ನಾಪೋಕ್ಲು (ಕೊಡಗು ಜಿಲ್ಲೆ): ನೆಲ್ಲಮಕ್ಕಡ ತಂಡದವರು, ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ ಸೋಮವಾರದ ಪಂದ್ಯದಲ್ಲಿ 4–1 ಗೋಲುಗಳಿಂದ ಅರೆಯಡ ತಂಡದವರ ವಿರುದ್ಧ ಜಯ ಸಾಧಿಸಿದರು.
ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡವು ಸೋಮಯ್ಯ, ಅಯ್ಯಪ್ಪ, ಪ್ರತೀಕ್ ಹಾಗೂ ಗಣೇಶ್ ಗಳಿಸಿದ ತಲಾ ಒಂದು ಗೋಲಿನ ಬಲದಿಂದ ಅರೆಯಡ ತಂಡವನ್ನು ಮಣಿಸಿತು. ಅಂಜಪರವಂಡ ತಂಡವು ಸಹ ಪೆಮ್ಮಂಡ ವಿರುದ್ಧ 4-1ರಿಂದ ಜಯ ಗಳಿಸಿತು.
ಕೂತಂಡ ತಂಡವು 3-0ಯಿಂದ ಬೊಳ್ಳಂಡ ವಿರುದ್ಧ; ಕುಪ್ಪಂಡ ತಂಡವು 1-0ಯಿಂದ ನಾಪಂಡ ವಿರುದ್ಧ; ಮುಕ್ಕಾಟಿರ (ಬೋಂದ) ತಂಡವು 2-1ರಿಂದ ಅಮ್ಮಣಿಚಂಡ ವಿರುದ್ಧ; ನೆರವಂಡ ತಂಡವು 1-0ಯಿಂದ ಮೇಚಿಯಂಡ ವಿರುದ್ಧ; ಕಲಿಯಂಡ ತಂಡವು 2-0 ಗೋಲುಗಳಿಂದ ಮಾತ್ರಂಡ ವಿರುದ್ಧ ಜಯ ಗಳಿಸಿದವು.
ಇಂದಿನಿಂದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು: ಏ.23ರಿಂದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. ಮಂಗಳವಾರ ಅಂಜಪರವಂಡ-ನೆಲ್ಲಮಕ್ಕಡ, ಕೂತಂಡ-ಪುದಿಯೊಕ್ಕಡ, ಮುಕ್ಕಾಟಿರ (ಬೋಂದ)-ನೆರವಂಡ, ಕಲಿಯಂಡ-ಕುಪ್ಪಂಡ(ಕೈಕೇರಿ) ತಂಡಗಳು ಸೆಣಸಲಿವೆ.