ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಳಿವಳಿಕೆ ಮೂಡಿಸಿ

Last Updated 10 ಜನವರಿ 2016, 19:45 IST
ಅಕ್ಷರ ಗಾತ್ರ

ಮೂಢನಂಬಿಕೆ ಪ್ರತಿಬಂಧಕ ಮಸೂದೆ ರೂಪಿಸಲು  ರಾಜ್ಯ ಸರ್ಕಾರ ಉತ್ಸಾಹ ತೋರಿರುವುದು ಒಳ್ಳೆಯದೇ. ಆದರೆ ಈ ಸಂಬಂಧ ಆತುರದ ನಿರ್ಧಾರ ಸಲ್ಲದು. ಮನಸ್ಸಿನಲ್ಲಿ ಗಟ್ಟಿಯಾಗಿ ನಾಟಿರುವ ಮೂಢನಂಬಿಕೆಗಳನ್ನು ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ.

ಅರಿವು ಮೂಡಿಸುವ ಮೂಲಕ ಇಂತಹ ನಂಬಿಕೆಗಳಿಂದ ಹೊರಬರಲು ಜನರನ್ನು ಪ್ರೇರೇಪಿಸಬೇಕು. ಹಂತ ಹಂತವಾಗಿ ಮಾಡುವಂಥ ಕೆಲಸ ಇದು. ಮಸೂದೆ ರೂಪಿಸುವ ಮೊದಲು  ಮೂಢ ನಂಬಿಕೆಗಳು ಯಾವುವು ಎಂದು ಪಟ್ಟಿ ಮಾಡಲಿ.

ಆ ಪಟ್ಟಿಯನ್ನು  ಬಹಿರಂಗಪಡಿಸಲಿ. ಆ ಬಗ್ಗೆ ಸಾರ್ವಜನಿಕ ಚರ್ಚೆಗೆ ಅವಕಾಶ ಕೊಟ್ಟು ನಂತರ  ನಿರ್ಧಾರ ಕೈಗೊಳ್ಳಬೇಕು. ಉದ್ದೇಶಿತ ಮಸೂದೆಯು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಿರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT