ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿ ಬೆಂಗಳೂರಿನಲ್ಲಿ ವರ್ಷಧಾರೆ: ಕೊಂಚ ತಣಿದ ಬಿಸಿಲ ಧಗೆ

ನೆಲಕ್ಕುರುಳಿದ ಮರಗಳು: ರಸ್ತೆಗಳು ಜಲಾವೃತ: ಸಂಚಾರ ಅಸ್ತವ್ಯಸ್ತ
Published 8 ಮೇ 2024, 16:14 IST
Last Updated 8 ಮೇ 2024, 16:14 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಒಂದು ದಿನ ಬಿಡುವು ನೀಡಿದ್ದ ಮಳೆ, ಬುಧವಾರ ಸಂಜೆ ಬಹುತೇಕ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಉತ್ತಮವಾಗಿ ಸುರಿಯಿತು. ಕೆಲವು ಪ್ರದೇಶಗಳಲ್ಲಿ ತಡರಾತ್ರಿಯವರೆಗೂ ತುಂತುರು ಮಳೆಯಾಯಿತು.

ಸೋಮವಾರ ಸುರಿದ ಮಳೆಯಿಂದ ನಗರದಲ್ಲಿ ತಂಪನೆ ವಾತಾವರಣವಿತ್ತು. ಆದರೆ, ಮಂಗಳವಾರ ಹಾಗೂ ಬುಧವಾರ ತಾಪಮಾನ ಹೆಚ್ಚಾಗಿತ್ತು. ಬುಧವಾರ ಸಂಜೆಯ ಮಳೆ ಉಷ್ಣಾಂಶವನ್ನು ಕಡಿಮೆ ಮಾಡಿತು.

ಬುಧವಾರ ಸಂಜೆ ಬಿರುಗಾಳಿ, ಮಿಂಚು ಹಾಗೂ ಗುಡುಗು ಸಹಿತ ಮಳೆ ಸುರಿದಿದ್ದರಿಂದ ಹಲವು ಮರಗಳು, ಕೊಂಬೆಗಳು ನೆಲಕ್ಕುರುಳಿದವು. ಮಳೆನೀರು ಚರಂಡಿಗೆ ಸರಾಗವಾಗಿ ಹರಿಯದೆ, ರಸ್ತೆಗಳು ಜಲಾವೃತಗೊಂಡಿದ್ದವು.

ದೊಡ್ಡಬಿದರಕಲ್ಲು, ರಾಜರಾಜೇಶ್ವರಿನಗರ, ನಾಯಂಡಹಳ್ಳಿ ಸುತ್ತಮುತ್ತ ಅತಿಹೆಚ್ಚು ಮಳೆಯಾಗಿದ್ದರೆ, ರಾಜಮಹಲ್‌ ಗುಟ್ಟಹಳ್ಳಿ, ಬಾಣಸವಾಡಿ, ಕಮ್ಮನಹಳ್ಳಿ, ಚೌಡೇಶ್ವರಿನಗರ, ಹೊಯ್ಸಳನಗರಗಳಲ್ಲಿ ಉತ್ತಮ ಮಳೆಯಾಗಿದೆ.

ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ರಸ್ತೆಯಲ್ಲಿ ಮಳೆ ನೀರು ತುಂಬಿದ್ದರಿಂದ ಬಿಎಂಟಿಸಿ ಬಸ್‌ಗಳು, ಕಾರುಗಳು ಹಾಗೂ ದ್ವಿಚಕ್ರ ವಾಹನಗಳು ಸಿಲುಕಿಕೊಂಡು ಸಂಚಾರ ಅಸ್ತವ್ಯಸ್ತಗೊಂಡಿತ್ತು. 

ಓಲ್ಡ್‌ ತರಗುಪೇಟೆ, ಕೆ.ಆರ್. ಮಾರುಕಟ್ಟೆ ಸುತ್ತಮುತ್ತಲಿನ ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ಮೈಸೂರು ರಸ್ತೆ ಕಡೆಗೆ ವಾಹನ ಸಂಚಾರ ನಿಧಾನಗತಿಯಲ್ಲಿತ್ತು. 

ಯಲಹಂಕ ಉಪನಗರದ ಉನ್ನಿಕೃಷ್ಣನ್‌ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಜಾಲಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಜಯಮಹಲ್‌ ಬಳಿಯ ರೈಲ್ವೆ ಕೆಳಸೇತುವೆ, ಜಯಮಹಲ್‌ ಮುಖ್ಯರಸ್ತೆ, ಹೆಬ್ಬಾಳ ವೃತ್ತ, ಹೆಬ್ಬಾಳ ಮೇಲ್ಸೇತುವೆ ಇಳಿಜಾರು, ಎನ್‌ಜಿಇಎಫ್‌ ಸಿಗ್ನಲ್‌ಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.

152 ಮರ–ಕೊಂಬೆ ಧರೆಗೆ

ಜನರಲ್‌ ಕೆ.ಎಸ್‌. ತಿಮ್ಮಯ್ಯ ರಸ್ತೆಯಲ್ಲಿ ಮರ ಹಾಗೂ ವಿದ್ಯುತ್‌ ಕಂಬ ಬಿದ್ದು ಆಟೊ ಜಖಂಗೊಂಡಿತು. ಚಾಲಕ, ಪ್ರಯಾಣಿಕರು ಪಾರಾಗಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್‌ ಠಾಣೆ, ಸಿ.ವಿ. ರಾಮನ್‌ನಗರ ರಸ್ತೆ, ಮರಗಳು, ಕೊಂಬೆಗಳು ರಸ್ತೆಗೆ ಉರುಳಿ ಬಿದ್ದವು. 

ಬುಧವಾರ ಸುರಿದ ಮಳೆಯಿಂದ ಬಿಬಿಎಂಪಿ ವ್ಯಾಪ್ತಿಯ ಏಳು ವಲಯಗಳಲ್ಲಿ 152 ಮರ/ ಕೊಂಬೆಗಳು ಧರೆಗುರುಳಿವೆ. ಇದರಲ್ಲಿ 40  ಮರ/ಕೊಂಬೆಗಳನ್ನು ತೆರವು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಆರ್‌.ಆರ್‌ ನಗರ ವಲಯದಲ್ಲಿ 70, ಪೂರ್ವದಲ್ಲಿ 30, ಪಶ್ಚಿಮದಲ್ಲಿ 24, ದಕ್ಷಿಣದಲ್ಲಿ 16, ಯಲಹಂಕದಲ್ಲಿ 7, ದಾಸರಹಳ್ಳಿಯಲ್ಲಿ 3, ಬೊಮ್ಮನಹಳ್ಳಿ ವಲಯದಲ್ಲಿ 2 ಮರ/ ಕೊಂಬೆಗಳು ಬಿದ್ದಿವೆ.

ಹೆಚ್ಚು ಮಳೆ ಎಲ್ಲೆಲ್ಲಿ?

ದೊಡ್ಡಬಿದರಕಲ್ಲು; 6.6 ಸೆಂ.ಮೀ

ರಾಜರಾಜೇಶ್ವರಿನಗರ; 5.15 ಸೆಂ.ಮೀ

ನಾಯಂಡಹಳ್ಳಿ; 5.15 ಸೆಂ.ಮೀ

ಮಾರುತಿಮಂದಿರ; 4.2 ಸೆಂ.ಮೀ

ಪುಲಕೇಶಿನಗರ; 3.8 ಸೆಂ.ಮೀ

ವಿದ್ಯಾಪೀಠ; 3.75 ಸೆಂ.ಮೀ

ವಿಶ್ವನಾಥ ನಾಗೇನಹಳ್ಳಿ; 3.50 ಸೆಂ.ಮೀ

ಕೆಂಗೇರಿ; 2.45 ಸೆಂ.ಮೀ

ಗೊಟ್ಟಿಗೆರೆ; 2.25 ಸೆಂ.ಮೀ

ಕೊಟ್ಟಿಗೆಪಾಳ್ಯ; 2.15 ಸೆಂ.ಮೀ

ಉತ್ತರಹಳ್ಳಿ; 2.15 ಸೆಂ.ಮೀ

ಸಂಪಂಗಿರಾಮನಗರ; 2 ಸೆಂ.ಮೀ

ಅಂಜನಾಪುರ; 2 ಸೆಂ.ಮೀ

ಕುಶಾಲನಗರ; 2 ಸೆಂ.ಮೀ

ಹೆಮ್ಮಿಗೆಪುರ; 2 ಸೆಂ.ಮೀ

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಬಿರುಸಿನ ಮಳೆಯಲ್ಲೇ ಸಾಗಿದ ವಾಹನ ಸವಾರರು
ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಬಿರುಸಿನ ಮಳೆಯಲ್ಲೇ ಸಾಗಿದ ವಾಹನ ಸವಾರರು ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಶ್ವಾನಕ್ಕೂ ತಂಪು...
ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿ ಬುಧವಾರ ಸಂಜೆ ಯುವಕ ಯುವತಿಯರು ನಾಯಿಯೊಂದಿಗೆ ಮಳೆಯಲ್ಲೇ ಸಾಗಿದರು
ಪ್ರಜಾವಾಣಿ ಚಿತ್ರ / ರಂಜು ಪಿ.
ಶ್ವಾನಕ್ಕೂ ತಂಪು... ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿ ಬುಧವಾರ ಸಂಜೆ ಯುವಕ ಯುವತಿಯರು ನಾಯಿಯೊಂದಿಗೆ ಮಳೆಯಲ್ಲೇ ಸಾಗಿದರು ಪ್ರಜಾವಾಣಿ ಚಿತ್ರ / ರಂಜು ಪಿ.
ಬೆಂಗಳೂರಿನ ಕಸ್ತೂರಿಬಾ ರಸ್ತೆಯಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಲ್ಲೇ ಸಾಗಿದ ವಾಹನಗಳು
ಪ್ರಜಾವಾಣಿ ಚಿತ್ರ / ರಂಜು ಪಿ.
ಬೆಂಗಳೂರಿನ ಕಸ್ತೂರಿಬಾ ರಸ್ತೆಯಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಲ್ಲೇ ಸಾಗಿದ ವಾಹನಗಳು ಪ್ರಜಾವಾಣಿ ಚಿತ್ರ / ರಂಜು ಪಿ.
ಬೆಂಗಳೂರಿನ ಬ್ರಿಗೇಡ್ ಮತ್ತು ರೆಸಿಡೆನ್ಸಿ ರಸ್ತೆಯ ಜಂಕ್ಷನ್ ನಲ್ಲಿ ಬುಧವಾರ ಸುರಿದ ಬಿರುಸಿನ ಮಳೆಯಲ್ಲಿ ಜನರು ಕೊಡೆ ಹಿಡಿದು ಬಸ್ಸಿಗಾಗಿ ಕಾಯುತ್ತಿರುವುದು ಕಂಡುಬಂತು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಬ್ರಿಗೇಡ್ ಮತ್ತು ರೆಸಿಡೆನ್ಸಿ ರಸ್ತೆಯ ಜಂಕ್ಷನ್ ನಲ್ಲಿ ಬುಧವಾರ ಸುರಿದ ಬಿರುಸಿನ ಮಳೆಯಲ್ಲಿ ಜನರು ಕೊಡೆ ಹಿಡಿದು ಬಸ್ಸಿಗಾಗಿ ಕಾಯುತ್ತಿರುವುದು ಕಂಡುಬಂತು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT