ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BMW 2 Series: ಗ್ರಾನ್ ಕೂಪ್ ಎಂ ಕಾರು ಭಾರತದಲ್ಲಿ ಬಿಡುಗಡೆ

Published 8 ಸೆಪ್ಟೆಂಬರ್ 2023, 7:31 IST
Last Updated 8 ಸೆಪ್ಟೆಂಬರ್ 2023, 7:31 IST
ಅಕ್ಷರ ಗಾತ್ರ

ಗುರುಗ್ರಾಮ: ಜರ್ಮನಿಯ ಬಿಎಂಡಬ್ಲೂ ಸ್ವದೇಶಿ ನಿರ್ಮಿತ ಬಿಎಂಡಬ್ಲೂ 2 ಸೀರೀಸ್ ಗ್ರಾನ್ ಕೂಪ್ ಎಂ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಕೆಲವೇ ಕೆಲವು ಕಾರುಗಳು ಲಭ್ಯವಿದ್ದು ಬಿಎಂಡಬ್ಲೂ ಆನ್‌ಲೈನ್ ಶಾಪಿಂಗ್ ಮೂಲಕ ಕಾಯ್ದಿರಿಸಬಹುದಾಗಿದೆ. ಟ್ವಿನ್‌ ಪವರ್ ಟರ್ಬೊ 2 ಲೀ.ನ ನಾಲ್ಕು ಸಿಲಿಂಡರ್‌ಗಳ ಪೆಟ್ರೋಲ್ ಎಂಜಿನ್ ಅನ್ನು ಈ ಕಾರು ಹೊಂದಿದೆ. ಸಾಂಪ್ರದಾಯಿಕ ಸ್ಪೋರ್ಟ್ಸ್‌ ಕೂಪ್‌ ಕಾರುಗಳಿಗಿಂತಲೂ ಇದು ಭಿನ್ನವಾಗಿದೆ. ಜತೆಗೆ ಎಂ ಸಿರೀಸ್‌ನ ಸೌಕರ್ಯಗಳು ಈ ಕಾರಿನಲ್ಲಿ ಲಭ್ಯ. ಈ ಸೀಮಿತ ಆವೃತ್ತಿಯಲ್ಲಿ ಬಿಎಂಡಬ್ಲೂನ ಮುಂದಿನ ಹಂತದ ಅನುಭವವನ್ನು ಗ್ರಾಹಕರು ಪಡೆಯಲಿದ್ದಾರೆ’ ಎಂದು ಬಿಎಂಡಬ್ಲೂ ಭಾರತೀಯ ಮಾರುಕಟ್ಟೆಯ ಅಧ್ಯಕ್ಷ ವಿಕ್ರಂ ಪವಾಹ್ ಹೇಳಿದರು.

ಈ ಕಾರಿನ ಎಕ್ಸ್‌ ಶೋರೂಂ ಬೆಲೆ ₹46 ಲಕ್ಷ ಎಂದು ಕಂಪನಿ ಹೇಳಿದೆ. ಬಿಎಂಡಬ್ಲೂ 2 ಸೀರೀಸ್ ಗ್ರಾನ್ ಕೂಪ್ ಎಂ ಕಾರು ಬ್ಲಾಕ್ ಸಫೈರ್ ಮೆಟಾಲಿಕ್‌ ಬಣ್ಣದಲ್ಲೂ ಲಭ್ಯ. ಇಎಂಐ ಮೂಲಕವೂ ಕಾರು ಖರೀದಿಗೆ ಕಂಪನಿ ಆಯ್ಕೆ ನೀಡಿದೆ. 

ಈ ಕಾರಿನ ನಿರ್ವಹಣೆ ಮೂರು ವರ್ಷಗಳು ಅಥವಾ 40 ಸಾವಿರ ಕಿಲೋಮೀಟರ್‌ ಅಥವಾ 10 ವರ್ಷ/ 2 ಲಕ್ಷ ಕಿಲೋಮೀಟರ್‌ ಪ್ಯಾಕೇಜ್ ಅನ್ನು ಕಂಪನಿ ಗ್ರಾಹಕರ ಆಯ್ಕೆಗೆ ಬಿಟ್ಟಿದೆ. ಇದು ₹52,156ರಿಂದ ಆರಂಭ. ಮೊದಲ ಎರಡು ವರ್ಷಗಳ ವಾರೆಂಟಿ ಅವಧಿ ಪೂರ್ಣಗೊಂಡ ನಂತರ ಎಕ್ಸ್‌ಟೆಂಡೆಡ್ ವಾರಂಟಿ ಸೌಲಭ್ಯವನ್ನೂ ಗ್ರಾಹಕರು ಪಡೆಯಬಹುದು ಎಂದು ಕಂಪನಿ ಹೇಳಿದೆ.

ಬಿಎಂಡಬ್ಲೂ 2 ಸೀರೀಸ್ ಗ್ರಾನ್ ಕೂಪ್ ಎಂ ಕಾರಿನಲ್ಲಿ ಫ್ರೇಮ್ ಇಲ್ಲದ ಬಾಗಿಲು, ಮುಂಭಾಗದ ಗ್ರಿಲ್‌ ಸೀರಮ್ ಬೂದು ಬಣ್ಣದಿಂದ ಕೂಡಿದೆ. ಇದು ಸ್ಪೋರ್ಟಿ ರೂಪ ನೀಡುತ್ತಿದೆ. ಫಾಗ್ ದೀಪಗಳು ಹಾಗೂ ಒಆರ್‌ವಿಎಂಗಳು ಬೂದು ಬಣ್ಣದಲ್ಲಿವೆ. ಸಂಪೂರ್ಣ ಎಲ್‌ಇಡಿ ದೀಪಗಳು ಬಿಎಂಡಬ್ಲೂ ಕಾರು ಎಂದು ಸಾರಿ ಹೇಳುವಂತಿದೆ. 430 ಲೀಟರ್‌ನ ಬೂಟ್‌ ಸ್ಪೇಸ್‌ ಈ ಕಾರು ಹೊಂದಿದೆ. ಹಿಂಬದಿಯ ಆಸನಗಳನ್ನು 40/20/40 ಮಾದರಿಯಲ್ಲಿ ಅಳವಡಿಸಲಾಗಿದೆ. ಒಳಭಾಗದಲ್ಲಿ ಆರು ಭಿನ್ನ ಮಾದರಿಯ ಡಿಮ್‌ ಲೈಟ್‌ಗಳ ಮಾದರಿಯನ್ನು ಅಳವಡಿಸಲಾಗಿದೆ.

176 ಅಶ್ವ ಶಕ್ತಿಯನ್ನು ಉತ್ಪಾದಿಸುವ ಈ ಕಾರು, 280 ನ್ಯೂಟನ್ ಮೀಟರ್ ಟಾರ್ಕ್‌ ಹೊಂದಿದೆ. ಪ್ರತಿ ಗಂಟೆಗೆ 0ಯಿಂದ 100 ಕಿ.ಮೀ. ವೇಗವನ್ನು 7.1 ಸೆಕೆಂಡ್‌ನಲ್ಲಿ ಕ್ರಮಿಸಲಿದೆ. ಒಳಭಾಗದಲ್ಲಿ 10.25 ಇಂಚಿನ ಇನ್ಫೊಟೈನ್ಮೆಂಟ್‌ ಸಾಧನ ಅಳವಡಿಸಲಗಿದೆ. ಸುರಕ್ಷತೆಗಾಗಿ ಪಾರ್ಕಿಂಗ್ ಅಸಿಸ್ಟೆಂಟ್, ಹಿಂಬದಿಯ ಕ್ಯಾಮೆರಾ, ಎಬಿಎಸ್‌, ಬ್ರೇಕ್ ಅಸಿಸ್ಟ್‌, ಡೈನಾಮಿಕ್ ಸ್ಟೆಬಲಿಟಿ ಕಂಟ್ರೋಲ್, ಡೈನಾಮಿಕ್ ಟ್ರ್ಯಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್‌, ಆಟೊ ಹೋಲ್ಡ್‌, ಎರಡೂ ಬದಿಯಲ್ಲಿ ರಕ್ಷಣೆ ಸೇರಿದಂತೆ ಹಲವು ಸಾಧನಗಳು ಈ ಕಾರಿನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT