ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಪಡಿಯಲ್ಲಿದ್ದ ಕುಟುಂಬಕ್ಕೆ ಬೆಚ್ಚಗಿನ ಸೂರು ಕೊಡುಗೆ ನೀಡಿದ ದಾನಿ ಬಿ.ಎಂ.ಗಣೇಶ್

ಹೇಮಂತ್ ಎಂ.ಎನ್.
Published 21 ಫೆಬ್ರುವರಿ 2024, 6:56 IST
Last Updated 21 ಫೆಬ್ರುವರಿ 2024, 6:56 IST
ಅಕ್ಷರ ಗಾತ್ರ

ವಿರಾಜಪೇಟೆ:  ‘ಇದ್ದಷ್ಟು ಸಾಲದು, ಮತ್ತಷ್ಟು ಬೇಕು’ ಎನ್ನುವುದು ಬಹುತೇಕರ ಮನಸ್ಥಿತಿ. ಇಂತಹ ಮನಸ್ಥಿತಿಗಳ ನಡುವೆ ಪರರಿಗಾಗಿ ಮಿಡಿಯುವವರು ತೀರಾ ವಿರಳ. ಇಂತಹ ಸ್ಥಿತಿಯಲ್ಲಿ ಇಲ್ಲೊಬ್ಬರು ಬಡ ಕುಟುಂಬಕ್ಕೆ ಸೂರು ಒದಗಿಸಿ, ನೆಮ್ಮದಿ ನೀಡಿದ್ದಾರೆ.

ಹೀಗೆ ತನ್ನ ಶ್ರಮದಿಂದ ಸುಮಾರು ₹2 ಲಕ್ಷ ವೆಚ್ಚದಲ್ಲಿ ಬಡ ಕುಟುಂಬಕ್ಕೆ ಬೆಚ್ಚಗಿನ ಸೂರೊಂದನ್ನು ಕಟ್ಟಿಸಿಕೊಟ್ಟು ಮಾನವೀಯತೆಗೆ ರೂಪು ನೀಡಿದವರು ಆರ್ಜಿ ಗ್ರಾಮದ ಬಿ.ಎಂ.ಗಣೇಶ್. ಇವರು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ.

ಗ್ರಾಮದಲ್ಲಿ ದಿನಗೂಲಿ ಮಾಡಿಕೊಂಡು, ಬೆಟ್ಟ ಕುರುಬ ಸಮುದಾಯದ ಕಾಳ, ಅವರ ಪತ್ನಿ ಸುಮ, ಮಕ್ಕಳೊಂದಿಗೆ ಪ್ಲಾಸ್ಟಿಕ್ ಹಾಗೂ ಶೀಟ್‌ನ ಜೋಪಡಿಯಲ್ಲಿ ಚಳಿ,ಮಳೆ, ಗಾಳಿಯಲ್ಲೂ ಜೀವನ ಸಾಗಿಸುತ್ತಿತ್ತು. ಕುಟುಂಬದ ದುಸ್ಥಿತಿಯನ್ನು ಗಮನಿಸಿದ ಗಣೇಶ್ ,  ಸ್ವಂತ ಹಣದಿಂದ ನಾಲ್ಕು ಕೊಣೆಗಳ ಪುಟ್ಟ ಮನೆಯನ್ನು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಈಚೆಗೆ ಈ ನೂತನ ಮನೆಯ ಗೃಹ ಪ್ರವೇಶ ನಡೆಸಿ, ಕುಟುಂಬ ನೂತನ ಮನೆಯಲ್ಲಿ ವಾಸಿಸುತ್ತಿದೆ.
ಕಾಳ  ಮಾತನಾಡಿ,  ಕೂಲಿ ಕೆಲಸ ಮಾಡುವ ನಮಗೆ ಸ್ವಂತ ಮನೆ ಎಂಬುದು ಕನಸಾಗಿತ್ತು. ಬಿ.ಎಂ. ಗಣೇಶ್ ಅವರ ಸಹಕಾರದಿಂದ ಕನಸು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ದಾನಿ ಗಣೇಶ್ ಮಾತನಾಡಿ, ಕುಟುಂಬ ವಾಸಿಸುತ್ತಿರುವ ಗುಡಿಸಲು ನೋಡಿ ತುಂಬಾ ಬೇಸರವಾಗಿತ್ತು.  ತಾಲ್ಲೂಕು ಪಂಚಾಯಿತಿ ಸದಸ್ಯನಾಗಿದ್ದ ಸಂದರ್ಭ ಸರ್ಕಾರದ ಯೋಜನೆಯ ಮೂಲಕ ಅವರಿಗೆ ಮನೆ ಕಟ್ಟಿಕೊಡಬೇಕೆಂದು ಪ್ರಯತ್ನಿಸಿದೆ. ಆದರೆ ಜಾಗದ ದಾಖಲಾತಿಗಳು ಸಮರ್ಪಕವಾಗಿಲ್ಲದ ಕಾರಣ ಸಾಧ್ಯವಾಗಿರಲಿಲ್ಲ. ಬಡತನ, ಹುಲ್ಲಿನ ಮನೆಯಲ್ಲಿ ಹುಟ್ಟಿಬೆಳೆದ ನನಗೆ ಆ ಕುಟುಂಬದ ನೋವು-ಸಂಕಷ್ಟದ ಸ್ಪಷ್ಟ ಅರಿವಿತ್ತು. ಶ್ರೀಮಂತರಲ್ಲದಿದ್ದರೂ,  ಕೊಂಚ ಸುಸ್ಥಿತಿಯಲ್ಲಿದ್ದೇವೆ. ಹೀಗಾಗಿ, ಸ್ವಂತ ಹಣದಿಂದಲೇ ಬಡ ಕುಟುಂಬಕ್ಕೆ ಮನೆಯನ್ನು ಕಟ್ಟಿಕೊಡಲು ಯಶಸ್ವಿಯಾಗಿದ್ದೇನೆ. ಸಹಾಯವನ್ನು ಮಾಡಿದ ನೆಮ್ಮದಿಯಿದೆ. ಮನೆಗೆ ವಿದ್ಯುತ್ ಮತ್ತು ಶೌಚಾಲಯದ ಅವಶ್ಯಕತೆಯಿದ್ದು, ಅಗತ್ಯ ದಾಖಲೆಯಿಲ್ಲದ ಕಾರಣ ಸ್ವಲ್ಪ ವಿಳಂಬವಾಗಿದೆ ಎಂದರು.

 ಕಾಳ ಮತ್ತು ಕುಟುಂಬದವರು ಮೊದಲು ವಾಸಿಸುತ್ತಿದ್ದ ಗುಡಿಸಲು 
 ಕಾಳ ಮತ್ತು ಕುಟುಂಬದವರು ಮೊದಲು ವಾಸಿಸುತ್ತಿದ್ದ ಗುಡಿಸಲು 
ಬೆಟ್ಟ ಕುರುಬರ ಕಾಳ ಮತ್ತು ಕುಟುಂಬದವರು ಬಿ.ಎಂ.ಗಣೇಶ್ ಮತ್ತು ಕುಟುಂಬದವರಿಗೆ ನೆನೆಪಿನ ಕಾಣಿಕೆ ನೀಡಿದರು.
ಬೆಟ್ಟ ಕುರುಬರ ಕಾಳ ಮತ್ತು ಕುಟುಂಬದವರು ಬಿ.ಎಂ.ಗಣೇಶ್ ಮತ್ತು ಕುಟುಂಬದವರಿಗೆ ನೆನೆಪಿನ ಕಾಣಿಕೆ ನೀಡಿದರು.
ಹೊಸ ಮನೆಯ ಮುಂಭಾಗದಲ್ಲಿ ಬಿ.ಎಂ.ಗಣೇಶ್ ಹಾಗೂ ಬೆಟ್ಟ ಕುರುಬರ ಕಾಳ ಅವರ ಕುಟುಂಬ
ಹೊಸ ಮನೆಯ ಮುಂಭಾಗದಲ್ಲಿ ಬಿ.ಎಂ.ಗಣೇಶ್ ಹಾಗೂ ಬೆಟ್ಟ ಕುರುಬರ ಕಾಳ ಅವರ ಕುಟುಂಬ
ಬಡತನದ ಅನುಭವವಿರುವ ತಾನು ಕಾಳ ಅವರ ಕುಟುಂಬ ವಾಸಿಸುತ್ತಿದ್ದ ಗುಡಿಸಲು ನೋಡಿದಾಗಲೆಲ್ಲ ದುಃಖಿತನಾಗುತ್ತಿದ್ದೆ. ಈಗ ಬಡ ಕುಟುಂಬವೊಂದಕ್ಕೆ ನೆಲೆ ಕಲ್ಪಿಸಿ ಕೈಲಾದ ಸಹಾಯವನ್ನು ಮಾಡಿದ ನೆಮ್ಮದಿಯಿದೆ.
- ಬಿ.ಎಂ. ಗಣೇಶ್ ದಾನಿ ಆರ್ಜಿ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT