ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಸ್ನೇಹಿ ಗೌರಿ–ಗಣೇಶ ಹಬ್ಬ ಆಚರಿಸಿ

Published 16 ಸೆಪ್ಟೆಂಬರ್ 2023, 0:15 IST
Last Updated 16 ಸೆಪ್ಟೆಂಬರ್ 2023, 0:15 IST
ಅಕ್ಷರ ಗಾತ್ರ

ಎಲ್ಲೆಡೆ ಗೌರಿ–ಗಣೇಶ ಹಬ್ಬ ಆಚರಣೆಯ ಸಂಭ್ರಮ ಶುರುವಾಗಿದೆ. ಮನೆಯಲ್ಲಿ ಗೌರಿ–ಗಣೇಶನನ್ನು ಕೂರಿಸುವವರು ಮನೆಯನ್ನು ಅಲಂಕರಿಸುವ ಯೋಜನೆ ರೂಪಿಸುತ್ತಿದ್ದರೆ, ಸಮುದಾಯಗಳಲ್ಲಿ ಗಣಪತಿ ಪ್ರತಿಷ್ಠಾಪಿಸಲು, ಪೆಂಡಾಲ್, ಬ್ಯಾನರ್ ಹಾಕುವ ಕೆಲಸಗಳು ನಡೆಯುತ್ತಿವೆ. ಚಂದಾ ಎತ್ತುತ್ತಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಕಾರ್ಯಗಳು ಸಾಗುತ್ತಿವೆ.

ಹಬ್ಬದ ಸಂಭ್ರಮ ಇಮ್ಮಡಿಯಾಗಲಿ, ಎಲ್ಲರೂ ಖುಷಿಯಿಂದ ಹಬ್ಬ ಆಚರಿಸಲಿ. ಆದರೆ ಹಬ್ಬದಲ್ಲಿ ಸಂಭ್ರಮದ ಜೊತೆಗೆ, ‘ಪರಿಸರ ಸ್ನೇಹಿ’ಯಾಗಿರಬೇಕು. ಪರಿಸರ ಪೂರಕ ಹಬ್ಬ ಆಚರಣೆ, ಪೂಜೆಯಷ್ಟೇ ಪವಿತ್ರವಾದದು !

ಹೇಗೆ ಆಚರಿಸಬೇಕು ?

* ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ) ಮತ್ತು ಬಣ್ಣದ ವಿಗ್ರಹಗಳನ್ನು ಬಳಸಬೇಡಿ. ಬಣ್ಣ ರಹಿತ ಮಣ್ಣಿನ ವಿಗ್ರಹಗಳನ್ನೇ ಪ್ರತಿಷ್ಠಾಪಿಸಿ ಪೂಜಿಸಿ.

* ಈಗೀಗ ಕೆಲವು ಸಂಸ್ಥೆಗಳು ತರಕಾರಿ, ಹೂವಿನ ಬೀಜಗಳನ್ನಿಟ್ಟು ಗಣಪತಿ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ. ಅಂಥ ಮೂರ್ತಿಗಳನ್ನು ಕೂರಿಸಿ. ನಿಮ್ಮ ಮನೆಯ ಅಂಗಳದ ಕುಂಡದಲ್ಲೋ, ಕೈತೋಟದಲ್ಲೋ ವಿಸರ್ಜನೆ ಮಾಡಿ. ನೀವು ಪೂಜಿಸಿದ ಗಣಪ ಸಸ್ಯದ ರೂಪದಲ್ಲಿ ನಿಮ್ಮ ಮನೆಯಲ್ಲೇ ಇರುತ್ತಾನೆ.

* ಪೆಂಡಾಲ್‌, ಮಂಟಪದ ಅಲಂಕಾರಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ. ಮಣ್ಣಿನಲ್ಲಿ ಕರಗುವಂತಹ (ಬಯೋಡಿಗ್ರೆಡಬಲ್‌) ಎಲೆ, ಹೂವಿನಂತಹ ವಸ್ತುಗಳನ್ನೇ ಬಳಸಿ.

* ಪೂಜೆ, ಉತ್ಸವ ಮುಗಿದ ಮೇಲೆ, ಮೂರ್ತಿ ವಿಸರ್ಜಿಸಿದ ನಂತರ, ಸಂಗ್ರಹವಾಗುವ ಕಸವನ್ನು ಒಣಕಸ, ಹಸಿಕಸ(ಮಣ್ಣಿನಲ್ಲಿ ಕರಗುವ, ಕರಗದ) ಬೇರ್ಪಡಿಸಿ, ವಿಲೇವಾರಿ ಮಾಡಿ.

* ಮನೆಗಳಲ್ಲಿ ಕೈತೋಟಗಳಿದ್ದರೆ, ಹಸಿ ಕಸವನ್ನು ಗೊಬ್ಬರವಾಗಿಸಿ. ಆ ಗೊಬ್ಬರವನ್ನು ಕೈತೋಟಕ್ಕೆ ಬಳಸಿ.

ಈ ಎಲ್ಲವನ್ನೂ ಅನುಸರಿಸಿದರೆ, ಅದೇ ನಿಜವಾದ ಪರಿಸರ ಸ್ನೇಹಿ ಗೌರಿ–ಗಣೇಶ ಹಬ್ಬವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT