ನವದೆಹಲಿ: ಐಷಾರಾಮಿ ಸ್ಪೋರ್ಟ್ಸ್ ಕಾರು ತಯಾರಿಕಾ ಕಂಪನಿ ಪೋಷೆ ಇಂಡಿಯಾ 2024ರ ಮೊದಲ ತ್ರೈಮಾಸಿಕದಲ್ಲಿ 244 ಕಾರುಗಳನ್ನು ಮಾರಾಟ ಮಾಡಿದೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿ 213 ಕಾರುಗಳನ್ನು ಮಾರಾಟ ಮಾಡಿತ್ತು. ಈ ಮಾರಾಟಕ್ಕೆ ಹೋಲಿಸಿದರೆ ಶೇ 15ರಷ್ಟು ಏರಿಕೆಯಾಗಿದೆ ಎಂದು ಕಂಪನಿ ಮಂಗಳವಾರ ತಿಳಿಸಿದೆ.
2023ರಲ್ಲಿ ಕಂಪನಿಯ 914 ಕಾರುಗಳು ಮಾರಾಟವಾಗಿದ್ದರೆ, 2022ರಲ್ಲಿ 779 ಕಾರು ಮಾರಾಟವಾಗಿದ್ದವು. ಹಲವಾರು ಹೊಸ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿ, ಮಾರಾಟವನ್ನು ವಿಸ್ತರಿಸಲು ಯೋಜಿಸಿದೆ ಎಂದು ಕಂಪನಿಯು ಹೇಳಿದೆ.