ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಪೊಲೀಸ್ ಫೋರ್ಸ್‌ನ ‘ಫಾರೂಕ್‌‘ ಪಾತ್ರಧಾರಿ ರಿತುರಾಜ್ ಸಿಂಗ್ ನಿಧನ

Published 20 ಫೆಬ್ರುವರಿ 2024, 9:20 IST
Last Updated 20 ಫೆಬ್ರುವರಿ 2024, 9:20 IST
ಅಕ್ಷರ ಗಾತ್ರ

ಮುಂಬೈ: ಸಿನಿಮಾ, ಕಿರುತೆರೆ ಹಾಗೂ ಒಟಿಟಿ ವೇದಿಕೆಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಜನಪ್ರಿಯತೆ ಪಡೆದಿದ್ದ ನಟ ರಿತುರಾಜ್ ಸಿಂಗ್‌ (59) ಅವರು ಹೃದಯಾಘಾತದಿಂದ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ.

1993ರಲ್ಲಿ ಪ್ರದರ್ಶನಗೊಂಡ ಟಿ.ವಿ. ಕಾರ್ಯಕ್ರಮ ‘ಬನೇಗಿ ಆಪನಿ ಬಾತ್’ ಮೂಲಕ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟ ರಿತುರಾಜ್ ಅವರು ಹಲವಾರು ಸಿನಿಮಾ ಹಾಗೂ ಒಟಿಟಿ ವೇದಿಕೆಯ ಹಲವು ಸಿರೀಸ್‌ಗಳಲ್ಲೂ ನಟಿಸಿದ್ದರು.

‘ಕೆಲ ದಿನಗಳ ಹಿಂದೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಮಂಗಳವಾರ ಮಧ್ಯಾಹ್ನ ಅವರಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟರು’ ಎಂದು ರಿತುರಾಜ್ ಅವರ ಸ್ನೇಹಿತ ಅಮಿತ್ ಬೆಲ್‌ ತಿಳಿಸಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದೆಹಲಿಯ ರಂಗಭೂಮಿಯಲ್ಲಿ ಕಲಾವಿದರಾಗಿ ತಮ್ಮ ವೃತ್ತಿ ಬದುಕು ಆರಂಭಿಸಿದ ರಿತುರಾಜ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ.

ಇತ್ತೀಚೆಗೆ ಒಟಿಟಿ ವೇದಿಕೆಯಲ್ಲಿ ತೆರೆಕಂಡ ‘ಇಂಡಿಯನ್ ಪೊಲೀಸ್ ಫೋರ್ಸ್‌’ನಲ್ಲಿ ಫಾರೂಕ್ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದರು. ಕಿರುತೆರೆಯಲ್ಲಿ ಅನುಪಮಾ, ಹಿಟ್ಲರ್ ದೀದಿ, ಶಪಥ, ಅದಾಲತ್, ದಿಯಾ ಔರ್ ಬಾತಿ ಹಮ್ ಧಾರವಾಹಿಗಳಲ್ಲಿ ಅವರು ನಟಿಸಿದ್ದಾರೆ. ‘ಬದ್ರಿನಾಥ್ ಕೆ ದುಲ್ಹನಿಯಾ’ ಚಿತ್ರದಲ್ಲೂ ನಟಿಸಿದ್ದಾರೆ. ಒಟಿಟಿಯಲ್ಲಿ ‘ಬಂದಿಶ್ ಬ್ಯಾಂಡಿಟ್ಸ್‌’ ಹಾಗೂ ‘ಮೇಡ್ ಇನ್ ಹೆವನ್‌’ನಲ್ಲೂ ಅಭಿನಯಿಸಿದ್ದರು.

‘ಮೇರಿ ಆವಾಜ್‌ ಕಿ ಪೆಹಚಾನ್‌ ಹೇ’ ಕಿರುತೆರೆ ಕಾರ್ಯಕ್ರಮದಲ್ಲಿ ಪಲ್ಲವಿ ಜೋಶಿ ಜೊತೆ ರಿತುರಾಜ್ ಕೆಲಸ ಮಾಡಿದ್ದರು. 

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ರಿತುರಾಜ್ ಅವರು ಶಾರುಕ್ ಖಾನ್ ಅವರ ಆಪ್ತರೂ ಹೌದು. ಇವರಿಬ್ಬರೂ ಬ್ಯಾರಿ ಜಾನ್ಸ್‌ ಥಿಯೇಟರ್ ಆಕ್ಷನ್ ಗ್ರೂಪ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ರಿತುರಾಜ್ ಅವರ ಅಗಲಿಕೆಯ ಬಾಲಿವುಡ್‌ನ ಹಲವು ನಟ, ನಟಿಯರು ಎಕ್ಸ್ ವೇದಿಕೆಯಲ್ಲಿ ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT