ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆ: 27ರಿಂದ ರೇಡಿಯೊ ಪಾಠ

Last Updated 24 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಬೆಂಗಳೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗೆ ಪೂರಕವಾಗಿ ಫೆ. 27ರಿಂದ ಮಾರ್ಚ್‌ 23ರವರೆಗೆ ರೇಡಿಯೊ ಪಾಠ ‘ಬಾನ್‌ ದನಿ’ ಪ್ರಸಾರ ಮಾಡಲಾಗುತ್ತಿದೆ.

27ರಂದು ಕನ್ನಡ, 28ರಂದು ದ್ವಿತೀಯ ಭಾಷೆ ಇಂಗ್ಲಿಷ್‌, ಮಾರ್ಚ್ 1ರಂದು ಭೌತಶಾಸ್ತ್ರ, ರಸಾಯನ ವಿಜ್ಞಾನ, 2ರಂದು ಜೀವಶಾಸ್ತ್ರ, 6ರಂದು ಅಂಕಗಣಿತ, ಬೀಜಗಣಿತ, 7ರಂದು ರೇಖಾಗಣಿತ, 8ರಂದು ಇತಿಹಾಸ, ರಾಜ್ಯಶಾಸ್ತ್ರ, 9ರಂದು ಭೂಗೋಳ, ಅರ್ಥಶಾಸ್ತ್ರ, 13ರಂದು ಹಿಂದಿ, 14ರಂದು ಸಂಸ್ಕೃತ, 15ರಂದು ಪ್ರಥಮ ಭಾಷೆ ಇಂಗ್ಲಿಷ್‌, 16ರಂದು ಪರೀಕ್ಷಾ ಮಂಡಳಿ ನಿರ್ದೇಶಕರಿಂದ ಪರೀಕ್ಷಾ ಮಾಹಿತಿ, 20ರಂದು ಪರೀಕ್ಷೆ ಬರೆಯಲು ಅನುಸರಿಸುವ ಕ್ರಮ, 21ರಂದು ಆರೋಗ್ಯ ಮತ್ತು ಆಹಾರದ ಮಾಹಿತಿ, 23ರಂದು ಉರ್ದು ವಿಷಯಗಳ ಕುರಿತು ಪಾಠಗಳು 13 ಆಕಾಶವಾಣಿ ಕೇಂದ್ರಗಳು, ಮೂರು ವಿವಿಧ ಭಾರತಿ ಎಫ್ಎಂ ಕೇಂದ್ರಗಳಿಂದ ಏಕಕಾಲದಲ್ಲಿ ಪ್ರಸಾರವಾಗಲಿವೆ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT