ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಕೆ.ಜಿ.ಎಫ್ ಚಾಪ್ಟರ್–2 ಯಶ್ ಸಿನಿಗ್ರಾಫ್‌ನಲ್ಲಿ ದೊಡ್ಡ ತಿರುವು ನೀಡಿದ ಸಿನಿಮಾ. ಈ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ₹134.5 ಕೋಟಿ ಬಾಚಿತ್ತು. ಸಿನಿಮಾ ಜಗತ್ತಿನಾದ್ಯಂತ ₹1,400 ಕೋಟಿ ಗಳಿಸಿತ್ತು. ‘ಜುಲೈ 14ಕ್ಕೆ ಜಪಾನ್‌ನಲ್ಲಿ ಕೆ.ಜಿ.ಎಫ್ ಸರಣಿ ಬಿಡುಗಡೆಯಾಗುತ್ತಿದೆ. ಕಳೆದ ನಾಲ್ಕೈದು ತಿಂಗಳಿಂದ ಸಿನಿಮಾ ಬಿಡುಗಡೆ ಮಾತುಕತೆ ನಡೆಯುತ್ತಿತ್ತು. ಆರ್‌ಆರ್‌ಆರ್ ಸಿನಿಮಾ ವಿತರಣೆ ಮಾಡಿದವರೇ ಅಲ್ಲಿ ಕೆಜಿಎಫ್ ಸಿನಿಮಾ ಸರಣಿ ಬಿಡುಗಡೆ ಮಾಡುತ್ತಿದ್ದಾರೆ’ ಎಂದು ಹೊಂಬಾಳೆ ಫಿಲ್ಮ್ಸ್‌ನ ಚಲುವೇಗೌಡ ತಿಳಿಸಿದರು.