ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಯೊಟೊ 3 ಕಾರುಗಳ ಪೂರೈಕೆಗೆ ತಾತ್ಕಾಲಿಕ ತಡೆ

Published 30 ಜನವರಿ 2024, 16:36 IST
Last Updated 30 ಜನವರಿ 2024, 16:36 IST
ಅಕ್ಷರ ಗಾತ್ರ

ನವದೆಹಲಿ: ಎಂಜಿನ್‌ಗಳು ಉತ್ಪಾದಿಸುವ ಶಕ್ತಿಯ ಪರೀಕ್ಷೆ ವೇಳೆ ಎಸಗಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆಯು ಪೂರ್ಣಗೊಳ್ಳುವವರೆಗೂ ಡೀಸೆಲ್‌ ಮಾದರಿಯ ಇನ್ನೋವಾ ಕ್ರಿಸ್ಟಾ, ಫಾರ್ಚೂನರ್ ಮತ್ತು ಹೈಲಕ್ಸ್ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಂತೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಟೊಯೊಟಾ ಇಂಡಸ್ಟ್ರೀಸ್ ಕಾರ್ಪೊರೇಷನ್ (ಟಿಐಸಿಒ) ತಿಳಿಸಿದೆ.

ಎಂಜಿನ್‌ಗಳು ಉತ್ಪಾದಿಸುವ ಶಕ್ತಿಯನ್ನು ಪರೀಕ್ಷೆಗೆ ಒಳಪಡಿಸುವಾಗ ಬಳಸಿದ ಇಸಿಯುಗಳನ್ನು (ಎಂಜಿನ್‌ ಕಂಟ್ರೋಲ್‌ ಯುನಿಟ್‌) ಎಂಜಿನ್‌ ತಯಾರಿಕೆಯ ವೇಳೆ ಬಳಸಿಲ್ಲ. ಅಕ್ರಮವಾಗಿ ಎರಡೂ ಇಸಿಯುಗಳನ್ನು ಕಂಪನಿಯು ಭಿನ್ನವಾಗಿ ಬಳಸಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. 

‘ಈ ಪ್ರಕರಣವು ವಾಹನಗಳ ಸುರಕ್ಷತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಟೊಯೊಟೊ ಕಿರ್ಲೋಸ್ಕರ್ ಮೋಟಾರ್‌ನ ಸಂಯೋಜಿತ ಸಂಸ್ಥೆಯಾದ ಟಿಐಸಿಒ ಹೇಳಿದೆ.

‘ಈ ಮೂರು ಮಾದರಿಯ ವಾಹನಗಳ ದತ್ತಾಂಶದ ಪ್ರಮಾಣೀಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಅಧಿಕಾರಿಗಳು ಕಾರ್ಯ ನಿರತರಾಗಿದ್ದಾರೆ. ಅಲ್ಲಿಯವರೆಗೆ ಈ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಿಲ್ಲ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT