ಬೆಂಗಳೂರು: ‘ಆಪರೇಷನ್ ಕಮಲದ ಬಗ್ಗೆ ನಿಮಗೆ ಮಾಹಿತಿ ಇರಲಿಲ್ವಾ?ಅತೃಪ್ತ ಶಾಸಕರನ್ನು ಸಂಪರ್ಕಿಸಲು ನೀವ್ಯಾಕೆ ಪ್ರಯತ್ನ ಮಾಡಲಿಲ್ಲ?15 ದಿನಗಳಿಂದ10 ಶಾಸಕರು ನಾಟ್ ರೀಚಬಲ್ಆಗಿದ್ದಾರೆ. ನೀವು ಯಾಕೆ ಸುಮ್ಮನಿದ್ರಿ? ರಾಜ್ಯ ಘಟಕದ ಅಧ್ಯಕ್ಷರಾಗಿ ನಿಮ್ಮ ಕೆಲಸ ಸರಿಯಾಗಿ ಮಾಡಿದ್ದೀರಾ...?’

ಈ ಪ್ರಶ್ನೆಗಳನ್ನು ಕೇಳಿದವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್. ಕಾಂಗ್ರೆಸ್ ನಾಯಕರ ಸಭೆಯಲ್ಲಿ ವೇಣುಗೋಪಾಲ್ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಡಬಡಾಯಿಸಿದರು. ವೇಣುಗೋಪಾಲ್ ದನಿಯಲ್ಲಿ ಅಸಮಾಧಾನ ತುಳುಕುತ್ತಿತ್ತು.

ಇಂದು ಮುಂಜಾನೆಯಿಂದ ದೆಹಲಿ, ಬೆಂಗಳೂರು ಮತ್ತು ಮುಂಬೈನಲ್ಲಿ ಚುರುಕಿನ ರಾಜಕೀಯ ಚಟುವಟಿಕೆಗಳು ನಡೆದವು. ದಿಢೀರ್ ಎಂದು ಬೆಂಗಳೂರಿಗೆ ಬಂದ ಕೆ.ಸಿ. ವೇಣುಗೋಪಾಲ್ಕಾಂಗ್ರೆಸ್ ನಾಯಕರ ಸಭೆ ನಡೆಸಿದರು.ಸಿದ್ದರಾಮಯ್ಯ, ಪರಮೇಶ್ವರ, ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್ ಅವರೊಂದಿಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಚರ್ಚಿಸಿದರು.ಶಾಸಕರನ್ನು ಮರಳಿ ಕರೆತರುವವರೆಗೆ ವೇಣುಗೋಪಾಲ್ ರಾಜ್ಯದಲ್ಲಿಯೇ ಇರುತ್ತಾರೆಎಂದು ಮೂಲಗಳು ತಿಳಿಸಿವೆ.

ಪ್ರತ್ಯುತ್ತರಕ್ಕೆಸಿದ್ಧ: ಪ್ರಿಯಾಂಕ್ ಖರ್ಗೆ

‘ಅಧಿಕಾರ ಹಿಡಿಯಲು ಬಿಜೆಪಿಯವರು ಅಸಾಂವಿಧಾನಿಕವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಸೂಕ್ತ ಪ್ರತ್ಯುತ್ತರ ಕೊಡಲು ನಾವೂ ಸಿದ್ಧರಿದ್ದೇವೆ.ಮಾಧ್ಯಮಗಳ ವರದಿ ನೋಡಿ ವೇಣುಗೋಪಾಲ್ ರಾಜ್ಯಕ್ಕೆ ಬಂದಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾದಂತೆ 16 ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಈಗ ಮೂರ್ನಾಲ್ಕು ಮಂದಿ ಹೋಗಿರಬಹುದು. ಬಿಜೆಪಿಯದ್ದು ತೋಳ ಬಂತು ತೋಳ ಕಥೆಯಂತಾಗಿದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಭೆಯ ಬಳಿಕೆ ಪ್ರತಿಕ್ರಿಯಿಸಿದರು.

ಡಿಕೆಶಿ–ಸಿಂಗ್ ಭೇಟಿ

ಸಚಿವ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿದ್ದವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕಆನಂದ್ ಸಿಂಗ್ಸುಮಾರು 40 ನಿಮಿಷಗಳ ಕಾಲ ಚರ್ಚೆ ನಡೆಸಿದರು. ‘ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುತ್ತಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳೆಲ್ಲವೂ ಸುಳ್ಳು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ’ ಎಂದು ಡಿಕೆಶಿಗೆ ಸಿಂಗ್ ಮನವರಿಕೆ ಮಾಡಿಕೊಟ್ಟರು.

ನಮಗೂ ಇದೆಲ್ಲಾ ಗೊತ್ತು

ನಮ್ಮ ಪಕ್ಷದ ಶಾಸಕರನ್ನು ಬಿಜೆಪಿಯವರು ಎಲ್ಲೇ ಕೂಡಿ ಹಾಕಿರಲಿ. ಅವರನ್ನ ಕರೆದುಕೊಂಡು ಬರುವ ಶಕ್ತಿ ನಮಗಿದೆ. ನಾನು ಆನಂದ್ ಸಿಂಗ್, ನಾಗೇಂದ್ರ, ಗಣೇಶ್ ಎಲ್ಲರೂ ಸ್ನೇಹಿತರೇ. ಬಿಜೆಪಿ ನಾಯಕರು ಹತಾಶರಾಗಿದ್ದಾರೆ. ಇದು ಅವರ ಹತಾಶ ಪ್ರಯತ್ನ ಎಂದು ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ರಾಜಕಾರಣದಲ್ಲಿ ಎರಡು ರೀತಿಯ ಗೇಮ್ ನಡೆಯುತ್ತೆ. ನಾನೀಗ ಅದನ್ನೆಲ್ಲಾ ಬಿಡಿಸಿ ಹೇಳಲು ಸಾಧ್ಯವಿಲ್ಲ. ಶಾಸಕರ ಭವಿಷ್ಯವನ್ನು ಹಾಳು ಮಾಡೋದನ್ನುಬಿಟ್ಟರೆ ಒಳ್ಳೆಯದು. ಬೇಕಾದರೆ ಅವರಪಕ್ಷದ ಶಾಸಕರನ್ನುಕೂಡಿ ಹಾಕಿಕೊಳ್ಳಲಿ. ನಾವು ಕೂಡಿ ಹಾಕಿಸಿಕೊಳ್ಳುವ ಪ್ರಶ್ನೆ ಉದ್ಭವಿಸಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಸಿಂಗ್–ವೇಣುಗೋಪಾಲ್ ಚರ್ಚೆ

ಆಪರೇಷನ್ ಕಮಲದ ಆತಂಕ ಕುರಿತುಕಾಂಗ್ರೆಸ್ ರಾಜ್ಯ ಉಸ್ತುವಾರಿಕೆ.ಸಿ.ವೇಣುಗೋಪಾಲ್, ಶಾಸಕ ಆನಂದ್ ಸಿಂಗ್ ಅವರ ಜೊತೆಗೆ ಪ್ರತ್ಯೇಕ ಚರ್ಚೆ ನಡೆಸಿದರು.

ನಿಮ್ಮನ್ನುಬಿಜೆಪಿಯ ಯಾವ ನಾಯಕರು ಸಂಪರ್ಕಿಸಿದ್ದರು?ಯಾವಾಗ ನಿಮ್ಮ ಜೊತೆ ಮಾತನಾಡಿದ್ದರು?ಬಿಜೆಪಿಗೆ ಸೇರಲು ಒಡ್ಡಿರುವ ಆಮಿಷ ಯಾವುದು? ನೀವು ಏನು ಹೇಳಿದಿರಿ ಎಂದೆಲ್ಲಾ ವೇಣುಗೋಪಾಲ್ ಪ್ರಶ್ನಿಸಿದರು ಎಂದು ತಿಳಿದುಬಂದಿದೆ.

ಬಿಜೆಪಿಯ ಕೆಲವರು ಅಮಿಷವೊಡ್ಡಿದ್ದು ನಿಜ. ನಾನು ಅದನ್ನ ನಿರಾಕರಿಸಿದ್ದೂ ನಿಜ. ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ನಾನು ಪಕ್ಷ ತೊರೆಯುವ ಮಾತೇ ಇಲ್ಲ.ನಾಗೇಂದ್ರ ನನ್ನ ಸಂಪರ್ಕದಲ್ಲಿಲ್ಲ. ನನ್ನ ಬಗ್ಗೆ ನೀವು ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಬಹುದು ಎಂದು ವೇಣುಗೋಪಾಲ್ ಅವರಿಗೆ ಸಿಂಗ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.