ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಸಣ್ಣಗೆ ಆರಂಭವಾಗಿದೆ; ವಾರ್ಡ್‌ರೋಬ್‌ ಅನ್ನು ಋತುವಿನ ಅನುಸಾರ ಜೋಡಿಸಲು ಮುಂದಾಗಿ

Published 23 ಜೂನ್ 2023, 20:50 IST
Last Updated 23 ಜೂನ್ 2023, 20:50 IST
ಅಕ್ಷರ ಗಾತ್ರ

ಮಳೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಳೆ ಮನಸ್ಸಿಗೆ ಮುದ ನೀಡುತ್ತದೆ.  ಮಳೆಗಾಲಕ್ಕೆ ಧರಿಸಲೆಂದೇ ಸೂಕ್ತ ಬಟ್ಟೆಗಳಿವೆ. ಪರಿಸರದಲ್ಲಿ ಆಗುವ ಬದಲಾವಣೆಗಳಿಂದ ತುಸು ಜಾಗರೂಕರಾಗಿಯೇ ಬಟ್ಟೆ ಆಯ್ಕೆ ಮಾಡಿಕೊಳ್ಳುವುದು ಒಳಿತು. ಕೆಸರುಮಯ ರಸ್ತೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ಬರಬಹುದು; ಗಾಳಿ, ಮಳೆ ಅಷ್ಟೇನೂ ಉತ್ತಮ ವಾತಾವರಣವಿಲ್ಲದಿದ್ದಾಗಲೂ ತುಸು ಆಸ್ಥೆ ವಹಿಸಿದರೆ ಟ್ರೆಂಡಿಯಾಗಿ ಕಾಣಬಹುದು.

ಮಳೆಗಾಲದಲ್ಲಿ ಮನಸ್ಸಿಗೆ ಮುದ ನೀಡುವ ಬಣ್ಣ ಬಣ್ಣದ ಆರಾಮದಾಯಕವೆನಿಸುವ ಬಟ್ಟೆಗಳನ್ನು ಧರಿಸಬಹುದು. ಆಯಾ ಋತುವಿಗೆ ಹೊಂದುವಂಥ ಬಟ್ಟೆ ಧರಿಸುವುದು ಸಕಾರಾತ್ಮಕ ಪ್ರವೃತ್ತಿಯ ಸೂಚಕ.

ಜೀನ್ಸ್‌, ಮ್ಯಾಕ್ಸಿ ಸ್ಕರ್ಟ್ಸ್‌, ಲಾಂಗ್‌ ಪ್ಲಾಜೋಗಳನ್ನು ಪಕ್ಕಕ್ಕಿಟ್ಟು, ವಾರ್ಡ್‌ರೋಬ್‌ನಲ್ಲಿ ಮಳೆಗಾಲಕ್ಕೆಂದೇ ಹೊಸ ಬಟ್ಟೆಗಳನ್ನು ಜೋಡಿಸಿಡುವುದು ಒಳಿತು. ಮಳೆಗಾಲದಲ್ಲಿ ಬಟ್ಟೆಗಳಿಗೆ ನೀರು, ಮಣ್ಣು, ಕೆಸರಿನ ಕಲೆ ಬೇಗನೆ ಆಗುವುದರಿಂದ ಚಿಕ್ಕ ಹಾಗೂ ಮಧ್ಯಮ ಅಳತೆಯ ಸ್ಕರ್ಟ್‌ಗಳು ಆಯ್ದುಕೊಳ್ಳುವುದು ಒಳಿತು. ಲೆದರ್‌ ಶೂ ಹಾಗೂ ಹೀಲ್ಸ್‌ ಮಳೆಗಾಲಕ್ಕೆ ಅಗತ್ಯವಿರುವಂಥದ್ದು.

ಬಿಳಿ ಬಟ್ಟೆಗೆ ಬೈ ಬೈ ಹೇಳಿ: ಶುಭ್ರ ಶ್ವೇತ ವಸ್ತ್ರಗಳು ಮಳೆಗಾಲದಲ್ಲಿ ಕಲೆಯಾಗುವುದೇ ಹೆಚ್ಚು. ಬಿಳಿ ಬಟ್ಟೆ ಮೇಲೆ ನೀರು ಬಿದ್ದರೆ ಇನ್ನಷ್ಟು ಪಾರದರ್ಶಕವೆನಿಸುವ ಸಾಧ್ಯತೆ ಇರುತ್ತದೆ. ಬದಲಿಗೆ ಬಹಳ ಬಣ್ಣ ಬಣ್ಣದ ಕಲರ್‌ಫುಲ್‌ ಎನಿಸುವ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಿ. ಕಾಮನಬಿಲ್ಲಿನ ಬಣ್ಣ, ದೊಡ್ಡ ದೊಡ್ಡ ಹೂಗಳಿರುವ (ಫ್ಲೋರಲ್‌) ಕುರ್ತಾಗಳು, ಸ್ಕರ್ಟ್‌ಗಳು, ಸೀರೆಗಳು ನಿಮ್ಮ ವಾರ್ಡ್‌ರೋಬ್‌ನಲ್ಲಿರಲಿ.

ಬೇಗ ಒಣಗುವ ಬಟ್ಟೆಗೆ ಆದ್ಯತೆ ಕೊಡಿ: ಮಳೆ ಯಾವಾಗ ಬಂದು ತೋಯುತ್ತೇವೋ ಹೇಳಲು ಬರುವುದಿಲ್ಲ. ಬಿಸಿಲು ಬೇಕಾದ ಹಾಗೇ ಸಿಗುವುದಿಲ್ಲ.ಹಾಗಾಗಿ ನೆನೆದರೂ ಬೇಗ ಒಣಗುವ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಿ. ನೈಲಾನ್‌, ಪಾಲಿಸ್ಟರ್‌, ಸಿಂಥೆಟಿಕ್‌ ಬ್ಲೆಂಡ್‌ ಆಗಿರುವ ಬಟ್ಟೆಗೆ ಆದ್ಯತೆ ನೀಡಬಹುದು.  ಹಗುರವಾದ ಹತ್ತಿ ಹಾಗೂ ಲೆನಿನ್‌ ಬಟ್ಟೆಗಳು ಮಳೆಗಾಲಕ್ಕೆ ಹೇಳಿ ಮಾಡಿಸಿದವು.

ವಾಟರ್‌ಫ್ರೂಪ್‌ ಔಟ್‌ವೇರ್‌: ಗುಣಮಟ್ಟದ ವಾಟರ್‌ಫ್ರೂಪ್‌ ಜಾಕೆಟ್‌, ರೇನ್‌ಕೋಟ್‌ ಮಳೆಗಾಲಕ್ಕೆ ಅಗತ್ಯವಿರುವಂಥದ್ದು. ಮೋಡ ಮುಸುಕಿದ ವಾತಾವರಣಕ್ಕೆ ರಂಗು ತುಂಬಿದ ಗಾಢಬಣ್ಣದ ವಾಟರ್‌ಪ್ರೂಪ್‌ ಜಾಕೆಟ್‌ಗಳು, ರೇನ್‌ಕೋಟ್‌ಗಳನ್ನು ಬಳಸಿ. ಆದರೆ  ಆರಾಮದಾಯಕವೆನಿಸುವಂಥ ಇದ್ದರೆ ಚೆನ್ನ.

ಫ್ಯಾಷನೇಬಲ್‌ ಛತ್ರಿಗಳು: ಮಳೆಗಾಲ ಅಂದಾಕ್ಷಣ ಮೊಟ್ಟ ಮೊದಲಿಗೆ ಬೇಕಿರುವುದು ಛತ್ರಿಗಳು. ಆದರೆ, ಇವು ಅತ್ಯಂತ ಫ್ಯಾಷನೇಬಲ್‌ ಆಗಿದ್ದರಂತೂ ಮಳೆಗಾಲವನ್ನು ಇನ್ನಷ್ಟು ರಂಗಾಗಿಸುತ್ತದೆ. ಕಪ್ಪು ಬಣ್ಣದ ಛತ್ರಿಗಳು ಸಾಮಾನ್ಯವಾಗಿ ಬಳಕೆಯಲ್ಲಿದ್ದರೂ ಬಹಳ ಚಂದದ ಪ್ರಿಂಟ್‌ ಹಾಗೂ ಪ್ಯಾಟರ್ನ್‌ಗಳಿರುವ ಛತ್ರಿಗಳನ್ನು ಆಯ್ಕೆ ಮಾಡಿಕೊಳ್ಳಿ. ಅದರಲ್ಲೂ ಮಳೆ ಹನಿಯ ಚಿಟಪಟ ಸದ್ದು ಕೇಳಿಸುವ, ಮಳೆಹನಿ ಕಾಣಿಸುವ ಹಾಗೆ ಪಾರದರ್ಶಕವೆನಿಸುವ ಛತ್ರಿಗಳನ್ನು ಒಮ್ಮೆ ಹಿಡಿದರೆ ಮತ್ತೆ ಬಿಡುವುದು ಕಷ್ಟ. ಏನೇ ಆದರೂ ಧರಿಸುವ ದಿರಿಸಿಗೆ ಹೊಂದುವಂಥ ಛತ್ರಿಗಳಿರಲಿ.

ವಾಟರ್‌ಫ್ರೂಪ್‌ ಫೂಟ್‌ವೇರ್‌: ಪಾದಗಳು ತೋಯದಂತೆ ಮಾಡಲು ವಾಟರ್‌ಫ್ರೂಪ್‌ ಫೂಟ್‌ವೇರ್‌ಗಳಾದ  ರೇನ್‌ ಬೂಟ್ಸ್‌ ಅಥವಾ ರಬರ್‌ ಸೋಲ್‌ ಶೂ ಧರಿಸಿ. ಮಳೆ ಬಿದ್ದು ಎಲ್ಲೆಂದರಲ್ಲಿ ಪಾಚಿ ಬೆಳೆದು ನೆಲ ಜಾರುತ್ತಿರುತ್ತದೆ. ಇಂಥ ಸಮಯದಲ್ಲಿಯೂ ಈ ಶೂಗಳು ಸಹಕಾರಿ.

ಮಳೆ ಸಣ್ಣಗೆ ಆರಂಭವಾಗಿದೆ. ಇನ್ಯಾಕೆ ತಡ ವಾರ್ಡ್‌ರೋಬ್‌ ಅನ್ನು ಋತುವಿನ ಅನುಸಾರ ಜೋಡಿಸಲು ಮುಂದಾಗಿ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT