗದಾಳು) ತಂಡವು ಚೊಟ್ಟಂಗಡ ತಂಡವು 7 ವಿಕೆಟ್‌ಗಳಿಂದ ಸೋಲಿಸಿತು. ಚೊಟ್ಟಂಗಡ ನೀಡಿದ 73 ರನ್‌ಗಳ ಗುರಿಯನ್ನು 3 ವಿಕೆಟ್‌ ಕಳೆದುಕೊಂಡು ಮೂಕ್ಕಾಟೀರ (ಕಡಗದಾಳು) ತಂಡವು ತಲುಪಿತು.

ಚೋಟ್ಟೆಯಂಡಮಾಡ ತಂಡವು ಪೆಮ್ಮಂಡ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಪೆಮ್ಮಂಡ ನೀಡಿದ 63 ರನ್‌ಗಳ ಗುರಿಯನ್ನು ಬೆನ್ನತ್ತಿದ ಚೋಟ್ಟೆಯಂಡಮಾಡ ತಂಡವು 3 ವಿಕೆಟ್‌ ಕಳೆದುಕೊಂಡು ತಲುಪಿತು.

ತೆಕ್ಕಡ ತಂಡವು ಪರುವಂಡ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು. ಪರುವಂಡ ನೀಡಿದ 43 ರನ್‌ಗಳ ಗುರಿಯನ್ನು ಬೆನ್ನತ್ತಿದ ತೆಕ್ಕಡ ತಂಡವು ಕೇವಲ 2 ವಿಕೆಟ್‌ ಕಳೆದುಕೊಂಡು ತಲುಪಿತು.

ಮುಕ್ಕಾಟೀರ (ಕುಂಜಿಲಗೇರಿ) ತಂಡವು ತ್ಯಾಚಮಂಡ ತಂಡದ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿತು. ತ್ಯಾಚಮಂಡ ನೀಡಿದ 67 ರನ್‌ಗಳ ಗುರಿಯನ್ನು ಬೆನ್ನತ್ತಿದ ಮುಕ್ಕಾಟೀರ (ಕುಂಜಿಲಗೇರಿ) ತಂಡವು 4 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 6.4 ಓವರ್‌ಗಳಲ್ಲಿಯೇ ತಲುಪಿತು.

ಮಲ್ಚೀರ ತಂಡವು ದೇಯಂಡ ವಿರುದ್ಧ 6 ವಿಕೆಟ್‌ಗಳ ಜಯ ಪಡೆಯಿತು. ದೇಯಂಡ ನೀಡಿದ 82 ರನ್‌ಗಳ ಗುರಿಯನ್ನು ಬೆನ್ನತ್ತಿದ ಮಲ್ಚೀರ 4 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು.

ಮಚ್ಛಮಾಡ ತಂಡವು ಕೂತಂಡ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿತು. ಕೂತಂಡ ನೀಡಿದ 77 ರನ್‌ಗಳ ಗುರಿಯನ್ನು ಮಚ್ಛಮಾಡ 3 ವಿಕೆಟ್ ಕಳೆದುಕೊಂಡು ತಲುಪಿತು.

ಮುದ್ದಿಯಾಡ ತಂಡವು ಮಲ್ಲಂಡ ತಂಡವನ್ನು 8 ವಿಕೆಟ್‌ಗಳಿಂದ ಮಣಸಿತು. ಮಲ್ಲಂಡ ನೀಡಿದ 75 ರನ್‌ಗಳ ಗುರಿಯನ್ನು 2 ವಿಕೆಟ್ ಕಳೆದುಕೊಂಡ ಮುದ್ದಿಯಾಡ 6 ಓವರ್‌ಗಳಲ್ಲಿಯೇ ತಲುಪಿತು.

ಗಾಂಡಂಗಡ ತಂಡವು ಐಯ್ಶಮಾಡ ವಿರುದ್ಧ 7 ವಿಕೆಟ್‌ಗಳ ಜಯ ಪಡೆಯಿತು. ಐಯ್ಶಮಾಡ ನೀಡಿದ 84 ರನ್‌ಗಳ ಗುರಿಯನ್ನು ಬೆನ್ನತ್ತಿದ ಗಾಂಡಂಗಡ 3 ವಿಕೆಟ್‌ಗಳನ್ನು ಕಳೆದುಕೊಂಡು ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT