ದಾವಣಗೆರೆ: ‘ಸೋನಿಯಾ ಗಾಂಧಿ ಮುಂದೆ ಕೈಕಟ್ಟಿ ಕುಳಿತುಕೊಳ್ಳುತ್ತಿದ್ದ ಸಿದ್ದರಾಮಯ್ಯ ಅವರನ್ನು ಪಮರೇನಿಯನ್ ನಾಯಿ ಅನ್ನೋಕೆ ಆಗುತ್ತಾ’ ಎಂದು ನಳಿನ್‌ಕುಮಾರ್ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು ಪ್ರಶ್ನಿಸಿದರು.

ಬಿಜೆಪಿಯಿಂದ ಶುಕ್ರವಾರ ನಡೆದ ವೃತ್ತಿಪರರು ಮತ್ತು ಕೀ ವೋಟರ್ಸ್ ಸಮಾವೇಶದ ಬಳಿಕ ಮಾತನಾಡಿದ ಅವರು, ‘ಸಮಾಜವಾದಿ ಚಿಂತಕರು ಬಾಲಿಶ ಹೇಳಿಕೆ ನೀಡುವ ಮೂಲಕ ರಾಜಕೀಯಕ್ಕೆ ಹಾಗೂ ಮುಖ್ಯಮಂತ್ರಿಗೆ ಅಪಮಾನ ಮಾಡಿದ್ದಾರೆ. ಹಿಂದೂ ಸಮಾಜವನ್ನು ಅವಮಾನ ಮಾಡಿರುವುದು ಅವರ ಬೌದ್ಧಿಕ ದಿವಾಳಿತನ ತೋರಿಸುತ್ತದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಸಿದ್ದರಾಮಯ್ಯ ಅವರಿಗೆ ಮಾನಸಿಕ ಸಮಸ್ಯೆಗಳು ಶುರುವಾಗಿವೆ. ಸನಾತನ ಧರ್ಮ ಭಾರತೀಯರ ಪ್ರತೀಕವಾಗಿದೆ’ ಎಂದು ಹೇಳಿದರು.

‘ಇಡೀ ರಾಜ್ಯವನ್ನೇ ಶಾಪಿಂಗ್ ಮಾಲ್ ಮಾಡಿದ್ದು, ಭ್ರಷ್ಟಾಚಾರ, ಕಮಿಷನ್ ಏಜೆಂಟ್‌ಗಿರಿ ತಂದಿದ್ದು ಕಾಂಗ್ರೆಸ್’ ಎಂದು ಲೇವಡಿ ನಳಿನ್‌ಕುಮಾರ್ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.