ನ್ಯೂಯಾರ್ಕ್: ಅಮೆರಿಕದಲ್ಲಿ ಓದುತ್ತಿದ್ದ ಭಾರತ ಮೂಲದ ವಿದ್ಯಾರ್ಥಿ ಆಲಾಪ್ ನರಸೀಪುರ (20) ಎಂಬುವರ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಆಲಾಪ್ ಬುಧವಾರದಿಂದ (ಮೇ 17) ನಾಪತ್ತೆಯಾಗಿದ್ದರು.

ಆಲಾಪ್ ಅಮೆರಿಕದ ಕಾರ್ನಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಓದುತ್ತಿದ್ದರು. ಈ ವರ್ಷದ ಡಿಸೆಂಬರ್ ವೇಳೆಗೆ ಅವರ ಪದವಿ ವ್ಯಾಸಂಗ ಪೂರ್ಣಗೊಳ್ಳುತ್ತಿತ್ತು.

ಕಾರ್ನಲ್ ವಿಶ್ವವಿದ್ಯಾಲಯದ ಪೊಲೀಸರು ನ್ಯೂಯಾರ್ಕ್ ಪೊಲೀಸರ ನೆರವಿನೊಂದಿಗೆ ಆಲಾಪ್ ಅವರ ಹುಡುಕಾಟ ನಡೆಸಿದ್ದರು. ಇಟಾಕ ಜಲಪಾತದ ಸ್ವಲ್ಪ ದೂರದಲ್ಲಿ ಫಾಲ್ ಕ್ರೀಕ್ ಬಳಿ ಆಲಾಪ್ ಮೃತದೇಹವನ್ನು ಪೊಲೀಸರು ಶುಕ್ರವಾರ ಪತ್ತೆ ಮಾಡಿದ್ದಾರೆ.

ಆಲಾಪ್ ಸಾವಿನ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸಾವಿನ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.