ನವದೆಹಲಿ: ಗುರುತಿನ ವಂಚನೆ ತಡೆಟ್ಟಲು ಮುಂದಾಗಿರುವ ಸರ್ಕಾರ, ಮರಣ ನೋಂದಣಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡಿದೆ. ಈ ಆದೇಶ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.

ಜಮ್ಮ ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಮೇಘಾಲಯ ಬಿಟ್ಟು ಉಳಿದೆಲ್ಲಾ ರಾಜ್ಯಗಳಿಗೆ ಇದು ಅನ್ವಯವಾಗಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಜಮ್ಮ ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಜಾರಿಯಾಗುವ ದಿನಾಂಕವನ್ನು ನಂತರದ ದಿನಗಳಲ್ಲಿ ಪ್ರಕಟಿಸಲಿದೆ.

ಮೃತರ ಗುರುತು ದಾಖಲಿಸುವ ಉದ್ದೇಶಕ್ಕಾಗಿ ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಮರಣ ನೋಂದಣಿಗೆ ಆಧಾರ್ ಸಂಖ್ಯೆ ಅಗತ್ಯವಿದೆ ಎಂದು ಎಂದು ಗೃಹ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.

ಸಂಬಂದಿಗಳ ಅಥವಾ ಅವಲಂಬಿತರು ಅಥವಾ ಮೃತರನ್ನು ಪರಿಚಯಿಸುವ ವಿವರಗಳ ನಿಖರತೆಯನ್ನು ಖಾತರಿಪಡಿಸುವಲ್ಲಿ ಆಧಾರನ ಬಳಕೆ ಅಗತ್ಯ ಎಂದು ಗೃಹ ಸಚಿವಾಲಯದ ಅಡಿ ಕಾರ್ಯ ನಿರ್ವಹಿಸುತ್ತಿರುವ ರಿಜಿಸ್ಟ್ರಾರ್ ಜನರಲ್ ಕಚೇರಿ ತಿಳಿಸಿದೆ.

ಗುರುತಿನ ವಂಚನೆ ತಡೆಗಟ್ಟಲು ಇದು ಪರಿಣಾಮಕಾರಿಯಾದ ವಿಧಾನ ಮತ್ತು ಮೃತ ವ್ಯಕ್ತಿಯ ಗುರುತಿನ ದಾಖಲಾತಿಗೆ ನೆರವಾಗುತ್ತದೆ ಹಾಗೂ ಮೃತ ವ್ಯಕ್ತಿಯ ಗುರುತು ಸಾಬೀತುಪಡಿಸಲು ಹಲವು ದಾಖಲೆಗಳನ್ನು ಒದಗಿಸುವ ತೊಂದರೆಯನ್ನು ಇದು ತಡೆಗಟ್ಟುತ್ತದೆ ಎಂದು ಅದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.