ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿ: ಬೆಗುಸರಾಯ್‌ | ಗಿರಿರಾಜ್‌ ಸಿಂಗ್‌ vs ಅವಧೇಶ್‌ ಕುಮಾರ್‌ ರಾಯ್‌

Published 2 ಮೇ 2024, 23:50 IST
Last Updated 2 ಮೇ 2024, 23:50 IST
ಅಕ್ಷರ ಗಾತ್ರ

ಗಿರಿರಾಜ್‌ ಸಿಂಗ್‌ (ಬಿಜೆಪಿ)

ಬಿಹಾರದ ಬೆಗುಸರಾಯ್‌ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಈ ಬಾರಿಯೂ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರು ಕಣಕ್ಕಿಳಿದಿದ್ದಾರೆ. 2019ರ ಚುನಾವಣೆಯಲ್ಲಿ ಗಿರಿರಾಜ್‌ ಅವರು, 4,22,217 ಮತಗಳ ಅಂತರದಿಂದ ಸಿಪಿಐನಿಂದ ಸ್ಪರ್ಧಿಸಿದ್ದ ಕನ್ಹಯ್ಯ ಕುಮಾರ್‌ ಅವರನ್ನು ಪರಾಭವಗೊಳಿಸಿದ್ದರು. ಗಿರಿರಾಜ್‌ ಅವರು ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ನಿರ್ಧಾರಗಳನ್ನು ಜನರ ಮುಂದಿರಿಸಿ ಅವರು ಮತಯಾಚಿಸುತ್ತಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಜೆಡಿಯು ಮತ್ತೆ ಎನ್‌ಡಿಎ ಒಕ್ಕೂಟಕ್ಕೆ ಸೇರಿರುವುದು ಸಿಂಗ್‌ ಅವರ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ.

ಅವಧೇಶ್‌ ಕುಮಾರ್‌ ರಾಯ್‌ (ಸಿಪಿಐ)

ಎಡಪಕ್ಷದ ಪ್ರಾಬಲ್ಯವಿರುವ ಬೆಗುಸರಾಯ್‌ ಕ್ಷೇತ್ರದಲ್ಲಿ ಗಿರಿರಾಜ್‌ ಸಿಂಗ್‌ ಅವರ ಜೊತೆ ಪೈಪೋಟಿ ನಡೆಸಲು ಸಿಪಿಐ, ಅವಧೇಶ್‌ ಕುಮಾರ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಸಿಪಿಐ ಈ ಬಾರಿ ‘ಇಂಡಿಯಾ’ ಒಕ್ಕೂಟದ ಜೊತೆಗಿರುವುದು ಅವಧೇಶ್‌ ಅವರಿಗೆ ಅನುಕೂಲವಾಗಲಿದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕ್ಷೇತ್ರದಲ್ಲಿನ ಮುಸ್ಲಿಮರ ಮತಗಳು ಅವಧೇಶ್‌ ಅವರಿಗೆ ಲಭಿಸುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ. ಅವಧೇಶ್‌, ಈ ಹಿಂದೆ ಬಚ್ವಾಡಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕೇಂದ್ರ ಸರ್ಕಾರದ ನ್ಯೂನತೆಗಳನ್ನು ಪ್ರಮುಖ ಪ್ರಚಾರ ವಿಷಯವಾಗಿಸಿ ಅವಧೇಶ್‌ ಅವರು ಜನರ ಬಳಿಗೆ ತೆರಳುತ್ತಿದ್ದಾರೆ. ಗಿರಿರಾಜ್‌ ಅವರು ಕೇಂದ್ರದ ಸಚಿವರಾದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ಅವಧೇಶ್‌ ಆರೋಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT