ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯಪಾಲನೆ ಮಾಡದ ಬಿ.ಎಂ.ಟಿ.ಸಿ.

ಕುಂದು ಕೊರತೆ
Last Updated 28 ಮಾರ್ಚ್ 2016, 19:58 IST
ಅಕ್ಷರ ಗಾತ್ರ

ಹೊಸಕೆರೆಹಳ್ಳಿ ಕೆರೆಕೋಡಿಯಿಂದ ಕೃ.ರಾ. ಮಾರುಕಟ್ಟೆ ಮಾರ್ಗವಾಗಿ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ, ಶಿವಾಜಿನಗರಕ್ಕೆ ಹೋಗುವ 43ಸಿ, 43ಜೆ, 34ಸಿ ಬಸ್ಸುಗಳು ನಿಗದಿತ ಸಮಯಕ್ಕೆ ಹೊರಡುವುದೂ ಇಲ್ಲ, ಬರುವುದೂ ಇಲ್ಲ. ಅವು ಡ್ರೈವರ್‌,  ಕಂಡಕ್ಟರ್‌ಗಳ ಮರ್ಜಿಯಂತೆ ಹೋದಾಗ ಹೋಗುತ್ತವೆ, ಬಂದಾಗ ಬರುತ್ತವೆ. ಈ ಬಗ್ಗೆ ಕತ್ರಿಗುಪ್ಪೆ, ದೀಪಾಂಜಲಿ ನಗರ, ಬನಶಂಕರಿ ಡಿಪೋಗಳ ಮುಖ್ಯಸ್ಥರಿಗೆ ಲಿಖಿತ ದೂರು ಕೊಟ್ಟಿದ್ದರೂ ಈವರೆಗೆ ಯಾವುದೇ ಬದಲಾವಣೆ ಆಗಿಲ್ಲ.

ಈ ನಡುವೆ ಬೆಳಗ್ಗೆ 7.30 ಮತ್ತು 9.30ಕ್ಕೆ ಕೆರೆಕೋಡಿಯಿಂದ ಹೊರಡುತ್ತಿದ್ದ 43ಸಿ ಬಸ್ಸಿನ ಸಮಯವನ್ನು ಪ್ರಯಾಣಿಕರ ಕೋರಿಕೆ ಇಲ್ಲದಿದ್ದರೂ ಏಕಪಕ್ಷೀಯವಾಗಿ ಬದಲಿಸಿ 8.30 ಮತ್ತು 10.30ಕ್ಕೆ ಹೊರಡಿಸುತ್ತಿರುವುದರಿಂದ ಕಚೇರಿ, ಕಾರ್ಖಾನೆ, ಶಾಲೆ, ಕಾಲೇಜುಗಳಿಗೆ ಹೋಗಲು ಇದೇ ಬಸ್ಸನ್ನು ಅವಲಂಬಿಸಿದ್ದವರಿಗೆ ಗಂಭೀರ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ನಿವಾರಿಸಬೇಕಾಗಿ ವಿನಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT