ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha Election 2024

ADVERTISEMENT

ದ್ವೇಷ ಭಾಷಣ | ಮೋದಿ, ಠಾಕೂರ್‌ ವಿರುದ್ಧ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಪ್ರಸಕ್ತ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರು ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪಗಳಿದ್ದು, ಈ ಕುರಿತು ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
Last Updated 9 ಮೇ 2024, 16:09 IST
ದ್ವೇಷ ಭಾಷಣ | ಮೋದಿ, ಠಾಕೂರ್‌ ವಿರುದ್ಧ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಚರ್ಚೆಯಲ್ಲಿ ಪಾಲ್ಗೊಳ್ಳಲು ಮೋದಿ– ರಾಹುಲ್‌ಗೆ ಮಾಜಿ ನ್ಯಾಯಮೂರ್ತಿಗಳ ಆಹ್ವಾನ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಆಹ್ವಾನಿಸಿ ಹಿರಿಯ ಪತ್ರಕರ್ತ ಮತ್ತು ಇಬ್ಬರು ಮಾಜಿ ನ್ಯಾಯಮೂರ್ತಿಗಳು ಪತ್ರ ಬರೆದಿದ್ದಾರೆ.
Last Updated 9 ಮೇ 2024, 16:08 IST
ಚರ್ಚೆಯಲ್ಲಿ ಪಾಲ್ಗೊಳ್ಳಲು ಮೋದಿ– ರಾಹುಲ್‌ಗೆ ಮಾಜಿ ನ್ಯಾಯಮೂರ್ತಿಗಳ ಆಹ್ವಾನ

ಗುಜರಾತ್‌ನ ಪಾರ್ಥಂಪುರ: ಮೇ 11ಕ್ಕೆ ಮರು ಮತದಾನ

ಗುಜರಾತಿನ ದಾಹೋದ್‌ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮೇ 7ರಂದು ನಡೆದ ಮತದಾನ ಪ್ರಕ್ರಿಯೆಯನ್ನು ವ್ಯಕ್ತಿಯೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ನೇರ ಪ್ರಸಾರ ಮಾಡಿದ್ದ ವಿಡಿಯೊ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ, ಚುನಾವಣಾ ಆಯೋಗವು ಆ ಮತಗಟ್ಟೆಗೆ ಇದೇ 11ರಂದು ಮರು ಮತದಾನ ಮಾಡಲು ಆದೇಶ ಹೊರಡಿಸಿದೆ.
Last Updated 9 ಮೇ 2024, 15:58 IST
ಗುಜರಾತ್‌ನ ಪಾರ್ಥಂಪುರ: ಮೇ 11ಕ್ಕೆ ಮರು ಮತದಾನ

ಅಪ್ರಾಪ್ತ ವಯಸ್ಸಿನ ಪುತ್ರನಿಂದ ವೋಟ್‌: ಬಿಜೆಪಿ ನಾಯಕನ ವಿರುದ್ಧ ಪ್ರಕರಣ

ಅಪ್ರಾಪ್ತ ವಯಸ್ಸಿನ ಪುತ್ರನನ್ನು ಮತಗಟ್ಟೆ ಕರೆದುಕೊಂಡು ಹೋಗಿ ಇವಿಎಂನಲ್ಲಿ ಬಟನ್ ಒತ್ತಲು ಅವಕಾಶ ನೀಡಿ, ಅದನ್ನು ವಿಡಿಯೊ ಮಾಡಿದ ಆರೋಪದ ಮೇಲೆ ಭೋಪಾಲ್‌ನ ಬಿಜೆಪಿ ನಾಯಕ, ಜಿಲ್ಲಾ ಪಂಚಾಯತ್‌ ಸದಸ್ಯ ವಿಜಯ್‌ ಮೇಹರ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 9 ಮೇ 2024, 15:56 IST
ಅಪ್ರಾಪ್ತ ವಯಸ್ಸಿನ ಪುತ್ರನಿಂದ ವೋಟ್‌: ಬಿಜೆಪಿ ನಾಯಕನ ವಿರುದ್ಧ ಪ್ರಕರಣ

ಪ್ರಧಾನಿಯಿಂದಲೇ ಜನಾಂಗೀಯ ದ್ವೇಷದ ಮಾತು: ಚಿದಂಬರಂ

ಸ್ಯಾಮ್‌ ಪಿತ್ರೋಡಾ ಅವರ ಹೇಳಿಕೆಗಳನ್ನು ಖಂಡಿಸುವ ಭರದಲ್ಲಿ ಚರ್ಮದ ಬಣ್ಣದ ವಿಷಯವನ್ನು ಚುನಾವಣಾ ಭಾಷಣಗಳಲ್ಲಿ ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ ನಡೆಯೇ ‘ಜನಾಂಗೀಯ ದ್ವೇಷ’ವನ್ನು ತೋರಿಸುತ್ತದೆ ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಗುರುವಾರ ಟೀಕಿಸಿದ್ದಾರೆ.
Last Updated 9 ಮೇ 2024, 15:34 IST
ಪ್ರಧಾನಿಯಿಂದಲೇ ಜನಾಂಗೀಯ ದ್ವೇಷದ ಮಾತು: ಚಿದಂಬರಂ

ರಾಹುಲ್‌ ಗಾಂಧಿ ವಿರುದ್ಧ ಚುನಾವಣಾ ಆಗೋಗಕ್ಕೆ ದೂರು: ಅಠಾವಳೆ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ‘ಬಿಜೆಪಿಯು ದೇಶದ ಸಂವಿಧಾನವನ್ನು ಬದಲಿಸಲಿದೆ’ ಎಂಬ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ಕೇಂದ್ರ ಸಾಮಾಜಿಕ ನ್ಯಾಯ ರಾಜ್ಯ ಖಾತೆ ಸಚಿವ ರಾಮದಾಸ್‌ ಅಠಾವಳೆ ತಿಳಿಸಿದರು.
Last Updated 9 ಮೇ 2024, 15:20 IST
ರಾಹುಲ್‌ ಗಾಂಧಿ ವಿರುದ್ಧ ಚುನಾವಣಾ ಆಗೋಗಕ್ಕೆ ದೂರು: ಅಠಾವಳೆ

ಸಂದೇಶ್‌ಖಾಲಿ ವಿಡಿಯೊ: ಬಿಜೆಪಿ ವಿರುದ್ಧ ಟಿಎಂಸಿ ವಾಗ್ದಾಳಿ

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ನಡೆದ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಬಿಜೆಪಿಯು ಸುಳ್ಳುಗಳನ್ನು ಹರಡುವ ಕೆಲಸ ಮಾಡುತ್ತಿದೆ ಎಂದು ಟಿಎಂಸಿ ಪಕ್ಷವು ಗುರುವಾರ ಆರೋಪಿಸಿದೆ.
Last Updated 9 ಮೇ 2024, 15:17 IST
ಸಂದೇಶ್‌ಖಾಲಿ ವಿಡಿಯೊ: ಬಿಜೆಪಿ ವಿರುದ್ಧ ಟಿಎಂಸಿ ವಾಗ್ದಾಳಿ
ADVERTISEMENT

LS Polls 2024 | ಮಾನಸಿಕ ಸ್ಥಿಮಿತ ಕಳೆದುಕೊಂಡ ಉದ್ಧವ್‌: ಫಡಣವೀಸ್‌

ವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಗುರುವಾರ ಹೇಳಿದರು.
Last Updated 9 ಮೇ 2024, 15:15 IST
LS Polls 2024 | ಮಾನಸಿಕ ಸ್ಥಿಮಿತ ಕಳೆದುಕೊಂಡ ಉದ್ಧವ್‌: ಫಡಣವೀಸ್‌

ನೋಟಾ ಆಯ್ಕೆಗೆ ಪ್ರಚೋದನೆ ಪ್ರಜಾಪ್ರಭುತ್ವದ ಮೇಲಿನ ದಾಳಿ: ಬಿಜೆಪಿ

ನೋಟಾ ಆಯ್ಕೆ ಮಾಡಿ ಎಂದು ಇಂದೋರ್ ಲೋಕಸಭಾ ಕ್ಷೇತ್ರದ ಮತದಾರರಿಗೆ ಕಾಂಗ್ರೆಸ್‌ ಕರೆ ನೀಡಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಮಧ್ಯಪ್ರದೇಶದ ಬಿಜೆಪಿ ಆರೋಪಿಸಿದೆ.
Last Updated 9 ಮೇ 2024, 15:14 IST
ನೋಟಾ ಆಯ್ಕೆಗೆ ಪ್ರಚೋದನೆ ಪ್ರಜಾಪ್ರಭುತ್ವದ ಮೇಲಿನ ದಾಳಿ: ಬಿಜೆಪಿ

ಚುನಾವಣಾ ಆಯೋಗ ಭೇಟಿ ಮಾಡಲಿರುವ ‘ಇಂಡಿಯಾ’ ನಾಯಕರು

ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ನಾಯಕರು ಚುನಾವಣಾ ಆಯೋಗವನ್ನು ಶುಕ್ರವಾರ ಭೇಟಿಯಾಗಿ, ಲೋಕಸಭೆ ಚುನಾವಣೆಯ ಪ್ರತಿ ಹಂತ ಮುಕ್ತಾಯವಾದ ನಂತರ ನಿಖರ, ಪ್ರಾಮಾಣಿಕ ಮತದಾನ ಪ್ರಮಾಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 9 ಮೇ 2024, 15:13 IST
 ಚುನಾವಣಾ ಆಯೋಗ ಭೇಟಿ ಮಾಡಲಿರುವ ‘ಇಂಡಿಯಾ’ ನಾಯಕರು
ADVERTISEMENT
ADVERTISEMENT
ADVERTISEMENT