ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮತ ಚಲಾಯಿಸಲು ಜನರು ಮತಗಟ್ಟೆಗೆ ಬರುತ್ತಿದ್ದಾರೆ. ನಟ ಗಣೇಶ್ ಕೂಡ ಮತ ಚಲಾಯಿಸಿದ್ದಾರೆ. ನನ್ನ ಹಕ್ಕನ್ನು ಚಲಾಯಿಸಲು ಅರ್ಧ ಗಂಟೆ ಅಲ್ಲ ಒಂದು ಗಂಟೆಯಾದರೂ ಕಾದು ಹಾಕುತ್ತೇನೆ ಎಂದು ಹೇಳಿದರು. ಯಾರು ನಿಮಗೆ ಹಿತ ಅವರಿಗೆ ಮತ ಹಾಕಿ ಹಾಗೂ ಯುವಕರಿಗೆ ಒಂದು ಮನವಿ ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸಿ ಎಂದು ಮನವಿ ಕೂಡ ಮಾಡಿದ್ದಾರೆ.