ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೀಫಾ ವಿಶ್ವಕಪ್‌ :15 ಮಂದಿ ಸಂಭವನೀಯರ ಎರಡನೇ ಪಟ್ಟಿ ಪ್ರಕಟ

ಫೀಫಾ ವಿಶ್ವಕಪ್‌ ಎರಡನೇ ಸುತ್ತಿನ ಅರ್ಹತಾ ಪಂದ್ಯ* ಜಿಂಗಾನ್‌ ಅಲಭ್ಯ
Published 7 ಮೇ 2024, 13:24 IST
Last Updated 7 ಮೇ 2024, 13:24 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಫೀಫಾ ವಿಶ್ವಕಪ್‌ ಪೂರ್ವಭಾವಿ ಹಂತದ ಎರಡನೇ ಸುತ್ತಿನ ಎರಡು ಅರ್ಹತಾ ಪಂದ್ಯಗಳಿಗೆ ಹೆಡ್‌ ಕೋಚ್‌ ಇಗೊರ್‌ ಸ್ಟಿಮಾಚ್‌ ಅವರು ಮಂಗಳವಾರ 15 ಮಂದಿ ಸಂಭವನೀಯ ಆಟಗಾರರನ್ನು ಒಳಗೊಂಡ ಎರಡನೇ ಪಟ್ಟಿಯನ್ನು ಪ್ರಕಟಿಸಿದ್ದಾರೆ. ರಕ್ಷಣೆ ಆಟಗಾರ ಸಂದೇಶ್ ಜಿಂಗಾನ್ ಅವರು ಗಾಯಾಳಾಗಿದ್ದು ಅವಕಾಶ ಪಡೆದಿಲ್ಲ.

ಸ್ಟಿಮಾಚ್‌ ಅವರು 26 ಸಂಭವನೀಯ ಆಟಗಾರರ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದರು. ಮೇ 10ರಂದು ಭುವನೇಶ್ವರದಲ್ಲಿ ಈ ಆಟಗಾರರಿಗೆ ಶಿಬಿರ ಆರಂಭವಾಗಲಿದೆ.

ಮುಂಬೈ ಸಿಟಿ ಎಫ್‌ಸಿ ಮತ್ತು ಮೋಹನ್‌ ಬಾಗನ್‌ ಸೂಪರ್‌ ಜೈಂಟ್ಸ್‌ ತಂಡ ಐಎಸ್‌ಎಲ್‌ ಫೈನಲ್ ಆಡಿದ ಬೆನ್ನಲ್ಲೇ ಎರಡನೇ ಪಟ್ಟಿ ಪ್ರಕಟಿಸಲಾಗಿದೆ. ಎರಡನೇ ಪಟ್ಟಿಯಲ್ಲಿರುವ ಆಟಗಾರರು ಮೇ 15ರಂದು ಶಿಬಿರವನ್ನು ಸೇರಿಕೊಳ್ಳಲಿದ್ದಾರೆ. ಆ ಮೂಲಕ ಒಟ್ಟು 41 ಆಟಗಾರರು ಶಿಬಿರಕ್ಕೆ ಪಾಲ್ಗೊಂಡಂತೆ ಆಗುತ್ತದೆ.

ಜನವರಿಯಲ್ಲಿ ಸಿರಿಯಾ ವಿರುದ್ಧ ಏಷ್ಯಾ ಕಪ್ ಗುಂಪು ಪಂದ್ಯದ ವೇಳೆ ಅವರ ಬಲ ಮೊಣಕಾಲಿಗೆ ಗಾಯವಾಗಿತ್ತು.

ಬ್ಲೂ ಟೈಗರ್ಸ್‌ (ಭಾರತ) ತಂಡ ‘ಎ’ ಗುಂಪಿನಲ್ಲಿ ಎರಡು ಪಂದ್ಯಗಳನ್ನು ಆಡಲಿದ್ದು, ಜೂನ್ 6ರಂದು ಕುವೈಟ್ ತಂಡವನ್ನು ಕೋಲ್ಕತ್ತದಲ್ಲಿ ಎದುರಿಸಲಿದೆ. ನಂತರ ಕತಾರ್‌ಗೆ ತೆರಳಲಿದ್ದು ಜೂನ್‌ 11ರಂದು ಕತಾರ್‌ ವಿರುದ್ಧ ಆಡಲಿದೆ.

ಭಾರತ ಈಗ 4 ಪಂದ್ಯಗಳಿಂದ 4 ಪಾಯಿಂಟ್ಸ್ ಕಲೆಹಾಕಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಕತಾರ್‌ ಅಗ್ರಸ್ಥಾನದಲ್ಲಿದೆ. ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೀಫಾ ವಿಶ್ವಕಪ್‌ ಕ್ವಾಲಿಫೈಯರ್ಸ್‌ನ ಮೂರನೇ ಸುತ್ತಿನಲ್ಲಿ ಆಡುವ ಅರ್ಹತೆ ಗಿಟ್ಟಿಸಲಿವೆ. ಜೊತೆಗೆ ಎಎಫ್‌ಸಿ ಏಷ್ಯಾ ಕಪ್‌ ಸೌದಿ ಅರೇಬಿಯಾದಲ್ಲಿ ಸ್ಥಾನ ಕಾದಿರಿಸಲಿವೆ.

ಎರಡನೇ ಪಟ್ಟಿಯಲ್ಲಿರುವ 15 ಮಂದಿ ಸಂಭವನೀಯ ಆಟಗಾರರು:

ಗೋಲ್‌ಕೀಪರ್ಸ್‌: ಪೂರ್ಬಾ ತೆಂಪಾ ಲಾಚೆನ್ಪ, ವಿಶಾಲ್ ಕೈತ್. ಡಿಫೆಂಡರ್ಸ್‌: ಆಕಾಶ್‌ ಮಿಶ್ರಾ, ಅನ್ವರ್ ಅಲಿ, ಮೆಹ್ತಾಬ್ ಸಿಂಗ್, ರಾಹುಲ್‌ ಭೆಕೆ, ಸುಭಾಷಿಶ್‌ ಬೋಸ್‌. ಮಿಡ್‌ಫೀಲ್ಡರ್ಸ್‌: ಅನಿರುದ್ಧ ಥಾಪಾ, ದೀಪಕ್‌ ತಂಗ್ರಿ, ಲಾಲೆಂಗ್‌ಮವಿಯ ರಾಲ್ಟೆ, ಲಲಿಯನ್‌ಝುವಾಲ ಚಾಂಗ್ಟೆ, ಲಿಸ್ಟನ್ ಕೊಲಾಕೊ, ಸಾಹಲ್ ಅಬ್ದುಲ್ ಸಮದ್‌.

ಫಾರ್ವರ್ಡ್ಸ್‌: ಮಾನ್ವೀರ್ ಸಿಂಗ್‌, ವಿಕ್ರಂ ಪ್ರತಾಪ್ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT