ಶ್ರೀಹರಿಕೋಟಾ: ಏಕಕಾಲಕ್ಕೆ ಯಶಸ್ವಿಯಾಗಿ 104 ಉಪಗ್ರಹಗಳನ್ನು ಸೂರ್ಯಸ್ಥಾಯಿ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿಶ್ವ ದಾಖಲೆ ಮಾಡಿದ್ದು ರಾಕೆಟ್ನ ಪ್ರತಿ ಹಂತವೂ ಸೆಲ್ಫಿ ವಿಡಿಯೋದಲ್ಲಿ ದಾಖಲಾಗಿದೆ.

ಆಂಧ್ರ ಪ್ರದೇಶ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ನಭದತ್ತ ಹೊರಟ ಇಸ್ರೊದ ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನ (ಪಿಎಸ್ಎಲ್ವಿ) ಸಿ–37 ನಾಲ್ಕು ಹಂತಗಳಲ್ಲಿ ಮುನ್ನುಗ್ಗುವ ಶಕ್ತಿ ಒದಗಿಸಲಾಗಿತ್ತು.

ರಾಕೆಟ್ಗೆ ಅಳವಡಿಸಲಾಗಿದ್ದ ಅಧಿಕ ಸಾಮರ್ಥ್ಯದ ಕ್ಯಾಮೆರಾ ಪ್ರತಿ ಹಂತವನ್ನು ಚಿತ್ರೀಕರಿಸಿಕೊಂಡಿದೆ. 320 ಟನ್ ತೂಕದ ಉಪಗ್ರಹದ ಪ್ರಯಾಣದಲ್ಲಿ 18 ನಿಮಿಷಗಳ ಬಳಿಕ ಭಾರತದ 3 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿರುವ ದೃಶ್ಯಗಳೂ ದಾಖಲಾಗಿವೆ.

ನಂತರದ 600 ಸೆಕೆಂಡ್ಗಳಲ್ಲಿ ಒಂದರಿಂದೊಂದು ಎಲ್ಲ 101 ಉಪಗ್ರಹಗಳು ಬಾಹ್ಯಾಕಾಶದ ಕಗ್ಗತ್ತಿನಲ್ಲಿ ಪಯಣ ಹೊರಟ ಚಿತ್ರಗಳು ರಾಕೆಟ್ನ ಸೆಲ್ಫಿ ವಿಡಿಯೋದಲ್ಲಿ ಸಂಗ್ರಹಗೊಂಡಿದೆ.

ಉಡಾವಣೆ ಆದಾಗಿನಿಂದ ಕೊನೆಯ ಉಪಗ್ರಹ ಕಕ್ಷೆಗೆ ಸೇರಿದವರೆಗಿನ ಕಾರ್ಯಾಚರಣೆಯ ಒಟ್ಟು ಅವಧಿ 28 ನಿಮಿಷ 42 ಸೆಕೆಂಡ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.