ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಮೇಟೆಡ್ ರೂಪದಲ್ಲಿ ಬರಲಿದೆ ಬಾಹುಬಲಿ: ಎಲ್ಲಿ ಬಿಡುಗಡೆ?

ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಎರಡು ಭಾಗಗಳಲ್ಲಿ ಬಿಡುಗಡೆಗೊಂಡು ವಿಶ್ವದಾದ್ಯಂತ ಸದ್ದು ಮಾಡಿ, ಗಲ್ಲಾಪೆಟ್ಟಿಗೆಯನ್ನು ದೋಚಿತ್ತು.
Published 4 ಮೇ 2024, 0:10 IST
Last Updated 4 ಮೇ 2024, 2:36 IST
ಅಕ್ಷರ ಗಾತ್ರ

ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಎರಡು ಭಾಗಗಳಲ್ಲಿ ಬಿಡುಗಡೆಗೊಂಡು ವಿಶ್ವದಾದ್ಯಂತ ಸದ್ದು ಮಾಡಿ, ಗಲ್ಲಾಪೆಟ್ಟಿಗೆಯನ್ನು ದೋಚಿತ್ತು. ಕಥೆಯಲ್ಲಿ ಬಾಹುಬಲಿಯಾಗಿ ಪ್ರಭಾಸ್ ಮತ್ತು ಭಲ್ಲಾಳ ದೇವನಾಗಿ ರಾಣಾ ದಗ್ಗುಭಾಟಿ ಅಭಿನಯಿಸಿದ್ದರು. ಇಬ್ಬರ ಜೀವನದ ಅನೇಕ ತಿಳಿಯದ ತಿರುವುಗಳು, ಮಾಹಿತಿಗಳನ್ನು ಚಿತ್ರದಲ್ಲಿ ತೋರಿಸಲಿಕ್ಕೆ ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಈಗ ಎಲ್ಲವನ್ನು ಹೊಸ ಅಧ್ಯಾಯದೊಂದಿಗೆ ಅನಿಮೇಟೆಡ್ ಫಾರ್ಮೆಟ್‌ದಲ್ಲಿ ಹೇಳಲು ಸಿದ್ಧರಾಗಿದ್ದಾರೆ ರಾಜಮೌಳಿ.

ಎ ಗ್ರಾಫಿಕ್ ಇಂಡಿಯಾ ಮತ್ತು ಆರ್ಕ ಮೀಡಿಯಾ ವರ್ಕ್ಸ್ ಪ್ರೊಡಕ್ಷನ್ ಅಡಿಯಲ್ಲಿ ಎಸ್.ಎಸ್.ರಾಜಮೌಳಿ-ಶರದ್‌ದೇವರಾಜನ್ ‘ಬಾಹುಬಲಿ’ಯನ್ನು ಅನಿಮೇಟೆಡ್‌ ರೂಪದಲ್ಲಿ ತರುತ್ತಿದ್ದಾರೆ. ಈ ಯೋಜನೆಗೆ ರಾಜಮೌಳಿ ಕ್ರಿಯೆಟೀವ್ ಮುಖ್ಯಸ್ಥರು. ಜೀವನ್.ಜೆ.ಕಾಂಗ್-ನವೀನ್ ಜಾನ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.

‘ಅನಿಮೇಟೆಡ್‌ ಚಿತ್ರದಲ್ಲಿ ಸಾಹಸ, ರಾಜಕೀಯ ಅಚ್ಚರಿಗಳು, ನಾಟಕ, ಮೋಸ, ಯುದ್ಧ, ವಿಶ್ವಾಸ, ಧೈರ್ಯ ಎಲ್ಲ ಅಂಶಗಳು ಸೇರಿಕೊಂಡಿವೆ. ಕೇವಲ ಮಕ್ಕಳು ಮಾತ್ರವಲ್ಲದೆ ಎಲ್ಲ ವರ್ಗದ ಪ್ರೇಕ್ಷಕರು ನೋಡಬಹುದು. ಕನ್ನಡ ಸೇರಿದಂತೆ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಮೇ 17, 2024ರಿಂದ ಈ ಸರಣಿ ಲಭ್ಯ. ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಸರಣಿ ಮೂಡಿಬರಲಿದೆ’ ಎಂದು ಚಿತ್ರತಂಡ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT